ಚಿತ್ರದುರ್ಗ: ರಾಜ್ಯದ ವಿವಿಧೆಡೆ ಪೊಲೀಸರಿಗೆ ಕೊರೊನಾ ಸೊಂಕು ತಗುಲಿದ ಹಿನ್ನಲೆಯಲ್ಲಿ ಚಿತ್ರದುರ್ಗ ಪೊಲೀಸರಿಗೆ ಕೊರೊನಾ ಸೊಂಕು ಹರಡದಂತೆ ಎಸ್‍ಪಿ ರಾಧಿಕಾ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಎಸ್‍ಪಿಯವರ ಕಾಳಜಿಗೆ ಚಿತ್ರದುರ್ಗದ ಪೊಲೀಸರು ಫಿದಾ ಆಗಿದ್ದಾರೆ. ಹೌದು. ಪೊಲೀಸರ ಆರೋಗ್ಯ ರಕ್ಷಣೆಗಾಗಿ ತೀವ್ರ ಕಾಳಜಿ ವಹಿಸಿರುವ ಲೇಡಿ ಸಿಂಗಂ, ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಸ್ವತಃ ಎಸ್‍ಪಿಯವರೇ ಕೀಟನಾಶಕ ಸಿಂಪಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಪೊಲೀಸ್ ಠಾಣೆಗಳ ಆವರಣ ಹಾಗೂ …
Read More »Monthly Archives: ಏಪ್ರಿಲ್ 2020
ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿ ದಂಗೆ ಏಳುವವರರ ಹೆಡೆಮುರಿ ಕಟ್ಟಬೇಕು:H.D.K
ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೋನಾ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಗೆ ಕಳುಹಿಸಲು ಮುಂದಾಗಿದ್ದ ಪೊಲೀಸರು, ವೈದ್ಯಕೀಯ,ಬಿಬಿಎಂಪಿ ಸಿಬ್ಬಂದಿಗಳ ಮೇಲೆ ಉದ್ರಿಕ್ತ ಗುಂಪು ಹಲ್ಲೆ ನಡೆಸಿರುವುದು ಖಂಡನೀಯ. ಮುಲಾಜಿಲ್ಲದೆ ಅಂಥವರ ವಿರುದ್ಧ ಕಠಿಣ ಕಾನೂನು ಅಸ್ತ್ರ ಪ್ರಯೋಗಿಸಬೇಕು.ದೇಶದ ಸ್ವಾಸ್ಥ್ಯ ಕಿಂತ ಬೇರಾವುದೂ ಮುಖ್ಯವಲ್ಲ. ಈ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಹದು. ಕಾನೂನು ಕೈಗೆತ್ತಿಕೊಂಡು ಗೂಂಡಾಗಿರಿ,ದೌರ್ಜನ್ಯ ನಡೆಸಿರುವುದು ಅಕ್ಷಮ್ಯ ಅಪರಾಧ. ಯಾವುದೇ ಧರ್ಮದವರಿರಲಿ ಈ ದೇಶದ ಕಾನೂನಿಗೆ ತಲೆ ಬಾಗಿಸಬೇಕು. ಇಂತಹ ಅತಿರೇಕದ ಹುಚ್ಚಾಟಗಳನ್ನು …
Read More »ರೈತರಿಗೆ ನೆರವಾದ ಸಂಸದ ಡಿಕೆ ಸುರೇಶ್- ನಷ್ಟವಾಗುತ್ತಿದ್ದ ಕಲ್ಲಂಗಡಿ ಖರೀದಿ
ಚಾಮರಾಜನಗರ: ಕೊರೊನಾ ಭೀತಿಯಿಂದ ಬೆಳೆ ನಷ್ಟ ಅನುಭವಿಸುತ್ತಿದ್ದ ರೈತರ ನೋವಿಗೆ ಸಂಸದ ಡಿ.ಕೆ.ಸುರೇಶ್ ಸ್ಪಂದಿಸಿದ್ದು, ಕಲ್ಲಂಗಡಿ, ಟೊಮಟೊ, ಬದನೆಕಾಯಿ ನಷ್ಟವಾಗುತ್ತಿದ್ದುದನ್ನು ಮನಗಂಡು ಸ್ವತಃ ತಾವೇ ಖರೀದಿ ಮಾಡಲು ಮುಂದಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ಗ್ರಾ.ಪಂ. ವ್ಯಾಪ್ತಿಯ ನಲ್ಲೂರು, ಗದ್ದೆ ಪೋಡಿ ಗ್ರಾಮಗಳಿಗೆ ಭೇಟಿ ನೀಡಿದ್ದು, ಈ ವೇಳೆ ಬೆಳೆ ನಷ್ಟವಾಗುತ್ತಿರುವುದು ಕಂಡು ಬಂದಿದೆ. ಹೀಗಾಗಿ ಸುಮಾರು 18 ಎಕರೆಯಲ್ಲಿ ಬೆಳೆದ ಕಲ್ಲಂಗಡಿಯನ್ನು ಸುರೇಶ್ ಕೊಂಡುಕೊಂಡಿದ್ದಾರೆ. ಕಲ್ಲಂಗಡಿ ಜೊತೆಗೆ …
Read More »ಮದ್ಯ ಸಿಗದ್ದಕ್ಕೆ ಕೋಲಾರದಲ್ಲಿ 8 ಮದ್ಯದಂಗಡಿ ಕಳವು, 6 ಕಳ್ಳಭಟ್ಟಿ ಪ್ರಕರಣ ದಾಖಲು
ಕೋಲಾರ: ಕೋಲಾರದಲ್ಲಿ ಮದ್ಯ ಸಿಗದ ಹಿನ್ನೆಲೆಯಲ್ಲಿ ಮದ್ಯ ಪ್ರಿಯರು ಅನ್ಯ ಮಾರ್ಗಗಳನ್ನ ಕಂಡುಕೊಳ್ಳುತ್ತಿದ್ದು, ಮದ್ಯ ಕಳವು, ಕಳ್ಳಭಟ್ಟಿಯಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ. ಲಾಕ್‍ಡೌನ್‍ನಿಂದಾಗಿ ಮದ್ಯದಂಗಡಿಗಳು ಬಂದ್ ಆದ ಕಾರಣ ಗಡಿ ಜಿಲ್ಲೆ ಕೋಲಾರದ ಜನರು ಕಳ್ಳಭಟ್ಟಿ, ಸೇಂದಿಗೆ ಮೊರೆ ಹೋಗುತ್ತಿದ್ದಾರೆ. ಮತ್ತೆ ಕೆಲವರು ಬಾರ್‍ಗಳಿಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮದ್ಯ ಕಳ್ಳತನ ಮಾಡುತ್ತಿದ್ದಾರೆ. ಆಂಧ್ರಪ್ರದೇಶ ಹಾಗೂ ತಮಿಳುನಾಡು ಗಡಿಯಲ್ಲಿ ಅಕ್ರಮ ಕಳ್ಳಬಟ್ಟಿ ಹಾಗೂ ಸೇಂಧಿ ಮಾರಾಟ, ಸಾಗಾಟ ನಿಯಂತ್ರಣಕ್ಕೆ ಬರುತ್ತಿಲ್ಲ. …
Read More »ಸೈಕಲ್‍ಗಾಗಿ ಕೂಡಿಟ್ಟಿದ್ದ 971 ರೂ. ಸಿಎಂ ಪರಿಹಾರ ನಿಧಿಗೆ ನೀಡಿದ ಪೋರ………..
ಹೈದರಾಬಾದ್: ಕೊರೊನಾ ವೈರಸ್ ವಿರುದ್ಧ ಹೋರಾಡಲು ಬಹುತೇಕರು ಸಹಾಯ ಹಸ್ತ ಚಾಚುತ್ತಿದ್ದು, ಬಡವರೂ ಸಹ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಅದೇ ರೀತಿ ಇದೀಗ ಮಕ್ಕಳು ಸಹ ಸಹಾಯ ಮಾಡುತ್ತಿದ್ದು, ಆಂಧ್ರ ಪ್ರದೇಶದ 4 ವರ್ಷದ ಬಾಲಕ ತಾನು ಕೂಡಿಟ್ಟ ಹಣವನ್ನು ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ. ಆಂಧ್ರ ಪ್ರದೇಶದ ವಿಜಯವಾಡದ ನಾಲ್ಕು ವರ್ಷದ ಬಾಲಕ ಸೈಕಲ್ ಖರೀದಿಸಲು ತಾನು ಕೂಡಿಟ್ಟಿದ್ದ 971 ರೂ.ಗಳನ್ನು ದಾನ ಮಾಡುವ ಮೂಲಕ …
Read More »ಹುಬ್ಬಳ್ಳಿಯ ಮುಲ್ಲಾ ಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ……..
ಹುಬ್ಬಳ್ಳಿ-ಧಾರವಾಡ: ಹುಬ್ಬಳ್ಳಿಯ ಬಾಲಕಿಗೆ ಪ್ರಧಾನಿ ನರೇಂದ್ರ ಮೋದಿ ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ. ಮನೆಯಲ್ಲಿದ್ದು ಯೋಗ ಮಾಡುತ್ತಿರುವ ಬಾಲೆಗೆ ಶುಭಕೋರಿ ಟ್ವೀಟ್ ಮಾಡಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರು ವರ್ಷದ ಇಫ್ರಾ ಮುಲ್ಲಾ ತನ್ನ ಮನೆಯಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಳು. ಟಿವಿ ನೋಡುತ್ತಾ ಯೋಗ ಕಲಿಯುತ್ತಿದ್ದಳು. ಇದನ್ನು ಇಫ್ರಾ ತಾಯಿ ವಿಡಿಯೋ ಚಿತ್ರೀಕರಿಸಿದ್ದರು. ನಂತರ ಇಫ್ರಾ ತಂದೆ ಇಮ್ತಿಯಾಜ್ ಅಹ್ಮದ್ ಮುಲ್ಲಾಗೆ ಈ ವಿಡಿಯೋ ಕಳಿಸಿದ್ದರು. ರೈಲ್ವೇ ಉದ್ಯೋಗಿಯಾಗಿರುವ ಇಮ್ತಿಯಾಜ್‌ಅಹ್ಮದ್ ಮುಲ್ಲಾ ಮಗಳ ಯೋಗಾಭ್ಯಾಸದ ವಿಡಿಯೋ …
Read More »ಕೊರೋನಾ ಲಾಕ್ಡೌನ್: ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ, ಮಹತ್ವದ ಚರ್ಚೆ
ಇಂದು ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೊರೋನಾ ಕಡಿಮೆಯಾಗದ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಜತೆಗೆ ಕೇಂದ್ರ ಗೃಹ ಇಲಾಖೆ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿ ಮತ್ತು ಮುಂದೆ ಕೈಗೊಳ್ಳಬೇಕಾದ ಮಹತ್ವ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ಧಾರೆ. ಬೆಂಗಳೂರು(ಏ.20): ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಾರ್ಚ್ 23ರಿಂದ ಏಪ್ರಿಲ್ 14ರತನಕ 21 …
Read More »ಸಂದಿಗ್ಧ ಸಂದರ್ಭದಲ್ಲಿ ಆಡಳಿತ ಪಕ್ಷದ ಜೊತೆಗೆ ಹೆಜ್ಜೆ ಹಾಕುವುದು ನಮ್ಮ ಕರ್ತವ್ಯವೂ ಹೌದು; ಸಿದ್ದರಾಮಯ್ಯ
ಬೆಂಗಳೂರು (ಏಪ್ರಿಲ್ 19); ಕೊರೋನಾ ಸೋಂಕು ಇಡೀ ರಾಜ್ಯಕ್ಕೆ ಕಂಟಕವಾಗಿರುವ ಹಿನ್ನೆಲೆಯಲ್ಲಿ ಈ ಸೋಂಕು ಹರಡದಂತೆ ತಡೆಯುವ ಮತ್ತು ಕುಸಿಯುತ್ತಿರುವ ರಾಜ್ಯದ ಆರ್ಥಿಕತೆಯನ್ನು ಸುಧಾರಿಸಲು ಪರಿಹಾರ ಸೂಚಿಸುವುದು ಹಾಗೂ ಇಂತಹ ಸಂದಿಗ್ಧ ಸಂದರ್ಭದಲ್ಲಿ ಆಡಳಿತ ಪಕ್ಷದ ಜೊತೆ ಜೊತೆಗೆ ಹೆಜ್ಜೆ ಹಾಕುವುದು, ಸತ್ಯಗಳನ್ನು ಪ್ರಸ್ತುತ ಪಡಿಸುವುದು ವಿರೋಧ ಪಕ್ಷದ ಕರ್ತವ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಮಾಜಿ ಡಿಸಿಎಂ ಜಿ.ಪರಮೇಶ್ವರ್, ಮಾಜಿ ಸ್ಪೀಕರ್ ರಮೇಶ್ …
Read More »ಆಸ್ಪತ್ರೆ ಸಿಗದೇ 7 ಕಿ.ಮೀ ನಡಿಗೆ – ಕೊನೆಗೆ ಡೆಂಟಲ್ ಆಸ್ಪತ್ರೆಯಲ್ಲಿ ಹೆರಿಗೆ
ಬೆಂಗಳೂರು: ಕೊರೊನಾ ಲಾಕ್‍ಡೌನ್ ವೇಳೆ ಏಳು ಕಿ.ಮೀ ನಡೆದುಕೊಂಡು ಬಂದು ಕೊನೆಗೆ ಎಲ್ಲೂ ಆಸ್ಪತ್ರೆ ಸಿಗದೆ ಡೆಂಟಲ್ ಆಸ್ಪತ್ರೆಯಲ್ಲೇ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಬೆಂಗಳೂರಿನ ದೊಡ್ಡ ಬೊಮ್ಮಸಂದ್ರದಲ್ಲಿ ನಡೆದಿದೆ. ಕೊರೊನಾ ಲಾಕ್‍ಡೌನ್‍ನಿಂದ ದೇಶವೇ ಸ್ತಬ್ಧವಾಗಿದೆ. ಈ ವೇಳೆ ಲೊಟ್ಟೆಗೊಲ್ಲಹಳ್ಳಿಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಆಸ್ಪತ್ರೆಗೆ ಹೋಗಲು ಯಾವುದೇ ವಾಹನ ಕೂಡ ಸಿಕ್ಕಿಲ್ಲ. ಆಕೆ ಆಸ್ಪತ್ರೆ ಸಿಗುತ್ತದೆ ಎಂಬ …
Read More »ಕೀರ್ತಿ ಅವರು ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡುತ್ತಿರುವ ವಿಡಿಯೋ ನೋಡಿದ ಅಭಿಮಾನಿಗಳು ಫಿದಾ
ಚೆನ್ನೈ: ಕೊರೊನಾ ಲಾಕ್‍ಡೌನ್ ಸಮಯವನ್ನು ಕೆಲವು ನಟ-ನಟಿಯರು ತಮ್ಮ ಕುಟುಂಬದ ಜೊತೆಗೆ ಕಳೆಯುತ್ತಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಲಾಕ್‍ಡೌನ್‍ನಲ್ಲಿ ಏನು ಮಾಡುತ್ತಿದ್ದೇವೆ ಎಂದು ಶೇರ್ ಮಾಡುತ್ತಾ ಅಭಿಮಾನಿಗಳಿಗೆ ಅಪ್ಡೇಟ್ ಕೊಡುತ್ತಿದ್ದಾರೆ. ಆದರೆ ತಮಿಳು ನಟಿಯೊಬ್ಬರು ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡೋದ್ರಲಿ ಬ್ಯುಸಿಯಾಗಿದ್ದಾರೆ. ತಮಿಳು ನಟಿ ಕೀರ್ತಿ ಪಾಂಡಿಯನ್ ಟ್ರ್ಯಾಕ್ಟರ್ ಓಡಿಸುತ್ತಾ ಹೊಲ ಉಳುಮೆ ಮಾಡುತ್ತಾ ತಮ್ಮ ಲಾಕ್‍ಡೌನ್ ಅವಧಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಾ ಲಾಕ್‍ಡೌನ್ ಸಮಯ …
Read More »
Laxmi News 24×7