ಬೆಂಗಳೂರು: ರಾಜರಾಜೇಶ್ವರಿನಗರದಲ್ಲಿ ಸೋಮವಾರ ಮತ್ತು ಮಂಗಳವಾರ ಚಿರತೆ ಕಾಣಿಸಿಕೊಂಡಿದೆ ಎಂದು ನಿವಾಸಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದರು. ನಂತರ ಚಿರತೆಗಾಗಿ ಶೋಧ ಕಾರ್ಯ ಆರಂಭಿಸಿದರು. ಚಿರತೆ ಕಾಣಿಸಿಕೊಂಡಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ಶೋಧ ಕಾರ್ಯಾಚರಣೆ ಆರಂಭಿಸಿದರು. ಆದರೆ ಚಿರತೆ ಬದಲು ಈ ಪ್ರದೇಶದಲ್ಲಿ ನಾಯಿ ಪತ್ತೆಯಾಗಿದ್ದು ನಾವು ಈಗ ನಾಯಿಯ ಮಾಲೀಕರನ್ನು ಪತ್ತೆ ಮಾಡಬೇಕೇ? ಎಂದು ಅರಣ್ಯಾಧಿಕಾರಿಯೊಬ್ಬರು ಬೇಸರ ವ್ಯಕ್ತ ಪಡಿಸಿದ್ದಾರೆ. ಫೆಬ್ರವರಿ …
Read More »ಮರಳಿ ‘ಕೈ’ ಹಿಡಿಯುತ್ತಾರಾ ಮಾಜಿ ಸಚಿವ ಡಾ. ಕೆ ಸುಧಾಕರ್:
ಬೆಂಗಳೂರು, ಫೆಬ್ರವರಿ 22: ಮಾಜಿ ಸಚಿವ ಡಾ. ಕೆ ಸುಧಾಕರ್ (K Sudhakar) ಕಾಂಗ್ರೆಸ್‌ಗೆ (Congress) ವಾಪಸಾಗುವ ಬಗ್ಗೆ ‘ಕೈ’ ಪಾಳೆಯದಲ್ಲಿ ಚರ್ಚೆ ಜೋರಾಗಿದೆ. ಈ ವಿಚಾರವಾಗಿ ಕೆಲ ದಿನಗಳ ಹಿಂದೆ ಚಿಕ್ಕಬಳ್ಳಾಪುರ (Chikkaballapur) ನಾಯಕರ ಜೊತೆ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸುಧಾಕರ್ ಅವರನ್ನು ಮರಳಿ ಪಕ್ಷಕ್ಕೆ ಕರಿಸಿಕೊಳ್ಳುವ ಬಗ್ಗೆ ಚಿಕ್ಕಬಳ್ಳಾಪುರ ನಾಯಕರಿಂದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅಭಿಪ್ರಾಯ ಸಂಗ್ರಹಿಸಿದ್ದಾರೆ. …
Read More »ಶಾಲೆಗಳಿಂದ 100 ಮೀ. ವ್ಯಾಪ್ತಿಯಲ್ಲಿ ಸಿಗರೇಟ್ ನಿಷೇಧ, ದಂಡ ಹೆಚ್ಚಳ
ಬೆಂಗಳೂರು, ಫೆಬ್ರವರಿ 21: ಬೆಂಗಳೂರು, (ಫೆಬ್ರವರಿ 21): ಸಿಗರೇಟ್ಗಳ (cigarettes )ಮತ್ತು ಇತರೆ ತಂಬಾಕು (Tobacco) ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಮಯ) (ಕರ್ನಾಟಕ ತಿದ್ದುಪಡಿ) ವಿಧೇಯಕ ಇಂದು (ಫೆ.21) ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳಿಂದ (Schools) ನೂರು ಮೀಟರ್ ವ್ಯಾಪ್ತಿಯಲ್ಲಿ ಸಿಗರೇಟ್ ಮಾರಾಟ ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡದ ಪ್ರಮಾಣ 100 ರೂ. …
Read More »ಕುಮಾರಸ್ವಾಮಿಯಂತೆ ನಂಗೂ ಏಕವಚನದಲ್ಲಿ ಮಾತಾಡಲು ಬರುತ್ತೆ:ಡಿಕೆ ಸುರೇಶ್
ವಕೀಲರ ಪ್ರತಿಭಟನೆ ರಾಜಕೀಯಕ್ಕೆ ಬಳಸಿಕೊಳ್ಳುವ ಕುತಂತ್ರ ಕುಮಾರಸ್ವಾಮಿ ಮತ್ತು ಅಶೋಕ ಮಾಡಿದ್ದಾರೆ, ಕುಮಾರಸ್ವಾಮಿಯಂತೆ ತನಗೂ ಏಕವಚನದಲ್ಲಿ ಮಾತಾಡಲು ಬರುತ್ತದೆ, ಸಮಯ ಬಂದಾಗ ಹಾಗೆ ಮಾತಾಡ್ತೀನಿ ಹೋಗಿ ‘ಅವನಿಗೆ’ ಹೇಳಿ ಅಂತ ಮಾಧ್ಯಮದವರಿಗೆ ಹೇಳುತ್ತಾರೆ.
Read More »ಆಸ್ತಿ ವಿವಾದ: ರಾಜಿ ಸಂಧಾನ ಮಾಡಿದ್ರೂ ತಮ್ಮನನ್ನೇ ಕೊಂದ ಅಣ್ಣ
ಧಾರವಾಡ, ಫೆ.21: ಆಸ್ತಿ ವಿವಾದ ಸಂಬಂಧ ಎರಡು ಗುಂಪುಗಳು ಬಡಿದಾಡಿಕೊಂಡು ಚಿಕಿತ್ಸೆ ಫಲಕಾರಿಯಾಗದೇ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಧಾರವಾಡ(Dharwad) ತಾಲೂಕಿನತಲವಾಯಿಗ್ರಾಮದಲ್ಲಿ ನಡೆದಿದೆ. ಆಶೋಕ ಕಮ್ಮಾರ್(45) ಮೃತ ವ್ಯಕ್ತಿ. ಇನ್ನೊಬ್ಬ ಫಕೀರಪ್ಪ(50) ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ನಡೆದಿದೆ. ಇನ್ನು ಮೃತನ ಸಂಬಂಧಿಕರ ಗೋಳಾಟ ಮುಗಿಲುಮುಟ್ಟಿದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆಸ್ತಿಗಾಗಿ ತಮ್ಮನನ್ನೇ ಕೊಂದು ಹಾಕಿದ ಅಣ್ಣ ಮನೆ, …
Read More »ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ
ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ ಕೊಪ್ಪಳ, ಫೆ.21: ಕೊಪ್ಪಳ ಜಿಲ್ಲಾ ಆಸ್ಪತ್ರೆ(Koppal District Hospital) ಜಿಲ್ಲೆಯಲ್ಲಿರುವ ಏಕೈಕ ಸರ್ಕಾರಿ ದೊಡ್ಡ ಆಸ್ಪತ್ರೆ. ಕೊಪ್ಪಳ ವೈದ್ಯಕೀಯ ಕಾಲೇಜಿನ ಅಧೀನದಲ್ಲಿರುವ ಈ ಆಸ್ಪತ್ರೆಗೆಕೊಪ್ಪಳ ಜಿಲ್ಲೆಮಾತ್ರವಲ್ಲ, ಸುತ್ತಮುತ್ತಲಿನ ವಿಜಯನಗರ, ರಾಯಚೂರು ಜಿಲ್ಲೆಯ ಅನೇಕ ತಾಲೂಕಿನಿಂದಲೂ ಪ್ರತಿನಿತ್ಯ ನೂರಾರು ರೋಗಿಗಳು ಬರುತ್ತಾರೆ. ಬೇರೆ ಆಸ್ಪತ್ರೆಗೆ ಹೋಲಿಸಿದರೆ ಇಲ್ಲಿ ತಕ್ಕಮಟ್ಟಿನ ಉತ್ತಮ ಚಿಕಿತ್ಸೆ ಸಿಗುತ್ತದೆ. ಹೀಗಾಗಿ ಹೆಚ್ಚಿನ ರೋಗಿಗಳು ತಮ್ಮ ಅನೇಕ ಖಾಯಿಲೆಗಳ ಚಿಕಿತ್ಸೆಗಾಗಿ ಕೊಪ್ಪಳ …
Read More »ನಾನು ದೆಹಲಿಗೆ ಟಿಕೆಟ್ ಕೇಳಲು ಹೋಗಿಲ್ಲ, ಪಕ್ಷದ ಸಭೆಗಾಗಿ ಹೋಗಿದ್ದೆ: ಸಂಸದ ಸಿದ್ದೇಶ್ವರ ಸ್ಪಷ್ಟನೆ
ದಾವಣಗೆರೆ, ಫೆಬ್ರವರಿ 21: ನಾನು ದೆಹಲಿಗೆ ಟಿಕೆಟ್ ಕೇಳಲು ಹೋಗಿಲ್ಲ, ಪಕ್ಷದ ಸಭೆಗಾಗಿ ಹೋಗಿದ್ದೆ ಎಂದು ಬಿಜೆಪಿ ಸಂಸದ ಸಿದ್ದೇಶ್ವರ(GM Siddeshwara)ಸ್ಪಷ್ಟನೆ ನೀಡಿದ್ದಾರೆ. ದಾವಣಗೆರೆ ತಾಲೂಕಿನ ವಡ್ಡಿನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ದಾವಣಗೆರೆ ಕ್ಷೇತ್ರಕ್ಕೆ ಟಿಕೆಟ್ ಬೇಡಿಕೆ ಮೊದಲಿನಿಂದಲೂ ಇದೆ. ಆದರೆ ಈ ಬಾರಿ ಆಕಾಂಕ್ಷಿಗಳ ಪಟ್ಟಿ ಸ್ವಲ್ಪ ಹೆಚ್ಚಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಈ ಬಾರಿಯೂ ನನಗೆ ಕೊಡುತ್ತಾರೆ. ಜನರ ಆಶೀರ್ವಾದ ಇದ್ದರೇ 5ನೇ ಬಾರಿ ಸಂಸದನಾಗುವೆ. …
Read More »ಎಸಿಬಿ ರದ್ದು: ಎಸಿಬಿಯಲ್ಲಿದ್ದ ಹುದ್ದೆಗಳು ಲೋಕಾಯಕ್ತ, ಪೊಲೀಸ್ ಇಲಾಖೆಗಳಿಗೆ ವರ್ಗಾವಣೆ
ಬೆಂಗಳೂರು, ಫೆ.21: ಹೈಕೋರ್ಟ್ನಿಂದ ಭ್ರಷ್ಟಾಚಾರ ನಿಗ್ರಹ ದಳ(ACB) ರದ್ದು ಹಿನ್ನೆಲೆ ಎಸಿಬಿಯಲ್ಲಿದ್ದ ಹುದ್ದೆಗಳನ್ನ ಲೋಕಾಯುಕ್ತ ಸಂಸ್ಥೆ ಮತ್ತು ಪೊಲೀಸ್ ಇಲಾಖೆಗಳಿಗೆ ಸರ್ಕಾರವರ್ಗಾವಣೆಮಾಡಿದೆ. ಎಸಿಬಿಯಲ್ಲಿದ್ದ ಬರೊಬ್ಬರಿ 524 ಹುದ್ದೆಗಳನ್ನ ವಿಂಗಡಿಸಿ, ಎರಡು ಇಲಾಖೆಗೆ ವರ್ಗಾಹಿಸಲಾಗಿದೆ. 2022ರ ಆಗಸ್ಟ್.11 ರಂದು ಎಸಿಬಿ ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿತ್ತು. ಎಸಿಬಿ ರದ್ದು ಹಿನ್ನೆಲೆ ಅಲ್ಲಿ ಇರುವಂತಹ ಹುದ್ದೆಗಳು ಖಾಲಿಯಾಗಿತ್ತು. ಲೋಕಾಯುಕ್ತಕ್ಕೆ 266, ಪೊಲೀಸ್ ಇಲಾಖೆಗೆ 258 ಹುದ್ದೆಗಳ ವರ್ಗಾವಣೆ ಇದೀಗ ಲೋಕಾಯುಕ್ತ ಸಂಸ್ಥೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ …
Read More »ನಕಲಿ ಛಾಪಾ ಕಾಗದ ಬಳಸಿ ಭೂ ಕಬಳಿಕೆ
ಬೆಳಗಾವಿ, ಫೆಬ್ರವರಿ 21: ಕರೀಮ್ ಲಾಲ್ ತೆಲಗಿ ನಕಲಿ ಛಾಪಾ ಕಾಗದ ಹಗರಣ ಬಳಿಕ, ಬೆಳಗಾವಿಯಲ್ಲಿ (Belagavi) ಮತ್ತೊಂದು ನಕಲಿ ಬಾಂಡ್ (Fake Bond) ತಯಾರಿಸಿ ವಂಚಿಸುವ ಗ್ಯಾಂಗ್ ಆಕ್ಟೀವ್ ಆಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ನಕಲಿ ಛಾಪಾ ಕಾಗದದ ಮೂಲಕ ದಾಖಲೆಗಳನ್ನು ಸೃಷ್ಟಿ ಅಕ್ರಮವಾಗಿ ಭೂಮಿಯನ್ನು ಕಬಳಿಕೆ ಮಾಡಿಕೊಂಡ ದಂಧೆ ಬೆಳಗಾವಿಯಲ್ಲಿ ವರದಿಯಾಗಿದೆ. ಯರಗಟ್ಟಿ (Yaragatti) ತಾಲೂಕಿನ ಮಾಡಮಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಮರೇಶ ಹೊಸಮನಿ ಎಂಬುವರಿಗೆ ಸೇರಿದ ಒಟ್ಟು …
Read More »ಟಿವಿ9 ಮರಾಠಿ ವಾಹಿನಿಯ ಮುಖ್ಯಸ್ಥ ಅಂತಾ ಹೇಳಿಕೊಂಡು ಬೆಳಗಾವಿ ಜಿಲ್ಲೆಯ ಅಥಣಿ ಭಾಗದಲ್ಲಿ ಅಡ್ಡಾಡುತ್ತಿದ್ದ ರಮಜಾನ್ ಸುಭಾನ್ ಮುಜಾವರ್ ಎಂಬ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಾ
ಬೆಳಗಾವಿ, ಫೆಬ್ರವರಿ 20: ತಾನು ಟಿವಿ9 ಮರಾಠಿ ವಾಹಿನಿಯ ಮುಖ್ಯಸ್ಥ ಅಂತಾ ಹೇಳಿಕೊಂಡು ಬೆಳಗಾವಿ ಜಿಲ್ಲೆಯ ಅಥಣಿ ಭಾಗದಲ್ಲಿ ಅಡ್ಡಾಡುತ್ತಿದ್ದ ರಮಜಾನ್ ಸುಭಾನ್ ಮುಜಾವರ್ ಎಂಬ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಅಥಣಿ ತಾಲೂಕಿನಲ್ಲಿ ಕೆಲ ದಿನಗಳಿಂದ ಮಹಾರಾಷ್ಟ್ರ ಪಶ್ಚಿಮ ಭಾಗದ ಮರಾಠಿ ವಾಹಿನಿ ಮುಖ್ಯಸ್ಥ ಅಂತಾ ರಮಜಾನ್ ಹೇಳಿಕೊಂಡು ಓಡಾಡುತ್ತಿದ್ದ. ಇದನ್ನ ನಮ್ಮ ಬೆಳಗಾವಿ ಪ್ರತಿನಿಧಿ ಹಿರಿಯ ವರದಿಗಾರ ಸಹದೇವ ಮಾನೆ ಗಂಭೀರವಾಗಿ ಪರಿಗಣಿಸಿದ್ದರು. …
Read More »