Breaking News

ಕಾಂಗ್ರೆಸ್‍ನ 16 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ರಮೇಶ ಜಾರಕಿಹೊಳಿ

Spread the love

ಕಾಂಗ್ರೆಸ್‍ನ 16 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಹೈಕಮಾಂಡ್ ಒಪ್ಪಿದರೆ ಅವರನ್ನು ಪಕ್ಷಕ್ಕೆ ಕರೆತರುವೆ ಎನ್ನುವ ಮೂಲಕ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಚಿವ ರಮೇಶ ಜಾರಕಿಹೊಳಿ ನನ್ನ ಜತೆ 36 ಜನ ಇದ್ರು, 17 ಜನ ನನ್ನ ಜತೆ ಬಂದ್ರು ತಾಂತ್ರಿಕ ಕಾರಣದಿಂದ 16 ಜನ ಅಲ್ಲಿಯೇ ಇದ್ದಾರೆ. ಆ ಸಂದರ್ಭದಲ್ಲಿ ನಮ್ಮ ಜತೆ ಬರಲಿಲ್ಲ. ಕಾಂಗ್ರೆಸ್‍ನ 16 ಶಾಸಕರು ನನ್ನ ಸಂಪರ್ಕದಲ್ಲಿರುವುದು ನಿಜ. ಬಿಜೆಪಿ ಹೈಕಮಾಂಡ್ ಒಪ್ಪಿದರೆ ಅವರನ್ನು ಪಕ್ಷಕ್ಕೆ ಕರೆತರುವೆ. ಜೆಡಿಎಸ್‍ನ ಮೂವರು ಶಾಸಕರು ಕೂಡ ಸಂಪರ್ಕದಲ್ಲಿದ್ದಾರೆ. ಕುಮಾರಸ್ವಾಮಿ ಒಳ್ಳೆಯವರು, ಜೆಡಿಎಸ್‍ನವರನ್ನು ಸೆಳೆಯಲ್ಲ. ಬೆಳಗಾವಿ ಜಿಲ್ಲೆಯ ಮೂವರು ಶಾಸಕರು ಸಂಪರ್ಕದಲ್ಲಿದ್ದಾರೆ. ಮೂವರ ಪೈಕಿ ಇಬ್ಬರು ಬಿಜೆಪಿಗೆ ಬಂದರೆ ಅಭ್ಯಂತರವಿಲ್ಲ. ಮೂರನೇ ಅವರು ಬಿಜೆಪಿಗೆ ಬಂದರೆ ನಾನೇ ಬೇರೆ ಕಡೆ ಹೋಗುತ್ತೇನೆ ಎಂದರು.ಇನ್ನು ಬಿಜೆಪಿ, ಜೆಡಿಎಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಟಾಂಗ್ ಕೊಟ್ಟ ಸಿದ್ದರಾಮಯ್ಯ ವಿಧಾನಸಭೆ ಒಳಗೆ ಏನು ಹೇಳಿದ್ರು ಒಮ್ಮೆ ಸಿದ್ದರಾಮಯ್ಯ ಜ್ಞಾಪಿಸಿಕೊಳ್ಳಲಿ. ಟೇಬಲ್ ಕುಟ್ಟಿ ಹೇಳಿದ್ರು. ಯಾವುದೇ ಕಾರಣಕ್ಕೂ ಈ ದ್ರೋಹಿಗಳನ್ನ ಸೇರ್ಪಡೆ ಮಾಡಿಕೊಳ್ಳಲ್ಲ ಎಂದಿದ್ರು. ಈಗ ಯಾಕೆ ಬೇಕು ಇವರಿಗೆ. ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗೋಕೆ ಮತ್ತೆ ಕರೆಯುತ್ತಿದ್ದಾರಾ. ಯಾವುದೇ ಕಾರಣಕ್ಕೂ ಇದು ಸಾಧ್ಯವಿಲ್ಲ. ಮತ್ತೆ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರವೇ ಬರುತ್ತೆ ಎಂದು ಸಿದ್ದರಾಮಯ್ಯಗೆ ರಮೇಶ್ ಜಾರಕಿಹೊಳಿ ಸವಾಲು ಹಾಕಿದರು.ಇನ್ನು ನಮ್ಮ ಜತೆ ಬಿಜೆಪಿಗೆ ಬಂದವರು ಯಾರೂ ಪಕ್ಷ ಬಿಡುವುದಿಲ್ಲ. ವಿಧಾನಸಭಾ ಚುನಾವಣೆ ಹತ್ತಿರ ಬಂದಾಗ ಎಲ್ಲಾ ಗೊತ್ತಾಗುತ್ತೆ. ನಾನು ಸಚಿವಸ್ಥಾನದ ಆಕಾಂಕ್ಷಿಯಲ್ಲ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ. ನಮ್ಮ ಹೈಕಮಾಂಡ್ ಅಮಿತ್ ಶಾ, ನಮ್ಮ ಜತೆ ಚೆನ್ನಾಗಿದ್ದಾರೆ. ನಾನು ಇಲ್ಲೇ ಇದ್ದು ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ