Breaking News

ಹೋಮ್ ರೂಲ್ಸ್ ಕಟ್ಟುನಿಟ್ಟಾಗಿ ಪಾಲಿಸಲೇಬೇಕಂತೆ ಇಲ್ಲವಾದಲ್ಲಿ ಅವರ ಪತ್ನಿ ಗುರ್ ಅಂತಾರಂತೆ.

Spread the love

ಬೆಂಗಳೂರು: ಉಗ್ರಂ ಖ್ಯಾತಿಯ ಶ್ರೀಮುರಳಿ ಮನೆಯಲ್ಲಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ಹೋಮ್ ರೂಲ್ಸ್ ಕಟ್ಟುನಿಟ್ಟಾಗಿ ಪಾಲಿಸಲೇಬೇಕಂತೆ ಇಲ್ಲವಾದಲ್ಲಿ ಅವರ ಪತ್ನಿ ಗುರ್ ಅಂತಾರಂತೆ.

ಲಾಕ್‍ಡೌನ್ ದಿನಗಳು ಹಲವು ನಟ, ನಟಿಯರಿಗೆ ಸಂತಸ ನೀಡಿದ್ದು, ಕುಟುಂಬದೊಂದಿಗೆ ಕಾಲ ಕಳೆಯಲು ಅವಕಾಶ ಸಿಕ್ಕಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಬಾಲಿವುಡ್, ಸ್ಯಾಂಡಲ್‍ವುಡ್ ಸೇರಿದಂತೆ ಬಹುತೇಕ ನಟರು ತಮ್ಮ ಪ್ರೀತಿ ಪಾತ್ರರೊಂದಿಗೆ ಸಂತಸದಿಂದ ಕಾಲ ಕಳೆಯುತ್ತಿದ್ದಾರೆ. ಹತ್ತು ಹಲವು, ಚಟುವಟಿಕೆಗಳು ತಮ್ಮ ಹವ್ಯಾಸಗಳು ಸೇರಿದಂತೆ ಮನೆಗೆಲಸಗಳನ್ನೂ ಅಷ್ಟೇ ಇಷ್ಟಪಟ್ಟು ಮಾಡುತ್ತಿದ್ದಾರೆ.

ಅದೇ ರೀತಿ ಇದೀಗ ಶ್ರೀಮುರಳಿಯವರಿಗೆ ಈ ಸಂಕಷ್ಟ ಎದುರಾಗಿದ್ದು, ಹೋಮ್ ರೂಲ್ಸ್ ಫಾಲೋ ಮಾಡಲೇಬೇಕಾಗಿದೆ. ಸಿನಿಮಾ ಕೆಲಸಗಳಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದ ಶ್ರೀಮುರಳಿಯವರಿಗೆ ಇದೀಗ ಪತ್ನಿ, ಮಕ್ಕಳು, ಕುಟುಂಬದೊಂದಿಗೆ ಕಾಲ ಕಳೆಯುವ ಅವಕಾಶ ಸಿಕ್ಕಿದ್ದು, ಇದನ್ನು ಅಷ್ಟೇ ಎಂಜಾಯ್ ಮಾಡುತ್ತಿದ್ದಾರೆ. ಇದರೊಂದಿಗೆ ಕಷ್ಟವನ್ನು ಪಡುತ್ತಿದ್ದಾರೆ.

ತಾವು ಕಷ್ಟ ಪಡುತ್ತಿರುವುದರ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ಸದ್ಯಕ್ಕೆ ಹೋಮ್ ರೂಲ್ಸ್, ಊಟ ಬೇಕು ಅಂದ್ರೆ ಪಾತ್ರೆ ತೊಳೆಯಲೇಬೇಕು. ಇಲ್ಲಾ ಅಂದ್ರೆ ನನ್ನ ಹೆಂಡತಿ ವಿದ್ಯಾ ಗುರ್ ಅಂತಾರೆ. ಆದರೆ ಈ ಕೆಲಸದಿಂದ ಬೆವರು ಕಿತ್ಗೊಂಡು ಬರುತ್ತೆ ಎಂದು ಪಾತ್ರೆ ತೊಳೆಯುವ ಫೋಟೋ ಹಾಕಿದ್ದಾರೆ. ಈ ಮೂಲಕ ಮನೆಗೆಲಸವನ್ನು ಮಾಡುತ್ತಿರುವುದಾಗಿ ಹೇಳಿದ್ದಾರೆ.

ಶ್ರೀ ಮುರಳಿ ಪೋಸ್ಟ್ ಗೆ ಅವರ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದು, ಲವ್ಡ್ ಇಟ್, ಎಂಜಾಯ್ ಬ್ರದರ್. ಅತ್ತಿಗೆ ರಾಕ್, ಬ್ರದರ್ ಶಾಕ್ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ಕ್ಯೂಟ್ ಕಪಲ್, ಬೆಸ್ಟ್ ಟುಗೆದರ್ ಎಂದು ಕಮೆಂಟ್ ಮಾಡಿದ್ದಾರೆ. ಹೀಗೆ ಅವರ ಅಭಿಮಾನಿಗಳು ಮನೆಗೆಲಸ ಮಾಡುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ನಟ ಶ್ರೀ ಮುರಳಿ ಅಭಿನಯದ ಮದಗಜ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೇ ಪ್ರಾರಂಭವಾಗಿದ್ದು, ಶ್ರೀ ಮುರುಳಿ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದರು. ಚಿತ್ರ ತಂಡ ಉತ್ತರ ಪ್ರದೇಶದಲ್ಲಿ ಅಘೋರಿಗಳ ಮಧ್ಯೆ ಶೂಟಿಂಗ್‍ಗೂ ತೆರಳಿತ್ತು. ನಂತರ ಈ ಚಿತ್ರಕ್ಕೆ ನಾಯಕಿ ಆಯ್ಕೆ ಬಗ್ಗೆ ಸಹ ಕುತೂಹಲ ಮೂಡಿತ್ತು. ಆಶಿಕಾ ರಂಗನಾಥ್ ಆಯ್ಕೆಯಾಗುವ ಮೂಲಕ ಕುತೂಹಲಕ್ಕೆ ತೆರೆಬಿತ್ತು. ಚಿತ್ರೀಕರಣ ಭರದಿಂದ ಸಾಗಿರುವಾಗಲೇ ಕೊರೊನಾ ವಕ್ಕರಿಸಿ, ಲಾಕ್‍ಡೌನ್ ಜಾರಿಯಾಯಿತು. ಹೀಗಾಗಿ ಮನೆಯಲ್ಲೇ ಕಾಲ ಕಳೆಯುವ ಸ್ಥಿತಿ ಬಂದೊದಗಿದೆ. ಈ ಸಮಯವನ್ನೂ ಎಂಜಾಯ್ ಮಾಡುತ್ತಿರುವ ಶ್ರೀಮುರಳಿ, ಮನೆ ಕೆಲಸದಲ್ಲಿ ಪತ್ನಿಗೆ ಸಹಾಯ ಮಾಡುತ್ತಿದ್ದಾರೆ. ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ.


Spread the love

About Laxminews 24x7

Check Also

ಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್!

Spread the loveಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್! ಬೆಂಗಳೂರು: ವಯೋವೃದ್ಧ ಕಾರು ಚಾಲಕರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ