ಬೆಂಗಳೂರು: ಲೋಕಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ. ಕೆ. ಸುರೇಶ್ ವಿರುದ್ಧ ಮತದಾರರಿಗೆ ಕುಕ್ಕರ್ ಆಮಿಷದ ಆರೋಪ ಕೇಳಿಬಂದಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಬಿಜೆಪಿ, ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದ ಬ್ರದರ್ಸ್ ಗಳ ಬ್ರದರ್ ರಿಂದ ಕುಕ್ಕರ್ ಹಂಚಲಾಗುತ್ತಿದೆ. ದೇಶ ವಿಭಜನೆ ಮಾಡುವ ಸಂಚು ರೂಪಿಸಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಅವರಿಗೆ ಚುನಾವಣೆ ಘೋಷಣೆ ಮುನ್ನವೇ …
Read More »ಲೋಕಸಭೆ ಚುನಾವಣೆಗೆ ಮುನ್ನ ‘ಹಿಂದಿನ ತಪ್ಪುಗಳನ್ನು’ ಸರಿಪಡಿಸಿಕೊಳ್ಳಲು ರಾಜ್ಯ ಬಿಜೆಪಿ ಮುಂದು!
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ನಾಯಕರು ಶುಕ್ರವಾರ ಚಿಂತನ-ಮಂಥನ ನಡೆಸಿದ್ದು, ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮಾಡಿದ ತಪ್ಪುಗಳು ಮರುಕಳಿಸದಂತೆ ನಿರ್ಧರಿಸಿದ್ದಾರೆ, ವಿಶೇಷವಾಗಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಕೋಟಾದ ಸೂಕ್ಷ್ಮ ವಿಷಯದ ಬಗ್ಗೆ ಕಾಳಜಿ ವಹಿಸಲು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರವು ಈ ಸಮುದಾಯಗಳ ಕೋಟಾವನ್ನು ವರ್ಗೀಕರಿಸಿತ್ತು, ಆದರೆ ಕೇಸರಿ ಪಕ್ಷವು ಕೇವಲ 66 ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಜೆಡಿಎಸ್ …
Read More »ದೆಹಲಿಯಲ್ಲಿ ಜಂಟಿಯಾಗಿ ಕಣಕ್ಕೆ ಇಳಿಯಲಿದೆ ಆಪ್, ಕಾಂಗ್ರೆಸ್
ಹೊಸದಿಲ್ಲಿ: ಇಂಡಿಯಾ ಒಕ್ಕೂಟದ (INDIA bloc) ಆಮ್ ಆದ್ಮಿ ಪಕ್ಷ (AAP) ಮತ್ತು ಕಾಂಗ್ರೆಸ್ (congress) ನಡುವೆ ದೆಹಲಿಯ (delhi) ಲೋಕಸಭಾ (loksabha) ಸ್ಥಾನಗಳ ಸೀಟು ಹಂಚಿಕೆ ಒಪ್ಪಂದ ಅಂತಿಮಗೊಳಿಸಲಾಗಿದೆ. ಆಪ್ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಈ ಬಗ್ಗೆ ಎರಡೂ ಪಕ್ಷಗಳು ಜಂಟಿಯಾಗಿ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿವೆ. ಎಎಪಿ ಅಭ್ಯರ್ಥಿಗಳು ಹೊಸದಿಲ್ಲಿ (New Delhi), ದಕ್ಷಿಣ ದೆಹಲಿ (South Delhi), ಪಶ್ಚಿಮ …
Read More »ಲೋಕಸಭಾ ಚುನಾವಣೆ 2024: ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಬೆಳಗಾವಿ ಟಿಕೆಟ್; ಸತೀಶ್ ಜಾರಕಿಹೊಳಿ
ಬೆಳಗಾವಿ, ಫೆಬ್ರವರಿ 24: ಲೋಕಸಭೆ ಚುನಾವಣೆ (Lok Sabha Election) ಹತ್ತಿರವಾಗುತ್ತಿದ್ದು, ಕಣಕ್ಕೆ ಇಳಿಸಲು ಕಾಂಗ್ರೆಸ್ (Congress) ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ (Belagavi Lok Sabha Constituency) ನಾನಾಗಲಿ ಅಥವಾ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ (Chikkodi Lok Sabha Constituency) ನನ್ನ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಯಾಗಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಸ್ಪಷ್ಟಪಡಿಸಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಕುಟುಂಬದ ಯಾರನ್ನೂ ಕಣಕ್ಕಿಳಿಸುವ ಯೋಚನೆ ಇಲ್ಲ ಎಂದರು. ನಾವು ಸಾಮಾನ್ಯ ಕಾರ್ಯಕರ್ತನನ್ನು …
Read More »ಇಂಡಿಯಾ ಮೈತ್ರಿಕೂಟ ಹೊಸ ಬಾಟಲಿಯಲ್ಲಿನ ಹಳೆಯ ವೈನ್: ಮೋದಿ ವ್ಯಂಗ್ಯ
ಇಂಡಿಯಾ ಮೈತ್ರಿಕೂಟ ಹೊಸ ಬಾಟಲಿಯಲ್ಲಿನ ಹಳೆಯ ವೈನ್: ಮೋದಿ ವ್ಯಂಗ್ಯ ಲಕ್ನೋ : ತಮ್ಮ ವಿರುದ್ಧ ಒಗ್ಗೂಡುತ್ತಿರುವ ಇಂಡಿಯಾ ಮೈತ್ರಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಅದೊಂದು ಹೊಸ ಬಾಟಲಿಯಲ್ಲಿರುವ ಹಳೆಯ ವೈನ್ ಎಂದು ವ್ಯಂಗ್ಯವಾಡಿದ್ದಾರೆ. ಶುಕ್ರವಾರ ವಾರಣಾಸಿಯಲ್ಲಿ ಮಾತನಾಡಿರುವ ಮೋದಿ, ಅವರು ಪ್ರತಿ ಚುನಾವಣೆಗೂ ಮುನ್ನ ಒಗ್ಗೂಡುತ್ತಾರೆ ಮತ್ತು ಗೆಲುವು ಪಡೆಯುವಲ್ಲಿ ವಿಫಲವಾದಾಗ ಪರಸ್ಪರ ನಿಂದಿಸಿಕೊಳ್ಳುತ್ತಾರೆ. ಅವರು ಒಂದು ರೀತಿ ಹೊಸ ಬಾಟಲಿಯಲ್ಲಿರುವ ಹಳೆಯ ವೈನ್ʼನಂತೆ …
Read More »ಸಂವಿಧಾನಕ್ಕೆ ಅಪಾಯವಾದರೆ ನಮ್ಮೆಲ್ಲರ ನಾಶ – ಸಿಎಂ
ಬೆಂಗಳೂರು : ಸಂವಿಧಾನಕ್ಕೆ (Constitution) ಅಪಾಯ ಒದಗುವುದನ್ನು ನಾವು ಯಾರೂ ಸಹಿಸಿಕೊಳ್ಳಬಾರದು. ಸಂವಿಧಾನ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ. ಆದರೆ ಸಂವಿಧಾನಕ್ಕೆ ಧಕ್ಕೆ ಒದಗಿದರೆ ನಾವು ನಾಶವಾಗುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು. ಶನಿವಾರ ನಡೆದ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ದಿನವನ್ನು (Constitution and National Unity Convention 2024) ಉದ್ಘಾಟಿಸಿ ಮಾತನಾಡಿದ ಅವರು, ಸಮಾನತೆ, ಸ್ವಾತಂತ್ರ್ಯ. ಭ್ರಾತೃತ್ವ ಮೂರು ಸಂವಿಧಾನದ ಮುಖ್ಯ ಅಂಶಗಳಾಗಿವೆ. ಇದನ್ನು ಒಪ್ಪದವರು …
Read More »ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ RSS ಬ್ಯಾನ್ ಮಾಡಿದ್ದು: ಸಚಿವ ಸಂತೋಷ್ ಲಾಡ್
ಹುಬ್ಬಳ್ಳಿ, ಫೆಬ್ರವರಿ 24: ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರೇ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅನ್ನು ಬ್ಯಾನ್ ಮಾಡಿದ್ದರು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಸುಳ್ಳು ಹೇಳುತಿಲ್ಲ, ಬೇಕಿದ್ದರೆ ಬಿಜೆಪಿಯವರನ್ನು ಕೇಳಿ. ದಾಖಲೆ ತೆಗದು ನೋಡಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ಆರ್ಎಸ್ಎಸ್ ಬ್ಯಾನ್ ಮಾಡಿದ್ದು. ಇದೀಗ ಅವರೇ ಸರ್ದಾರ್ ವಲ್ಲಭಭಾಯಿ ಪಟೇಲ್ರ ಪ್ರತಿಮೆ …
Read More »ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..
! ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲ್ಲೂಕಿನ ಗಡಾ ಗ್ರಾಮದ ಶ್ರೀ ಕರೇಮ್ಮಾ ದೇವಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ರಾದ ಸಂತೋಷ …
Read More »ಗಮನ ಸೆಳೆದ ತರಕಾರಿಯಿಂದ ಬನಶಂಕರಿ ದೇವಿಯ ಪೂಜೆ
ರಬಕವಿ ಬನಹಟ್ಟಿ: ಇಲ್ಲಿನ ಹಳೆಯ ನೀರಿನ ಟ್ಯಾಂಕ್ ಹತ್ತಿರದ ಬನಶಂಕರಿ ದೇವಸ್ಥಾನದ ಜಾತ್ರೆಯ ಅಂಗವಾಗಿ ಶುಕ್ರವಾರ ದೇವಿಗೆ ವಿಶೇಷವಾದ ತರಕಾರಿ ಪೂಜೆಯನ್ನು ಸಲ್ಲಿಸಲಾಯಿತು. ಒಟ್ಟು 60ಕ್ಕೂ ಹೆಚ್ಚು ವಿವಿಧ ರೀತಿಯ ತರಕಾರಿಗಳನ್ನು ತಂದು ದೇವಿಗೆ ಪೂಜೆಯನ್ನು ಸಲ್ಲಿಸಲಾಯಿತು. ಮಧ್ಯ ರಾತ್ರಿ 12ಕ್ಕೆ ಆರಂಭಗೊಂಡ ತರಕಾರಿ ಅಲಂಕಾರ ಬೆಳಗಿನ ಜಾವದವರೆಗೆ ನಡೆಯಿತು. ಜಾತ್ರೆಯ ಅಂಗವಾಗಿ ಶನಿವಾರ ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಪೂಜೆ, ಹೋಮ, ಸಕಲವಾಧ್ಯ ಮೇಳದೊಂದಿಗೆ ಶ್ರೀ ಬನಶಕರಿದೇವಿ ಪಲ್ಲಕ್ಕಿ ಉತ್ಸವ, ಮುತ್ತೈದೆಯರಿಗೆ …
Read More »ಆಗಸ್ಟ್ ನಿಂದ Gmail ಸ್ಥಗಿತ? ಸ್ಪಷ್ಟನೆ ನೀಡಿದ ಗೂಗಲ್
ಹೊಸದಿಲ್ಲಿ: ಪ್ರಸಿದ್ಧ ಸಂವಹನ ಮಾಧ್ಯಮ ಜಿಮೇಲ್ ಸ್ಥಗಿತವಾಗುತ್ತದೆ ಎನ್ನುವ ಅಂತೆ ಕಂತೆಗಳ ಸುದ್ದಿಗಳ ನಡುವೆ ಮಾತೃಸಂಸ್ಥೆ ಗೂಗಲ್ ಇಂದು ಇದರ ಬಗ್ಗೆ ಸ್ಪಷ್ಟನೆ ನೀಡಿದೆ. ಜಿಮೇಲ್ ಯಾವುದೇ ಕಾರಣಕ್ಕೂ ರದ್ದಾಗುತ್ತಿಲ್ಲ ಎಂದು ಖಚಿತ ಪಡಿಸಿದೆ. ಗೂಗಲ್ ಸಂಸ್ಥೆಯು ಶೀಘ್ರದಲ್ಲಿಯೇ ಜಿಮೇಲ್ ನ್ನು ಸ್ಥಗಿತಗೊಳಿಸುತ್ತದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಪೋಸ್ಟ್ ನಲ್ಲಿ ಗೂಗಲ್ ಸಂಸ್ಥೆಯ ಇಮೇಲ್ ಒಂದರ ಸ್ಕ್ರೀನ್ ಶಾಟ್ ಕೂಡಾ ಹರಿದಾಡಿತ್ತು. ಇದರ ಬಳಕೆದಾರರ ಆತಂಕಕ್ಕೆ …
Read More »