Breaking News

Daily Archives: ಅಕ್ಟೋಬರ್ 18, 2021

ಫ್ಯಾಕೇಜಿಂಗ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ : 2 ಸಾವು, 120 ಜನರ ರಕ್ಷಣೆ

ಸೂರತ್ : ಗುಜರಾತಿನ ಸೂರತ್ ಜಿಲ್ಲೆಯ ಪ್ಯಾಕೇಜಿಂಗ್ ಪ್ಯಾಕ್ಟರಿಯಲ್ಲಿ ಇಂದು ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದಾರೆ. ಈ ದುರ್ಘಟನೆಯಲ್ಲಿ ೧೨೦ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಕೆಲವು ಕಾರ್ಮಿಕರಿಗೆ ಗಾಯಗಳಾಗಿವೆ. ಐದು ಅಂತಸ್ತುಗಳ ಕಟ್ಟಡದಲ್ಲಿನ ಪ್ಯಾಕ್ಟರಿಯ ಮೊದಲನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಇತರ ಮಹಡಿಗಳಿಗೆ ಹರಡಿದೆ. ಕಟ್ಟಡದೊಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ರಕ್ಷಿಸಲು ಕ್ರೇನ್‌ಗಳನ್ನು ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ಯಾಕೇಜಿಂಗ್ ಫ್ಯಾಕ್ಟರಿ ಸೂರತ್‌ನ ಕಡೋದರದ ವರೇಲಿ …

Read More »

ದೀಪಾವಳಿ ವೇಳೆ ಬೆಂಗಳೂರಲ್ಲಿ ಹಸಿರು ಪಟಾಕಿ ಸಿಡಿಸಲು ಮಾತ್ರ ಅನುಮತಿ

ಬೆಂಗಳೂರು : ಈ ಬಾರಿಯೂ ಪರಿಸರಕ್ಕೆ ಮಾರಕವಾಗುವ ಪಟಾಕಿ ಸಿಡಿಸಲು ಅನುಮತಿ ದೊರೆಯುವ ಸಾಧ್ಯತೆಗಳಿಲ್ಲ. ಈಗಾಗಲೇ ಹಸಿರು ನ್ಯಾಯಾಲಯ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡಿರುವುದರಿಂದ ನ್ಯಾಯಾಲಯದ ಆದೇಶ ಪಾಲಿಸಲು ಬಿಬಿಎಂಪಿ ತೀರ್ಮಾನಿಸಿದೆ. ಹೀಗಾಗಿ ನಗರದಲ್ಲಿ ಕೇವಲ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಕಳೆದ ಬಾರಿಯ ದೀಪಾವಳಿ ಸಂದರ್ಭದಲ್ಲೂ ಭಾರೀ ಸದ್ದು ಮಾಡುವ ಹಾಗೂ ಪರಿಸರಕ್ಕೆ ಹಾನಿ …

Read More »

ಗಗನ ಮುಟ್ಟಿದ ತರಕಾರಿಗಳ ಬೆಲೆ

ತುಮಕೂರು: ಕಳೆದ ವಾರ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಈ ವಾರ ಬಹುತೇಕ ತರಕಾರಿಗಳ ಧಾರಣೆ ಗಗನ ಮುಟ್ಟಿದೆ. ಹಾಗಲಕಾಯಿ ಹೊರತುಪಡಿಸಿದರೆ ಎಲ್ಲಾ ತರಕಾರಿ ಹಾಗೂ ಸೊಪ್ಪಿನ ಬೆಲೆ ದುಬಾರಿಯಾಗಿದೆ. ಬೀನ್ಸ್ ಕೆ.ಜಿ ₹30-35 ಇದ್ದದ್ದು, ಒಮ್ಮೆಲೆ ₹60ಕ್ಕೆ ಜಿಗಿದಿದೆ. ಅಂತರಸನಹಳ್ಳಿ ಮಾರುಕಟ್ಟೆಯಲ್ಲೇ ಧಾರಣೆ ದುಪ್ಪಟ್ಟಾಗಿದ್ದರೆ, ಚಿಲ್ಲರೆಯಾಗಿ ಕೆ.ಜಿ ₹80-100ಕ್ಕೆ ಮಾರಾಟವಾಗುತ್ತಿದೆ. ಕ್ಯಾರೇಟ್, ಬೀಟ್ರೂಟ್, ಗೆಡ್ಡೆಕೋಸು, ಹೂ ಕೋಸು ಸೇರಿದಂತೆ ಸಾಕಷ್ಟು ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ. ಈರುಳ್ಳಿ, ಟೊಮೆಟೊ ಹಿಂದಿನ …

Read More »

ನೀರು ಸರಬರಾಜು ಇಲಾಖೆ ಅಧಿಕಾರಿಗಳನ್ನ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಉಮೇಶ್ ಕತ್ತಿ

ಚಿಕ್ಕೋಡಿ(ಬೆಳಗಾವಿ): ಅರಣ್ಯ ಹಾಗೂ ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳನ್ನ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಜರುಗಿದೆ. ಹುಕ್ಕೇರಿ ಮತಕ್ಷೇತ್ರದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗಿಯಾಗಿದ್ದ ಸಚಿವರು, ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಜಲಜೀವನ ಮಿಶನ್ ಕಾಮಗಾರಿ ಕಳಪೆಯಾದ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬಾರಜು ಇಲಾಖೆಯ ಅಭಿಯಂತರಾದ …

Read More »

ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷ ಸೋನಾಲಿ ಸರ್ನೋಬ ತ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

  ಖಾನಾಪುರ :ದಿ. 18-10-2021 ರಂದು ಖಾನಾಪುರ ತಾಲೂಕಿನ ಭೋರುಣಕಿ ಗ್ರಾಂ ಪಂ ವ್ಯಾಪ್ತಿಯಲ್ಲಿ ಬರುವ ಗಸ್ಟೋಳ್ಳಿ ಮತ್ತು ಚಣಕೆಬೈಲ ಗ್ರಾಮದಲ್ಲಿ ಪಡಿತರ ರೇಶನ್ ಪಡೆಯಲಿಕ್ಕೆ ಇಲ್ಲಿನ ಗ್ರಾಮಸ್ಥರು, ಇಲ್ಲಿಂದ ಸುಮಾರು 7km ದೂರದ ಗೊಳಿಹಳ್ಳಿಯಿಂದ ರೇಶನ್ ತೆಗೆದುಕೊಂಡು ಬರುತ್ತಿದ್ದರು. ಇದನ್ನು ಬೆಳಗಾವಿ ಮಹಿಳಾ ಮೋರ್ಚಾ ಉಪಾಧ್ಯಕ್ಷರು ಹಾಗೂ ಖಾನಾಪುರ ತಾಲೂಕಿನ ಪ್ರಭಾರಿಗಳು ಆದ ಡಾ. ಸೋನಾಲಿ ಸರ್ನೋಬತ್. ರವರು ಗ್ರಾಮಸ್ಥರ ಸಮಸ್ಯೆಯನ್ನು ನೋಡಿ ಸಂಬಂಧಿಸಿದ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ …

Read More »

ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಮುಂದಿನ ಚುನಾವಣೆಗಳಲ್ಲಿ ಸೋಲಲಿದೆ

ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯ ಕಾರ್ಯಕ್ಷಮತೆ ಅದು ಮುಂದಿನ ಚುನಾವಣೆಗಳಲ್ಲಿ ಸೋಲಲಿದೆ ಎನ್ನುವುದನ್ನು ಖಚಿತಪಡಿಸುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ದಿ.ಪ್ರಿಂಟ್‌ ಗೆ ನೀಡಿರುವ ಸಂದರ್ಶನದಲ್ಲಿ, “ನರೇಂದ್ರ ಮೋದಿ ಜನಪ್ರಿಯತೆ ಕುಸಿದಿದೆ. 2019ರಲ್ಲಿ ಅವರಿಗಿದ್ದ ಜನಪ್ರಿಯತೆಗೆ ಹೋಲಿಸುವುದಾದರೆ ಈಗ ಅವರ ಜನಪ್ರಿಯತೆಗೆ ಪೆಟ್ಟು ಬಿದ್ದಿದೆ. ಹಣದುಬ್ಬರ, ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣ ಹಾಗೂ ಅಸಮರ್ಪಕ ಕೋವಿಡ್‌ ನಿರ್ವಹಣೆಯಿಂದಾಗಿ ನಾಗರಿಕರು ಅಸಮಾಧನಗೊಂಡಿದ್ದಾರೆ” ಎಂದು ಅವರು ಹೇಳಿದ್ದಾರೆ. ಬಿಜೆಪಿಯ ಸುಳ್ಳುಗಳನ್ನು ಜನರು …

Read More »

ಯುವತಿ ಆತ್ಮಹತ್ಯೆ ಪ್ರಕರಣ : ASI ಸೇರಿದಂತೆ 8 ಮಂದಿ ವಿರುದ್ದ FIR

ಮೈಸೂರು,ಅ.18- ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ವಂಚಿಸಿದ ಹಿನ್ನಲೆಯಲ್ಲಿ ಡೆತ್‍ನೋಟ್ ಬರೆದಿಟ್ಟು ಯುವತಿ ಸಾವಿಗೆ ಶರಣಾದ ಪ್ರಕರಣ ಸಂಬಂಧ ನಂಜನಗೂಡಿನ ಹುಲ್ಲಹಳ್ಳಿ ಠಾಣೆ ಎಎಸ್‍ಐ ಸೇರಿದಂತೆ 8 ಮಂದಿ ವಿರುದ್ದ ಎಫ್‍ಐಆರ್ ದಾಖಲಾಗಿದೆ. ಎಎಸ್‍ಐ ಎಂ.ಶಿವರಾಜು 8ನೇ ಆರೋಪಿಯಾಗಿದ್ದು ಇವರು ಕರ್ತವ್ಯ ನಿರ್ವಹಿಸುವ ಠಾಣೆಯಲ್ಲೇ ಎಫ್‍ಐಆರ್ ದಾಖಲಾಗಿದೆ. ಯುವತಿ ನ್ಯಾಯ ಕೇಳಿ ಬಂದಾಗ ಸೂಕ್ತವಾಗಿ ಸ್ಪಂದಿಸದೆ ಎಎಸ್‍ಐ ಶಿವರಾಜು ನಿರ್ಲಕ್ಷ್ಯ ವಹಿಸಿದ್ದಾರೆ ಹಾಗೂ ಆರೋಪಿಗಳ ಆಮಿಷಕ್ಕೆ ಬಲಿಯಾಗಿ ಯುವತಿ ನೀಡಿದ ದೂರು …

Read More »

ಕೃಷಿ ಕಾಯ್ದೆ ವಿರುದ್ಧ ಯುವ ರೈತನ ಒಂಟಿ ಹೋರಾಟ, ಸೈಕಲ್ ಮೇಲೆ ಊರೂರು ತಿರುಗಾಟ

ಕಳೆದ ಒಂದು ವರ್ಷದಿಂದ ನಿರಂತರವಾಗಿ ರೈತರ ಪ್ರತಿಭಟನೆಗಳು(Farmers Protest) ಮುಂದುವರಿದಿದೆ. ವಿರೋಧದ ನಡುವೆಯೂ ಕೆಲವರು ರೈತರೊಂದಿಗೆ ಪ್ರತಿಭಟನೆಗಳಲ್ಲಿ ಭಾಗಿಯಾಗಿ ಅವರಿಗೆ ಬೆಂಬಲ ನೀಡಿದರೆ, ಇನ್ನೂ ಕೆಲವರು ಅವರಿಗೆ ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ. ಇಲ್ಲೊಬ್ಬ ಯುವ ರೈತ ಅನ್ನದಾತರಿಗೆ ಬೆಂಬಲ ಸೂಚಿಸಲು ಕಾಶ್ಮೀರದಿಂದ(Kashmir) ಕನ್ಯಾಕುಮಾರಿಯವರೆಗೆ(Kanya Kumari) ಯಾತ್ರೆ ಹೊರಟಿದ್ದು, ಶನಿವಾರ ಕಾರವಾರಕ್ಕೆ ಭೇಟಿ ನೀಡಿದರು. ಯಾರಿವ ಈ ಯುವ ರೈತ? ಕೇಂದ್ರ ಸರ್ಕಾರ ತಂದಿರುವ ಕೃಷಿ ಮಸೂದೆ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರೈತರು …

Read More »

ಮಂಡ್ಯ ಮೈಶುಗರ್ ಕಾರ್ಖಾನೆ ಪುನಶ್ಚೇತನ: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

ಬೆಂಗಳೂರು : ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಮಹತ್ವದ ಸಭೆ ನಡೆಸಲಾಯಿತು. ವಿಧಾನಸೌಧದ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರು ಭಾಗಿಯಾಗಿ ತಮ್ಮ ಅಭಿಪ್ರಾಯ ಮುಂದಿಟ್ಟರು. ಸಭೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಸಕ್ಕರೆ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್,ಹಣಕಾಸು …

Read More »

ಸಿದ್ದರಾಮಯ್ಯ, ಎಚ್‌ಡಿಕೆಗೆ ಯಾರನ್ನು ಟೀಕಿಸುತ್ತಿದ್ದೇವೆ ಎಂಬ ಅರಿವಿಲ್ಲ: ಹೆಬ್ಬಾರ

ಶಿರಸಿ: ರಾಜಕೀಯವಾಗಿ ಹತಾಶರಾಗಿರುವ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಆರ್‌ಎಸ್‌ಎಸ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ನಗರದಲ್ಲಿ ಸೋಮವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಅವರಿಬ್ಬರಿಗೆ ತಾವು ಯಾರನ್ನು ಟೀಕಿಸುತ್ತಿದ್ದೇವೆ ಎಂಬ ಅರಿವಿಲ್ಲ’ ಎಂದು ಲೇವಡಿ ಮಾಡಿದರು. ‘ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಪರಸ್ಪರ ಟೀಕಿಸಿಕೊಳ್ಳುತ್ತಾರೆ. ಒಮ್ಮೆಲೆ ಸಂಘ ಪರಿವಾರದ ಮೇಲೆ ಹರಿಹಾಯುತ್ತಾರೆ. ಇದು ಅವರಿಬ್ಬರೂ ಗೊಂದಲ್ಲಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತಿದೆ’ ಎಂದರು. ‘ವಿಜಯದಶಮಿ ಮುಗಿಯಲಿ ಎಂದು …

Read More »