Breaking News

ಐಐಐಟಿಯಲ್ಲಿ ಜರುಗಿದ ಪ್ರದರ್ಶನದಲ್ಲಿ ಉತ್ತಮ ಸಾಧನೆ ಮಾಡಿದ ಎಸ್‌ಜಿಬಿಐಟಿ ವಿದ್ಯಾರ್ಥಿಗಳು

Spread the love

ಬೆಳಗಾವಿ: ಧಾರವಾಡದ ಐಐಐಟಿಯಲ್ಲಿ ಈಚೆಗೆ ಜರುಗಿದ ನೈನ್ 2.0 ಪದವಿ ಮತ್ತು ಯೋಜನಾ ಪ್ರದರ್ಶನದಲ್ಲಿ ನಗರದ  ಎಸ್‌ಜಿಬಿಐಟಿ ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿ ಪ್ರದರ್ಶಿಸಿದ್ದ ಯೋಜನೆಗಳಿಗೆ ತಲಾ 2 ಲಕ್ಷ ರೂ. ಅನುದಾನದೊಂದಿಗೆ ಮೊದಲ ಮತ್ತು ದ್ವಿತೀಯ ಅತ್ಯುತ್ತಮ ಯೋಜನಾ ಪ್ರಶಸ್ತಿ ಲಭಿಸಿದೆ.
ಈ ಪ್ರದರ್ಶನದಲ್ಲಿ ಎಸ್‌ಜಿಬಿಐಟಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಒಟ್ಟು 10 ಯೋಜನೆಗಳು ಮೌಲ್ಯಮಾಪನ ಸಮಿತಿ ಮತ್ತು ವಿದ್ಯಾರ್ಥಿಗಳಿಂದ ಹೆಚ್ಚಿನ ಮೆಚ್ಚುಗೆ ಪಡೆದವು. ಅದರಲ್ಲಿ ‘ಲಘು ಸಂಚಾರಕ್ಕಾಗಿ ಪ್ಲಾಸ್ಟಿಕ್ ಮತ್ತು ಮರಳನ್ನು ಬಳಸಿ ಪರಿಸರ ಸ್ನೇಹಿ ಸಿಮೆಂಟ್‌ರಹಿತ ಇಂಟರ್‌ಲಾಕಿಂಗ್ ಪೇವರ್ ಬ್ಲಾಕ್ ಉತ್ಪಾದನೆ’ ಎಂಬ ಯೋಜನೆಗೆ ಮೊದಲ ಸ್ಥಾನ ಲಭಿಸಿದೆ. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊ.ವಿವೇಕಾನಂದ ಕೋರಿಶೆಟ್ಟಿ ಮತ್ತು ಪ್ರೊ.ಸಂದೀಪ  ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ರಾಹುಲ್ ಗದವೀರ, ಪ್ರದೀಪ ಅಂಬೋಜಿ, ಬಿ.ಜಾನು, ಸಂಜನಾ ಮುತಗೇಕರ, ಮಸೂದ್ ಅಹ್ಮದ್ ಈ ಯೋಜನೆ ಅಭಿವೃದ್ಧಿಪಡಿಸಿದ್ದರು.
ಜತೆಗೆ ಟ್ರೈಬ್ರಿಡ್ ವೆಹಿಕಲ್ ಎಂಬ ಮತ್ತೊಂದು ಯೋಜನೆಯು ಎರಡನೇ ಅತ್ಯುತ್ತಮ ಯೋಜನಾ ಪ್ರಶಸ್ತಿ ಪಡೆದುಕೊಂಡಿದೆ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಪ್ರೊ.ಮಲ್ಲಿಕಾರ್ಜುನ ಭಗವತಿ ಮಾರ್ಗದರ್ಶನದಲ್ಲಿ ಕಾರ್ತಿಕ ಪಾಯಣ್ಣವರ, ಬಸವರಾಜ ಭೂಸಾಣಿ , ಅಥರ್ವ ಕುಲಕರ್ಣಿ, ಶಿವಕುಮಾರ ಬಡಿಗೇರ ಅಭಿವೃದ್ಧಿಪಡಿಸಿದ್ದರು.

Spread the love

About Laxminews 24x7

Check Also

ಕಬ್ಬಿನ ಬಿಲ್ ಬಾಕಿಗಾಗಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಎದುರು ರೈತ ಪ್ರತಿಭಟನೆ

Spread the loveಬೆಳಗಾವಿ: ಪ್ರಸಕ್ತ ಸಾಲಿನ ಕಬ್ಬಿನ ಬಿಲ್ ಬಾಕಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಶುಕ್ರವಾರ ಮಹಾನಗರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ