ಬೆಳಗಾವಿ : ಬೆಳಗಾವಿಯ ಪ್ರಯತ್ನ ಸಂಘಟನೆಯ ವತಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಲಗುವ ನಿರ್ಗತಿಕರಿಗೆ ರಗ್ಗು ಹಾಗೂ ಕಂಬಳಿಗಳನ್ನು ವಿತರಣೆ ಮಾಡಲಾಯಿತು.
ರಾತ್ರಿ ವೇಳೆ ನಗರದ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಚಳಿಯಲ್ಲಿ ನಡುಗುತ್ತ ಮಲಗಿದ್ದ ಸುಮಾರು 20 ನಿರ್ಗತಿಕರಿಗೆ ಕಂಬಳಿಗಳನ್ನು ವಿತರಿಸಲಾಯಿತು.
ವೃದ್ಧಾಶ್ರಮ, ಅನಾಥಾಶ್ರಮ, ಅಂಧ ಮಕ್ಕಳ ಶಾಲೆಗಳಿಗೆ ದೇಣಿಗೆ ಹಾಗೂ ಬಡ ಮಕ್ಕಳ ಶಾಲಾ ಶುಲ್ಕ ಭರಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತ ಬಂದಿರುವ ಪ್ರಯತ್ನ ಸಂಘಟನೆ ಈ ಬಾರಿ ನಿರ್ಗತಿಕರಿಗೆ ನೆರವಾಯಿತು.
ಈ ಸಂಧರ್ಭ ಸಂಘಟನೆಯ ಅಧ್ಯಕ್ಷೆ ಶಾಂತಾ ಆಚಾರ್ಯ, ಕಾರ್ಯಕರ್ತೆಯರಾದ ವೀಣಾ ಕುಲಕರ್ಣಿ, ಗೌರಿ ಸರ್ನೋಬತ್, ಶ್ವೇತಾ ಬಿಜಾಪುರೆ, ಪದ್ಮಾ ವೆರ್ಣೇಕರ್, ಸುನೀತಾ ಭಟ್, ವರದಾ ಭಟ್, ಆರತಿ ಭಟ್, ಅಜಯೇಶ್ವರಿ, ವೈಷ್ಣವಿ, ಸಾವನ್, ವೆಂಕಟೇಶ್ ಸರ್ನೋಬತ್, ನವೀನ್ ಭಟ್ , ಸುರೇಶ್ ಭಟ್ ಉಪಸ್ಥಿತರಿದ್ದರು.
Laxmi News 24×7