Breaking News

SSLC ವಿದ್ಯಾರ್ಥಿನಿ ಮೀನಾ ರುಂಡ-ಮುಂಡ ಬೇರ್ಪಡಿಸಿದ ಆರೋಪಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ಎಸ್​ಎಸ್​ಎಲ್​ಸಿ ಬಾಲಕಿಯನ್ನು ಕೊಂದು ಆಕೆಯ ರುಂಡವನ್ನು ಕೊಂಡೊಯ್ದಿದ್ದ ಆರೋಪಿ ಮೊನ್ನಂಡ ಪ್ರಕಾಶ್​ (33) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಬಾಲಕಿಯ ತಲೆ ಪತ್ತೆಯಾಗಿಲ್ಲ. ಪೊಲೀಸರು ಶೋಧಕಾರ್ಯ ಮಾಡುವ ಸಮಯದಲ್ಲಿ ಸೂರ್ಲಬ್ಬಿ ಗ್ರಾಮದಿಂದ 3 ಕಿ.ಮೀ. ದೂರದ ಹಮ್ನಿಯಾಲದಲ್ಲಿ ಪ್ರಕಾಶ್ ಅಲಿಯಾಸ್ ಓಂಕಾರಪ್ಪ ಮೃತದೇಹ ಪತ್ತೆಯಾಗಿದೆ. ಇನ್ನು ಬಾಲಕಿಯ ರುಂಡಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. 16 ವರ್ಷದ ಬಾಲಕಿಗೂ 35 ವರ್ಷದ ಆರೋಪಿಗೂ ಮದುವೆ ಮಾಡಿಸಲು …

Read More »

ಪೆನ್ ಡ್ರೈವ್’ ಕೇಸ್ ಗೆ ಮತ್ತೊಂದು ಬಿಗ್ ಟ್ವಿಸ್ಟ್ : ಬಿಜೆಪಿ ಮುಖಂಡ ದೇವರಾಜೇಗೌಡ ನಾಪತ್ತೆ

ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುಗುಗಳನ್ನು ಪಡೆಯುತ್ತಿದ್ದು, ಇದೀಗ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು,ಲೈಂಗಿಕ ದೌರ್ಜನ್ಯ ಆರೋಪದಡಿ ಎಫ್‌ಐಆರ್ ದಾಖಲಾದ ಬೆನ್ನಲ್ಲಿಯೇ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ನಾಪತ್ತೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಡಿಸಿಎಂ ಡಿಕೆ …

Read More »

ಅರವಿಂದ್ ಕೇಜ್ರಿವಾಲ್‌’ಗೆ ಮಧ್ಯಂತರ ಜಾಮೀನು:

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ 2024 ರ ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಿದೆ. ಹಾಗಾದ್ರೆ ಸುಪ್ರೀಂ ಕೋರ್ಟ್ ಜಾಮೀನು ನೀಡೋದಕ್ಕಾಗಿ ವಿಧಇಸಿದಂತ ಷರತ್ತುಗಳೇನು ಅಂತ ಮುಂದೆ ಓದಿ.   ಜೂನ್ 5 ರಂದು ಮಧ್ಯಂತರ ಜಾಮೀನು ನೀಡುವಂತೆ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಮೂಲಕ …

Read More »

ಸೋಲಿನ ಭೀತಿಯಿಂದ ಕಾಂಗ್ರೆಸ್‌ ವಿರುದ್ಧ ಸುಳ್ಳು ಆರೋಪ ಮೋದಿ, ಶಾಗೆ ಆತಂಕ : ಖರ್ಗೆ

ಹೈದರಾಬಾದ್: ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟ ಸಹೋದ್ಯೋಗಿ ಅಮಿತ್ ಶಾ ‘ಆತಂಕ’ಕ್ಕೆ ಒಳಗಾಗಿದ್ದು, ಕಾಂಗ್ರೆಸ್ ಪಕ್ಷವನ್ನು ನಿಂದಿಸಲು ಪ್ರಾರಂಭಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.   ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಮತ ಕೇಳುವ ಬದಲು ಕಾಂಗ್ರೆಸ್ ನಾಯಕರನ್ನು ದೂಷಿಸುತ್ತಿದ್ದಾರೆ. ಮಾತ್ರವಲ್ಲ, ಕಾಂಗ್ರೆಸ್‌ ನಾಯಕರ ಹೇಳಿಕೆಗಳನ್ನು ತಿರುಚುವ …

Read More »

ಶೇ 20ರಷ್ಟು ಕುಸಿತ: ಬೆಳಗಾವಿ, ಚಿಕ್ಕೋಡಿ ಜಿಲ್ಲೆಗಳ ಕಳಪೆ ಸಾಧನೆ

ಬೆಳಗಾವಿ/ ಚಿಕ್ಕೋಡಿ: ‘ಶೈಕ್ಷಣಿಕ ಹಬ್‌’ ಎಂದು ಗುರುತಿಸಿಕೊಂಡ ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಗಣನೀಯವಾಗಿ ಇಳಿಕೆಯಾಗಿದ್ದು, ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆಯೇ ಎಂಬ ಆತಂಕ ತಲೆದೋರಿದೆ. ಪ್ರತಿಬಾರಿ ಪರೀಕ್ಷೆ ಫಲಿತಾಂಶದಲ್ಲಿ ಸಣ್ಣ-ಪುಟ್ಟ ವ್ಯತ್ಯಾಸ ಇರುತ್ತಿತ್ತು. ಆದರೆ, ಈ ಬಾರಿ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಫಲಿತಾಂಶ ಪ್ರಮಾಣ ಶೇ 20ಕ್ಕಿಂತ ಹೆಚ್ಚು ಕಡಿಮೆಯಾಗಿರುವುದು ನಿರಾಸೆಗೆ ಕಾರಣವಾಗಿದೆ. 2021-22ನೇ ಸಾಲಿನ ಪರೀಕ್ಷೆಯಲ್ಲಿ …

Read More »

ಪ್ರಾಣಿಗಳಿಗೆ ನೀರುಣಿಸುವ ಸ್ವಯಂಸೇವಕರು

ಹುಬ್ಬಳ್ಳಿ: ಬಿರು ಬಿಸಿಲಿನಿಂದ ಎಲ್ಲೆಡೆ ಜಲಮೂಲಗಳು ಬತ್ತಿದ್ದು, ಪ್ರಾಣಿ ಪಕ್ಷಿಗಳು ಹನಿ ನೀರಿಗೂ ಪರದಾಡುವಂತಾಗಿದೆ. ಧಾರವಾಡದ ವೈಲ್ಡ್‌ಲೈಫ್‌ ವೆಲ್ಫೇರ್‌ ಸೊಸೈಟಿಯ ಸದಸ್ಯರು ಸ್ವಂತ ಖರ್ಚಿನಲ್ಲಿ ಕಾಡಿನಲ್ಲಿ ನೀರಿನ ವ್ಯವಸ್ಥೆ ಮಾಡಿ, ಪ್ರಾಣಿಪಕ್ಷಿಗಳಿಗೆ ನೀರಿನ ದಾಹ ನೀಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ‘ಧಾರವಾಡ ತಾಲ್ಲೂಕಿನ ಹೊಲ್ತಿಕೋಟಿ, →ಬಣದೂರು ಚೆಕ್‌ಪೋಸ್ಟ್‌, ಮಾವಿನಕೊಪ್ಪದ ಕಾಡಿನ 5 ಕಡೆ ಒಂದೂವರೆ ತಿಂಗಳಿನಿಂದ ನೀರು ಪೂರೈಸುತ್ತಿದ್ದೇವೆ. 8 ಅಡಿ ಅಗಲ, 6 ಅಡಿ ಉದ್ದ, 2 ಅಡಿ ಆಳದ ಗುಂಡಿ …

Read More »

ಸಿದ್ಧಾರೂಢ ಮಿಷನ್‌ಗೆ ಬೆಳ್ಳಿ

ಹುಬ್ಬಳ್ಳಿ: 1998 ರಲ್ಲಿ ಹುಬ್ಬಳ್ಳಿಯಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ದಕ್ಷಿಣ ತಾಲ್ಲೂಕಿನ ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಇದೇ ಮೇ 10 ರಿಂದ 12 ರ ವರೆಗೆ 25 ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಶಾಂಡಿಲ್ಯಾಶ್ರಮದ ಚಂದ್ರಶೇಖರ್ ಸ್ವಾಮಿಗಳಿಂದ ಉದ್ಘಾಟನೆಗೊಂಡು ರಾಮೋಹಳ್ಳಿಯಲ್ಲಿ ನೆಲೆಯೂರಿದ ಈ ಸಂಸ್ಥೆ ಹಲವು ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ. ಇದರ ಸಂಸ್ಥಾಪಕ ಅಂದಿನ ವಿದ್ವಾನ್ ಎಸ್. ಪ್ರಭುಲಿಂಗದೇವರು ಇಂದು ಡಾ. ಆರೂಢಭಾರತೀ ಸ್ವಾಮೀಜಿ. 2001 …

Read More »

ಅಳ್ನಾವರ: 12 ರಂದು ನಿಕಾಲಿ ಕುಸ್ತಿ ಪಂದ್ಯಾವಳಿ

ಅಳ್ನಾವರ: ಗ್ರಾಮದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಪಟ್ಟಣದಲ್ಲಿ ಮೇ 12ರಂದು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಮುಕ್ತ ನಿಕಾಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಆಯೋಜಕ ರಾಜು ಪೆಜೋಳ್ಳಿ ತಿಳಿಸಿದ್ದಾರೆ. ಕಳೆದ ವರ್ಷ ಕೂಡಾ ಬೃಹತ್ ಕುಸ್ತಿ ಪಂದ್ಯಾವಳಿ ಆಯೋಜಿಸಿ ಇಲ್ಲಿನ ಕುಸ್ತಿ ಆಸಕ್ತರ ಮನ ತಣಿಸಿದ ಪೆಜೋಳ್ಳಿ ಅವರು, ಈ ಬಾರಿ ದೊಡ್ಡ ಮಟ್ಟದ ಪಂದ್ಯಾವಳಿ ಹಮ್ಮಿಕೊಂಡಿದ್ದಾರೆ. ಭಾರತೀಯ ಭೂ ಸೇನೆಯ ಯೋಧರಾದ ಇವರು ದೇಶ …

Read More »

ಹುಬ್ಬಳ್ಳಿ: ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ಗೆ ಶ್ರೀನಯಾ ಸೇರ್ಪಡೆ

ಹುಬ್ಬಳ್ಳಿ: ಇಲ್ಲಿನ ಬಾಲಕಿ ಶ್ರೀನಯಾ ಹೊಂಗಲ ಸಾಧನೆ ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಯಾಗಿದೆ. 4 ರಿಂದ 7 ವರ್ಷದ ಮಕ್ಕಳ ವಿಭಾಗದಲ್ಲಿ 13 ಪ್ರಾಣಿಗಳು, 9 ಸಾಮಾಜಿಕ ವ್ಯಕ್ತಿಗಳು, ಮಾನವ ದೇಹದ 11 ಅಂಗಾಂಗಗಳು, 12 ಕನ್ನಡ ಅಕ್ಷರ ಹಾಗೂ ಪದಗಳು, 5 ಶ್ಲೋಕಗಳು, ಮೂರು ಅಕ್ಷರದ 29 ಪದಗಳನ್ನು ಮತ್ತು 5 ಲೆಕ್ಕಗಳನ್ನು ಬಿಡಿಸುವ ಮೂಲಕ ಸಾಧನೆ ಮಾಡಿದ್ದಾಳೆ. ವಿದ್ಯಾನಗರದ ಕೆಎಲ್‌ಇ ಬ್ಯಾನಿಯನ್ ಶಾಲೆಯ ವಿದ್ಯಾರ್ಥಿನಿಯಾಗಿರುವ ಶ್ರೀನಯಾ, ಶ್ರೀಧರ …

Read More »

ಒಣಮೇವು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ

ಬೈಲಹೊಂಗಲ: ತಾಲ್ಲೂಕಿನ ಹಿಟ್ಟಣಗಿ ಗ್ರಾಮದಿಂದ ಮೇವು ಹೊತ್ತುಕೊಂಡು ಇಂಚಲ ರಸ್ತೆ ಮಾರ್ಗವಾಗಿ ರಾಯಬಾಗ ಕಡೆ ಗೋವಿನಜೋಳದ ಒಣಮೇವು ಸಾಗಿಸುತ್ತಿದ್ದ ಮೂರು ಟ್ರ್ಯಾಕ್ಟರ್‌ಗಳಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಲಕ್ಷಾಂತರ ಮೌಲ್ಯದ ಒಣಮೇವು ಸುಟ್ಟು ಕರಕಲಾದ ಘಟನೆ ಇಂಚಲ ರಸ್ತೆಯ ಹತ್ತಿರ ಬುಧವಾರ ಘಟನೆ ಸಂಭವಿಸಿದೆ. ಸುದ್ದಿ ತಿಳಿದು ತಕ್ಷಣ ಅಗ್ನಿಶಾಮಕ ಠಾಣಾಧಿಕಾರಿ ತಿಪ್ಪಣ್ಣಾ ನಾವದಗಿ ನೇತೃತ್ವದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು 3 ಗಂಟೆಗಳ ಕಾಲ …

Read More »