ಬಾಗಲಕೋಟೆ: ಅಭಿವೃದ್ಧಿ ಶೂನ್ಯ ಖದಂಪುರ ಬದಲಾವಣೆ ಆಗಿದ್ದು ಬಿಜೆಪಿ ಆಡಳಿತದ ಕಾಲದಲ್ಲಿ. ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ ಮಾಡಿ ಅಲ್ಪಸಂಖ್ಯಾತರ ತುಷ್ಠಿಕರಣದಿಂದ ಗೆದ್ದು ದುರಾಡಳಿತ ಮಾಡುತ್ತಿದ್ದು ಅದಕ್ಕೊಂದು ಕೊನೆ ಕಾಣಿಸಲು ಬಿಜೆಪಿ ಗೆಲ್ಲಿಸಿ ಎಂದು ವೀರಣ್ಣ ಚರಂತಿಮಠ ಹೇಳಿದರು
ಕದಾಂಪುರ ಗ್ರಾಮದಲ್ಲಿ ಹಮ್ಮಿಕೊಂಡ ಮತಯಾಚನೆ ಸಭೆಯಲ್ಲಿ ಮಾತನಾಡಿ ಗ್ರಾಮಗಳು ನಗರಗಳಿಗೆ ಪೈಪೋಟಿ ಕೊಡುವಂತೆ ಬೆಳೆದಿದ್ದು ಬಿಜೆಪಿ ಯೋಜನೆಗಳಿಂದ. ಗ್ರಾಮವು ಆರ್.ಸಿ ಕೇಂದ್ರವಾಗಿದ್ದು ಬಿಟಿಡಿಎದಿಂದ ಹಣ ತಂದು ರಸ್ತೆ ನಿರ್ಮಾಣ ಮಾಡಲಾಗಿತ್ತು ಆದರೆ ಇಂದಿನ ಸರಕಾರ ಅವುಗಳನ್ನು ಕಸದ ತೊಟ್ಟಿ ಮಾಡಿವೆ. 2028ಕ್ಕೆ ಹೋರಾಟ ಮಾಡಿ ಆರ್.ಸಿ ಕೇಂದ್ರದ ಸಂಪೂರ್ಣ ಅಭಿವೃದ್ಧಿ ಮಾಡುವ ಕೆಲಸ ಮಾಡೋಣ ಎಂದರು. ಇತ್ತಕಡೆ ಒಡೆದು ಆಳುವ ಕುತಂತ್ರ ಬುದ್ದಿಯಿಂದ ಕಾಂಗ್ರೆಸ್ ಮತದಾರರ ದಾರಿ ತಪ್ಪಿಸುತ್ತಿದ್ದು ದುರಾಡಳಿತದ ವಿರುದ್ಧ ಕಮಲಕ್ಕೆ ಬಲ ತುಂಬಲು ಒಗ್ಗಟ್ಟಾಗೋಣ ಎಂದರು.
ಶಾಸಕ ಸಿದ್ದು ಸವದಿ ಮಾತನಾಡಿ ಉಪಚುನಾವಣೆ ಆಕಸ್ಮಿಕವಾಗಿ ಎದುರಾಗಿದೆ. ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ಗೆಲ್ಲಿಸಿ ಕೈ ಸುಟ್ಟಕೊಂಡ ಅನುಭವ ಆಗಿದೆ. ಗೃಹಲಕ್ಷ್ಮೀಯಲ್ಲಿ ಐದು ಸಾವಿರ ಕೋಟಿ ಲೂಟಿ ಮಾಡಿದ್ದಾರೆ, ಯುವ ನಿಧಿ ಹೆಸರಲ್ಲಿ ಒಬ್ಬರಿಗೂ ಹಣ ನೀಡದೆ ಮೋಸ ಮಾಡಿದ್ದಾರೆ, ದಿನಸಿ ಸಾಮಗ್ರಿಗಳ ಬೆಲೆ ಏರಿಕೆ ವಿದ್ಯುತ್ ದುಬಾರಿ ಮಾಡಿ ಬಡವರನ್ನು ಕಿತ್ತು ತಿನ್ನುತ್ತಿರುವ ಸರಕಾರ ಕೈಬಿಟ್ಟು ವೀರಣ್ಣ ಚರಂತಿಮಠರನ್ನು ಗೆಲ್ಲಿಸಿ ಎಂದರು.
ಈ ವೇಳೆ ರಾಜು ನಾಯ್ಕರ್, ಮಹಾಂತೇಶ ಮಮದಾಪುರ, ಕುಮಾರ ಜಣಾಲಿ, ದುಂಡಪ್ಪ ಏಳಮ್ಮಿ, ಪುಂಡಲಿಕ ದಾಳಿ, ಪ್ರಭುಸ್ವಾಮಿ ಸರಗಣಾಚಾರಿ, ಪಕಿರಪ್ಪ ಸೇರಿದಂತೆ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.
Laxmi News 24×7