ಬೆಂಗಳೂರು: ಕಲ್ಯಾಣ ಕರ್ನಾಟಕಕ್ಕೆ ನಾಳೆಯಿಂದ ಬಸ್ ಸಂಚಾರ ಆರಂಭವಾಗಲಿದೆ. ಇಂದು ಕಲ್ಯಾಣ ಕರ್ನಾಟಕ್ಕೆ ಬಸ್ ಸಂಚಾರ ಇರುವುದಿಲ್ಲಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಸಾರಿಗೆ ಸಚಿವರ ಈ ದಿಢೀರ್ ಹೇಳಿಕೆ ಈಗ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಲಾಕ್ ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 7 ಗಂಟೆಯಿಂದ ಹೊರ ಜಿಲ್ಲೆಗಳಿಗೆ ಕೆ ಎಸ್ ಆರ್ ಟಿಸಿ ಸೇರಿದಂತೆ ಸಾಮಾನ್ಯ ಬಸ್ ಸಂಚಾರ ಇರಲಿದೆ ಎಂದು ನಿನ್ನೆ ಸಿಎಂ ಯಡಿಯೂರಪ್ಪ ತಿಳಿಸಿದ್ದರು. ಇದರ ಬೆನ್ನಲ್ಲೇ ಪ್ರಯಾಣಿಕರು ಇಂದು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಆದರೆ ಉತ್ತರ ಕರ್ನಾಟಕ ಭಾಗಗಳಿಗೆ ತೆರಳಲು ಅಲ್ಲಿ ಯಾವುದೇ ಬಸ್ ಸಿದ್ಧಗೊಂಡಿಲ್ಲದಿರುವುದು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ್ ಅಸವದಿಯನ್ನು ಕೇಳಿದರೆ ಬೆಂಗಳೂರಿನಿಂದ ಬೀದರ್, ಗುಲ್ಬರ್ಗಾ, ರಾಯಚೂರು, ಕಲಬುರಗಿ, ಗದಗ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಇಂದು ಬಸ್ ಸಂಚಾರ ಇಲ್ಲ. ನಾಳೆಯಿಂದ ಕೆ ಎಸ್ ಆರ್ ಟಿಸಿ ಬಸ್ ಸಂಚಾರ ಇರಲಿದೆ. ಒಮ್ಮೊಮ್ಮೆ ಈ ರೀತಿ ಗೊಂದಲಗಳು ಉಂಟಾಗಲಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಈಗಾಗಲೇ ತಮ್ಮ ಊರುಗಳಿಗೆ ತೆರಳಲು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದಿರುವ ಪ್ರಯಾಣಿಕರು ಊರಿಗೆ ತರಳಲು ಬಸ್ ವ್ಯವಸ್ಥೆಯೂ ಇಲ್ಲದೇ, ಇತ್ತ ಊಟ, ತಿಂಡಿ ವ್ಯವಸ್ಥೆಯಾಗಲಿ, ಇರಲು ಜಾಗವೂ ಇಲ್ಲದೇ ಪರಿತಪಿಸುವಂತಾಗಿದೆ.