ಶಿವಮೊಗ್ಗದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಬಡ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಸಿಗಬೇಕಿದ್ದ ಸೌಲಭ್ಯಗಳನ್ನು ಉಪನಿರ್ದೇಶಕ ಗೋಪಿನಾಥ್ ಇಬ್ಬರು ಮಹಿಳೆಯರೊಂದಿಗೆ ಸೇರಿಕೊಂಡು ಭಾರೀ ಭ್ರಷ್ಟಾಚಾರವೆಸಗಿದ್ದಾನೆ. ಸದ್ಯಕ್ಕೆ ಒಂದೆರಡು ಪ್ರಕರಣಗಳಲ್ಲಿ ಮಾತ್ರವೇ ಲಕ್ಷಾಂತರ ರೂಪಾಯಿ ಅವ್ಯವಹಾರ ಬಯಲು ಆಗಿದೆ. ಇನ್ನೂ ಸಮಗ್ರ ತನಿಖೆ ಆದ್ರೆ ಗೋಪಿನಾಥನ ಕರ್ಮಕಾಂಡ ಮತ್ತಷ್ಟು ಬಯಲಿಗೆ ಬೀಳುವುದು ಗ್ಯಾರಂಟಿ.ಶಿವಮೊಗ್ಗ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಕಳೆದ ಕೆಲವು ವರ್ಷಗಳಿಂದ ಮಾಡಿರುವ ಗೋಲ್ ಮಾಲ್ ಕೊನೆಗೂ ಬಯಲಾಗಿದೆ. ಬಿಸಿಎಂ …
Read More »ಕೈಮುಗಿದು ಒಳಗೆ ಬಾ ವಾಕ್ಯ ಬದಲಾವಣೆ: ಮಣಿವಣ್ಣನ್ ಗಪ್ಚುಪ್, ಅಶೋಕ್ ಕೆಂಡಾಮಂಡಲ
ಬೆಂಗಳೂರು, (ಫೆಬ್ರವರಿ 19): ಕರ್ನಾಟಕದ ಎಲ್ಲ ವಸತಿ ಶಾಲೆಗಳ (Residential Schools) ಪ್ರವೇಶ ದ್ವಾರದ ‘ಜ್ಞಾನ ದೇಗುಲವಿದು, ಕೈಮುಗಿದು ಒಳಗೆ ಬಾ ಘೋಷ ವಾಕ್ಯವನ್ನು ಬದಲಾಯಿಸಿರುವ ಸಮಾಜ ಕಲ್ಯಾಣ ಇಲಾಖೆ (Department of Social Welfare) ಕ್ರಮಕ್ಕೆ ರಾಜ್ಯಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ತಪ್ಪನ್ನು ಸರಿಪಡಿಸಿಕೊಂಡಿದೆ. ಇನ್ನು ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ (manivannan) ಅವರನ್ನು ಮಾಧ್ಯಮಗಳು ಸ್ಪಷ್ಟನೆ ಕೇಳಿದ್ದಕ್ಕೆ …
Read More »ಗಲಾಟೆ ಪ್ರಕರಣವೊಂದರಲ್ಲಿ ವಕೀಲರ ಮೇಲೆ ಸುಳ್ಳು ಎಫ್‌ಐಆರ್ ಆರೋಪ: ಊಟ ಬಿಟ್ಟು ಬಂದು ಮನವಿ ಸ್ವೀಕರಿಸಿದ ಡಿಸಿ
ರಾಮನಗರ, ಫೆಬ್ರವರಿ 19: 40 ವಕೀಲರ(lawyers)ವಿರುದ್ಧ ದೂರು ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದ ಐಜೂರು ಸರ್ಕಲ್ ಬಳಿ ಸುಮಾರು 300ಕ್ಕೂ ಹೆಚ್ಚು ವಕೀಲರಿಂದ ಪ್ರತಿಭಟನಾ ರ‍್ಯಾಲಿ ಮಾಡಲಾಗಿದೆ. ಪಿಎಸ್ಐ ತನ್ವೀರ್ ಅಮಾನತಿಗೆ ಆಗ್ರಹಿಸಿ ರಾಮನಗರ ಜಿಲ್ಲಾಧಿಕಾರಿ ಕಚೇರಿವರೆಗೆ ವಕೀಲರ ಮೆರವಣಿಗೆ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಕೀಲರ ಪ್ರತಿಭಟನೆ ಮಾಡಿದ್ದು, ಡಿಸಿ ಊಟಕ್ಕೆ ಹೋಗಿದ್ದಾರೆ ಎಂದು ಸಿಬ್ಬಂದಿ ಹೇಳಿದ್ದಾರೆ. ನಾವು ಹಸಿದುಕೊಂಡು ಪ್ರತಿಭಟನೆ ಮಾಡುತ್ತಿದ್ದೇವೆ. ಅದ್ಹೇಗೆ ಅವರು ಊಟ ಮಾಡುತ್ತಾರೆ ಅಂತ …
Read More »ಯುಗಾದಿ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ-ಮಳೆ, ಧಾರ್ಮಿಕ ಮುಖಂಡನ ಸಾವಾಗಲಿದೆ: ಕೋಡಿಶ್ರೀ ಸ್ಫೋಟಕ ಭವಿಷ್ಯ
ಕೋಲಾರ, ಯುಗಾದಿ (Ugadi) ಕಳೆದ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (kodimath dr sivananda shivayogi rajendra swamiji) ಭವಿಷ್ಯ ನುಡಿದಿದ್ದಾರೆ. ಸದ್ಯ ಮಳೆ-ಬೆಳೆ ಇಲ್ಲದೇ ಕಂಗಾಲಾಗಿರುವ ರೈತರಿಗೆ ಒಂದು ಸಮಾಧಾನಕರ ಭವಿಷ್ಯವೊಂದನ್ನು ಹೇಳಿದ್ದಾರೆ. ಅಲ್ಲದೇ ಮತಾದಂತೆ ಹೆಚ್ಚಾಗುತ್ತದೆ, ಬಾಂಬ್ ಸ್ಫೋಟ, ಭೂಕಂಪ ಆಗುತ್ತೆ. ಧಾರ್ಮಿಕ ಮುಖಂಡನ ಸಾವು ಸಹ ಆಗಲಿದೆ ಎಂದು ಆಘಾತಕಾರಿ ಭವಿಷ್ಯ …
Read More »ಹುಬ್ಬಳ್ಳಿ-ಧಾರವಾಡ ಮಂದಿ ಪಾಲಿಕೆಗೆ ಅತಿ ಹೆಚ್ಚು ತೆರಿಗೆ ಕಟ್ಟಿ, ದಾಖಲೆ ಮಾಡಿದ್ದಾರೆ!
ರಾಜ್ಯದಲ್ಲಿಯೇ ಅತಿ ದೊಡ್ಡ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರ 108.50 ಕೋಟಿ ರೂ ಕರ ಸಂಗ್ರಹಿಸಿದೆ. ಇನ್ನೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಮಳಿಗೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಈ ಆರ್ಥಿಕ ವರ್ಷ ಮುಕ್ತಾಯವಾಗಲು ಇನ್ನೂ ಒಂದೂವರೆ ತಿಂಗಳಷ್ಟೇ ಬಾಕಿ ಇದೆ. ಜನ ಮತ್ತಷ್ಟು ಸ್ಪಂದಿಸಿದರೆ, ಪಾಲಿಕೆ ಗರಿಷ್ಠ ಗುರಿ ತಲುಪಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ ಅಧಿಕಾರಿಗಳು. ಯಾವುದೇ ದೇಶ, ರಾಜ್ಯ ಅಥವಾ ನಗರ …
Read More »ಕಲಬುರಗಿಯ ಹವಾ ಮಲ್ಲಿನಾಥ ಮುತ್ಯಾಗೆ ನ್ಯಾಯಾಂಗ ಬಂಧನ
ಕಲಬುರಗಿ, ಫೆಬ್ರವರಿ 19: ಕಲಬುರಗಿಯ ಹವಾ ಮಲ್ಲಿನಾಥ ಮುತ್ಯಾ(Mallinath Mutya)ಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕಲಬುರಗಿ 2 ನೇ ಜಿಲ್ಲಾ ಸತ್ರ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ. ಹವಾ ಮಲ್ಲಿನಾಥ ಮುತ್ಯಾ ಅವರ ಸಂಬಂಧಿ ಪ್ರಕಾಶ್ ಮೇಲೆ ಅಟ್ರಾಸಿಟಿ ಮತ್ತು ಅತ್ಯಾಚಾರ ಪ್ರಕರಣ, ಹವಾ ಮಲ್ಲಿನಾಥ ಮುತ್ಯಾ ವಿರುದ್ಧವೂ ಕುಮ್ಮಕ್ಕು ಆರೋಪ ಹಿನ್ನೆಲೆ 498/A, 506,109, 34 ಅಡಿ 2018 ರಲ್ಲಿ ಕಲಬುರಗಿಯ ಎಂ ಬಿ ನಗರ ಪೊಲೀಸ್ …
Read More »ಸದನದಲ್ಲಿ ಹಾಸಿಗೆ ಕೇಳಿದ ಆರಗ ಜ್ಞಾನೇಂದ್ರ!
ಬೆಂಗಳೂರು : ಸದನದಲ್ಲಿ ಊಟ ಮಾತ್ರವಲ್ಲ ಹಾಸಿಗೆ ದಿಂಬು ಸಹ ನೀಡಿ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮನವಿ ಮಾಡಿಕೊಂಡ ಸನ್ನಿವೇಶ ಸೋಮವಾರ ಅಧಿವೇಶನದ (Assembly session) ವೇಳೆ ನಡೆಯಿತು. ಸದನದಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆ. ಮಧ್ಯಾಹ್ನ ಊಟಕ್ಕೆಂದು ಹೊರಹೋದವರು ವಾಪಸ್ ಬರುವುದೇ ಇಲ್ಲ ಎಂದು ಆಕ್ಷೇಪಿಸಿದ ಸಭಾಪತಿ ಯು.ಟಿ ಖಾದರ್ ಸದಸ್ಯರ ವರ್ತನೆಯನ್ನು ಸುಧಾರಿಸಿಕೊಳ್ಳಬೇಕು ಎಂದರು. ಊಟಕ್ಕೆ ಯಾರೂ ಹೊರಗೆ ಹೋಗುವುದು ಬೇಡ. ಇಡೀ …
Read More »ತಾಂಡಾಗಳಲ್ಲಿ ಹೆಚ್ಚುತ್ತಿದೆ ಮತಾಂತರ: ಪ್ರಮೋದ್ ಮುತಾಲಿಕ್
ವಿಜಯಪುರ: ರಾಜ್ಯದಲ್ಲಿನ ತಾಂಡಾಗಳಿಗೆ ಕ್ರೈಸ್ತರು ಪ್ರವೇಶಿಸಿ ಮತಾಂತರ ಯತ್ನದಲ್ಲಿ ತೊಡಗಿದ್ದಾರೆ ಎಂದು ಶ್ರೀರಾಮ ಸೇನೆ ಸಂಘಟನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದರು. ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದೇ ರೀತಿ ಮತಾಂತರ ಮುಂದುವರಿದರೆ ವಿಶೇಷ ಪಡೆ ರಚನೆ ರಚಿಸಿ ತಡೆಯಲು ಮುಂದಾಗುವುದಾಗಿ ಎಚ್ಚರಿಸಿದ್ದಾರೆ. ನಿಮ್ಮ ಪ್ರಾರ್ಥನೆ ಚರ್ಚ್ ಒಳಗೆ ಇರಲಿ. ಹೊರಗಡೆ, ತಾಂಡಾಗಳಲ್ಲಿ ಮೋಸಮಾಡಿ ನೀವು ಮಾಡುವ ಕೆಲಸವನ್ನು ಏಸು ಒಪ್ಪುವುದಿಲ್ಲ ಎಂದರು. ನಮ್ಮ ಧರ್ಮ, ನಮ್ಮ …
Read More »35 ವರ್ಷ ಜೊತೆಗೆ ಸಂಸಾರ ಮಾಡಿದ್ದೀವಿ, 3 ವರ್ಷ ಆ ಕಡೆ ಹೋಗಿದ್ದರು
ಬೆಂಗಳೂರು: 35 ವರ್ಷ ಜೊತೆಗೆ ನಾವು ಸಂಸಾರ ಮಾಡಿದ್ದೀವಿ. ಇವಾಗ 3 ವರ್ಷ ಅಷ್ಟೇ ಆ ಕಡೆ ಹೋಗಿದ್ದರು ಎಂದು ಎಸ್ ಟಿ ಸೋಮಶೇಖರ್ ಜೊತೆಗಿನ ಫೋಟೋ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥನೆ ನೀಡಿದ್ದಾರೆ. ಮಂಗಳೂರಿನಲ್ಲಿ ಭಾನುವಾರ ನಡೆದ ಕರ್ಣಾಟಕ ಬ್ಯಾಂಕಿನ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಜೊತೆಯಾಗಿ ತೆರಳಿದರು. ಕಾಂಗ್ರೆಸ್ ಕಡೆ ಮುಖ ಮಾಡಿರುವ …
Read More »ಸದನದಲ್ಲೂ ಮೊಳಗಿದ ದಲಿತ ಸಿಎಂ, ಪಿಎಂ ಕೂಗು..!
ಬೆಂಗಳೂರು: ಸಹಕಾರಿ ಕಾನೂನಿಗೆ ತಿದ್ದುಪಡಿ ಚರ್ಚೆ ವೇಳೆ ದಲಿತ ಸಿಎಂ ಮತ್ತು ಪಿಎಂ ಕೂಗು ಮೊಳಗಿತು. ಮಳವಳ್ಳಿ ಶಾಸಕ ನಾರಾಯಣಸ್ವಾಮಿ ಮಾತನಾಡುವಾಗ ದಲಿತರು ಮೇಲೆ ಬರಬೇಕು. ಅದಕ್ಕೆ ಮೀಸಲಾತಿ ಪೂರಕ ಎಂದು ವಾದ ಮಂಡಿಸಿದರು. ಈ ವೇಳೆ ಮಧ್ಯ ಪ್ರವೇಶಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನೀವು ಡಾ. ಜಿ. ಪರಮೇಶ್ವರ್ ಅವರನ್ನು ಸಿಎಂ ಮಾಡಿದರೆ ತಾವು ಬೆಂಬಲಿಸಿ ಮತ ಹಾಕುವುದಾಗಿ ಯತ್ನಾಳ್ ಅಬ್ಬರಿಸಿದರು. ಇದಕ್ಕೆ ನಿಮಗೆ ಧಮ್ …
Read More »