ಖಾನಾಪುರ: ತಾಲ್ಲೂಕಿನ ಕಣಕುಂಬಿ, ಲೋಂಡಾ, ನಾಗರಗಾಳಿ, ಗುಂಜಿ ಮತ್ತು ಭೀಮಗಡ ಅರಣ್ಯಪ್ರದೇಶದಲ್ಲಿ ಮಂಗಳವಾರ ಉತ್ತಮ ಮಳೆಯಾಗಿದ್ದು, ಪಟ್ಟಣ ಸೇರಿದಂತೆ ತಾಲ್ಲೂಕಿನ ಉಳಿದೆಡೆ ಸಾಧಾರಣ ಮಳೆಯಾಗಿದೆ.
ಕಂದಾಯ ಇಲಾಖೆಯಂತೆ ಕಣಕುಂಬಿ ಅರಣ್ಯದಲ್ಲಿ 11.5 ಸೆಂ.ಮೀ, ಲೋಂಡಾ-9 ಸೆಂ.ಮೀ, ಜಾಂಬೋಟಿ ಸುತ್ತಮುತ್ತ 6.2 ಸೆಂ.ಮೀ ಮತ್ತು ಉಳಿದೆಡೆ ಸರಾಸರಿ 5 ಸೆಂ.ಮೀ ಮಳೆ ಸುರಿದಿದೆ.
ಪಟ್ಟಣದಲ್ಲಿ ಇಡೀ ದಿನ ಮೋಡ ಕವಿದ ವಾತಾವರಣವಿತ್ತು. ತಾಲ್ಲೂಕಿನ ನಂದಗಡ, ಹಲಸಿ ಭಾಗದಲ್ಲಿ ಸಂಜೆ ತುಂತುರು ಮಳೆಯಾಗಿದೆ.
ಎರಡು ದಿನಗಳಿಂದ ಮಳೆಯ ಅಬ್ಬರ ಕ್ಷೀಣಿಸಿದ್ದು, ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಇತರೆ ಜಲಮೂಲಗಳಲ್ಲೂ ಪ್ರವಾಹದ ಅಬ್ಬರ ತಗ್ಗಿದೆ.