Breaking News

ಕ್ಲಾಸ್​ರೂಮ್​​​​ನಲ್ಲಿ ‘ಐಟಂ ಸಾಂಗ್​​​​’ಗೆ ಡ್ಯಾನ್ಸ್ ಮಾಡಿದ ಶಿಕ್ಷಕಿ

ನವದೆಹಲಿ: ಶಿಕ್ಷಕಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಆಗಿದಿಷ್ಟು..2005 ರಲ್ಲಿ ಬಿಡುಗಡೆಯಾದ ಅಮಿತಾಬ್ ಬಚ್ಚನ್ ನಟನೆಯ ‘ಬಂಟಿ ಔರ್ ಬಬ್ಲಿ’ ಸಿನಿಮಾದ ‘ಕಜ್ರಾ ರೇ’ ಹಾಡಿಗೆ ಶಿಕ್ಷಕಿ ತರಗತಿಯೊಳಗೆ ನೃತ್ಯ ಮಾಡಿದರು. ಆ ನಂತರ ಶಿಕ್ಷಕಿಯ ಡ್ಯಾನ್ಸ್ ಸೋಶಿಯಲ್ ಮೀಡಿಯಾ ಬಳಕೆದಾರರ ಹೃದಯಕ್ಕೆ ನೇರವಾಗಿ ಲಗ್ಗೆಯಿಟ್ಟಿತು.   ಅವರ ಇಬ್ಬರು ವಿದ್ಯಾರ್ಥಿಗಳು ಸಹ ಶಿಕ್ಷಕಿಯೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಆದರೆ ಈ ವೈರಲ್ ವಿಡಿಯೋ ನೋಡಿ ಜನ ಸಾಮಾಜಿಕ ಜಾಲತಾಣಗಳಲ್ಲಿ …

Read More »

ಮನೆ ಕಟ್ಟೋರಿಗೆ ಗುಡ್ ನ್ಯೂಸ್ : ಸಿಮೆಂಟ್, ಕಬ್ಬಿಣದ ಬೆಲೆಯಲ್ಲಿ ಇಳಿಕೆ

ನವದೆಹಲಿ : ಮನೆ ಕಟ್ಟೋರಿಗೆ ಸಿಹಿಸುದ್ದಿ ಸಿಕ್ಕಿದ್ದು, ಪ್ರಸ್ತುತ, ದೇಶದಲ್ಲಿ ಸಿಮೆಂಟ್ ಮತ್ತು ಕಬ್ಬಿಣದ ಬಾರ್ ಗಳ ಬೆಲೆಗಳು ಕುಸಿಯುತ್ತಿವೆ. ಹೌದು, ದೇಶದಲ್ಲಿ ಸಿಮೆಂಟ್ ನ ಮಾರುಕಟ್ಟೆ ಬೆಲೆಯನ್ನು ಮೇಲ್ವಿಚಾರಣೆ ಮಾಡುವ ಸಂಸ್ಥೆಯಾದ ಐಸಿಆರ್ ಎ ವರದಿ ಮಾಡಿದ್ದು, ಮನೆ ನಿರ್ಮಾಣದಲ್ಲಿ ಬಳಸುವ ಸಿಮೆಂಟ್‌ ಹಾಗೂ ಕಬ್ಬಿಣದ ಎರಡೂ ವಸ್ತುಗಳ ಬೆಲೆಗಳು ಕುಸಿದಿವೆ. ಇತ್ತೀಚಿನ ತಿಂಗಳುಗಳಲ್ಲಿ ಅವುಗಳ ಬೆಲೆಗಳಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ನೀವು ಮನೆ ಕಟ್ಟಲು ಆಸಕ್ತಿ ಹೊಂದಿದ್ದರೆ, …

Read More »

ಶಿಕ್ಷಕರು ಅರ್ಧಗಂಟೆ ಮುಂಚೆ ಶಾಲೆಗೆ ಬರಬೇಕು, ಸ್ಕೂಲ್‌ ಟೈಮಲ್ಲಿ ಹೊರಗೆ ಹೋಗುವಂತಿಲ್ಲ: ಮಹತ್ವದ ಆದೇಶ

ಬೆಂಗಳೂರು: ಲೋಕಸಭೆ ಚುನಾವಣೆಗೂ ಮುನ್ನ ಶಾಲಾ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಹೌದು ಸರ್ಕಾರಿ ಶಾಲೆಗಳಲ್ಲಿ ಪಠ್ಯ ಬೋಧನೆ ಮತ್ತು ಮಕ್ಕಳ ಕಲಿಕಾ ಗುಣಮಟ್ಟ ಬಲವರ್ಧನೆಗೊಳಿಸುವ ಸಲುವಾಗಿ ಶಿಕ್ಷಕರು ನಿಗದಿತ ಅವಧಿಗಿಂತ ಅರ್ಧಗಂಟೆ ಮೊದಲೇ ಶಾಲೆಗೆ ಹಾಜರಾಗಿ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ. ಮಕ್ಕಳ ಶೈಕ್ಷಣಿಕ, ಬೌದ್ಧಿಕ ಹಾಗೂ ಸಾಮಾಜಿಕ ಬೆಳೆವಣಿಗೆ ದೃಷ್ಟಿಯಿಂದ ಶಿಕ್ಷಕರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಬೇಕು. ಪ್ರತಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು, …

Read More »

ದೇಶದ ಮೊದಲ ‘ಅಂಡರ್ ವಾಟರ್ ಮೆಟ್ರೋ’ ಗೆ ಉತ್ತಮ ರೆಸ್ಪಾನ್ಸ್

ಕೋಲ್ಕತಾ : ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋಗೆ ಮೊದಲ ದಿನವೇ ಪ್ರಯಾಣಿಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹೌದು, ಮೊದಲ ದಿನವೇ 70,000 ಕ್ಕೂ ಹೆಚ್ಚು ಪ್ರಯಾಣಿಕರು ರೈಲಿನಲ್ಲಿ ಸಂಚಾರ ಮಾಡಿದ್ದಾರೆ. ದೇಶದ ಮೊದಲ ನೀರೊಳಗಿನ ಸಾರಿಗೆ ಸುರಂಗದ ಮೂಲಕ ಹೂಗ್ಲಿ ನದಿಯ ಕೆಳಗೆ ಹಾದುಹೋಗುವ ಹೌರಾ ಮೈದಾನ್-ಎಸ್ಪ್ಲನೇಡ್ ಮೆಟ್ರೋದಲ್ಲಿ ಮೊದಲ ದಿನದಂದು 70,000 ಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.   ಮಾರ್ಚ್ 6 …

Read More »

ಮಲಬಾರ್ ಗೋಲ್ಡ್ & ಡೈಮೊಂಡ್ಸ್ : 89 ವಿದ್ಯಾರ್ಥಿನಿಯರಿಗೆ ರೂ.8.9 ಲಕ್ಷ ವಿದ್ಯಾರ್ಥಿ ವೇತನಗಳನ್ನು ವಿತರಿಸಲಾಯಿತು…!

 : ಬೆಳಗಾವಿ,: 16ನೇ ಮಾರ್ಚ್-2024 : ಮಲಬಾರ್ ಗೋಲ್ಡ್ & ಡೈಮೊಂಡ್ಸ್ ಸಿಎಸ್‌ಆ‌ರ್ ಉಪಕ್ರಮ ಕಾರ್ಯಕ್ರಮದ ಅಂಗವಾಗಿ ಇಂದು ಬೈಲಹೊಂಗಲ್, ಕೆ ಕೆ ಕೊಪ್ಪ, ಬೀಡಿ, ಖಾನಾಪುರ, ಸರ್ದಾರ್ ಪ್ರಥಮ ಧರ್ಜೆ ಮಹಿಳಾ ಕಾಲೇಜುಚಿಂತಾಮನರಾವ್‌ ಪದವಿ ಪೂರ್ವ ಕಾಲೇಜುನಲ್ಲಿರುವ 06 ಕಾಲೇಜುಗಳ 89 ವಿದ್ಯಾರ್ಥಿನಿಯರಿಗೆ ರೂ. 8.9 ಲಕ್ಷ (ಎಂಟು ಲಕ್ಷದ ತೊಂಬತ್ತು ಸಾವಿರ ರೂಪಾಯಿಗಳು) ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಈ ಕಾರ್ಯಕ್ರಮವು ಟೌನ್ ಹಾಲ್ ಭಾಗ್ಯನಗರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ …

Read More »

ಬೆಳಗಾವಿ : ‘ಹೆಲ್ಮೆಟ್’ ಧರಿಸದಿದ್ದಕ್ಕೆ ಅಪಘಾತದಲ್ಲಿ ‘ASI’ ಸಾವು : ‘PSI’ ಅಮಾನತುಗೊಳಿಸಿ SP ಆದೇಶ

ಬೆಳಗಾವಿ : ಭೀಕರ ರಸ್ತೆ ಅಪಘಾತದಲ್ಲಿ ಎಎಸ್‌ಐ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಕೃಷ್ಣಾ ಬಡಾವಣೆ ಬಳಿ ತಡರಾತ್ರಿ ನಡೆದಿದೆ. ಹೆಲ್ಮೆಟ್ ಧರಿಸದೇ ಅತಿವೇಗವಾಗಿ ಬೈಕ್ ಚಾಲಾಯಿಸಿ ಹಂಪ್ ಜಿಗಿಸಿದಕ್ಕೆ ಅಪಘಾತ ಸಂಭವಿಸಿದೆ. ಇದೀಗ ಹೆಲ್ಮೆಟ್ ಧರಿಸಿ ಕಡ್ಡಾಯ ಆದೇಶವನ್ನು ನಿರ್ಲಕ್ಷ ವಹಿಸಿದಕ್ಕೆ ದೊಡವಾಡ ಠಾಣೆ ಪಿಎಸ್‌ಐ ನಂದೀಶ್‌ರನ್ನು ಅಮಾನತ್ತು ಮಾಡಿ ಅದೇಶಿಸಲಾಗಿದೆ.

Read More »

ಬಂಡಾಯ ಒಂದೆರಡು ದಿನಗಳಲ್ಲಿ ಸರಿಹೋಗಲಿದೆ- ಯಡಿಯೂರಪ್ಪ

ಹುಬ್ಬಳ್ಳಿ: ‘ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್‌ ಸಿಗದೇ ಬಂಡಾಯವೆದ್ದಿರುವವರ ಜೊತೆ ಮಾತುಕತೆ ನಡೆಯುತ್ತಿದೆ. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈಶ್ವರಪ್ಪ ಸೇರಿದಂತೆ ಬಂಡಾಯ ಎದ್ದಿರುವವರ ಜೊತೆಗೆ ಮಾತುಕತೆ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.   ‘ಲೋಕಸಭೆ ಚುನಾವಣೆಗೆ ದಿನಾಂಕವೂ ಘೋಷಣೆಯಾಗಿದೆ. ದೇಶದಾದ್ಯಂತ ಬಿಜೆಪಿ ಪರ ಅಲೆ ಇದೆ. …

Read More »

543 ಕ್ಷೇತ್ರಗಳಲ್ಲೂ ಇಂಡಿಯಾ ಮಿತ್ರಕೂಟ ಸ್ಪರ್ಧೆ : ಖರ್ಗೆ

ಬೆಂಗಳೂರು,ಮಾ.16- ಇಂಡಿಯಾ ರಾಜಕೀಯ ಮೈತ್ರಿಕೂಟದ ನಡುವೆ ಯಾವುದೇ ಗೊಂದಲಗಳಿಲ್ಲ. ಕ್ಷೇತ್ರಗಳ ಹಂಚಿಕೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಬಹುತೇಕ ಮಾ.17 ಅಥವಾ 18 ರಂದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟ ಲೋಕಸಭೆಯ 543 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿದೆ. ಕೆಲವು ಕಡೆ ನಮಗೆ ಬೇಕಾದ ಕ್ಷೇತ್ರವನ್ನು ಅವರು ಕೇಳುತ್ತಾರೆ. ಅವರಿಗೆ ಬೇಕಾದ ಕ್ಷೇತ್ರಗಳನ್ನು ನಾವು ಕೇಳುತ್ತಿದ್ದೇವೆ. ಹೀಗಾಗಿ …

Read More »

ದೇವಸ್ಥಾನ, ಮಠ, ಧಾರ್ಮಿಕ ಸಂಸ್ಥೆಗಳಲ್ಲಿ ರಾಜಕೀಯ ಚಟುವಟಿಕೆ ನಿರ್ಬಂಧ

ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಅಂಗವಾಗಿ ಶಾಂತಿಯುತ ಹಾಗೂ ಮುಕ್ತ ರೀತಿಯಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ಇಲಾಖೆಗೆ ಒಳಪಡುವ ಎಲ್ಲಾ ದೇವಸ್ಥಾನ, ಮಠ, ಧಾರ್ಮಿಕ ಸಂಸ್ಥೆಗಳು ಹಾಗೂ ಧಾರ್ಮಿಕ ಸ್ಥಳಗಲ್ಲಿ ರಾಜಕೀಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದು ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಹೆಚ್.ಗಂಗಾಧರ್ ಅವರು ತಿಳಿಸಿದ್ದಾರೆ.   ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ …

Read More »

ರೈತನ ಬಾಳು ಬೆಳಗಿದ ‘ಕೃಷಿ ಹೊಂಡ’

ಸವದತ್ತಿ: ಈ ಹಿಂದೆ ನೀರಿನ ಕೊರತೆಯಿಂದ ಕೃಷಿ ಕಾಯಕದಲ್ಲಿ ಹಿನ್ನಡೆ ಅನುಭವಿಸುತ್ತಿದ್ದ ತಾಲ್ಲೂಕಿನ ಗೊಂತಮಾರದ ರೈತ ಬಸವರಾಜ ನೇಕಾರ, ಈಗ ಕೃಷಿ ಹೊಂಡದ ನೆರವಿನಿಂದ ಸಮೃದ್ಧವಾಗಿ ಕೃಷಿ ಮಾಡುತ್ತಿದ್ದಾರೆ. ಹೊಂಡದಲ್ಲಿ ಸಂಗ್ರಹವಾದ ಮಳೆ ನೀರನ್ನು ಬೇಡಿಕೆಯನುಸಾರ ವಿವಿಧ ಬೆಳೆಗಳಿಗೆ ಉಣಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.   13 ಎಕರೆ ಜಮೀನು ಹೊಂದಿರುವ ಬಸವರಾಜ ಓದಿದ್ದು 9ನೇ ತರಗತಿಯಷ್ಟೇ. ಆದರೆ, ಕೃಷಿಯಲ್ಲಿ ಏನನ್ನಾದರೂ ಸಾಧಿಸುವ ತವಕ ಅವರಲ್ಲಿತ್ತು. ಮಳೆಗಾಲದಲ್ಲೇನೂ ಹೆಚ್ಚಿನ ಸಮಸ್ಯೆಯಾಗುತ್ತಿರಲಿಲ್ಲ. …

Read More »