ಬೆಂಗಳೂರು, ಅ.11: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದ್ದು, ಒಟ್ಟಾರೆ ಶೇ.55.54ರಷ್ಟು ಫಲಿತಾಂಶ ಬಂದಿದೆ. 2020-21ನೇ ಸಾಲಿನ ಪೂರಕ ಪರೀಕ್ಷೆಯನ್ನು ಕಳೆದ ಸೆಪ್ಟೆಂಬರ್ 27 ಮತ್ತು 29ರಂದ ನಡೆಸಲಾಗಿತ್ತು. ಒಟ್ಟಾರೆ 53,155 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 29,522 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.55.54ರಷ್ಟು ಫಲಿತಾಂಶ ಬಂದದೆ. ಫಲಿತಾಂಶ ವಿವರಗಳನ್ನು ವೆಬ್‌ಸೈಟ್ (http://karresults.nic.in ಹಾಗೂ https:kseeb.karnataka.gov.in/sslcseptresults2021) ಪರಿಶೀಲಿಸಬಹುದು. ಫಲಿತಾಂಶದ ವಿವರಗಳನ್ನು ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಮಧ್ಯಾಹ್ನ 3 ಗಂಟೆಯ …
Read More »Daily Archives: ಅಕ್ಟೋಬರ್ 11, 2021
ಮದುವೆಯಾದರೂ ಸಿಂಗಲ್ ಆಗಿರುವ ಮೋದಿಗೆ ಹೇಳುವ ಧೈರ್ಯವಿದೆಯೇ? ಸುಧಾಕರ್ ಗೆ ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು: ಆಧುನಿಕ ಮಹಿಳೆಯರು ವಿವಾಹವಾಗಲು, ಮಕ್ಕಳನ್ನು ಹೆರಲು ನಿರಾಕರಿಸುತ್ತಿದ್ದಾರೆ ಎಂದುರುವ ಸಚಿವ ಕೆ.ಸುಧಾಕರ್ ಅವರೇ, ಮದುವೆಯಾದರೂ ‘ಸಿಂಗಲ್’ ಆಗಿರುವ ಮೋದಿಯವರ ಬಗ್ಗೆಯೂ ಹೀಗೆ ಹೇಳುವ ಧೈರ್ಯವಿದೆಯೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಸುಧಾಕರ್ ಹೇಳಿಕೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಮಹಿಳೆಯರ ಬದುಕನ್ನ ನಿರ್ಧರಿಸುವ, ಅವರ ಆಯ್ಕೆಯನ್ನು ನಿಯಂತ್ರಿಸುವ, ಅವರ ಸ್ವತಂತ್ರ ಪ್ರಶ್ನಿಸುವ ಬಿಜೆಪಿಗೂ ತಾಲಿಬಾನ್‌ಗೂ ವ್ಯತ್ಯಾಸವಿಲ್ಲ ಎಂದಿದೆ. ಮಹಿಳೆಯರ ಬಗ್ಗೆ ಸಚಿವ ಸುಧಾಕರ್ ಆಡಿದ ಮಾತು …
Read More »ವಿದ್ಯುತ್ ಉತ್ಪಾದನಾ ಘಟಕಗಳ ಖಾಸಗೀಕರಣಕ್ಕೆ ಹುನ್ನಾರ : ಸಿದ್ದರಾಮಯ್ಯ ಗಂಭೀರ ಆರೋಪ
ಬೆಂಗಳೂರು : ರಾಜ್ಯ ಸರಕಾರ ವಿದ್ಯುತ್ ಉತ್ಪಾದನೆ ಘಟಕಗಳ ಖಾಸಗೀಕರಣಕ್ಕೆ ಹುನ್ನಾರ ಮಾಡಿದೆ, ಹೀಗಾಗಿ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಮೊದಲಿನಿಂದಲೂ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಆಗುತ್ತಿತ್ತು.ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯೋ, ಕೃತಕ ಅಭಾವವೋ ಮೊದಲು ಗೊತ್ತಾಗಬೇಕು ಎಂದು ಆಗ್ರಹಿಸಿದರು. ಇನ್ನೊಂದೆಡೆ, ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗದು ಮತ್ತು ವಿದ್ಯುತ್ ಅಭಾವ ಸೃಷ್ಟಿಯಾಗದು ಎಂದು ಇಂಧನ …
Read More »ಮಳೆಗೆ ಬಿದ್ಧ ಮನೆ- ಸ್ವಲ್ಪದರಲ್ಲೇ ಬದುಕುಳಿದ 8 ಜೀವಗಳು.
ಬೆಳಗಾವಿ: ನಿನ್ನೆ ತಡರಾತ್ರಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮನೆಗಗಳಿಗೆ ನೀರು ನುಗ್ಗಿದ್ದು, ಬಾಳು ಕಡೊಲಕರ ಎಂಬವರ ಮನೆ ಕುಸಿದಿರುವ ಘಟನೆ ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದಲ್ಲಿ ನಡೆದಿದೆ. ಮನೆಗೆ ಬಂದಿದ್ದ ಮಳೆನೀರನ್ನು ಹೊರಹಾಕಿ ಜಾರಿದ ಕುಟುಂಬದ ಸದಸ್ಯರು ಮತ್ತೆ ನಿದ್ರೆಗೆ ಜಾರಿದ ಸಂದರ್ಭದಲ್ಲಿ ಮನೆ ಛಾವಣಿ ಕುಸಿದಿದೆ. ಶಬ್ದ ಕೇಳಿ 8 ಸದಸ್ಯರು ಮನೆಯಿಂದ ಹೊರಬಂದಿದ್ದಾರೆ. ಮನೆ ಮಾಲೀಕ ಬಸವಣ್ಣಿ ಕಡೊಲಕರ್ ಸಮಯ ಪ್ರಜ್ಞೆಯಿಂದ 8 ಜೀವಗಳು ಬದುಕುಳಿದಿವೆ. ಮನೆ …
Read More »ವೀಕ್‌ಎಂಡ್ ಹುಮಸ್ಸಿನಲ್ಲಿದ್ದ ಜನರಿಗೆ ಕಿರಿಕಿರಿ ಉಂಟು ಮಾಡಿದ ಮಳೆ
ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಭಾನುವಾರ ನಗರದಲ್ಲಿ ಬೆಳಗ್ಗೆಯಿಂದಲೇ ಮಳೆ ಸುರಿದ ಕಾರಣ ವೀಕ್‌ಎಂಡ್ ಹುಮಸ್ಸಿನಲ್ಲಿದ್ದವರಿಗೆ ಕಿರಿಕಿರಿ ಉಂಟು ಮಾಡಿತು. ಮಳೆಯಿಂದಗಾಗಿ ರಾಜಧಾನಿಯ ರಸ್ತೆಗಳು ಜಲಾವೃತಗೊಂಡಿದ್ದವು. ಜತೆಗೆ ಮ್ಯಾನ್ ಹೋಲ್‌ಗಳು ಕೂಡ ಉಕ್ಕಿಹರಿದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವಂತಾಯಿತು. ಗಾಳಿಸಹಿತ ಮಳೆ ಸುರಿದ ಹಿನ್ನೆಲೆಯಲ್ಲಿ ತಿಪ್ಪಸಂದ್ರ, ಪುಷ್ಪಾಂಜಲಿ ಚಿತ್ರಮಂದಿರ, ಕರಿರೇನಹಳ್ಳಿ, ಮತ್ತು ವೆಸ್ಟ್ ಆಫ್ ಕಾರ್ಡ್ ರಸ್ತೆಗಳಲ್ಲಿ ಮರಗಳು ಉರುಳಿ ಬಿದ್ದಿದ್ದು ಬಿಬಿಎಂಪಿ ಅಧಿಕಾರಿಗಳು ಮರಗಳ ತೆರವು …
Read More »ಇದು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತಾಯಿತು: ದಿನೇಶ್ ಗುಂಡೂರಾವ್
ಬೆಂಗಳೂರು: ದೇಶದೆಲ್ಲೆಡೆ ಏಕಾಏಕಿ ಕಲ್ಲಿದ್ದಲು ಕೊರತೆ ಉಂಟಾಗಿರುವುದು ಆಶ್ಚರ್ಯಕರ. ಕಲ್ಲಿದ್ದಿಲಿನ ಅಭಾವ ರಾಜ್ಯದ ಮೇಲೂ ತಟ್ಟಿದೆ ರಾಜ್ಯದ ಮೂರು ವಿದ್ಯುತ್ ಕೇಂದ್ರಗಳು ಅವಲಂಬಿತವಾಗಿರುವುದು ಕಲ್ಲಿದ್ದಿಲಿನ ಮೇಲೆ. ಈ ವಿದ್ಯುತ್ ಕೇಂದ್ರಗಳಿಗೆ ಕಲ್ಲಿದ್ದಿಲು ಪೂರೈಕೆಯಾಗದಿದ್ದರೆ, ಉತ್ಪಾದನೆ ಸ್ಥಗಿತಗೊಳ್ಳಲಿದೆ. ಆಗ ರಾಜ್ಯ ಕತ್ತಲಲ್ಲಿ ಮುಳುಗುವುದು ನಿಶ್ಚಿತ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರ ತನಗೆಷ್ಟು ಕಲ್ಲಿದ್ದಲು ಬೇಕು ಎಂದು ಅಂದಾಜಿಸಿ ಮುಂಜಾಗ್ರತಾ …
Read More »ಕಲ್ಲಿದ್ದಲು ಕೊರತೆಯಿಂದ ಮಹಾರಾಷ್ಟ್ರದ 7 ಸ್ಥಾವರಗಳ 13 ಘಟಕಗಳು ಬಂದ್
ಮುಂಬೈ: ಕಲ್ಲಿದ್ದಲು ಕೊರತೆಯಿಂದ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪೆನಿ ನಿಯಮಿತ ಇದಕ್ಕೆ ವಿದ್ಯುತ್ ಪೂರೈಸುವ ಏಳು ಕಲ್ಲಿದ್ದಲು ಸ್ಥಾವರಗಳ 13 ಘಟಕಗಳು ಮುಚ್ಚಿವೆ. ರಾಜ್ಯದಲ್ಲಿ 3,300 ಮೆವಾ ವಿದ್ಯುತ್ ಕೊರತೆಯಿದೆಯೆನ್ನಲಾಗಿದ್ದು, ರವಿವಾರ ಮುಂಬೈ ನಗರವೊಂದರ ವಿದ್ಯುತ್ ಬೇಡಿಕೆಯೇ 18,000 ಮೆವಾ ಆಗಿದೆ. ಸದ್ಯ ಕಲ್ಲಿದ್ದಲು ಕೊರತೆಯಿಂದ ಚಂದ್ರಾಪುರ, ನಾಸಿಕ್ ಹಾಗೂ ಭುಸವಲ್ ಇಲ್ಲಿನ ಘಟಕಗಳು ಕಾರ್ಯಾಚರಿಸುತ್ತಿಲ್ಲ. ಇದೊಂದು ರಾಷ್ಟ್ರೀಯ ಸಮಸ್ಯೆಯಾಗಿದೆ, ಆದರೆ ಯಾವುದೇ ವಿದ್ಯುತ್ ಕಡಿತವಿಲ್ಲದೆ ಸಮಸ್ಯೆ ನಿಭಾಯಿಸಲು …
Read More »ರಾಜ್ಯಕ್ಕೆ ಕಲ್ಲಿದ್ದಲು ಸಿಕ್ಕಿದೆ, ವಿದ್ಯುತ್ ಅಭಾವ ಸೃಷ್ಟಿಯಾಗದು: ಸಚಿವ ಸುನಿಲ್ ಕುಮಾರ್
ಬೆಂಗಳೂರು : ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗದು ಮತ್ತು ವಿದ್ಯುತ್ ಅಭಾವ ಸೃಷ್ಟಿಯಾಗದು ಎಂದು ಇಂಧನ ಸಚಿವ ಸುನಿಲ್ ಕುಮಾರ್ ಅವರು ಸೋಮವಾರ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಮುತುವರ್ಜಿಯಿಂದ ರಾಜ್ಯಕ್ಕೆ ಹಂಚಿಕೆಯಾಗಬೇಕಿದ್ದ ಕಲ್ಲಿದ್ದಲು ಸಿಕ್ಕಿದೆ ಎಂದರು. ದೇಶದಲ್ಲಿ ವಿದ್ಯುತ್ ಪೂರೈಕೆ ಸರಾಗವಾಗಿದ್ದು, ಕೊರತೆ ಉಂಟಾಗುವ ಯಾವುದೇ ಸ್ಥಿತಿಯಿಲ್ಲ. ಕೋಲ್ ಇಂಡಿಯಾ ಲಿ.ನಲ್ಲಿ ಸಾಕಷ್ಟು ಕಲ್ಲಿದ್ದಲು ದಾಸ್ತಾನು …
Read More »ಹಾಫ್ ಮೆಂಟ್ಲು ಚಿತ್ರದ ನಿರ್ಮಾಪಕ ಅರೆಸ್ಟ್
: ಸಿನಿಮಾ ಸ್ಟೈಲ್ ನಲ್ಲೇ ಕಿಡ್ನ್ಯಾಪ್ ಮಾಡಲು ಹೋಗಿ ನಿರ್ಮಾಪಕನೊಬ್ಬ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ಹಾಫ್ ಮೆಂಟ್ಲು ಸಿನಿಮಾ ನಿರ್ಮಾಪಕ ಶಶಿಕುಮಾರ್ ಬಂಧಿತ ಆರೋಪಿ. ಐಟಿ ಅಧಿಕಾರಿಗಳೆಂದು ಹೇಳಿ ಈರುಳ್ಳಿ ವ್ಯಾಪಾರಿ ಶ್ರೀನಿವಾಸ್ ಎಂಬುವವರನ್ನು ಶಶಿಕುಮಾರ್ ಹಾಗೂ ಗ್ಯಾಂಗ್ ಕಿಡ್ನ್ಯಾಪ್ ಮಾಡಿತ್ತು. 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದಾಗ ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿ ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ಬಿಟ್ಟು ಹೋಗಿದ್ದರು. …
Read More »ಶ್ರೀ ಸಿದ್ಧೇಶ್ವರ ಮಂದಿರ ಪುನರೊದ್ಧಾರ ಹಾಗೂ ಪ್ರವಾಸಿ ತಾಣವಾಗಿ ಮಾರ್ಪಡಿಸಲು ಮನವಿ
ಬೆಳಗಾವಿ: ಬೆಳಗಾವಿಗೆ ಭೇಟಿ ನೀಡಿದ ಪ್ರವಾಸೋದ್ಯಮ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಶ್ರೀಪಾದ ನಾಯ್ಕರವರನ್ನು ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ರವರು ಭೇಟಿ ಮಾಡಿ ಕಣಬರ್ಗಿಯಲ್ಲಿರುವ ಶ್ರೀ ಸಿದ್ಧೇಶ್ವರ ಮಂದಿರದ ಪುನರೊದ್ಧಾರ ಹಾಗೂ ಮಂದಿರದ ಪರಿಸರವನ್ನು ಪ್ರವಾಸಿ ಸ್ಥಾನವಾಗಿ ಮಾರ್ಪಡಿಸುವಂತೆ ಮನವಿ ಪತ್ರ ಸಲ್ಲಿಸಿದರು. ಚೋಳ ಸಾಮ್ರಾಜ್ಯದ ವಾಸ್ತು ಶೀಲ್ಪದ ಉದಹಾರಣೆಯಾಗಿರುವ ಈ ಭವ್ಯ ಹಾಗೂ ಶ್ರದ್ಧೆ ಪ್ರತೀಕವಾಗಿರುವ ಈ ಐತಿಹಾಸಿಕ ದೇವಸ್ಥಾನದ ಪುನರೊದ್ಧಾರದಿಂದ ಉತ್ತರಕರ್ನಾಟಕ, …
Read More »