ಬೆಂಗಳೂರು: ಬಿಹಾರಿ ಕಾರ್ಮಿಕರ ಗಲಾಟೆಯನ್ನು ತಡೆಯವುದು ಹರಸಾಹಸವನ್ನೇ ಪಟ್ಟಿದ್ದರು. ನಂತರ ಗಲಾಟೆ ಹತೋಟಿಗೆ ಬಂದಿತ್ತು. ಗಲಾಟೆ ನಿಯಂತ್ರಣದ ವಿಡಿಯೋ ಇದೀಗ ವೈರಲ್ ಆಗಿದ್ದು, ಗಲಾಟೆ ಸಮಯದಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಗಲಾಟೆ ಕಡಿಮೆ ಮಾಡಲು ಇನ್ಸ್ ಪೆಕ್ಟರ್ ಪ್ಲಾನ್ ಮಾಡಿ, ಮಾದನಾಯಕನಹಳ್ಳಿ ಠಾಣೆ ಸಿಪಿಐ ಸತ್ಯನಾರಾಯಣ ಅವರು ಗಲಾಟೆ ಸಮಯದಲ್ಲಿ ಜನಗಣ ಮನ ಹಾಡಿದ್ದಾರೆ. ಈ ವೇಳೆ ಇನ್ಸ್ ಪೆಕ್ಟರ್ ರೊಂದಿಗೆ ಬಿಹಾರಿ ವಲಸೆ ಕಾರ್ಮಿಕರು ಸಹ ರಾಷ್ಟ್ರಗೀತೆ ಹಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಲಸೆ ಕಾರ್ಮಿಕರ ಗಲಾಟೆ ನಿಯಂತ್ರಿಸಿದ ಪರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮೂರು ದಿನಗಳ ಹಿಂದೆ ನೆಲಮಂಗಲ ಸಮೀಪದ ಮಾದಾವಾರದ ಬಿಐಇಸಿ ಬಳಿ ಬಿಹಾರಿ ವಲಸೆ ಕಾರ್ಮಿಕರ ಗಲಾಟೆ ನಡೆದಿತ್ತು. ನಮ್ಮ ರಾಜ್ಯಕ್ಕೆ ಕಳುಹಿಸಿ ಕೊಡಿ ಎಂದು ಐದು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಈ ಸಮಯದಲ್ಲಿ ಪೀಣ್ಯ ಇನ್ಸ್‍ಪೆಕ್ಟರ್ ಮುದ್ದುರಾಜ್ ಮೇಲೆ ಬಿಹಾರಿಗಳು ಹಲ್ಲೆ ಮಾಡಿದ್ದರು. ನಂತರ ಗಲಾಟೆ ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
Laxmi News 24×7