Breaking News

ಭಾರತದಲ್ಲಿ ಹಸಿರು ಹೈಡ್ರೋಜನ್ ಬೆಲೆ ಐತಿಹಾಸಿಕ ಮಟ್ಟಕ್ಕೆ ಇಳಿಕೆ – ಪ್ರಹ್ಲಾದ್ ಜೋಶಿ

Spread the love

ನವದೆಹಲಿ: ದೇಶದಲ್ಲಿ ಹಸಿರು ಹೈಡ್ರೋಜನ್ ಬೆಲೆ ಐತಿಹಾಸಿಕ ಮಟ್ಟಕ್ಕೆ ಇಳಿಕೆ ಕಂಡಿದೆ. 279ರೂ.ಯೊಂದಿಗೆ ಭಾರತ ಹಸಿರು ಹೈಡ್ರೋಜನ್ ಕ್ಷೇತ್ರದಲ್ಲಿ ಹೊಸ ಜಾಗತಿಕ ಮಾನದಂಡ ಸ್ಥಾಪಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಘೋಷಿಸಿದರು.

ಮುಂಬೈಯಲ್ಲಿ ಆಯೋಜಿಸಿದ್ದ “ಹವಾಮಾನ ಸಪ್ತಾಹ 2026” ಉದ್ದೇಶಿಸಿ ಮಾತನಾಡಿ, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಹಸಿರು ಹೈಡ್ರೋಜನ್ ಬೆಲೆ ಪ್ರತಿ ಕೆಜಿಗೆ 279ರೂ. ಕನಿಷ್ಠ ಮಟ್ಟಕ್ಕೆ ಇಳಿದಿದೆ. ಸೂರ್ಯಘರ್ ಯೋಜನೆಯಡಿ ಭಾರತ ಪ್ರಸ್ತುತ 30 ಲಕ್ಷ ಮನೆಗಳಿಗೆ ಸೌರ ವಿದ್ಯುತ್ ಕಲ್ಪಿಸುವ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ಮನೆಗಳಿಗೆ ಸೌರ ಮೇಲ್ಛಾವಣಿ ಮೂಲಕ ಉಚಿತ ವಿದ್ಯುತ್ ಕಲ್ಪಿಸಿದೆ ಎಂದರು. 

ಜಾಗತಿಕ ಹವಾಮಾನ ಸುಸ್ಥಿರತೆಯಲ್ಲಿ ಭಾರತ ಪ್ರಬಲ ಇಂಜಿನ್ ಆಗಿ ಕಾರ್ಯ ಸಾಧಿಸುತ್ತಿದ್ದು, `ಪಿಎಂ ಸೂರ್ಯಘರ್’ ಮತ್ತು `ಪಿಎಂ ಕುಸುಮ್’ ನಮ್ಮ ಸೌರ ಶಕ್ತಿಯ ಡಬಲ್ ಇಂಜಿನ್ ಆಗಿವೆ. PM ಕುಸುಮ್ ಮತ್ತು PM ಸೂರ್ಯಘರ್ ಅಳವಡಿಕೆ ಮೂಲಕ, ರೈತರು ಮತ್ತು ಸಾಮಾನ್ಯ ಕುಟುಂಬಗಳು ಸಹ ದೇಶದ ಶುದ್ಧ ಇಂಧನ ಪರಿವರ್ತನೆ ಪ್ರಯಾಣದಲ್ಲಿ ಸಕ್ರಿಯರಾಗುತ್ತಿದ್ದಾರೆಂದು ಹೆಮ್ಮೆ ವ್ಯಕ್ತಪಡಿಸಿದರು.

ಭಾರತ ಇಂದು ಹವಾಮಾನ ಕುರಿತಾದ ಜಾಗತಿಕ ಸಪ್ತಾಹ, ಸಮಾವೇಶ ಆಯೋಜಿಸುವ ಮಟ್ಟಕ್ಕೆ ಬೆಳೆದಿದೆ. ಮುಂಬೈಯಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮ ಮೊದಲ ಜಾಗತಿಕ ದಕ್ಷಿಣ ಸಮಾವೇಶವಾಗಿದೆ. ಇದಕ್ಕಾಗಿ ಮಹಾರಾuಟಿಜeಜಿiಟಿeಜಷ್ಟ್ರ ತಂಡವನ್ನು ಅಭಿನಂದಿಸುತ್ತೇನೆ. ಕರ್ನಾಟಕ ಮತ್ತು ಮಹಾರಾಷ್ಟ್ರ ವಿಶೇಷವಾಗಿ ಆರ್ಥಿಕತೆಯ ಮೂಲವಾಗಿವೆ. ಆರ್ಥಿಕತೆ ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ದೇಶವೇ ಅನುಸರಿಸುತ್ತದೆ. ಮುಂಬೈ ನಮ್ಮ ಆರ್ಥಿಕ ಚಟುವಟಿಕೆಯ ಪ್ರಮುಖ ಕೇಂದ್ರವಾಗಿದೆ ಎಂದರು.

ದೊಡ್ಡ ದೇಶವಾಗಿದ್ದರೂ ಭಾರತ ಈ ಹಿಂದೆ ಹವಾಮಾನ ಸಪ್ತಾಹ, ಹವಾಮಾನ ಸಮಾವೇಶ ಅಥವಾ ಸುಸ್ಥಿರ ಸಮಾವೇಶದಂತಹ ಕಾರ್ಯಕ್ರಮ ಆಯೋಜಿಸಿರಲಿಲ್ಲ. ಆದರೀಗ ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಹವಾಮಾನ ಸುಸ್ಥಿರತೆಯಲ್ಲಿ ದೇಶದಲ್ಲೀಗ ಮಹತ್ತರ ಬದಲಾವಣೆ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ, ನಾಯಕತ್ವದಲ್ಲಿ ಭಾರತ ಜಾಗತಿಕ ಹವಾಮಾನ ಸುಸ್ಥಿರತೆಯಲ್ಲಿ ನಿರ್ಣಾಯಕ ಹೆಜ್ಜೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಸೌರಶಕ್ತಿ ಒಂದು ಜನಾಂದೋಲನ ರೀತಿ ರೂಪಾಂತರಗೊಳ್ಳುತ್ತಿದೆ. ಪರಿಣಾಮ ಫಲಿತಾಂಶಗಳು ಗಮನಾರ್ಹವಾಗಿವೆ. ಮಹಾರಾಷ್ಟ್ರ ಇಂದು ಕೈಗಾರಿಕಾ ಮತ್ತು ಗೃಹಬಳಕೆ ವಿದ್ಯುತ್ ದರ ಅತ್ಯಂತ ಕಡಿಮೆ ಇರುವ ಭಾರತದ ಮೊದಲ ರಾಜ್ಯವಾಗಿ ನಿಂತಿದೆ. ಇದು ಭಾರತದ ಶುದ್ಧ ಇಂಧನ ಕ್ರಾಂತಿಗೆ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಹವಾಮಾನ ಸುಸ್ಥಿರತೆ ಸಮಾವೇಶದಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಸಚಿವರು, ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ದಯಾಮರಣ: ಸಾವಿನ ಮನೆಯತ್ತ ಹೊರಟ ಹರೀಶ್ ರಾಣಾಗೆ ಕಂಬನಿ ಮಿಡಿದ ಕುಟುಂಬ

Spread the loveದೆಹಲಿ: ‘ಹೋದವರು ಹೋದರು. ಇನ್ನು ಎಷ್ಟು ಅತ್ತರೂ ಅವರು ವಾಪಸ್‌ ಬರಲ್ಲ. ಮುಂದಿನ ಕಾರ್ಯ ನೋಡಿ’ – …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ