Breaking News

ಅಕ್ರಮ ಸಂಬಂಧ: ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಜೋಡಿಯನ್ನ ಟ್ರ್ಯಾಕ್ಟರ್ ಗೆ ಕಟ್ಟಿ ಹಾಕಿದ ಗ್ರಾಮಸ್ಥರು

Spread the love

ಬೆಳಗಾವಿ: ವಿವಾಹೇತರ ಸಂಬಂಧ ಹೊಂದಿದ್ದ ಜೋಡಿಯನ್ನ ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದು ಟ್ಯಾಕ್ಟರ್ ಗೆ ಕಟ್ಟಿ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ರಾಮದುರ್ಗ ತಾಲೂಕಿನ ಮುರಕಟನಾಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಘಟನೆ ಸಂಭವಿಸಿದೆ.

ಚುಂಚನೂರ ಗ್ರಾಮದ ಭೀಮಸಿ ಜೆಟ್ಟೆನ್ನವರ್ ಎಂಬಾತ ಮುರಕಟನಾಳದ ವಿವಾಹಿತ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದ.

ನಿನ್ನೆ ತಡರಾತ್ರಿ ಮನೆಯವರ ಕಣ್ತಪ್ಪಿಸಿ ಹೊರ ಹೊದಾಕೆ ಮುರಕಟನಾಳ ಗ್ರಾಮ ಹೊರವಲಯದ ಹೊಲದಲ್ಲಿ ಪ್ರಿಯಕರನನ್ನು ಭೇಟಿ ಮಾಡಿದ್ದಳು. ಅನುಮಾನಗೊಂಡು ಆಕೆಯ ಕುಟುಂಬಸ್ಥರು ಹಿಂಬಾಲಿಕೊಂಡು ಬಂದಿದ್ದರು. ಅನೈತಿಕ ಚಟುವಟಿಕೆ ನಡೆಸುತ್ತಿದ್ದಾಗಲೇ ಇಬ್ಬರನ್ನೂ ಹಿಡಿದು ಊರಿಗೆ ಕರೆತಂದರು.

ಅವರಿಬ್ಬರನ್ನೂ ಸತತ ನಾಲ್ಕು ಗಂಟೆ ಕಾಲ ಟ್ರ್ಯಾಕ್ಟರ್​ಗೆ ಕಟ್ಟಿಹಾಕಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


Spread the love

About Laxminews 24x7

Check Also

ಹೋಟೆಲ್‌ಗಳಿಗೆ 10 ದಿನ ಗ್ಯಾಸ್ ಸಮಸ್ಯೆ ಆಗುತ್ತೆ, ಸಹಿಸಿಕೊಳ್ಳಬೇಕು: ಮುನಿಯಪ್ಪ

Spread the loveಬೆಂಗಳೂರು: ಹೋಟೆಲ್‌ಗಳಿಗೆ ಕಮರ್ಷಿಯಲ್ ಗ್ಯಾಸ್ ಒಂದು ವಾರ, 10 ದಿನ ಸಮಸ್ಯೆ ಆಗಬಹುದು. ಅಲ್ಲಿವರೆಗೂ ಹೋಟೆಲ್‌ಗಳು ಸಹಿಸಿಕೊಳ್ಳಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ