Breaking News

Daily Archives: ಅಕ್ಟೋಬರ್ 8, 2021

ಮೈಸೂರು: ಮಾಜಿ ಶಾಸಕ ದಿ. ವೇದಾಂತ ಹೆಮ್ಮಿಗೆ ಮನೆ ಮುಂದೆ ಕಾರಿನ ಮೇಲೆ ಉರುಳಿ ಬಿದ್ದ ಮರ!

ಮೈಸೂರು: ಕುವೆಂಪುನಗರದ ವಿಜಯಾ ಬ್ಯಾಂಕ್‌ ವೃತ್ತ ಬಳಿಯ ಮಾಜಿ ಶಾಸಕ ದಿವಂಗತ ವೇದಾಂತ ಹೆಮ್ಮಿಗೆ ಅವರ ಮನೆ ಮುಂಭಾಗ ಮರವೊಂದು ಕಾರಿನ ಮೇಲೆ ಬಿದ್ದಿರುವ ಘಟನೆ ನಡೆದಿದೆ. ನಗರದಲ್ಲಿ ಸತತ ಎರಡು ದಿನಗಳಿಂದ ಸುರಿದ ಭಾರಿ ಮಳೆ ಸುರಿಯಿತು. ಪರಿಣಾಮವಾಗಿ ಮರ ಉರುಳಿಬಿದ್ದಿದೆ. ಮರ ಕಾರಿನ ಮೇಲೆ ಬಿದ್ದು, ಕಾರು ಜಖಂಗೊಂಡಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೈಸೂರು ಮಹಾನಗರ ಪಾಲಿಕೆಯ ಅಭಯ ತಂಡ ಮರ ತೆರವು ಕಾರ್ಯಾಚರಣೆ ನಡೆಸುತ್ತಿದೆ.

Read More »

ಚುನಾವಣಾ ಪ್ರಚಾರಕ್ಕೆ ನಿರ್ಬಂಧ

ಬೆಂಗಳೂರು: ರಾಜ್ಯದ ಸಿಂಧಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯ ಪ್ರಚಾರದ ಸಮಯವನ್ನು ಕೋವಿಡ್-19 ಕಾರಣದಿಂದ ಸಂಜೆ 7ರಿಂದ ಬೆಳಗ್ಗೆ 10:00 ಗಂಟೆಯವರೆಗೆ ನಿರ್ಬಂಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಉಪ ಚುನಾವಣೆ ಮತ ಎಣಿಕೆಯ ದಿನ ಮತ ಎಣಿಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಚುನಾವಣಾ ಅಧಿಕಾರಿ/ಸಿಬ್ಬಂಧಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕೊರೊನಾ ಲಸಿಕೆಯ ಎರಡು ಲಸಿಕೆಗಳನ್ನು ಕಡ್ಡಾಯವಾಗಿ ಪಡೆದಿರಬೇಕು ಅಥವಾ ಒಂದು ಲಸಿಕೆ‌ ಪಡೆದವರು ಮತ ಎಣಿಕೆ …

Read More »

ಕಂಬಾಳಪಲ್ಲಿಯಲ್ಲಿ ದಲಿತರನ್ನು ಸುಟ್ಟರಲ್ಲ ಅದಕ್ಕೇನು ಉತ್ತರ ಕೊಡ್ತಾರೆ?- ಸಿದ್ದುಗೆ ಕಾರಜೋಳ ತಿರುಗೇಟು

ಬೆಳಗಾವಿ: ಕಂಬಾಳಪಲ್ಲಿಯಲ್ಲಿ ದಲಿತರನ್ನು ಸುಟ್ಟರಲ್ಲ ಅದಕ್ಕೇನು ಉತ್ತರ ಕೊಡ್ತಾರೆ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯಗೆ ಜಲಸಂಪನ್ಮೂಲ ಸಚಿವ ಗೊವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಸಚಿವರ ಪುತ್ರ ಕಾರು ಹರಿಸಿದ ಪ್ರಕರಣ ಕುರಿತು ಸಿದ್ದರಾಮಯ್ಯ ಅವರು ಅಸತ್ಯ, ಹಿಂಸೆ ಮೇಲೆ ನಂಬಿಕೆ ಇಟ್ಟ ಬಿಜೆಪಿಗೆ ಅಧಿಕಾರ ಸಿಕ್ಕಿದ್ದು ದುರಾದೃಷ್ಟಕರ ಎಂದು ಪ್ರತಿಕ್ರಿಯಿಸಿದ್ದರು. ಈ ಹಿನ್ನೆಲೆ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ …

Read More »

ಪ್ರವಾಹ ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ- ಸಂತ್ರಸ್ಥರ ಧರಣಿ ಸತ್ಯಾಗ್ರಹ

ಚಿಕ್ಕೋಡಿ/ಬೆಳಗಾವಿ: ಪರಿಹಾರ ನೀಡುವಂತೆ ಆಗ್ರಹಿಸಿ ಕೃಷ್ಣಾ ನದಿ ತೀರದ ಪ್ರವಾಹ ಸಂತ್ರಸ್ಥರು ಪ್ರತಿಭಟನೆ ನಡೆಸಿದರು. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ಕೃಷ್ಣಾ ತೀರದ ಜುಗುಳ, ಮಂಗಾವತಿ, ಶಹಾಪುರ, ಮಳವಾಡ ಗ್ರಾಮಗಳ ಸಂತ್ರಸ್ಥರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರವಾಹ ಬಂದು ಹೋಗಿ ಮೂರು ತಿಂಗಳು ಕಳೆದರೂ ಸರ್ಕಾರ ಸಂತ್ರಸ್ಥರಿಗೆ ಪರಿಹಾರ ನೀಡಿಲ್ಲ. ಪ್ರವಾಹ ಬಂದಾಗ ಮನೆಗಳನ್ನು ಕಳೆದುಕೊಂಡಿದ್ದೇವೆ. ಇದುವರೆಗೆ ಸರ್ಕಾರದ ಪರಿಹಾರ ಬಂದಿಲ್ಲ. …

Read More »

ಸಿಂದಗಿ, ಹಾನಗಲ್‍ಗೆ ಇಂದು ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ವಿಜಯಪುರ/ಹಾವೇರಿ: ರಾಜ್ಯದಲ್ಲಿ ಉಪಚುನಾವಣಾ ಕದನ ಜೋರಾಗಿದೆ. ಸಿಂದಗಿ, ಹಾನಗಲ್ ಕ್ಷೇತ್ರಗಳಿಂದ ಮೂರೂ ಪಕ್ಷದ ಅಭ್ಯರ್ಥಿಗಳು ಫೈನಲ್ ಆಗಿದ್ದು, ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಿವರಾಜ್ ಸಜ್ಜನರ್, ಕಾಂಗ್ರೆಸ್‍ನಿಂದ ಶ್ರೀನಿವಾಸ್ ಮಾನೆ, ಜೆಡಿಎಸ್‍ನಿಂದ ನಿಯಾಜ್ ಶೇಖ್ ಕಣದಲ್ಲಿದ್ರೆ. ಇತ್ತ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ರಮೇಶ್ ಭೂಸನೂರು, ಕಾಂಗ್ರೆಸ್‍ನಿಂದ ಅಶೋಕ್ ಮನಗೂಳಿ, ಜೆಡಿಎಸ್‍ನಿಂದ ನಾಜಿಯಾ ಅಂಗಡಿ ಸ್ಪರ್ಧೆಗಿಳಿದಿದ್ದಾರೆ. ನಿನ್ನೆಯಷ್ಟೇ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವುದರಿಂದ ಇಂದು ಬಿಜೆಪಿ …

Read More »

RCBಗೆ ಇಂದು ತಪ್ಪು ತಿದ್ದುಕೊಳ್ಳಲು ಉತ್ತಮ ಅವಕಾಶ; ಅಂಕಪಟ್ಟಿ ಮೇಲೂ ಇದೆ ಸಣ್ಣ ಕಣ್ಣು..!

14ನೇ ಆವೃತ್ತಿಯ ಮಿಲಿಯನ್​ ಡಾಲರ್​​ ಟೂರ್ನಿ ಲೀಗ್​ ಪಂದ್ಯಗಳಿಗೆ ಇಂದು ತೆರೆ ಬೀಳಲಿದ್ದು, ಇನ್ನು ಮುಂದೆ ಕ್ವಾಲಿಫೈಯರ್​ ಹಣಾಹಣಿ ರಂಗೇರಲಿದೆ. ಎರಡು ಪಂದ್ಯಗಳು ಇಂದು ನಡೆಯಲಿದ್ದು, ಒಂದು ಪಂದ್ಯದಲ್ಲಿ ಮುಂಬೈ-ಸನ್​ರೈಸರ್ಸ್​ ನಡುವೆ ಕಾದಾಟ ನಡೆಸಲಿವೆ. ಇನ್ನೊಂದು ಪಂದ್ಯದಲ್ಲಿ ಆರ್​ಸಿಬಿ-ಡೆಲ್ಲಿ ನಡುವೆ ಸೆಣಸಾಟ ನಡೆಯಲಿದೆ. ಆದರೆ ಇಲ್ಲಿ ಮುಂಬೈ ಪಾಲಿಗೆ ಇಂದಿನ ಪಂದ್ಯ ಮಹತ್ವದ್ದಾಗಿದೆ. ಆರ್​​ಸಿಬಿ ಹಿಂದಿನ ಪಂದ್ಯದ ತಪ್ಪಗಳನ್ನ ತಿದ್ದಿಕೊಂಡು ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಂಡಿದೆ. ಜೊತೆಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ …

Read More »

ಸಿಎಂ ಬೊಮ್ಮಾಯಿ ‘ದೆಹಲಿ ಯಾತ್ರೆ’.. ಸಚಿವಾಕಾಂಕ್ಷಿಗಳಲ್ಲಿ ಚಿಗುರಿದ ಆಸೆ

ಬೆಂಗಳೂರು: ಇವತ್ತು ಸಿಎಂ ಬಸವರಾಜ್‌ ಬೊಮ್ಮಾಯಿ ಹೈಕಮಾಂಡ್ ನಾಯಕರ ಭೇಟಿಗಾಗಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿ, ಕೇಂದ್ರದ ಸಚಿವರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಲಿದ್ದಾರೆ. ಜೊತೆಗೆ ಹೈಕಮಾಂಡ್‌ ನಾಯಕರ ಬಳಿ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಲಿದ್ದಾರೆ. ಅಲ್ಲದೇ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿರುವ ಅನುದಾನದ ಬಗ್ಗೆಯೂ ಪ್ರಸ್ತಾಪ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇವರೆಲ್ಲರ ಭೇಟಿ ಮುಗಿದ ನಂತರ …

Read More »

ಶೂ ಧರಿಸಿ ಚಾಮುಂಡಿ ದೇವಸ್ಥಾನದ ಒಳಗೆ ಹೋದ ಮೈಸೂರು ಎಸ್​ಪಿ;

ಎಸ್​ಪಿ ಚೇತನ್ ದೇವಸ್ಥಾನದ ಒಳಗೆ ಹೋಗುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಹಿಂದೆ ಹೋಗುತ್ತಾರೆ. ಆಗ ಪೊಲೀಸ್ ಸಿಬ್ಬಂದಿ ಸಾರ್ ಶೂ ಶೂ ಅಂತ ಕೂಗುತ್ತಾರೆ. ಮೈಸೂರು ಎಸ್​ಪಿ ಚಾಮುಂಡಿ ದೇವಸ್ಥಾನದ ಒಳಗೆ ಶೂ ಧರಿಸಿ ಒಳಗೆ ಹೋಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದೋಬಸ್ತ್​ನಲ್ಲಿದ್ದ ಎಸ್​ಪಿ ಚೇತನ್ ಶೂ ಧರಿಸಿ ಚಾಮುಂಡಿ ದೇವಸ್ಥಾನದ ಒಳಗೆ ಹೋಗಿದ್ದರು. ಎಸ್​ಪಿ ಚೇತನ್ ದೇವಸ್ಥಾನದ ಒಳಗೆ ಹೋಗುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಹಿಂದೆ ಹೋಗುತ್ತಾರೆ. ಆಗ ಪೊಲೀಸ್ ಸಿಬ್ಬಂದಿ …

Read More »