Breaking News

ಮತದಾರರ ಪಟ್ಟಿ ಪರಿಷ್ಕರಣಾ ಸಭೆ

Spread the love

ನಿಪ್ಪಾಣಿ: ಮತಕ್ಷೇತ್ರದ ಬಿ.ಎಲ್.ಎ.-2 ಕಾರ್ಯಗಾರ ಸಭೆಯನ್ನು ಉದ್ಘಾಟಿಸಿ & ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಭೆ ನಡೆಸಿ ಮಾತನಾಡಲಾಯಿತು.

ಕಾರ್ಯಗಾರದ ಬಗ್ಗೆ ಸಮಗ್ರ ಮಾಹಿತಿ ನೀಡಿ,ಪ್ರಕ್ರಿಯೆಯು ನಕಲಿ ಮತದಾರರನ್ನು ತೆಗೆದುಹಾಕಲು ಮತ್ತು ಹೊಸ ಮತದಾರರನ್ನು ಸೇರಿಸಲು ಅವಕಾಶವನ್ನು ಕಲ್ಪಿಸಿದ್ದು,ನಿಖರ ಮತದಾರರ ಪಟ್ಟಿ ಇಲ್ಲದೆ,ನ್ಯಾಯಯುತ ಚುನಾವಣೆಗಳು ಅಸಾಧ್ಯ.ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR)ಮೂಲಕ ‘ಒಬ್ಬ ವ್ಯಕ್ತಿ, ಒಂದು ಮತ’ ಎಂಬ ಪ್ರಜಾಪ್ರಭುತ್ವದ ತತ್ವವನ್ನು ಬಲಪಡಿಸುತ್ತದೆ ಎಂದು ತಿಳಿಸಿ, ಬೂತ್ ಮಟ್ಟದ ಏಜೆಂಟ್ (BLA -2) ಗಳು ನಿರ್ವಹಿಸಬೇಕಾದ ಕಾರ್ಯಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಪಿಪಿಟಿ ಮೂಲಕ ಸವಿಸ್ತಾರವಾಗಿ ತಿಳಿಸಲಾಯಿತು.

ಈ ಸಭೆಯಲ್ಲಿ ಮಾಜಿ ಶಾಸಕರು ಹಾಗೂ ಚಿಕ್ಕೋಡಿ ಜಿಲ್ಲೆಯ ಪ್ರಭಾರಿಗಳಾದ ಶ್ರೀ ಸಂಜಯ ಪಾಟೀಲ,ಮಾಜಿ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ, ಚಿಕ್ಕೋಡಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ ಅಪ್ಪಾಜಿಗೋಳ, ಮಂಡಲ ಅಧ್ಯಕ್ಷರಾದ ಶ್ರೀ ರಾಜು ಗುಂದೇಶಾ,ಶ್ರೀ ಅಮೃತ ಕುಲಕರ್ಣಿ, ಮಾಧ್ಯಮದವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ನಿಪ್ಪಾಣಿ ನಗರಕ್ಕೆ ಇಂದುನಿತಿನ್ ಗಡ್ಕರಿ

Spread the loveನಿಪ್ಪಾಣಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಇಂದು ನಿಪ್ಪಾಣಿ ನಗರಕ್ಕೆ ಆಗಮಿಸಲಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ