Breaking News

ನನ್ನ ಎದುರು ಚುನಾವಣೆಗೆ ಸ್ಪರ್ಧೆ ಮಾಡುವ ಬಿಜೆಪಿಯ ಆಕಾಂಕ್ಷಿಗಳಿದ್ರೆ ಬನ್ನಿ. ಈಗಲೇ ಬನ್ನಿ, ಧಮ್ ಇದ್ರೆ: ಅನಂತ ಕುಮಾರ್ ಹೆಗಡೆ

ಕಾರವಾರ: ನನ್ನ ಎದುರು ಚುನಾವಣೆಗೆ ಸ್ಪರ್ಧೆ ಮಾಡುವ ಬಿಜೆಪಿಯ ಆಕಾಂಕ್ಷಿಗಳಿದ್ರೆ (BJP Ticket Aspiriant) ಬನ್ನಿ. ಈಗಲೇ ಬನ್ನಿ, ಧಮ್ ಇದ್ರೆ ಬನ್ನಿ ಎಂದು ಸಂಸದ ಅನಂತ ಕುಮಾರ್ ಹೆಗಡೆ (MP Ananthkumar Hegde) ಕುರ್ಚಿ ಹಿಡಿದಿರುವ ಘಟನೆ ನಡೆದಿದೆ. ಭಟ್ಕಳದ ಮಾವಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮದಲ್ಲಿ (BJP Meeting) ಕುರ್ಚಿ ಮೇಲೆತ್ತಿ ಕಾರ್ಯಕರ್ತರ ಧೈರ್ಯವನ್ನು ಸಂಸದ ಅನಂತ ಕುಮಾರ್ ಹೆಗಡೆ ಪ್ರಶ್ನೆ ಮಾಡುವಂತೆ ಕಾಣಿಸುತ್ತಿತ್ತು.

Read More »

ವಯನಾಡಿನಲ್ಲಿ ವ್ಯಕ್ತಿಯ ಹತ್ಯೆ ಮಾಡಿದ್ದ ಕಾಡಾನೆ ಸೆರೆಗೆ ಕೊಡಗಿನಲ್ಲಿ ಕಾರ್ಯಾಚರಣೆ!

ಮಡಿಕೇರಿ, ಮಾರ್ಚ್​ 5: ಕೇರಳದ ವಯನಾಡಿನಲ್ಲಿ (Wayanad) ವ್ಯಕ್ತಿ ಒಬ್ಬರನ್ನು ಇತ್ತೀಚೆಗೆ ಹತ್ಯೆ ಮಾಡಿದ್ದ ಕಾಡಾನೆಯ (Wild Elephant) ಸೆರಗೆ ಕೊಡಗು (Kodagu) ಜಿಲ್ಲೆಯ ನಾಗರಹೊಳೆ (Nagarahole) ಅಭಯಾರಣ್ಯದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ಮಖಾನ್ ಹೆಸರಿನ ಕಾಡಾನೆ ಸದ್ಯ ನಾಗರಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಓಡಾಡುತ್ತಿದೆ ಎಂಬುದು ರೇಡಿಯೋ ಕಾಲರ ಮೂಲಕ ತಿಳಿದು ಬಂದಿದೆ. ಹೀಗಾಗಿ ನಾಗರಹೊಳೆಯ ನಾಣಚ್ಚಿ, ಹುಲಿಕಲ್ಲು, ಆಲಂದೋಡು ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸದ್ಯ ಕಾಡಾನೆಯು ಮದವೇರಿ ನಾಗರಹೊಳೆ ಪ್ರದೇಶದಲ್ಲಿ …

Read More »

ಹೋರಿ ತಿವಿದು ಯುವಕ ಸಾವು, ಹತ್ತಾರು ಮಂದಿಗೆ ಗಾಯ

ಹೋರಿ ಬೆದರಿಸುವ ಸ್ಪರ್ಧೆಗೆ ಜಿಲ್ಲಾಡಳಿತ ನಿಷೇಧ ಹೇರಿದೆ. ಆದರೂ ಆಗಾಗ ಹಾವೇರಿ ಜಿಲ್ಲೆಯಲ್ಲಿ ಅಲ್ಲಲ್ಲಿ ಹೋರಿ ಬೆದರಿಸು ಸ್ಪರ್ಧೆಯನ್ನು ಆಯೋಜನೆ ಮಾಡುತ್ತಲೇ ಇದ್ದಾರೆ. ಇದರ ಪರಿಣಾಮ ಇಂದು ಹೋರಿ ತಿವಿದು ಓರ್ವ ಸಾವನಪ್ಪಿ ಹಲವರಿಗೆ ತೀವ್ರ ಗಾಯಗಳಾಗಿವೆ. ಒಂದೆಡೆ ಬಾ..ಬಾ.. ಅಖಾಡಕ್ಕೆ ಬಾ… ಬಾರೋ…. ನನ್ನ ರಾಜಾ ಎನ್ನುತ್ತಿರುವ ಹೋರಿ ಹಬ್ಬದ ಆಯೋಜಕರು. ಇನ್ನೊಂದಡೆ ಪೈಲ್ವಾನರಿಗೆ ಸೆಡ್ಡು ಹೊಡೆದು ಹಿಡಿದು ತೋರಿಸಿ ನನ್ನ ಹೋರಿ… ಎನ್ನುತ್ತಿರುವ ರೈತ ಬಾಂಧವರು. ಮೊತ್ತೊಂದಡೆ ತಲೆಗೆ ಟವಲ್ …

Read More »

ಮತ್ತೆ ಅನಾವರಣ ಆಯಿತು ಇಮ್ರಾನ್ ಹಷ್ಮಿ ಕಿಸ್ಸಿಂಗ್ ಅವತಾರ

ನಟ ಇಮ್ರಾನ್ ಹಷ್ಮಿ ಮತ್ತು ನಟಿ ಮೌನಿ ರಾಯ್ (Mouni Roy) ಶೀಘ್ರದಲ್ಲೇ ‘ಶೋಟೈಮ್’ ಸೀರಿಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಶೋಟೈಮ್’ ವೆಬ್ ಸರಣಿಯ ಮೂಲಕ ಅಭಿಮಾನಿಗಳು ಮತ್ತೆ ಇಮ್ರಾನ್ ಹಷ್ಮಿ ಅವರ ಸೀರಿಯಲ್ ಕಿಸ್ಸರ್ ಅವತಾರ ನೋಡಲಿದ್ದಾರೆ. ಇದರ ಒಂದು ದೃಶ್ಯ ವೈರಲ್ ಆಗಿದೆ. ಈ ಸರಣಿಯಲ್ಲಿ ನಟಿ ಮೌನಿ ರಾಯ್ ಅವರನ್ನು ಇಮ್ರಾನ್ ಚುಂಬಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.ಕೆಲ ದಿನಗಳ ಹಿಂದೆ ‘ಶೋಟೈಮ್’ ಸೀರಿಸ್​ನ …

Read More »

ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿಗೆ ಜೀವ ಬೆದರಿಕೆ ಹಾಕಿದ್ದ ಆರೋಪಿಯ ಬಂಧನ

ಯಾದಗಿರಿ, ಮಾರ್ಚ್​ 05: ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)​​ ಅವರಿಗೆ ಜಾಮಾಜಿಕ ಜಾಲತಾಣದ ಮೂಲಕ ಜೀವ ಬೆದರಿಕೆ ಹಾಕಿದ್ದ ಆರೋಪಿಯನ್ನು ಸುರುಪುರ ಠಾಣೆ ಪೊಲೀಸರು (Surapur Police) ತಡರಾತ್ರಿ ಬಂಧಿಸಿದ್ದಾರೆ. ಮೊಹಮ್ಮದ್ ರಸೂಲ್ ಕಡ್ದಾರೆ (45) ಬಂಧಿತ ಆರೋಪಿ. ಯಾದಗಿರಿ ಜಿಲ್ಲೆ ಸುರಪುರದ ರಂಗಂಪೇಟೆ ನಿವಾಸಿಯಾಗಿರುವ ರಸೂಲ್ ಕಡ್ದಾರೆ ಹೈದರಾಬಾದ್​ನಲ್ಲಿ ಕೂಲಿ ಮಾಡುತ್ತಿದ್ದನು. ಕೈಯಲ್ಲಿ ತಲ್ವಾರ್ ಹಿಡಿದು ಪ್ರಧಾನಿ …

Read More »

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಎಫ್​ಎಸ್​ಎಲ್​ ವರದಿಯಲ್ಲಿ ಬಹಿರಂಗ: ಪರಮೇಶ್ವರ್​​

ಬೆಂಗಳೂರು, ಮಾರ್ಚ್​ 05: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್​ ಘೋಷಣೆ (Vidhana Soudha Pro Pakistan Slogan) ಕೂಗಿರುವುದು ವಿಧಿ ವಿಜ್ಞಾನ ಪ್ರಯೋಗಾಲಯ (FSL)​ ವರದಿ​​ಯಲ್ಲಿ ದೃಢವಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಮತ್ತು ವರದಿಯಲ್ಲಿ ಯಾರು ಕೂಗಿದ್ದಾರೆಂಬುವುದು ಬಹಿರಂಗೊಂಡಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ (G Parmeshwar)​ ಹೇಳಿದರು.   ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದರಿಂದ ಸರ್ಕಾರಕ್ಕೆ ಯಾವುದೇ ಮುಜುಗರವಾಗುವುದಿಲ್ಲ. ಇದನ್ನು ನಮ್ಮ ಸರ್ಕಾರ ಹೇಳಿ ಮಾಡಿಸಿರುವುದು …

Read More »

ಪಾಕ್ ಪರ ಘೋಷಣೆ: ಬಂಧಿತ ಆರೋಪಿಗಳನ್ನು ಕರೆತಂದು ಪೊಲೀಸರಿಂದ ವಿಧಾನಸೌಧದಲ್ಲಿ ಇಂದು ಸ್ಥಳ ಮಹಜರು

ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ಬಂಧಿತ ಮೂವರು ಆರೋಪಿಗಳನ್ನು ಎರಡು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸರು ಆರೋಪಿಗಳಾದ ಇಲ್ತಾಜ್, ಮುನಾವರ್, ಮೊಹಮ್ಮದ್ ನಾಶಿಪುಡಿ ಅವರನ್ನು ಕೋರಮಂಗಲದಲ್ಲಿರುವ ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯದ ಜಡ್ಜ್ ಮುಂದೆ ಹಾಜರುಪಡಿಸಿದ್ದರು. ವಿಧಾನಸೌಧದ ಆವರಣದಲ್ಲಿಯೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದ ವಿಧಾನಸೌಧ ಪೊಲೀಸರು, ದೆಹಲಿ ಮೂಲದ …

Read More »

ಟ್ರ್ಯಾಕ್ಟರ್ ಸಾಲ: ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಲಕ್ಷ್ಮೇಶ್ವರ: ಸಾಲ ತೀರಿಸಲು ಸಾಧ್ಯವಾಗದೆ ತಾಲ್ಲೂಕಿನ ಗೋವನಾಳ ಗ್ರಾಮದ ಒಂದೇ ಕುಟುಂಬದ ಮೂವರು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೇಣುಕಾ ತೇಲಿ (50), ಸಹೋದರಿ ಸಾವಕ್ಕ ತೇಲಿ (45) ಮತ್ತು ರೇಣುಕಾ ಅವರ ಪುತ್ರ ಮಂಜುನಾಥ (22) ಮೃತರು. ‘ಟ್ರ್ಯಾಕ್ಟರ್ ಸಾಲ ತೀರಿಸುವ ವಿಷಯದಲ್ಲಿ ಮನೆಯಲ್ಲಿ ಜಗಳವಾಗಿದೆ.

Read More »

ಹೆಂಡತಿ ಜೊತೆಗೆ ‘ವಿಡಿಯೋ ಕಾಲ್’ ನಲ್ಲಿ ಮಾತನಾಡುವಾಗ ರೈಲಿಗೆ ಸಿಲುಕಿ ವ್ಯಕ್ತಿ ಸಾವು

ಮೈಸೂರು : ರೈಲಿನಲ್ಲಿ ಸಂಚರಿಸುವಾಗ ಅಥವಾ ರೈಲು ಹಳಿಯ ಬಳಿ ನಿಂತಿರುವಾಗ ಯಾವಾಗಲೂ ಜಾಗರೂಕರಾಗಿರಬೇಕು ಏಕೆಂದರೆ ಯಾವುದೇ ಸಂದರ್ಭದಲ್ಲಿಯೂ ಕೂಡ ಮೈ ಮರೆತು ಕುಳಿತಿದ್ದರೆ, ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಕೂಡ ಎದುರಾಗುತ್ತದೆ. ಅದೇ ರೀತಿ ಇದೀಗ ಮೈಸೂರಿನಲ್ಲಿ ಹೆಂಡತಿ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭ ವೇಳೆ ವ್ಯಕ್ತಿ ಸಾವನಪ್ಪಿದ್ದಾನೆ. ವಿಡಿಯೋ ಕಾಲ್ ವೇಳೆ ರೈಲಿಗೆ ಸಿಲುಕಿ ವ್ಯಕ್ತಿ ಸಾವನನಪ್ಪಿರುವ ಘಟನೆ ನಡೆದಿದೆ. ಹೆಂಡತಿಗೆ ವಿಡಿಯೋ ಕಾಲ್ ಮಾಡುತ್ತಿದ್ದಾಗ …

Read More »

11 ಹಾಸ್ಟೆಲ್‌ಗಳಿಗೆ ನಾಲ್ವರು ವಾರ್ಡನ್‌

ಹೊಸಕೋಟೆ: ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ 11 ವಿದ್ಯಾರ್ಥಿ ನಿಲಯಗಳಲ್ಲಿ ಏಳರಲ್ಲಿ ನಿಲಯ ಪಾಲಕರು ಇಲ್ಲ. 11 ಹಾಸ್ಟೆಲ್‌ಗಳ 590 ವಿದ್ಯಾರ್ಥಿಗಳನ್ನು ನಾಲ್ಕೇ ನಿಲಯಪಾಲಕರು ನೋಡಿಕೊಳ್ಳಬೇಕಿದೆ. 11 ವಿದ್ಯಾರ್ಥಿ ನಿಯಲಗಳಲ್ಲಿ ಮೂರು ನಿಲಯಪಾಲಕರು ಇದ್ದಾರೆ. ಒಂದರಲ್ಲಿ ಸಿಬ್ಬಂದಿಯೇ ನಿರ್ವಹಣೆ ಮಾಡುತ್ತಿದ್ದಾರೆ. ಈ ನಾಲ್ವರು 11 ವಿದ್ಯಾರ್ಥಿ ನಿಲಯ‌ಗಳನ್ನು‌ ನಿರ್ವಹಣೆ ಮಾಡಬೇಕಿದೆ.   10 ಹಾಸ್ಟೆಲ್‌ಗಳನ್ನು ಕೇವಲ ಮೂವರು ಮಾತ್ರ ನೋಡಿಕೊಳ್ಳಬೇಕಿರುವುದರಿಂದ ಅವುಗಳನ್ನು ಹಂಚಿಕೆ ಮಾಡಿಕೊಂಡಿದ್ದಾರೆ. ಮೂವರಲ್ಲಿ ಒಬ್ಬರಿಗೆ ಐದು …

Read More »