ಬೆಳಗಾವಿ : ಡಿ. 10 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಮತ್ತು ಕಾಂಗ್ರೇಸ್ ಅಭ್ಯರ್ಥಿಯ ಸೋಲಿಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಗುರುವಾರ ರಾತ್ರಿ ಸಭೆ ನಡೆಸಲಾಯಿತು. ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಅವರುಗಳು ಪಾಲ್ಗೊಂಡು …
Read More »Daily Archives: ನವೆಂಬರ್ 26, 2021
ಕಬ್ಬು ಪೂರೈಸಿದ ಬಾಕಿ ಹಣ ನೀಡುವಂತೆ ಆಗ್ರಹಿಸಿ ರಾಮದುರ್ಗ ಶಾಸಕ ಮಹದೇವಪ್ಪ ಯಾದವಾಡ ಮನೆ ಎದುರು ರೈತರು ಪ್ರತಿಭಟನೆ
ಬೆಳಗಾವಿ: ಕಬ್ಬು ಪೂರೈಸಿದ ಬಾಕಿ ಹಣ ನೀಡುವಂತೆ ಆಗ್ರಹಿಸಿ ರಾಮದುರ್ಗ ಶಾಸಕ ಮಹದೇವಪ್ಪ ಯಾದವಾಡ ಮನೆ ಎದುರು ರೈತರು ಪ್ರತಿಭಟನೆ ನಡೆಸಿದರು. ಉದಪುಡಿ ಗ್ರಾಮದ ಬಳಿಯಿರುವ ಶಿವಸಾಗರ ಸಹಕಾರಿ ಸಕ್ಕರೆ ಕಾರ್ಖಾನೆಗೆ ರೈತರು ಪೂರೈಸಿದ್ದ ಕಬ್ಬಿಗೆ ಈವರೆಗೆ ಹಣ ನೀಡಿಲ್ಲ. ಕಾರ್ಖಾನೆ ಅಧ್ಯಕ್ಷರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ ರೈತರು, ಬಾಕಿ ಹಣ ನೀಡುವವರೆಗೂ ಕಾರ್ಖಾನೆ ಮುಚ್ಚುವಂತೆ ಆಗ್ರಹಿಸಿದರು. ಸಕ್ಕರೆ ಸಚಿವರಿಂದ ಸೂಕ್ತ ಭರವಸೆ ಸಿಗುವವರೆಗೂ ಮನೆಗಳಿಗೆ ತೆರಳುವುದಿಲ್ಲ ಎಂದು ಧರಣಿ …
Read More »ಸ್ಥಳೀಯ ವ್ಯಾಪಾರಿಗಳ ಬೇಡಿಕೆಗೆ ಪಟ್ಟಣದ ವಿವಿಧ ಸಂಘಟನೆಗಳು ಸ್ವಯಂಪ್ರೇರಿತವಾಗಿ ಬೆಂಬಲ ನೀಡಿದ್ದರಿಂದ ಬಂದ್ ಶಾಂತಿಯುತವಾಗಿ ಸಂಪನ್ನಗೊಂಡಿತು.
ಖಾನಾಪುರ: ಪರಜಿಲ್ಲೆ, ಪರರಾಜ್ಯಗಳಿಂದ ಬಂದು ಪಟ್ಟಣದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವವರಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಖಾನಾಪುರ ಶಹರ ವ್ಯಾಪಾರಸ್ಥರ ಒಕ್ಕೂಟ ಶುಕ್ರವಾರ ಕರೆ ನೀಡಿದ್ದ ಖಾನಾಪುರ ಬಂದ್ ಸಂಪೂರ್ಣ ಯಶಸ್ವಿಯಾಗಿ ಸಂಪನ್ನಗೊಂಡಿತು. ಸ್ಥಳೀಯ ವ್ಯಾಪಾರಿಗಳ ಬೇಡಿಕೆಗೆ ಪಟ್ಟಣದ ವಿವಿಧ ಸಂಘಟನೆಗಳು ಸ್ವಯಂಪ್ರೇರಿತವಾಗಿ ಬೆಂಬಲ ನೀಡಿದ್ದರಿಂದ ಬಂದ್ ಶಾಂತಿಯುತವಾಗಿ ಸಂಪನ್ನಗೊಂಡಿತು. ಬಂದ್ ಅಂಗವಾಗಿ ಔಷಧ ಅಂಗಡಿಗಳು, ಪೆಟ್ರೋಲ್ ಬಂಕ್ ಹೊರತುಪಡಿಸಿ ಉಳಿದ ಎಲ್ಲ ಬಗೆಯ ವ್ಯಾಪಾರ ವಹಿವಾಟುಗಳು ನಡೆಯಲಿಲ್ಲ. ಹಣ್ಣು, ತರಕಾರಿ …
Read More »ಛೋಟಾ ಸಾಹುಕಾರರ ಪ್ರಚಾರ ಇಂದಿನಿಂದ ಪ್ರಾರಂಭ ,ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಕೂಡ ಭೇಟಿ ನೀಡಿದ ಲಖನ ಜಾರಕಿಹೊಳಿ
ಬೆಳಗಾವಿ: ಬೆಳಗಾವಿ ಲೋಕಸಭೆ ಚುನಾವಣೆ ಫುಲ್ ಜೋರಾಗಿ ಪ್ರಚಾರ ನಡೆಸಿದ್ದಾರೆ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ನಿನ್ನೆ ವರೆಗೂ ಸುಮ್ಮನಿದ್ದ ಛೋಟಾ ಸಾಹುಕಾರ ಇಂದಿನಿಂದ ಪ್ರಚಾರ ಪ್ರಾರಂಭ ಮಾಡಿದ್ದಾರೆ ಯರಗಟ್ಟಿ ಯಲ್ಲಿ ಕಾರ್ಯಕರ್ತರಿಗೆ ಭೇಟಿಯಾದಲಖನ ಜಾರಕಿಹೊಳಿ ಅವರು ಎಲ್ಲ ಕಾರ್ಯ ಕರ್ತರನ್ನು ಒಗ್ಗೂಡಿಸಿ ಮಾತ ಯಾಚನೆ ಮಾಡಿದ್ದಾರೆ . ಬಹುಶಃ ಲಖನ ಜಾರಕಿಹೊಳಿ ಅವರ ನಾಮ ನಿರ್ದೇಶನ ಮಾಡಲು ಬಂದ ದಿನವೇ ಅವರು ಗೆದ್ದ ಹಾಗೆ ಎಂದು ಎಲ್ಲ ಅಭಿಮಾನಿ …
Read More »ಸುಳ್ಳು ಹೇಳುವುದರಲ್ಲಿ ಬಿಜೆಪಿ ನಂಬರ್ 1: ಸತೀಶ್ ಜಾರಕಿಹೊಳಿ
ಬೈಲಹೊಂಗಲ : “ಬಿಜೆಪಿ ಸರ್ಕಾರ ಮೂರು ವರ್ಷದಲ್ಲಿ ಒಂದೇ ಒಂದು ಮನೆ ನಿರ್ಮಾಣ ಮಾಡಲಿಕ್ಕೆ ಆಗಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ಸಾವಿರಾರು ಮನೆಗಳನ್ನು ನೀಡಿದ್ದೇವೆಂದು ಸುಳ್ಳಿನ ಸರಮಾಲೆಯನ್ನೇ ಕಟ್ಟುತ್ತಿದ್ದಾರೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ವಿಧಾನಪರಿಷತ್ ಚುನಾವಣೆಯ ಪ್ರಚಾರಾರ್ಥವಾಗಿ ಬೈಲಹೊಂಗಲ ಮತಕ್ಷೇತ್ರದ ಗ್ರಾಮ ಪಂಚಾಯ್ತಿ ಚುನಾಯಿತ ಜನಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ, ” ಈಗಿರುವ ರಸ್ತೆಗಳು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿದ್ದವು. ಬಿಜೆಪಿ ಸರ್ಕಾರ …
Read More »ಹೆಬ್ಬಾಳ್ಕರ್-ಜಾರಕಿಹೊಳಿ ಕುಟುಂಬಕ್ಕೆ ಪ್ರತಿಷ್ಠೆಯಾದ ಪರಿಷತ್ ಚುನಾವಣೆ
ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿ ಜಿಲ್ಲಾ ರಾಜಕಾರಣದ ಕಡು ವೈರಿಗಳೆಂದೇ ಬಿಂಬಿತರಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಮತ್ತೊಂದು ಸೆಣಸಾಟಕ್ಕೆ ಪರಿಷತ್ ಚುನಾವಣೆ ಕಣ ವೇದಿಕೆಯಾಗಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಕಾಂಗ್ರೆಸ್ ಅಭ್ಯರ್ಥಿ ಆಗಿ ಕಣಕ್ಕಿಳಿದಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿ ಆಗಿ ಕಣದಲ್ಲಿದ್ದಾರೆ. ತಮ್ಮ ಸಹೋದರರನ್ನು ಗೆಲ್ಲಿಸಲೇಬೇಕು ಎಂದು ಪಣತೊಟ್ಟಿರುವ …
Read More »ಕುಟುಂಬವೊಂದಕ್ಕೆ ಬ್ಲ್ಯಾಕ್ ಮೇಲ್ ಮಾಡಿ 13 ಲಕ್ಷ ರೂ. ದೋಚಿದ್ದ ಖತರ್ನಾಕ್ ಕಿಲಾಡಿ ಯುವಕನನ್ನು ಬಂಧಿಸುವಲ್ಲಿ ಇಲಕಲ್ಲ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬಾಗಲಕೋಟೆ: ಕುಟುಂಬವೊಂದಕ್ಕೆ ಬ್ಲ್ಯಾಕ್ ಮೇಲ್ ಮಾಡಿ 13 ಲಕ್ಷ ರೂ. ದೋಚಿದ್ದ ಖತರ್ನಾಕ್ ಕಿಲಾಡಿ ಯುವಕನನ್ನು ಬಂಧಿಸುವಲ್ಲಿ ಇಲಕಲ್ಲ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. 18 ವರ್ಷದ ಯುವಕ ಸುಲೇಮಾನ್ ಮೇಕಮುಂಗಲಿ ಬಂಧಿತ ಆರೋಪಿ. ಈತ ಇಲಕಲ್ಲ ನಗರದ ಸೀರೆ ವ್ಯಾಪಾರಿ ಸುಜಿತ್ ಎಂಬುವರ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದ. ಸದ್ಯ ಆರೋಪಿ ಪೊಲೀಸ್ ವಶದಲ್ಲಿದ್ದಾನೆ.ಪ್ರಕರಣ ಹಿನ್ನೆಲೆ.. ಇಲಕಲ್ ನಗರದ ಸುಜಿತ್ ಎಂಬ ಸೀರೆ ವ್ಯಾಪಾರಸ್ಥರ …
Read More »ಲೋಪದೋಷ ರಹಿತ ಚುನಾವಣೆಗೆ ಸೂಚನೆ,ವೀಕ್ಷಕರಾದ ಏಕರೂಪ್ ಕೌರ್ ಭೇಟಿ, ಮತಗಟ್ಟೆಗಳ ಪರಿಶೀಲನೆ
ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯ ಮತದಾನ ಹಾಗೂ ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ರೀತಿಯ ಲೋಪದೋಷಗಳು ಉಂಟಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಬೆಳಗಾವಿ ಜಿಲ್ಲೆಯ ವಿಧಾನ ಪರಿಷತ್ ಚುನಾವಣಾ ವೀಕ್ಷಕರಾದ ಹಿರಿಯ ಐ.ಎ.ಎಸ್. ಅಧಿಕಾರಿ ಏಕರೂಪ್ ಕೌರ್ ಅವರು ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ನ.26) ನಡೆದ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ …
Read More »ರಸ್ತೆಯಲ್ಲೇ, ಆ್ಯಂಬ್ಯುಲೆನ್ಸ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸುಸೂತ್ರ ಹೆರಿಗೆ; ತಾಯಿ-ಮಗು ಸುರಕ್ಷಿತ
ಗದಗ: ಗರ್ಭಿಣಿಯೊಬ್ಬರು ಆಸ್ಪತ್ರೆಗೆ ದಾಖಲಾಗುವ ವೇಳೆ ಆ್ಯಂಬ್ಯುಲೆನ್ಸ್ನಲ್ಲಿಯೇ ಹೆರಿಗೆಯಾಗಿ ಮಗುವಿಗೆ ಜನ್ಮವಿತ್ತ ವಿರಳ ಘಟನೆ ನಡೆದಿದೆ. ತಾಯಿ ಮತ್ತು ಮಗು ಸುರಕ್ಷಿತವಾಗಿದ್ದಾರೆ. ಗದಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಹುಬ್ಬಳ್ಳಿ ಆಸ್ಪತ್ರಗೆ ಸದರಿ ಗರ್ಭಿಣಿಯನ್ನು ಚಿಕಿತ್ಸೆಗಾಗಿ ರೆಫರ್ ಮಾಡಲಾಗಿತ್ತು. ಅದರಂತೆ ಆಸ್ಪತ್ರೆಗೆ ತೆರಳುವಾಗ ಮಾರ್ಗ ಮಧ್ಯೆಯೇ ಆ್ಯಂಬ್ಯುಲೆನ್ಸ್ನಲ್ಲಿ ಹೆರಿಗೆಯಾಗಿದೆ. ಆ್ಯಂಬ್ಯುಲೆನ್ಸ್ನಲ್ಲಿದ್ದ 108 ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸುಸೂತ್ರ ಹೆರಿಗೆಯಾಗಿದೆ. ಗಜೇಂದ್ರಗಡ ತಾಲೂಕಿನ ನಿಡಗುಂದಿಕೊಪ್ಪ ಗ್ರಾಮದ ಕವಿತಾ ಪೂಜಾರಿಗೆ ನಗರದ ಖಾಸಗಿ ಆಸ್ಪತ್ರೆಯಿಂದ …
Read More »ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನ ಒಪ್ಪಿಸಲಾರೆವು ಹೀಗೆಲ್ಲ’ ಇನ್ನಾದರೂ ಮಾಡಿರೈ ಶಪಥ
ಗೋಕಾಕ ಫಾಲ್ಸ್ – ಹದಿನೈದು ವರ್ಷಕ್ಕೆ ಅವಳಿಗೆ ಮದುವೆಯಾಗಿತ್ತು, ಈಗವಳಿಗೆ ಹದಿನೆಂಟೊ-ಹತ್ತೊಂಬತ್ತೋ ಇದ್ದಿರಬೇಕು. ಮದುವೆಯಾಗಿ ಇಷ್ಟು ದಿನವಾದರೂ ಮಕ್ಕಳಾಗಿಲ್ಲ ಎಂಬ ಕಾರಣ ಕೊಟ್ಟು ಅತ್ತೆಮನೆಯವರು ದಿನಾ ಕಾಟ ಕೊಡಲು ಶುರು ಮಾಡಿದ್ದರು. ಯಾರೋ ಭವಿಷ್ಯ ಹೇಳುವವನು, ಅವಳಿಗೆ ಆ ಭಾಗ್ಯವೇ ಇಲ್ಲ ಎಂದಿದ್ದ. ಅವನ ಮಾತು ಕೇಳಿದ ಅತ್ತೆಮನೆಯವರು ಆಕೆಯನ್ನು ಬಂಜೆ ಎಂಬ ಹಣೆಪಟ್ಟಿ ಕಟ್ಟಿ ತಿರಸ್ಕಾರ ಭಾವದಿಂದ ದಿನವೂ ಚುಚ್ಚಿ ಮಾತನಾಡತೊಡಗಿದರು. ಒಂದು ದಿನ ಆಕೆ ಅದನ್ನೆಲ್ಲ ಸಹಿಸದೇ ತನ್ನ …
Read More »