ಉಡುಪಿ: ಮಾಸ್ಕ್ ಧರಿಸದ ಇಬ್ಬರು ಪ್ರಯಾಣಿಕರನ್ನು ಜಗಳ ಮಾಡಿ ಸಹ ಪ್ರಯಾಣಿಕರು ಬಸ್ಸಿನಿಂದ ಇಳಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ-ಕುಂದಾಪುರ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಇಬ್ಬರು ಪ್ರಯಾಣಿಕರು ಮಾಸ್ಕ್ ಇಲ್ಲದೆ ಬಸ್ ಒಳಗೆ ಬಂದು ಕುಳಿತಿದ್ದಾರೆ. ಇದನ್ನು ಕಂಡ ಸಹ ಪ್ರಯಾಣಿಕರು ನಿರ್ವಾಹಕನಿಗೆ ಈ ಬಗ್ಗೆ ದೂರು ನೀಡಿದ್ದಾರೆ. ನಿರ್ವಾಹಕ ಹೇಳಿದರೂ ಇಬ್ಬರು ಪ್ರಯಾಣಿಕರು ಕೆಳಗಿಳಿದಿಲ್ಲ.
ಈ ವೇಳೆ ಪ್ರಯಾಣಿಕರು, ಮಾಸ್ಕ್ ಹಾಕಲ್ಲ ಏನ್ ಮಾಡುತ್ತೀರಾ ಮಾಡಿ ಎಂದು ಅವಾಜ್ ಹಾಕಿದ್ದಾರೆ. ಅಲ್ಲದೇ ಸಹ ಪ್ರಯಾಣಿಕರು ಮತ್ತು ಕಂಡಕ್ಟರ್ ಜೊತೆ ಜಗಳ ಮಾಡಿದ್ದಾರೆ. ಇದರಿಂದ ಕೋಪಗೊಂಡ ಸಹ ಪ್ರಯಾಣಿಕರು ಬಸ್ಸನ್ನು ನಿಲ್ಲಿಸಿ, ಮಾಸ್ಕ್ ತೊಡದೆ ಉದ್ಧಟತ ತೋರಿದ ಇಬ್ಬರು ಪ್ರಯಾಣಿಕರನ್ನು ಬೈದು ಕೆಳಗಿಳಿಸಿದ್ದಾರೆ.