Breaking News

ಕೊರೊನಾ ಎಫೆಕ್ಟ್ – ರಾಜಾಮೌಳಿ ಆರ್‌ಆರ್‌ಆರ್ ಸಿನಿಮಾದಿಂದ ಆಲಿಯಾ ಔಟ್

Spread the love

ಮುಂಬೈ: ಕೊರೊನಾ ದೇಶದ ಎಲ್ಲಾ ಕ್ಷೇತ್ರಗಳ ಮೇಲೆ ತನ್ನ ಪ್ರಭಾವವನ್ನು ಬೀರಿದೆ, ಹಾಗೆಯೇ ಭಾರತ ಚಿತ್ರರಂಗವನ್ನು ಸಂಕಷ್ಟಕ್ಕೆ ದೂಡಿದೆ. ಕೊರೊನಾದಿಂದ ನಿರ್ದೇಶಕ ರಾಜಾಮೌಳಿಯ ಆರ್‌ಆರ್‌ಆರ್ ಚಿತ್ರದಿಂದ ಬಾಲಿವುಡ್ ಬೆಡಗಿ ಆಲಿಯಾ ಭಟ್ ಹೊರಬಂದಿದ್ದಾರೆ ಎನ್ನಲಾಗಿದೆ.

ಹೌದು ಸ್ಟಾರ್ ನಿರ್ದೇಶಕ ರಾಜಾಮೌಳಿ ನಿರ್ದೇಶದ ಆರ್‌ಆರ್‌ಆರ್ ಚಿತ್ರ ಬಹುಕೋಟಿ ವೆಚ್ಚದಲ್ಲಿ ತಯಾರಗುತ್ತಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಅವರು ಒಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕೊರೊನಾ ವೈರಸ್‍ನ ಪರಿಣಾಮದಿಂದ ಅವರು ಈ ಸಿನಿಮಾದಿಂದ ಹೊರಬಂದಿದ್ದಾರೆ ಎಂದು ಹೇಳಲಾಗಿದೆ.

ಈ ಚಿತ್ರದ 75% ಚಿತ್ರೀಕರಣ ಮುಗಿಯಲು ಬಂದಿದೆ. ಅಂತಾಯೇ ಅಲಿಯಾ ಭಟ್ ಅವರು ಇರುವ ಚಿತ್ರದ ಭಾಗವನ್ನು ಚಿತ್ರತಂಡ ಇದೇ ತಿಂಗಳು ಚಿತ್ರೀಕರಣ ಮಾಡಲು ಪ್ಲಾನ್ ಕೂಡ ಮಾಡಿತ್ತು. ಇದಕ್ಕಾಗಿ ಆಲಿಯಾ ಕೂಡ ಡೇಟ್ ಕೊಟ್ಟಿದ್ದರು. ಆದರೆ ಭಾರತದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ ಸಿನಿಮಾ ಶೂಟಿಂಗ್ ಮಾಡಬೇಡಿ ಎಂದು ಸೂಚಿಸಿದ ಕಾರಣ ಚಿತ್ರೀಕರಣವನ್ನು ಮುಂದೂಡಲಾಗಿದೆ.

ಆರ್‌ಆರ್‌ಆರ್ ಚಿತ್ರಕ್ಕಾಗಿ ಎಂದೇ ಬ್ಯುಸಿ ವೇಳಾಪಟ್ಟಿಯ ನಡುವೆ ಆಲಿಯಾ ಡೇಟ್ ಕೊಟ್ಟಿದ್ದರು. ಈಗ ಕೊರೊನಾ ವೈರಸ್ ಹಿನ್ನೆಲೆ ಚಿತ್ರೀಕರಣ ಮುಂದೂಡಲಾದ ಪರಿಣಾಮ ಅವರಿಗೆ ಮತ್ತೆ ಸಿನಿಮಾಗೆ ಡೇಟ್ ಕೊಡಲು ಆಗುತ್ತಿಲ್ಲ. ಯಾಕೆಂದರೆ ಅಲಿಯಾ ಈ ಸಿನಿಮಾದ ನಂತರ ಸದಕ್ 2, ಬ್ರಹ್ಮಾಸ್ತ್ರ ಮತ್ತು ಸಂಜಯ್ ಲೀಲಾ ಭನ್ಸಾಲಿ ಅವರ ಗಂಗುಬಾಯಿ ಕಥಿಯಾವಾಡಿ ಎಂಬ ಸಾಲು ಸಾಲು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳ ನಡುವೆ ಮತ್ತೆ ಆರ್‌ಆರ್‌ಆರ್ ಚಿತ್ರಕ್ಕೆ ಡೇಟ್ ಕೊಡಲು ಸಾಧ್ಯವಿಲ್ಲ ಎಂದು ಅಲಿಯಾ ಹೇಳಿದ್ದಾರೆ ಎನ್ನಲಾಗಿದೆ.

ರಾಜಾಮೌಳಿ ಅವರು ಸಿನಿಮಾ ಪಾತ್ರವನ್ನು ಆಯ್ಕೆ ಮಾಡುವಾಗ ಯಾರಲ್ಲಿ ನೈಜ ಪ್ರತಿಭೆ ಇದೆಯೋ ಮತ್ತು ಸಿನಿಮಾಕ್ಕೆ ಯಾರು ದುಡಿಯುತ್ತಾರೋ ಅವರನ್ನು ಮಾತ್ರ ರಾಜಮೌಳಿ ಆಯ್ಕೆ ಮಾಡುತ್ತಾರೆ. ಈ ಕಾರಣದಿಂದಲೇ ಆಲಿಯಾ ಅವರು ಅಪಾರ ಪ್ರಮಾಣ ಹಣ ನೀಡಿ ಚಿತ್ರಕ್ಕಾಗಿ ಕರೆತಂದಿದ್ದರು ಎನ್ನಲಾಗಿತ್ತು. ಆದರೆ ಮೂಲಗಳ ಪ್ರಕಾರ ಮತ್ತೆ ಆಲಿಯಾ ಭಟ್ ಅವರ ಡೇಟ್ ಪಡೆಯಲು ರಾಜಾಮೌಳಿ ಆಲಿಯಾ ಮ್ಯಾನೇಜರ್ ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.


Spread the love

About Laxminews 24x7

Check Also

ಈಗ 41 ದೇಶಗಳಿಂದ ಇಂಧನ ಅಮದು, ಗಲ್ಫ್‌ನಲ್ಲಿರುವ ಪ್ರತಿಯೊಬ್ಬ ಭಾರತೀಯನ ಸುರಕ್ಷತೆ ನಮಗೆ ಮುಖ್ಯ: ಮೋದಿ

Spread the loveದೆಹಲಿ: ಈಗ ನಾವು 41 ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ