ನವದೆಹಲಿ: ಇ-ಕಾಮರ್ಸ್ ವೇದಿಕೆಯಲ್ಲಿ ಮೊಬೈಲ್, ಟಿವಿ, ಫ್ರಿಡ್ಜ್, ಲ್ಯಾಪ್‍ಟಾಪ್ ಹಾಗೂ ಸ್ಟೇಶನರಿ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಏಪ್ರಿಲ್ 20ರಿಂದ ಅಮೇಜಾನ್, ಫ್ಲಿಪ್‍ಕಾರ್ಟ್ ಹಾಗೂ ಸ್ನ್ಯಾಪ್‍ಡೀಲ್ ಕಂಪನಿಗಳು ಮಾರಾಟ ಪ್ರಕ್ರಿಯೆಯನ್ನು ಆರಂಭಿಸಲಿವೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಲೆಕ್ಟ್ರಾನಿಕ್ ವಸ್ತುಗಳಾದ ಮೊಬೈಲ್, ಟಿವಿ, ಲ್ಯಾಪ್‍ಟಾಪ್‍ಗಳು ಆನ್‍ಲೈನ್ ವೇದಿಕೆಯಲ್ಲಿ ದೊರೆಯಲಿವೆ. ಆದರೆ ಕಂಪನಿಗಳ ಡೆಲಿವರಿ ವಾಹನಗಳು ಆಯಾ ರಾಜ್ಯ ಸರ್ಕಾರಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ಬುಧವಾರ ಕೇಂದ್ರ ಸರ್ಕಾರ …
Read More »Monthly Archives: ಏಪ್ರಿಲ್ 2020
ಕೊರೊನಾ ವೈರಸ್ ನಿಂದ ಇಡೀ ಭಾರತ ಲಾಕ್ ಡೌನ್ ಆಗಿದ್ದು ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಸರ್ಕಾರ ಹೊರಡಿಸಿರುವ ನಿಷೇಧಾಜ್ಞೆ ಪಾಲಿಸುತ್ತಿದ್ದಾರೆ.
ಶಿರಸಿ – ಕೊರೊನಾ ವೈರಸ್ ನಿಂದ ಇಡೀ ಭಾರತ ಲಾಕ್ ಡೌನ್ ಆಗಿದ್ದು ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಸರ್ಕಾರ ಹೊರಡಿಸಿರುವ ನಿಷೇಧಾಜ್ಞೆ ಪಾಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಒಂದು ಸಂಸ್ಥೆ ವಿಶೇಷವಾಗಿ ಆರೋಗ್ಯ ಸಮಸ್ಯೆಗೆ ಒಳಗಾದ ಅಸಹಾಯಕರಿಗೆ ಹಾಗೂ ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಉಚಿತ ಆರೋಗ್ಯ ಸೇವೆ ನೀಡಲು ರಾಜ್ಯದಲ್ಲೇ ಮೊದಲು ಟೀಮ್ ಸಂಜೀವಿನಿ ಎಂಬ ಸಂಚಾರಿ ಆರೋಗ್ಯ ಬೈಕ್ ಘಟಕ ಸ್ಥಾಪಿಸಿದ್ದು ಇದೀಗ ಆ ಟೀಂ ನೇರವಾಗಿ ಮನೆ …
Read More »ನಾವು ವಾರದಲ್ಲಿ ಮೂರು ಹೊತ್ತು ಉಪವಾಸ ಮಾಡೋಣ,ಆಹಾರವನ್ನು ತ್ಯಾಗ ಮಾಡಿದರೆ ದೇಶದಲ್ಲಿ ಆಹಾರ ವಸ್ತುಗಳನ್ನು ಉಳಿಸಿದಂತಾಗುತ್ತದ : ಉಡುಪಿ ಅದಮಾರು ಸ್ವಾಮೀಜಿ
ಉಡುಪಿ: ದೇಶಾದ್ಯಂತ ಕೊರೊನಾ ವೈರಸ್ ಹಾವಳಿ ಜಾಸ್ತಿಯಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ದೇಶದಲ್ಲಿ ಆಹಾರ ವಸ್ತುಗಳ ಲಭ್ಯತೆ ಕಷ್ಟವಾಗಲಿದೆ ಎಂದು ಉಡುಪಿ ಅದಮಾರು ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ. ದೇಶಕ್ಕೋಸ್ಕರ, ಭಾರತದಲ್ಲಿ ಜೀವಿಸುವ ಮನುಷ್ಯರಿಗೋಸ್ಕರ ನಾವು ತ್ಯಾಗ ಮಾಡಲು ಇದು ಸೂಕ್ತ ಸಮಯ. ಹಾಗಾಗಿ ನಾವು ವಾರದಲ್ಲಿ ಮೂರು ಹೊತ್ತು ಉಪವಾಸ ಮಾಡೋಣ ಎಂದು ಉಡುಪಿ ಕೃಷ್ಣಮಠದ ಪರ್ಯಾಯ ಸ್ವಾಮೀಜಿ ಕರೆ ನೀಡಿದ್ದಾರೆ. ವಾರಕ್ಕೆ ಮೂರು ಹೊತ್ತು ಆಹಾರವನ್ನು ತ್ಯಾಗ ಮಾಡಿದರೆ …
Read More »ಜಿಲ್ಲೆಯಲ್ಲಿ 530 ಅಬಕಾರಿ ದಾಳಿ: 63 ಪ್ರಕರಣ ದಾಖಲು 71 ಲಕ್ಷ ರೂ. ಮೌಲ್ಯಮದ್ಯ ವಶ
ಬೆಳಗಾವಿ -: ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ಮತ್ತು ಹರಡುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಹೊರಡಿಸಿರುವುದರಿಂದ ಅಕ್ರಮ ಕೇಂದ್ರಗಳಲ್ಲಿ ನಿರಂತರವಾಗಿ ಅಬಕಾರಿ ದಾಳಿ, ಹಗಲು ರಾತ್ರಿ ಗಸ್ತು, ರಸ್ತೆಗಾವಲು ನಡೆಸಿ, ವಾಹನಗಳನ್ನು ತಪಾಸಣೆ ನಡೆಸಿ, ಕ್ರಮ ಕೈಗೊಳ್ಳಲಾಗಿದೆ. ಬೆಳಗಾವಿ ಜಿಲ್ಲಾದ್ಯಂತ ಇಲ್ಲಿಯವರೆಗೆ ಒಟ್ಟು 530 ದಾಳಿಗಳನ್ನು ನಡೆಸಿ, 63 ಅಬಕಾರಿ ಪ್ರಕರಣಗಳನ್ನು ದಾಖಲಿಸಿಕೊಂಡು 34 ಆರೋಪಿಗಳನ್ನು ಬಂಧಿಸಿ 4662,695 ಲೀಟರ್ ಮದ್ಯ, 27 ಅಟರ್ ಗೋವಾ ಮದ್ಯ, 10.170 …
Read More »ರಾಜ್ಯದಲ್ಲಿ ಕೊರೊನಾ ಸೋಂಕಿತರು, ಏರಿಕೆ ಕಂಡಿದ್ದು ಹೇಗೆ?
ಬೆಂಗಳೂರು: ಲಾಕ್‍ಡೌನ್ ಹೊರತಾಗಿಯೂ ಕರ್ನಾಟಕದಲ್ಲಿ ಕೊರೊನಾ ಮಹಾಮಾರಿ ಅಬ್ಬರ ತೀವ್ರಗೊಂಡಿದೆ. ಇವತ್ತು ಕೊರೊನಾಗೆ ಮತ್ತೊಬ್ಬರು ಬಲಿ ಆಗಿದ್ದು, ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಮತ್ತಷ್ಟು ಆತಂಕ ಮೂಡಿಸುವ ಅಂಶ ಅಂದ್ರೆ ಒಂದೇ ದಿನ ಅತೀ ಹೆಚ್ಚು 36 ಹೊಸ ಕೊರೊನಾ ಪ್ರಕರಣಗಳು ವರದಿ ಆಗಿವೆ. ಈ ಪೈಕಿ 17 ಪ್ರಕರಣಗಳು ಬೆಳಗಾವಿಗೆ ಸಂಬಂಧಿಸಿದ್ದಾಗಿದೆ. ವಿಜಯಪುರದಲ್ಲಿ 7 ಮಂದಿ, ಕಲಬುರಗಿ, ಮೈಸೂರಿನಲ್ಲಿ ತಲಾ ಮೂವರು, ಬೆಂಗಳೂರಿನ ಐವರು, ಗದಗದ ಒಬ್ಬರಲ್ಲಿ ಸೋಂಕು …
Read More »ಶಾಸಕರ ಹೆಸರಲ್ಲಿ ನಕಲಿ ಪಾಸ್ ಸೃಷ್ಟಿಸಿ ಕಾರು ಚಾಲನೆ ವೇಳೆ ಎಡಿಸಿಗೆ ಸಿಕ್ಕಿಬಿದ್ದ
ಶಾಸಕರ ಹೆಸರಲ್ಲಿ ನಕಲಿ ಪಾಸ್ ಸೃಷ್ಟಿಸಿ ಕಾರು ಚಾಲನೆ ವೇಳೆ ಎಡಿಸಿಗೆ ಸಿಕ್ಕಿಬಿದ್ದ ಹಾವೇರಿ:ಎ. 16 (ಕರ್ನಾಟಕ ವಾರ್ತೆ): ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕರ ಹೆಸರಿನಲ್ಲಿ ನಕಲಿ ಪಾಸ್ ಸೃಷ್ಟಿಸಿ ಗದಗ ಜಿಲ್ಲೆಯಿಂದ ಹಾವೇರಿಗೆ ಪ್ರವೇಶಮಾಡುತ್ತಿದ್ದ ಕಾರು ಚಾಲಕನೋರ್ವ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಕಲಿ ಪಾಸ್ ಸೃಷ್ಟಿಕರ್ತನ ಮೇಲೆ ಮೊಕದ್ದಮೆ ದಾಖಲಿಸಲು ಸೂಚನೆ ನೀಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ವೈದ್ಯಕೀಯ ಕಾರಣ ಹೊರತುಪಡಿಸಿ ಇತರ ಪ್ರಯಾಣಿಕರ ವಾಹನ …
Read More »ಕಲಬುರಗಿ ಯುವಕನಿಂದ ಏಕಕಾಲಕ್ಕೆ ಇಬ್ಬರಿಗೆ ಆಮ್ಲಜನಕ ಒದಗಿಸುವ ವೆಂಟಿಲೇಟರ್ ವಿನ್ಯಾಸ
ಕೊರೊನಾ ಸೋಂಕು ಜಗತ್ತಿನಾದ್ಯಂತ ಹಬ್ಬಿದೆ. ಒಂದು ಲಕ್ಷಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿದೆ. ಶ್ವಾಸಕೋಶ ದುರ್ಬಲವಾಗಿರುವವರ ಪಾಲಿಗೆ ಈ ಸೋಂಕು ಮಾರಣಾಂತಿಕವಾಗಿರುತ್ತದೆ. ಇದರಿಂದ ಪರಾಗಲು ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಬೇಕು. ಈಗ ಹಾಲಿ ಇರುವ ವೆಂಟಿಲೇಟರ್ ಏಕಕಾಲದಲ್ಲಿ ಒಬ್ಬರಿಗೆ ಮಾತ್ರ ಬಳಸಬಹುದು. ಕಲಬುರಗಿ ಮೂಲದ ಯುವ ಎಂಜಿನಿಯರೊಬ್ಬರು ಏಕಕಾಲದಲ್ಲಿ ಆಮ್ಲಜನಕ ಪೂರೈಸುವ ಟು-ವೇ-ವೆಂಟಿಲೇಟರ್ ವಿನ್ಯಾಸಗೊಳಿಸಿದ್ದಾರೆ. ಇದೊಂದು ವಿನೂತನ ಪ್ರಯತ್ನವಾಗಿದೆ. ಇದನ್ನು ಕಲಬುರಗಿ ಮೂಲದ ಕೌಶಿಕ್ ಮುದ್ದಾ ರೂಪಿಸಿದ್ದಾರೆ. ಏಕಕಾಲದಲ್ಲಿಇದು 3-ಡಿ …
Read More »ಕೋವಿಡ್-19 ನಿಯಂತ್ರಣ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ವಿಡಿಯೋ ಸಂವಾದ
ಕೋವಿಡ್-19 ನಿಯಂತ್ರಣ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ವಿಡಿಯೋ ಸಂವಾದ ಬೆಳಗಾವಿ, ಏ.16:(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಸೋಂಕು ಹರಡುವಿಕೆ ತಡೆಗಟ್ಟುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಆದ್ದರಿಂದ ಇದು ಇನ್ನಷ್ಟು ಹರಡದಂತೆ ಬಿಗಿಯಾದ ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಕೋವಿಡ್-19 ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲ ಉಪ ವಿಭಾಗಾಧಿಕಾರಿಗಳು ಮತ್ತು ತಾಲ್ಲೂಕುಗಳ ಅಧಿಕಾರಿಗಳ ಜತೆ …
Read More »ಜನತೆಗೆ ದಾನಿಯೊಬ್ಬರು ಕೊಡಮಾಡಿದ ದಿನಸಿ ಸಾಮಗ್ರಿಗಳನ್ನು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಗುರುವಾರ(ಏ.೧೬) ವಿತರಿಸಿದರು.
ಬೆಳಗಾವಿ: ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿರುವುದರಿಂದ ಗಾಂಧಿನಗರದಲ್ಲಿರುವ ಬಡ ಕುಟುಂಬದವರಿಗೆ ಹಾಗೂ ಅಗತ್ಯವಿರುವ ಜನತೆಗೆ ದಾನಿಯೊಬ್ಬರು ಕೊಡಮಾಡಿದ ದಿನಸಿ ಸಾಮಗ್ರಿಗಳನ್ನು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಗುರುವಾರ(ಏ.೧೬) ವಿತರಿಸಿದರು. ಇಡೀ ದೇಶದ ಜನರ ಆರೋಗ್ಯದ ದೃಷ್ಟಿಯಿಂದ ಲಾಕ್ ಡೌನ್ ಘೋಷಿಸಲಾಗಿದ್ದು, ಸರ್ಕಾರದ ನಿರ್ದೇಶನದಂತೆ ಎಲ್ಲರೂ ಕಡ್ಡಾಯವಾಗಿ ಲಾಕ್ ಡೌನ್ ಪಾಲಿಸುವ ಮೂಲಕ ಕರೊನಾ ನಿರ್ಮೂಲನೆಗೆ ಸಹಕರಿಸಬೇಕು ಎಂದು ಸಚಿವ ಸುರೇಶ್ ಅಂಗಡಿ ಅವರು ಮನವಿ …
Read More »ಡಾ. ಪದ್ಮಾಜಿತ ನಾಡಗೌಡ ಪಾಟೀಲ ಅವರು ಎರಡು ಲಕ್ಷ ರೂ. ಚೆಕ್ಕನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಹಸ್ತಾಂತರಿಸಿದರು.
ಗೋಕಾಕ: ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಕೆಪಿಸಿಸಿ ಕೊರೋನಾ ವಿಪತ್ತು ಪರಿಹಾರ ನಿಧಿ ಸಂಗ್ರಹಕ್ಕೆ ಮುಂದಾಗಿದ್ದು ಇಂದು ಅಥಣಿ ತಾಲೂಕಿನ ಕಾಂಗ್ರೆಸ್ ಮುಖಂಡ ಡಾ. ಪದ್ಮಾಜಿತ ನಾಡಗೌಡ ಪಾಟೀಲ ಅವರು ಎರಡು ಲಕ್ಷ ರೂ. ಚೆಕ್ಕನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಹಸ್ತಾಂತರಿಸಿದರು. ಇಂದು ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಚೆಕ್ ಸ್ವೀಕರಿಸಿ ಪದ್ಮಾಜಿತ ನಾಡಗೌಡ ಪಾಟೀಲ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಸತೀಶ ಜಾರಕಿಹೊಳಿ ಅವರು ಸಂಕಷ್ಟದಲ್ಲಿರುವ ಜನತೆಯೊಂದಿಗೆ …
Read More »
Laxmi News 24×7