Breaking News

ಬೆಂಗಳೂರಿನಲ್ಲಿಂದು RCB vs CSK ಹೈವೋಲ್ಟೇಜ್‌ ಕದನ – ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 2,300 ಪೊಲೀಸರಿಂದ ಭದ್ರತೆ

Spread the love

ಬೆಂಗಳೂರು: ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಐಪಿಎಲ್‌ನ 2 ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಇಂದು ಬೆಂಗಳೂರಿನಲ್ಲಿ ಹಣಾಹಣಿಗೆ ಸಜ್ಜಾಗಿವೆ. ಈ ಹಿನ್ನೆಲೆ ಭದ್ರತಾ ವ್ಯವಸ್ಥೆಗಳನ್ನ ಮತ್ತಷ್ಟು ಹೆಚ್ಚಿಸಲಾಗಿದೆ.

ಎಸ್‌ಆರ್‌ಎಸ್‌ (SRH) ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲಿ ಕಂಡುಬಂದ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಲು ಹಾಗೂ ಕ್ರಿಕೆಟ್ ಪ್ರಿಯರ ಸುರಕ್ಷತೆ ಇನ್ನಷ್ಟು ಖಚಿತಪಡಿಸಿಕೊಳ್ಳಲು ಈ ಬಾರಿ ಭದ್ರತಾ ವ್ಯವಸ್ಥೆಗಳನ್ನ ಮತ್ತಷ್ಟು ಬಿಗಿಗೊಳಿಸಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಭದ್ರತೆಯ ಪ್ರಮಾಣ ತುಸು ಹೆಚ್ಚಿದ್ದು, ಸುಮಾರು 2,300 ಪೊಲೀಸರನ್ನ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಭದ್ರತಾ ದೃಷ್ಟಿಯಿಂದ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಈ ಬಾರಿ ಎರಡು ಹೆಚ್ಚುವರಿ ಬ್ಯಾಗೇಜ್ ಕೌಂಟರ್‌ಗಳನ್ನು ನಿರ್ಮಿಸಲಾಗಿದ್ದು, ಪ್ರೇಕ್ಷಕರ ಅನುಕೂಲಕ್ಕೆ ನೆರವಾಗಲಿದೆ. ಕಳೆದ ಬಾರಿ ಪಂದ್ಯದ ವೇಳೆ 70ಕ್ಕೂ ಹೆಚ್ಚು ಮೊಬೈಲ್‌ಗಳು (Mobile) ಕಳ್ಳತನವಾಗಿದ್ದವು. ಈ ಘಟನೆಗಳನ್ನು ಮನಗಂಡು, ಕಳ್ಳರ ಬಗ್ಗೆ ಎಚ್ಚರದಿಂದಿರಲು ಕ್ರಿಕೆಟ್ ಪ್ರಿಯರಿಗೆ ವಿಶೇಷ ಸೂಚನೆಗಳನ್ನು ನೀಡಲಾಗಿದೆ. ಸ್ಟೇಡಿಯಂ ಆವರಣದಲ್ಲಿ ಹೆಚ್ಚು ಸೈನ್ ಬೋರ್ಡ್‌ಗಳನ್ನು ಅಳವಡಿಸುವುದರ ಜೊತೆಗೆ, ಮೈಕ್ ಮೂಲಕವೂ ಪದೇ ಪದೇ ಅನೌನ್ಸ್‌ಮೆಂಟ್‌ಗಳನ್ನು ಮಾಡಿ ಜಾಗೃತಿ ಮೂಡಿಸಲಾಗುವುದು.

ಪಂದ್ಯ ವೀಕ್ಷಣೆಗೆ ಬರುವ ಅಪಾರ ಜನಸಂದಣಿಯನ್ನ ನಿಯಂತ್ರಿಸಲು ವಿಶೇಷ BMTC ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಪ್ರದೇಶಗಳು ಮತ್ತು ಮೆಟ್ರೋ ಸಂಚಾರ ಸಮಯ ಕಳೆದ ಬಾರಿಯಂತೆಯೇ ಇರಲಿದೆ. ಟಿಕೆಟ್ ಇಲ್ಲದವರಿಗೆ ಸ್ಟೇಡಿಯಂ ಬಳಿ ಪ್ರವೇಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೇ, ನಕಲಿ ಟಿಕೆಟ್ ಮಾರಾಟ ಮತ್ತು ಇತರ ಚಟುವಟಿಕೆಗಳ ಮೇಲೆ ಸಿಸಿಬಿ ನಿರಂತರ ಕಣ್ಗಾವಲು ಇರಿಸಲಿದೆ.


Spread the love

About Laxminews 24x7

Check Also

ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡನ ಶವ ಅನುಮಾನಾಸ್ಪದವಾಗಿ ಪತ್ತೆ

Spread the loveಚಿತ್ರದುರ್ಗ: ಜನಪರ ಕೆಲಸ ಮಾಡುತ್ತಾ ಭಾರೀ ಹೆಸರು ಮಾಡಿದ್ದ ಕಾಂಗ್ರೆಸ್‌ನ  ರೈತ ಮೋರ್ಚಾ ಮುಖಂಡ ಶಿವಲಿಂಗಪ್ಪ (50) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ