ಬೆಳಗಾವಿ, : ಮುಸ್ಲಿಮರಿಲ್ಲದ ಮೊಹರಂ ಆಚರಣೆಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?. ಮುಸಲ್ಮಾನರ ಸಂಖ್ಯೆಯೇ ಇಲ್ಲದ ಬೆಳಗಾವಿಯ ಹಳ್ಳಿಯೊಂದು ಈ ಹಬ್ಬವನ್ನು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.
ಬೆಳಗಾವಿಯ ಸವದತ್ತಿ ತಾಲೂಕಿನ ಹಿರೇಬಿದನೂರು ಗ್ರಾಮದಲ್ಲಿ ವರ್ಷಕ್ಕೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ.
ಮೊಹರಂ, ರಂಜಾನ್ ನಂತರ ಎರಡನೇ ಪವಿತ್ರ ಹಬ್ಬವಾಗಿದೆ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳು ಬರುತ್ತದೆ. ಈ ವರ್ಷ ಜುಲೈ 31 ರಂದು ಪ್ರಾರಂಭವಾಗಿ ಆಗಸ್ಟ್ 28 ರಂದು ಮುಕ್ತಾಯಗೊಳ್ಳುತ್ತದೆ.
ಹಿರೇಬಿದನೂರು ಗ್ರಾಮದಲ್ಲಿ ಹೆಚ್ಚಾಗಿ ವಾಲ್ಮೀಕಿ ಮತ್ತು ಕುರುಬ ಸಮುದಾಯವರ ಜನಸಂಖ್ಯೆಯಿದೆ. ಎರಡು ಸಮುದಾಯದ ಜನರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸುತ್ತದೆ. ಅಲ್ಲಿ ‘ಫಕೀರೇಶ್ವರ ಸ್ವಾಮೀಜಿ’ಯ ಗುಡಿ ಇದೆ. ಗ್ರಾಮಸ್ಥರು ವರ್ಣರಂಜಿತ ಲೈಟಿಂಗ್ ಸೆಟ್‌ಗಳೊಂದಿಗೆ ಬೀದಿಗಳನ್ನು ಬೆಳಗಿಸಿ ಹೆಚ್ಚಿನ ಸಂಖ್ಯೆಯಲ್ಲಿ ‘ಫಕೀರೇಶ್ವರ ಸ್ವಾಮಿಯನ್ನು ಪ್ರಾರ್ಥಿಸುತ್ತಾರೆ.
ಏನಾಯ್ತು? ಇಲ್ಲಿದೆ ಮಾಹಿತಿ
ಸಾಮಾನ್ಯವಾಗಿ ಮಸೀದಿಯಲ್ಲಿ ಪೂಜೆಯನ್ನು ನಡೆಸುವ ಜವಾಬ್ದಾರಿಯನ್ನು ಒಬ್ಬ ಹಿಂದೂ ಪುರೋಹಿತರು ಮಾಡುತ್ತಾರೆ. ಆದಾಗ್ಯೂ, ಇಸ್ಲಾಮಿಕ್ ರೀತಿಯಲ್ಲಿ ಪ್ರಾರ್ಥನೆಗಳನ್ನು ಕೈಗೊಳ್ಳಲು ಗ್ರಾಮಸ್ಥರು ಪ್ರತಿ ವರ್ಷ ಹಬ್ಬದ ಸಮಯದಲ್ಲಿ ನೆರೆಯ ಗ್ರಾಮದ ಮೌಲ್ವಿಯನ್ನು ಒಂದು ವಾರದವರೆಗೆ ಹಬ್ಬಕ್ಕೆ ಆಹ್ವಾನಿಸುತ್ತಾರೆ.
ಮೊದಲ ಮತ್ತು ಕೊನೆಯ ದಿನಗಳಲ್ಲಿ ಮಾಡಲಾಗುವ ಕರ್ಬಲ್ ನೃತ್ಯ, ವಿಶಿಷ್ಟವಾದ ಹಗ್ಗ ಕಲೆ ಮತ್ತು ಬೆಂಕಿಯ ದಾಟುವಿಕೆಯಂತಹ ಐದು ದಿನಗಳ ಆಚರಣೆಯಲ್ಲಿ ಗ್ರಾಮಸ್ಥರು ಫಕೀರೇಶ್ವರ ಸ್ವಾಮಿಯ ಮೆರವಣಿಗೆ ಮಾಡುತ್ತಾರೆ. ಅಲ್ಲದೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಈ ಕ್ಷೇತ್ರದ ಶಾಸಕರು ಇತ್ತೀಚೆಗೆ ಮಸೀದಿ ಕಟ್ಟಡದಲ್ಲಿ ನವೀಕರಣ ಕಾಮಗಾರಿ ನಡೆಸಲು 8 ಲಕ್ಷ ಮೀಸಲಿಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.