Breaking News

ಪೊಲೀಸ್​ ಠಾಣೆ ಅಭಿವೃದ್ಧಿಗಾಗಿ ಎಂದು ಸಾಹೇಬರ ಹೆಸರು ಬಳಸಿ, ಮುಖ್ಯಪೇದೆ ಹಣ ವಸೂಲಿ

Spread the love

ವಿಜಯಪುರ: ಬೈಕ್ ಸವಾರರಿಗೆ ದಂಡ ಹಾಕುವ ನೆಪದಲ್ಲಿ ಪೊಲೀಸಪ್ಪ ಹಣ ವಸೂಲಿ ಮಾಡತ್ತಿರುವ ಘಟನೆ ಜಿಲ್ಲೆಯ ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಬಸವನಬಾಗೇವಾಡಿ ಠಾಣೆ ಹೆಡ್‌ ಕಾನ್ಸ್‌ಟೇಬಲ್ H.S.ಹೊಸಮನಿ ವಿರುದ್ಧ ಇಂತಹದೊಂದು ಆರೋಪ ಕೇಳಿಬಂದಿದೆ.

ಬೈಕ್​ಗಳಿಗೆ ದಂಡ ಹಾಕುವ ನೆಪದಲ್ಲಿ ಪೊಲೀಸಪ್ಪ ಹಣ ಪೀಕುತ್ತಿದ್ದಾರಂತೆ. ಈ ಬಗ್ಗೆ ಪ್ರಶ್ನಿಸಿದ್ರೆ ಪೊಲೀಸ್ ಠಾಣೆಗೆ ಉಪಕರಣ ಖರೀದಿ ಮಾಡಲು ಮತ್ತು ಸಿಸಿಕ್ಯಾಮರಾಗಾಗಿ PSI ಸೂಚನೆ ಮೇರೆಗೆ ಹಣ ಸಂಗ್ರಹಿಸುತ್ತಿರುವುದಾಗಿ ಗ್ರಾಮಸ್ಥರಿಗೆ ಹೇಳುತ್ತಿದ್ದಾರಂತೆ.

ಪ್ರತಿ ಬೈಕ್ ಸವಾರರ ಬಳಿ 500 ರೂಪಾಯಿಯಂತೆ ಹಣ ಸಂಗ್ರಹ ಮಾಡುತ್ತಿದ್ದಾರಂತೆ. ಹೆಡ್‌ ಕಾನ್ಸ್‌ಟೇಬಲ್ H.S.ಹೊಸಮನಿಯ ಈ ಕೃತ್ಯ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ಪೊಲೀಸಪ್ಪನ ವಸೂಲಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹಾಗೂ ಸೂಕ್ತ ಕ್ರಮ ತೆಗೆದುಕೊಳ್ಳಲು ಮೇಲಾಧಿಕಾರಿಗಳಿಗೆ ಒತ್ತಾಯಿಸಲಾಗಿದೆ.


Spread the love

About Laxminews 24x7

Check Also

ಪರಪ್ಪನ ಅಗ್ರಹಾರ ಜೈಲೋ? ರೆಸಾರ್ಟೋ?

Spread the loveಬೆಂಗಳೂರು, ಅಕ್ಟೋಬರ್​ 09: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆಯ ವಿಚಾರ ವ್ಯಾಪಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ