Breaking News

Daily Archives: ಅಕ್ಟೋಬರ್ 20, 2021

ನಳಿನ್‌ಕುಮಾರ್‌ ಕಟೀಲ್‌ ಒಬ್ಬ ಅವಿವೇಕಿ: ಕೆಪಿಸಿಸಿ ವಕ್ತಾರ ಲಕ್ಷ್ಮಣ ಕಿಡಿ

ಮೈಸೂರು: ‘ರಾಹುಲ್‌ ಗಾಂಧಿ ವಿರುದ್ಧ ಕೀಳುಮಟ್ಟದ ಮಾತುಗಳನ್ನಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಒಬ್ಬ ಅಯೋಗ್ಯ, ಅವಿವೇಕಿ, ಹುಚ್ಚರ ಬ್ರಾಂಡ್‌ ಅಂಬಾಸಿಡರ್‌’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಕಿಡಿಕಾರಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬಿಜೆಪಿ ಮುಖಂಡರು ವಿಷಯಾಧಾರಿತ ಚರ್ಚೆ ಬಿಟ್ಟು ವೈಯಕ್ತಿಕ ಟೀಕೆ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಸಭ್ಯ ರಾಜಕಾರಣಕ್ಕೆ ತಿಲಾಂಜಲಿಯನ್ನಿಟ್ಟಿದ್ದಾರೆ. ಕಟೀಲ್‌ ಹಿನ್ನೆಲೆ ಏನು ಎಂಬುದು ಇಡೀ ರಾಜ್ಯದ ಜನರಿಗೆ ಗೊತ್ತು. ಊಹೆಯ ಆಧಾರದಲ್ಲಿ …

Read More »

ಬ್ರಹ್ಮಾವರ : ಈಜಲು ತೆರಳಿ ನೀರುಪಾಲಾಗಿದ್ದ ಇಬ್ಬರ ಶವಗಳು ಪತ್ತೆ

ಬ್ರಹ್ಮಾವರ : ತಾಲೂಕಿನ ಉಗ್ಗೇಲ್ ಬೆಟ್ಟು ಎಂಬಲ್ಲಿ ಮಡಿಸಾಲು ಹೊಳೆಯಲ್ಲಿ ಈಜಲು ತೆರಳಿದ್ದ ಗೆಳೆಯರಿಬ್ಬರು ಮಂಗಳವಾರ ನೀರುಪಾಲಾಗಿದ್ದು, ಶವಗಳು ಬುಧವಾರ ಪತ್ತೆಯಾಗಿದೆ. ಮೃತ ದುರ್ದೈವಿಗಳು ಶ್ರೇಯಸ್ (18) ಮತ್ತು ಅನಾಸ್ (16)ಎಂದು ತಿಳಿದು ಬಂದಿದೆ. ಈಜಲು ತೆರಳಿದ್ದ ಮೂವರ ಪೈಕಿ ಇಬ್ಬರು ನೀರುಪಾಲಾಗಿದ್ದು, ಪಾರಾಗಿದ್ದ ಓರ್ವ ವಿಚಾರವನ್ನು ಯಾರಿಗೂ ಹೇಳದೆ ಗುಟ್ಟು ಮಾಡಿದ್ದ. ನಾಪತ್ತೆಯಾದ ಇಬ್ಬರ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಂಗಳವಾರ ಸಂಜೆಯೇ ಬಾಲಕರು ನೀರುಪಾಲಾಗಿರುವ ವಿಚಾರವನ್ನು …

Read More »

ಬೆಳಗ್ಗೆ ‌ಎದ್ದು ದೇವರಿಗೆ ಕೈ ಮುಗಿವ ಮೊದಲು ಗ್ಯಾಸ್ ಸಿಲಿಂಡರ್, ಬೈಕಿಗೆ‌ ಪೂಜೆ ಮಾಡಿ ಇನ್ನೊಂದು ಸ್ವಲ್ಪ ಹೆಚ್ಚು ಮೈಲೇಜ್ ಬರಲಿ‌ ಎನ್ನುವ ಪರಿಸ್ಥಿತಿ ಬಂದಿದೆ : ರಣದೀಪ್ ಸಿಂಗ್ ಸುರ್ಜೇವಾಲಾ

ಹಾವೇರಿ: ಬೆಳಗ್ಗೆ ‌ಎದ್ದು ದೇವರಿಗೆ ಕೈ ಮುಗಿವ ಮೊದಲು ಗ್ಯಾಸ್ ಸಿಲಿಂಡರ್, ಬೈಕಿಗೆ‌ ಪೂಜೆ ಮಾಡಿ ಇನ್ನೊಂದು ಸ್ವಲ್ಪ ಹೆಚ್ಚು ಮೈಲೇಜ್ ಬರಲಿ‌ ಎನ್ನುವ ಪರಿಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ,ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಟೀಕಿಸಿದರು. ಹಾನಗಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ, ಬೊಮ್ಮಾಯಿ ಕಾರಣದಿಂದ ಬೆಲೆಯೇರಿಕೆಯಿಂದಾಗಿ ದೇಶದ, ರಾಜ್ಯದ ಯುವಜನತೆ ಇಂದು ತೊಂದರೆ ಅನುಭವಿಸುತ್ತಿದ್ದಾರೆ.ಮೋದಿ, ಮೆಹೆಂಗಾಯಿ ಎರಡೂ ದೇಶಕ್ಕೆ ಹಾನಿಕಾರಕವಾಗಿದೆ ಎಂದು …

Read More »

ಏಕಾಏಕಿ ಉಸಿರು ಚೆಲ್ಲಿದ ಕಂದಮ್ಮ, ತಂದೆ-ತಾಯಿ ಮಧ್ಯೆ ಆರೋಪ-ಪ್ರತ್ಯಾರೋಪ

ಧಾರವಾಡ : ಏನು ಅರಿಯದ‌ ಮುಗ್ದ ಕೂಸು, ಮನೆಯಂಗಳದಲ್ಲಿ ಆಟವಾಡಿಕೊಂಡಿದ್ದ ಆ ಮಗುವೀಗ ಅನುಮಾನಾಸ್ಪವಾಗಿ ಸಾವನ್ನಪ್ಪಿದೆ (Suspicious death ). ಮಗುವಿನ ಅಂತ್ಯ ಸಂಸ್ಕಾರ ಮಾಡಬೇಕಾದ ತಂದೆ-ತಾಯಿ ಪೊಲೀಸ್ ಠಾಣೆಯ ಮೇಟ್ಟಿಲೆರಿದ್ದಾರೆ. ಅಂತ್ಯಸಂಸ್ಕಾರ ಆಗದೇ ಆ ಮಗುವಿನ ಶವ ಜಿಲ್ಲಾ ಆಸ್ಪತ್ರೆಯ ಶವಾಗಾರ(marchary)ದಲ್ಲಿ ಇಡಲಾಗಿದೆ. ಧಾರವಾಡ (Dharwad ) ತಾಲೂಕಿನ ಗೊಂಗಡಿಕೊಪ್ಪ ಗ್ರಾಮದಲ್ಲಿ ನಡೆದ ಘಟನೆ ಇದು. ಈ ಗ್ರಾಮದ ಮಹ್ಮದ್​​​ ಅಲಿ ಅಗಸಿಮನಿ ಹಾಗೂ ಸಮ್ರಿನ್ ಎಂಬ ದಂಪತಿಯ …

Read More »

ಉಡುಪಿ: ಯುವತಿ ನಾಪತ್ತೆ; ಪೋಷಕರಿಂದ ದೂರು ದಾಖಲು –

ಉಡುಪಿ: ನಿಶಾ ಡಿ.ಎಸ್ (21) ಅವರ ಪೋಷಕರು ಮಣಿಪಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿ, ತಮ್ಮ ಮಗಳನ್ನು ಪತ್ತೆ ಹಚ್ಚಿಕೊಂಡುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಮಣಿಪಾಲ, ಶಿವಳ್ಳಿ ಗ್ರಾಮದ ನಿವಾಸಿಯಾಗಿರುವ ನಿಶಾ ಉಡುಪಿಯಲ್ಲಿರುವ ಪಿಜಿಗೆ ಹೋಗಿ ಬರುವುದಾಗಿ ಅಕ್ಟೋಬರ್ 11 ರಂದು ರಾತ್ರಿ 7.50 ಕ್ಕೆ ಮಣಿಪಾಲದಿಂದ ಹೊರಟಿದ್ದಾರೆ. ಆದರೆ ಆಕೆ ಪಿಜಿಗೂ ಹೋಗದೆ ಮನೆಗೂ ಹಿಂದಿರುಗಲಿಲ್ಲ. ಜೊತೆಗೆ ಆಕೆಯ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿರುವುದು …

Read More »

ಸಿಂದಗಿ: ತಹಶೀಲ್ದಾರ್ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ

ಸಿಂದಗಿ: ವ್ಯಕ್ತಿಯನ್ನು ಪೆಟ್ರೋಲ್ ಹಾಕಿ ಕೊಲೆ ಮಾಡಲು ಯತ್ನಿಸಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಮೃತನ ಕುಟುಂಬ ಸದಸ್ಯರು ಶವವನ್ನು ತಹಶೀಲ್ದಾರ್ ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಪಟ್ಟಣದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ರೇವಣಸಿದ್ದಪ್ಪ ಸಿದ್ರಾಮಪ್ಪ ಮಲಕಾಪುರ (45) ಮೃತ ಪಟ್ಟ ದುರ್ದೈವಿ. ರೇವಣಸಿದ್ದಪ್ಪ ಮೂಲತಃ ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಮುನಿರಬಮ್ಮನಹಳ್ಳಿ ಗ್ರಾಮದ ವ್ಯಕ್ತಿ. ತಾಲೂಕಿನ ಕಲಕೇರಿ ಗ್ರಾಮದಲ್ಲಿ ಕಳೆದ 6-7 ವರ್ಷಗಳಿಂದ ಹಾಲಿನ ವ್ಯಾಪಾರ …

Read More »

ರಾಜಕಾರಣಿಗಳಷ್ಟು ನಿರ್ಲಜ್ಜ, ನೀಚರು ಯಾರೂ ಇಲ್ಲ : ಮುತಾಲಿಕ್

ಶಿವಮೊಗ್ಗ: ‘ರಾಜಕಾರಣಿಗಳಷ್ಟು ನಿರ್ಲಜ್ಜ, ನೀಚರು ಯಾರೂ ಇಲ್ಲ. ರಾಜಕಾರಣಿಗಳ ಬದಲಾಗಿ ಹಿಂದೂ ಸಂಘಟನೆಗಳಿಗೆ ಬಲ ತುಂಬಿ’ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬುಧವಾರ ಹೇಳಿಕೆ ನೀಡಿದ್ದಾರೆ. ಕುವೆಂಪು ರಂಗಮಂದಿರದಲ್ಲಿ ನಡೆದ ‘ವಿಧ್ವತ್ ಭಾರತ’ ಎಂಬ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮುತಾಲಿಕ್,’ನಮಗೆ ಬಲ ತುಂಬಿ, ನಿಮ್ಮ ದೇವಸ್ಥಾನ ಉಳಿಸುತ್ತೆವೆ.ನಮಗೆ ಬಲ ತುಂಬಿದರೆ, ನಿಮ್ಮ ಅಕ್ಕ-ತಂಗಿಯರನ್ನು ಉಳಿಸುತ್ತೆವೆ. ನಮಗೆ ಬಲ ತುಂಬಿ, ನಿಮ್ಮ ಹಸುವಿನ ಒಂದೇ ಒಂದು ಹನಿ ರಕ್ತ …

Read More »

ಮೈತ್ರಿ ಸರ್ಕಾರವನ್ನು ಅಪವಿತ್ರ ಮಾಡಿದ್ದು ಕಾಂಗ್ರೆಸ್: ಸಿಎಂ ಬಸವರಾಜ ಬೊಮ್ಮಾಯಿ

ಬೆಳಗಾವಿ: ಮೈತ್ರಿ ಸರ್ಕಾರವನ್ನು ಅಪವಿತ್ರ ಮಾಡಿದ್ದು ಕಾಂಗ್ರೆಸ್ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು. ಸಿಂದಗಿ ಉಪಚುನಾವಣೆ ಆಲಮೇಲ ಗ್ರಾಮದ ಸಮಾವೇಶದಲ್ಲಿ ಭಾಷಣ ಮಾಡಿದ ಸಿಎಂ, ಕಾಂಗ್ರೆಸ್ ಸರ್ಕಾರದ ಭಾಗ್ಯ ಯಾರ ಮನೆಗೂ ಸಹ ಬರಲಿಲ್ಲ. ಕಾಂಗ್ರೆಸ್ ಅವರು ಬಂದಿದ್ದೇ ನಮಗೆ ದೌರ್ಭಾಗ್ಯ. ಕಾಂಗ್ರೆಸ್ ಅಧಿಕಾರ ಬಿಟ್ಟು ಇರಲ್ಲ. ಅಧಿಕಾರ ಇದ್ದಾಗ ಕಾಂಗ್ರೆಸ್ ಕಬ್ಬಿನಂತೆ ಇರ್ತಾರೆ, ಅಧಿಕಾರ ಇಲ್ಲದಿದ್ದಾಗ ಹತ್ತಿಯಂತೆ ಇರ್ತಾರೆ. ಮೈತ್ರಿ ಸರ್ಕಾರವನ್ನು ಅಪವಿತ್ರ ಮಾಡಿದವರು ಕಾಂಗ್ರೆಸ್ …

Read More »

ವಿಷ ಪ್ರಾಶನವಾಗಿ ಹತ್ತು ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಗೊಂಗಡಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಧಾರವಾಡ: ವಿಷ ಪ್ರಾಶನವಾಗಿ ಹತ್ತು ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಗೊಂಗಡಿಕೊಪ್ಪ ಗ್ರಾಮದಲ್ಲಿ ನಡೆದಿದೆ. ತನ್ವೀರ ಮೃತಪಟ್ಟ ಹತ್ತು ತಿಂಗಳ ಮಗು. ನಿನ್ನೆ ಏಕಾಏಕಿ ಅಸ್ವಸ್ಥಗೊಂಡಿದ್ದ ಮಗುವನ್ನು ಪೋಷಕರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿತ್ತು. ಆದರೆ ಮಗುವಿನ ಮೃತದೇಹದಿಂದ ದುರ್ವಾಸನೆ ಬರಲು ಆರಂಭಿಸಿದ ಬಳಿಕ ವಿಷ ಹಾಕಿರೋ ಶಂಕೆ ವ್ಯಕ್ತವಾಗಿತ್ತು.     ವಿಷ ಹಾಕಿರೋ ಶಂಕೆ ವ್ಯಕ್ತವಾಗುತ್ತಿದಂತೆ ತಂದೆ ಮಹಮ್ಮದ‌ …

Read More »

ಹತ್ತಿ ನೆಪದಲ್ಲಿ ಗಾಂಜಾ ಬೆಳೆಯುತ್ತಿದ್ದ ಭೂಪ; ಅಬಕಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ?

ರಾಯಚೂರು: ಅಬಕಾರಿ ಡಿಸಿ ಲಕ್ಷ್ಮಿ .ಎಂ. ನಾಯಕ ನೇತೃತ್ವದ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿ ಹತ್ತಿ, ಮೆಣಸಿನಕಾಯಿ ಬೆಳೆಗಳ ನಡುವೆ ಬೆಳೆದಿದ್ದ ಗಾಂಜಾವನ್ನು ಪತ್ತೆ ಕಚ್ಚಿದ್ದಾರೆ. ಗ್ರಾಮದ ಸಿದ್ದನಗೌಡ ಎಂಬಾತನಿಗೆ ಸೇರಿದ ಜಮೀನಿನಲ್ಲಿ ಗಾಂಜಾ ಬೆಳೆಯಲಾಗಿತ್ತು. ಇದನ್ನು ಅರಿತು ದಾಳಿ ನಡೆಸಿದ ಲಕ್ಷ್ಮಿ .ಎಂ. ನಾಯಕ ನೇತೃತ್ವದ ತಂಡ 300ಕ್ಕೂ ಅಧಿಕ ಗಾಂಜಾ ಗಿಡಗಳನ್ನು ಜಪ್ತಿ ಮಾಡಿದ್ದಾರೆ. ಇದಕ್ಕು ಮುಂಚೆ ಗಾಂಜಾ ಗಿಡಗಳನ್ನು ಕಿತ್ತು ಹಾಕಿ ತೂಕ ಮಾಡಲು ತಯಾರಿ …

Read More »