Breaking News

Daily Archives: ಅಕ್ಟೋಬರ್ 27, 2021

ತಂಗಿಯನ್ನೇ ಕೊಂದ, ಖಡ್ಗ ಹಿಡಿದು ರಸ್ತೆಯಲ್ಲೇ ರಾಜಾರೋಷವಾಗಿ ನಡೆದ, ಹಾಗೇ ಪೊಲೀಸ್ ಠಾಣೆಗೂ ಹೋದ..!

ಧಾರವಾಡ: ತಂಗಿಯ ಮೇಲೆ ಮೆಣಸಿನ ಪುಡಿ ಎರಚಿ ಕೊಲೆ ಮಾಡಿ ಪರಾರಿಯಾಗಿದ್ದ ಅಣ್ಣ ಪತ್ತೆಯಾಗಿದ್ದಾನೆ. ಮಾತ್ರವಲ್ಲ ತಂಗಿಯನ್ನು ಕೊಂದ ಬಳಿಕ ಖಡ್ಗ ಹಿಡಿದು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡಿ, ಪೊಲೀಸ್ ಠಾಣೆಗೂ ತಲುಪಿದ್ದಾನೆ. ಧಾರವಾಡದ ನವಲಗುಂದ ಪಟ್ಟಣದ ಕಲ್ಮೇಶ್ವರ ಗುಡಿ ಬಳಿ ಮಹಾಂತೇಶ ಶರಣಪ್ಪನವರ ತನ್ನ ತಂಗಿ ಶಶಿಕಲಾ ಸುಣಗಾರ ಎಂಬಾಕೆಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡು ಬಳಿಕ ಮೆಣಸಿನ ಪುಡಿ ಎರಚಿದ್ದಲ್ಲದೆ ಖಡ್ಗದಿಂದ ಕೊಲೆಗೈದು ಪರಾರಿಯಾಗಿದ್ದ. ನಂತರ ಆತ ಖಡ್ಗ ಹಿಡಿದುಕೊಂಡು ರಸ್ತೆಯಲ್ಲಿ …

Read More »

ಸಿಂಧನೂರಿನಲ್ಲಿ ಸಂತೋಷ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದ ವತಿಯಿಂದ ವೃದ್ಧಾ ಶ್ರಮದಲ್ಲಿ ಸರಳ ಹುಟ್ಟುಹಬ್ಬ ಆಚರಣೆ

ಸಿಂಧನೂರು :ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀ ಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮದಲ್ಲಿ ರಾಯಚೂರು ಜಿಲ್ಲಾ ಜಾರಕಿಹೊಳಿ ಅಭಿಮಾನ ಬಳಗದ ವತಿಯಿಂದ ಕರುನಾಡಿನ ಕಾರುಣ್ಯ ಕಣ್ಮಣಿಗಳು ಕಾರುಣ್ಯ ಕುಟುಂಬದ ನಿರಂತರ ಮಾರ್ಗದರ್ಶಕರು ಕಾರುಣ್ಯ ಕರುಣಾಮಯಿಗಳು ಕಾರುಣ್ಯ ಕುಟುಂಬದ ಯಜಮಾನರಾದಂತಹ ಕರುನಾಡಿನ ಕಾರುಣ್ಯ ಕುಟುಂಬದ ಅಧಿಕಾರಿಗಳಾದ ಸನ್ಮಾನ್ಯ ಶ್ರೀ ರಮೇಶ ಜಾರಕಿಹೊಳಿ ಮಾಜಿ ಸಚಿವರು ಹಾಗೂ ಜನಪ್ರಿಯ ಶಾಸಕರು ಗೋಕಾಕ ವಿಧಾನಸಭಾ ಕ್ಷೇತ್ರ …

Read More »

ಮಾಜಿ ಸಿಎಂ ಯಡಿಯೂರಪ್ಪರಿಂದ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಕೋಟ್ಯಂತರ ಹಣ?

ಬೆಂಗಳೂರು, ಅ. 26: ಬಹಿರಂಗ ಪ್ರಚಾರಕ್ಕೆ ಇನ್ನೆರಡು ದಿನಗಳಿರುವಾಗ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರುತ್ತಿವೆ. ಜೊತೆಗೆ ಹಲವು ರಹಸ್ಯಗಳೂ ಚುನಾವಣೆ ಸಂದರ್ಭದಲ್ಲಿ ಬಯಲಾಗುತ್ತಿವೆ. ಮತ್ತೊಂದು ಸೂಟ್‌ಕೇಸ್ ರಹಸ್ಯವನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ವಿಜಯಪುರದಲ್ಲಿ ಬಹಿರಂಗಗೊಳಿಸಿದ್ದಾರೆ. ಉಪ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕಣಕ್ಕಿಳಿಸಿದ್ದಾರೆ. ಆದರೆ ಅವರಿಬ್ಬರೂ ಸಿಂದಗಿ ಉಪ ಚುನಾವಣೆಗೆ ಮಾತ್ರ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಅದಕ್ಕೆ ಕಾರಣ …

Read More »

ಮತ ಹಾಕುವ ಮುನ್ನ ಗ್ಯಾಸ್‌ ಸಿಲಿಂಡರ್‌, ಟ್ರಾಕ್ಟರ್‌ಗೆ ನಮಸ್ಕರಿಸಿ: ಡಿಕೆಶಿ

ವಿಜಯಪುರ: ಸಿಂದಗಿ, ಹಾನಗಲ್‌ ಮತದಾರರು ಮತ ಹಾಕುವ ಮುನ್ನ ಗ್ಯಾಸ್‌ ಸಿಲಿಂಡರ್‌, ಬೈಕ್, ಕಾರು, ಆಟೋ, ಟ್ರಾಕ್ಟರ್‌ಗೆ ನಮಸ್ಕರಿಸಿ ಮತ ಹಾಕಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ಸಿಂದಗಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಅಡುಗೆ ಗ್ಯಾಸ್‌ ಸಿಲಿಂಡರ್‌ಗೆ ನಮಸ್ಕರಿಸಿ ಹೋಗಿ ಮತದಾನ ಮಾಡಿ ಎಂದಿದ್ದರು. ಈಗ ನಾನು ಅದನ್ನು ಮತದಾರರಿಗೆ ನೆನಪಿಸಲು ಬಯಸುತ್ತೇನೆ ಎಂದು ಬಿಜೆಪಿಗೆ ತಿರುಗೇಟು …

Read More »

ವರುಣನ ಆರ್ಭಟ ಹೆಚ್ಚಳ: ರಾಜ್ಯದಲ್ಲಿ ನಾಳೆಯೂ ಮಳೆ ಅಬ್ಬರ

ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅ.27ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿವಮೊಗ್ಗ,ಹಾಸನ,ಕೊಡಗು,ಮಂಡ್ಯ,ಮೈಸೂರು, ರಾಮನಗರ,ಚಿಕ್ಕಮಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಹೆಚ್ಚು ಮಳೆಯಾಗಲಿದೆ. ಅರಬ್ಬಿ ಸಮುದ್ರದ ಲಕ್ಷದ್ವೀಪ ಭಾಗದಲ್ಲಿನ ಮೇಲ್ಮೈ ಸುಳಿಗಾಳಿ ಮತ್ತು ಮುಂಗಾರು ಮಾರುತದ ಹಿನ್ನೆಲೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.

Read More »