Breaking News

ಯಡಿಯೂರಪ್ಪ ಅವರಿಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ಸಿಕ್ಕಿರುವುದು ಕೇಳಿ ಸಂತೋಷ ಯತ್ನಾಳ್

Spread the love

ಬೆಂಗಳೂರು : ಯಡಿಯೂರಪ್ಪ ಅವರಿಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ಸಿಕ್ಕಿರುವುದು ಕೇಳಿ ಸಂತೋಷ ಆಗಿದೆ, ಅವರಿಗೆ ಅಭಿನಂದನೆಗಳು ಎಂದು ಮಾಜಿ ಕೇಂದ್ರ ಸಚಿವ, ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಬುಧವಾರ ಹೇಳಿಕೆ ನೀಡಿದ್ದಾರೆ.

 

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ನಮ್ಮ ಪಕ್ಷ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರು ಅನೇಕ ಕೊಡುಗೆ ನೀಡಿದ್ದಾರೆ.ಸಮರ್ಥ ವಾಗಿ ಬಿಜೆಪಿ ಪಕ್ಷವನ್ನ ನಿಭಾಯಿಸಿದ್ದರು.ಯಡಿಯೂರಪ್ಪ ಅವರಿಗೆ ಶುಭಾಶಯಗಳು

 

ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿರೋದಕ್ಕೆ ನಾವು ತಲೆ ಬಾಗುತ್ತೇವೆ ಎಂದರು.

 

ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿಗಳು ಕರೆ ನೀಡಿದ್ದಾರೆ.ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡುತ್ತೇವೆ ಅಂದರು. ಅಮೃತ ಕಾಲದಲ್ಲಿ ಅಮೃತ ನಿರ್ಣಯ ತೆಗೆದುಕೊಂಡಿದ್ದಾರೆ ಎಂದರು.

 

ಚುನಾವಣೆಯಲ್ಲಿ ಟಿಕೆಟ್ ಮಿಸ್ ಆಗುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಚುನಾವಣೆ ಸಮಿತಿಯಲ್ಲಿದ್ದವರಿಗೇ ಒಮ್ಮೊಮ್ಮೆ ಟಿಕೆಟ್ ಸಿಗುವುದಿಲ್ಲ. ನಾನು ಕೂಡ ಹಿಂದೆ ಬಿಜೆಪಿಯಲ್ಲಿ ಚುನಾವಣಾ ಸಮಿತಿ ಸದಸ್ಯನಾಗಿದ್ದೆ. ಸಿಎಂ ಆಗುವ ಎಲ್ಲಾ ಅರ್ಹತೆ ನನಗಿದೆ.ನಾನು ಸಿಎಂ‌ ಆದರೆ ಕರ್ನಾಟಕದಲ್ಲಿ 150 ಸೀಟ್ ಬರಲಿದೆ ಎಂದರು.

 

ಯಡಿಯೂರಪ್ಪ ಅವರು ಈಗ ಒಳ್ಳೆಯದು ಮಾಡಲೇಬೇಕು,ಜಡ್ಜ್ ಸೀಟ್ ಮೇಲೆ ಕೂತಾಗ, ಯತ್ನಾಳ್ ಆದಿಯಾಗಿ ಎಲ್ಲರಿಗೂ ಟಿಕೆಟ್ ಕೊಡಲೇಬೇಕು ಎಂದರು.

 

ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ವಾತಂತ್ರ್ಯ ವೀರ ಸಾವರ್ಕರ್ ಅವರು ಅಖಂಡ ಭಾರತ ಕ್ಕಾಗಿ ಹೋರಾಡಿದ ಮಹಾನ್ ತಪಸ್ವಿ.ಅವರ ಫೋಟೋ ಹಾಕಲು ಯಾರ ಅನುಮತಿ ಬೇಡ. ಸಿದ್ದರಾಮಯ್ಯ ಅವರು ಪಾಕಿಸ್ತಾನದ ಪ್ರಜೆ ತರಹ ಮಾತಾಡುತ್ತಿದ್ದಾರೆ.ಅವರ ಹೇಳಿಕೆ ಸರಿಯಲ್ಲ.ಅಲ್ಪಸಂಖ್ಯಾತರ ಓಟಿಗಾಗಿ ಮಾಡುತ್ತಿದ್ದಾರೆ. ಅವರು ಹೀಗೆ ಓಲೈಕೆ ಮಾಡುತ್ತಿದ್ದಾರೆ, ಅಲ್ಪಸಂಖ್ಯಾತರ ವೋಟ್ ಅವರಿಗೆ ಬೀಳುತ್ತದೆ, ಮಿಕ್ಕಿದ್ದು ಬಿಜೆಪಿ ಪಾಲಾಗುತ್ತದೆ ಎಂದರು.

 

ಬಿಜೆಪಿ ಮುಳುಗುತ್ತಿದೆ ಅನ್ನೋ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿ 75ವರ್ಷಗಳ ಹಿಂದೆ ಮಹಾತ್ಮ ಗಾಂಧಿ ಕಾಂಗ್ರೆಸ್ ವಿಸರ್ಜನೆಗೆ ಸೂಚಿಸಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ನವರದ್ದೇ ತೂತುಗಳೇ ಹೆಚ್ಚು ಇದೆ. ಅವರು ಅದನ್ನ ನೋಡಿಕೊಳ್ಳಲಿ ಎಂದರು.

 

ಮಾಧುಸ್ವಾಮಿ ಮತ್ತು ಶ್ರೀರಾಮುಲು ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವ ಅವಶ್ಯಕತೆ ನಮಗಿಲ್ಲ. ಶ್ರೀರಾಮುಲು ಅವರೇ ಮುಖ್ಯಮಂತ್ರಿ ಆಗಲು ಬರಲಿ.ಮಾಧುಸ್ವಾಮಿ ಅವರು ಸಹಜವಾಗಿ ಮಾತನಾಡಿದ್ದಾರೆ.ಅದನ್ನ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ ಎಂದರು.


Spread the love

About Laxminews 24x7

Check Also

ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಸಿ ನೆಟ್ಟ ಮಕ್ಕಳು

Spread the love ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ