Breaking News

ಸೇವಾದಳವನ್ನು ನಾಡಿನಾದ್ಯಂತ ಕಟ್ಟಿದ ಡಾ.ಎನ್.ಎಸ್.ಹರ್ಡೀಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ‘ಎಂದು ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

Spread the love

ಗೋಕಾಕ : ‘ ಸೇವಾದಳವನ್ನು ನಾಡಿನಾದ್ಯಂತ ಕಟ್ಟಿದ ಡಾ.ಎನ್.ಎಸ್.ಹರ್ಡೀಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ‘ಎಂದು ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

 

ಘಟಪ್ರಭಾದ ಡಾ.ಎನ್.ಎಸ್.ಹರ್ಡೀಕರ್ ಸೇವಾದಳ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಸೇವಾದಳದ ಪ್ರಪ್ರಥಮ ಮಹಿಳಾ ಸಮರ್ಥ್ 5 ದಿನದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

 

‘ಸೇವಾದಳ ಕೇಂದ್ರದಲ್ಲಿ ಹೆಚ್ಚು ಹೆಚ್ಚು ಕಾರ್ಯಕರ್ತರಿಗೆ ತರಬೇತಿ ನೀಡುವುದರ ಮೂಲಕ ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹಗಳನ್ನು ಸಾಮಾಜಿಕ ಆಚರಣೆಯಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದು, ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇವೆ ‘ ಎಂದರು.

 

ಕರ್ನಾಟಕ ಮಹಿಳಾ ಸೇವಾದಳದ ಅಧ್ಯಕ್ಷೆ ಕಲ್ಪನಾ ಜೋಷಿ ಶಿಬಿರದ ಕಮ್ಯಾಂಡರ್ ಆಗಿ ಕಾರ್ಯ ನಿರ್ವಹಿಸಿದರು. ಐದು ದಿನಗಳ ಶಿಬಿರದಲ್ಲಿ ಅಶ್ರಫ್, ಡಾ. ವಿಶ್ವನಾಥ್ ಚಿಂತಾಮಣಿ, ಕಿರಣ್ ಮೊರಾಸ್, ಮಹಾಲಿಂಗಪ್ಪ ಆಲಬಾಳ, ಡಾ.ಪ್ರದೀಪ್ ಮಾಲ್ಗುಡಿ, ಸುರೇಶ್ ಶಿಕಾರಿಪುರ ತರಗತಿಗಳನ್ನು ನಡೆಸಿಕೊಟ್ಟರು. ಶಿಬಿರದಲ್ಲಿ ಆಂಜನಪ್ಪ ಲೋಕಿಕೆರೆಯವರು ಗೀತೆಗಳ ಅಭ್ಯಾಸ ಮಾಡಿಸಿದರು. ಜೊತೆಗೆ, ಸೇವಾದಳಕ್ಕಾಗಿ ಹೊಸದಾಗಿ ಹಾಡನ್ನು ರಚಿಸಿ ಸಂಯೋಜಿಸಿದರು.

 

ಸಮಾರೋಪ ಸಮಾರಂಭದಲ್ಲಿ ಶಿಬಿರದ ಯಶಸ್ಸಿಗೆ ಕಾರಣಕರ್ತರಾದ ಸಂಪನ್ಮೂಲ ವ್ಯಕ್ತಿಗಳು ಮತ್ತು ಅತಿಥಿಗಳಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಡಾ. ಸ್ವಾತಿ ಘನಶ್ಯಾಮ್ ವೈದ್ಯ, ಕಲ್ಪನಾ ಜೋಷಿ, ಬಲರಾಂ ಸಿಂಗ್ ಬಡೋರಿಯಾ, ಕಿರಣ್ ಮೊರಾಸ್, ಡಿ.ಎನ್.ಶಿಂಧೆ, ಹನುಮಂತ್ ಪೋರಡ್ಡಿ, ಸುಜಾತಾ ಉಲ್ಲಾಳ್, ಅಶ್ರಫ್ ಮೊದಲಾದವರು ಭಾಗವಹಿಸಿದ್ದರು.


Spread the love

About Laxminews 24x7

Check Also

ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ

Spread the loveಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ