ಹುಬ್ಬಳ್ಳಿ: ವಿವಿಧ ಬ್ಯಾಂಕ್ ಗಳಲ್ಲಿ ನಕಲಿ ಖಾತೆ ತೆರೆದು ಅವ್ಯವಹಾರ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ದೇಶದ ವಿವಿಧ ರಾಜ್ಯಗಳ ಬ್ಯಾಂಕ್ ಗಳಲ್ಲಿ ನಕಲಿ ಖಾತೆ ತೆರೆದು ಅವ್ಯವಹಾರ ನಡೆಸುತ್ತಿದ್ದರು. ಇದೀಗ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ದೆಹಲಿ ಮೂಲದ ನಿಖಿಲ್ ಕುಮಾರ್ ರೌನಿ, ಸಚಿನ್ ಬೋಲಾ, ಮುಂಬೈ ಮೂಲದ ನಿಗಮ್ ಎಂದು ಗುರುತಿಸಲಾಗಿದೆ. ಬಂಧಿತ ಅರೋಪಿಗಳಲ್ಲಿ ಇಬ್ಬರು ಸಪಹ್ಟ್ ವೇರ್ ಇಂಜಿನಿಯರ್ ಗಳಾಗಿದ್ದು, …
Read More »ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ವಿಶೇಷ ರೈಲು ಸಂಚಾರ
ಬೆಂಗಳೂರು: ಗುಡ್ಡ ಕುಸಿತದಿಂದಾಗಿ ಬೆಂಗಳೂರು-ಮಂಗಳೂರು ಸಂಪರ್ಕಿಸುವ ಎರಡು ಮುಖ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಸ್ ಸಂಚಾರ ವ್ಯತ್ಯಯವಾಗಿರುವ ಹಿನ್ನಲೆ, ಜನರ ಅನುಕೂಲಕ್ಕಾಗಿ ಎರಡು ಹೆಚ್ಚುವರಿ ವಿಶೇಷ ರೈಲು ಸಂಚಾರ ಆರಂಭಿಸಲು ನೈಋತ್ಯ ರೈಲ್ವೆ ಮುಂದಾಗಿದೆ. ರೈಲು ಸಂಖ್ಯೆ 06547 ಜುಲೈ 19 ರಂದು ರಾತ್ರಿ 11 ಗಂಟೆಗೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 11:40 ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಈ ರೈಲು ಬೆಂಗಳೂರು ಕಂಟೋನ್ಮೆಂಟ್, ಎಸ್‌ಎಂವಿಟಿ ಬೆಂಗಳೂರು, ಚಿಕ್ಕಬಾಣಾವರ, ನೆಲಮಂಗಲ, …
Read More »ಅನ್ಮೋದ್ ಘಾಟ್‍ನಲ್ಲಿ ಭಾರಿ ಭೂಕುಸಿತ
ಪಣಜಿ: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಕಾರವಾರದಂತೆಯೇ ಗೋವಾದಲ್ಲಿಯೂ ಭೂಕುಸಿತ ಉಂಟಾಗಿರುವ ಬಗ್ಗೆ ವರದಿಯಾಗಿದೆ. ದೂಧ್ ಸಾಗರ ದೇವಸ್ಥಾನದ ಸಮೀಪವಿರುವ ಅನ್ಮೋದ್ ಘಾಟ್‍ನಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತವುಂಟಾಗಿದೆ. ಇಡೀ ರಸ್ತೆಯಲ್ಲಿ ಮಣ್ಣು ಹರಡಿರುವುದರಿಂದ ಈ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅನಮೋಡ ಘಾಟ್ ರಸ್ತೆಯು ಗೋವಾ ಮತ್ತು ಬೆಳಗಾವಿ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಪಶ್ಚಿಮಘಟ್ಟದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ ಉಂಟಾಗುತ್ತಿದೆ. ಸದ್ಯ ಅನ್ಮೋದ್ ಘಾಟ್ ರಸ್ತೆಯಲ್ಲಿ …
Read More »ಶೀಘ್ರವೇ ಅಂಗನವಾಡಿ ಶಿಕ್ಷಕಿಯರ ನೇಮಕ: ಲಕ್ಷ್ಮೀ ಹೆಬ್ಬಾಳಕರ್
ಬೆಂಗಳೂರು, ಜುಲೈ 19: ಶೀಘ್ರವೇ ಅಂಗನವಾಡಿ ಶಿಕ್ಷಕಿಯರ ನೇಮಕಾತಿ ಪ್ರತಿಕ್ರಿಯೆ ನಡೆಯಲಿದೆ. ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಕರೆದಿದ್ದು, ಜಿಲ್ಲಾಧಿಕಾರಿಗಳ, ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ (ಸಿಇಒ) ಒಳಗೊಂಡ ಜಿಲ್ಲಾ ಮಟ್ಟದ ಸಮಿತಿಯಲ್ಲಿ ನೇಮಕಾತಿ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ವಿಧಾನ ಪರಿಷತ್ ಕಲಾಪದಲ್ಲಿ ಶುಕ್ರವಾರ ನಡೆದ ಪ್ರಶ್ನೋತ್ತರ ವೇಳೆ ಸದಸ್ಯ ಕೆ.ಅಬ್ದುಲ್ ಜಬ್ಬರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅದಷ್ಟು …
Read More »ಜಲಾಶಯ ಭರ್ತಿಗೆ ಕೆಲವೇ ಅಡಿ ಬಾಕಿ,
ಬೆಂಗಳೂರು, ಜುಲೈ 19: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ 10 ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ಉಪನದಿಗಳು ಅವುಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಜಲಾಶಯಗಳಲ್ಲಿ ಅತ್ಯಧಿಕ ನೀರು ಸಂಗ್ರಹವಾಗಿದೆ. ಈ ಪೈಕಿ ಹೇಮಾವತಿ ಜಲಾಶಯದಲ್ಲೂ ಸಹ ಅತ್ಯಧಿಕ ಒಳಹರಿವು ದಾಖಲಾಗಿದೆ. ಇಂದು ಜುಲೈ 19ರಂದು ನೀರಿನ ಸಂಗ್ರಹ ಮಟ್ಟ ಎಷ್ಟಿದೆ, ಅಪ್ಡೇಟ್ ಮಾಹಿತಿ ಇಲ್ಲಿದೆ. ಹೇಮಾವತಿ ನದಿಯು ಕಾವೇರಿ ಉಪನದಿಗಳಲ್ಲಿ ಒಂದಾಗಿದೆ. ಈ ನದಿಗೆ ಹಾಸನ ಜಿಲ್ಲೆಯ ಗೂರೂರು …
Read More »ಮೈಕ್ರೋಸಾಫ್ಟ್ ತಾಂತ್ರಿಕ ದೋಷ.ಜಾಗತಿಕವಾಗಿ ಬಳಕೆದಾರರ ಪರದಾಟ
ಮೈಕ್ರೋಸಾಫ್ಟ್ ತಾಂತ್ರಿಕ ದೋಷ.ಜಾಗತಿಕವಾಗಿ ಬಳಕೆದಾರರ ಪರದಾಟ ನವದೆಹಲಿ: ಸಾಫ್ಟ್ ವೇರ್ ಕ್ಷೇತ್ರದ ದಿಗ್ಗಜ ಮೈಕ್ರೋಸಾಫ್ಟ್ ವಿಂಡೋಸ್ ನಲ್ಲಿ ತಾಂತ್ರಿಕ ದೋಷ ( Technical Issues) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ (ಜುಲೈ 19) ಭಾರತ ಸೇರಿದಂತೆ ಜಾಗತಿಕವಾಗಿ ಮೈಕ್ರೋಸಾಫ್ಟ್ ಬಳಕೆದಾರರು ಪರದಾಡುವಂತಾಗಿತ್ತು. ಭಾರತದಲ್ಲಿ ವಿಸ್ತಾರ, ಇಂಡಿಗೋ, ಸ್ಪೈಸ್ ಜೆಟ್ ಮತ್ತು ಅಕ್ಸಾ ವಿಮಾನ ಸಂಸ್ಥೆಗಳು ಟಿಕೆಟ್ ಬುಕ್ಕಿಂಗ್, ಚೆಕ್ ಇನ್ ಸೇರಿದಂತೆ ಹಲವು ತಾಂತ್ರಿಕ ದೋಷಗಳನ್ನು ಎದುರಿಸಿದ್ದು, ಏರ್ ಲೈನ್ಸ್ ಸದ್ಯ ಪ್ರಯಾಣಿಕರನ್ನು …
Read More »ನನ್ನ ಮದುವೆಗೂ ಮುನ್ನ ದರ್ಶನ್ ಜೈಲಿನಿಂದ ರಿಲೀಸ್ ಆಗ್ತಾರೆ : ನಿರ್ದೇಶಕ ತರುಣ್ ಸುಧೀರ್ ಹೇಳಿಕೆ
ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಭೇಟಿ ಮಾಡಲು ಇಂದು ನಿರ್ದೇಶಕ ತರುಣ್ ಸುಧೀರ್ ಜೈಲಿಗೆ ಆಗಮಿಸಿದ್ದರು. ಈ ವೇಳೆ ನಟ ದರ್ಶನ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು ನನ್ನ ಮದುವೆ ವಿಷಯ ದರ್ಶನ್ ಅವರಿಗೆ ಮೊದಲೇ ಗೊತ್ತಿತ್ತು. ಹಾಗಾಗಿ ನನ್ನ ಮದುವೆ ಅಸ್ಟೊತ್ತಿಗೆ ದರ್ಶನ್ ಜೈಲಿನಿಂದ ರಿಲೀಸ್ ಆಗುತ್ತಾರೆ ಎಂದು ತಿಳಿಸಿದರು. ರೇಣುಕಾ …
Read More »FASTAG ಮುಂಭಾಗದಲ್ಲಿಇಲ್ಲದಿದ್ದರೆ ಡಬಲ್ ಟೋಲ್!
ಹೊಸದಿಲ್ಲಿ: ಉದ್ದೇಶಪೂರ್ವಕವಾಗಿ ವಾಹನದ ಮುಂದಿನ ಗಾಜಿಗೆ ಫಾಸ್ಟಾಗ್ ಅಂಟಿಸದೇ ಇರುವವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHIA), ದುಪ್ಪಟ್ಟು ಟೋಲ್ ವಿಧಿಸಲು ಮುಂದಾಗಿದೆ. ಈ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿರುವ ಎನ್‌ಎಚ್‌ಐಎ, ಫಾಸ್ಟಾಗ್ ಅಂಟಿಸದಿರುವುದರಿಂದ ಟೋಲ್ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬವಾ ಗುತ್ತಿದೆ. ಇದನ್ನು ತಡೆಯಲು ದುಪ್ಪಟ್ಟು ಶುಲ್ಕ ವಿಧಿಸಬೇಕು ಎಂದು ಸೂಚಿಸಿದೆ. ಫಾಸ್ಟಾಗ್ ನಿಯಮಗಳನ್ನು ಪಾಲಿಸ ದಿದ್ದರೆ ವಿಧಿಸಲಾಗುವ ದಂಡಗಳ ಕುರಿತು ಟೋಲ್ ಪ್ಲಾಜಾಗಳಲ್ಲಿ ಎಲ್ಲರಿಗೂ ಕಾಣಿಸುವಂತೆ ಮಾಹಿತಿ ಪ್ರದರ್ಶಿಸಬೇಕು. ಫಾಸ್ಟಾಗ್ ಇಲ್ಲದ …
Read More »ಹಳಿ ಮೇಲೆ ಕುಳಿತು ಮದ್ಯ ಸೇವಿಸುತ್ತಿದ್ದ ಮೂವರು ಯುವಕರ ಮೇಲೆಯೇ ಹರಿದ ರೈಲು
ಗಂಗಾವತಿ: ಹಳಿಯ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದ ಮೂವರು ಯುವಕರ ಮೇಲೆ ರೈಲು ಹರಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಗಂಗಾವತಿಯ ಕನಕಗಿರಿ ರಸ್ತೆಯ ರೈಲ್ವೇ ಮಾರ್ಗದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಮೃತರನ್ನು ಗಂಗಾವತಿಯ ಮೌನೇಶ (23), ಸುನೀಲ್ ಕುಮಾರ(23), ವೆಂಕಟ್ (20) ಎನ್ನಲಾಗಿದ್ದು ಈ ಮೂವರು ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಕನಕಗಿರಿ ರಸ್ತೆಯಲ್ಲಿರುವ ರೈಲ್ವೇ ಹಳಿ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದರು ಎನ್ನಲಾಗಿದೆ ಈ …
Read More »ಮನೆ ಮೇಲ್ಛಾವಣಿ ಕುಸಿದು 18 ತಿಂಗಳ ಅವಳಿ ಮಕ್ಕಳು ಸೇರಿ ಮೂವರು ಸಾವು
ಹಾವೇರಿ: ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದು ಸ್ಥಳದಲ್ಲಿಯೇ ಇಬ್ಬರು ಮಕ್ಕಳು ಹಾಗೂ ಮಹಿಳೆ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡ ದುರ್ಘಟನೆ ಜು.19ರ ಶುಕ್ರವಾರ ಬೆಳಗಿನ ಜಾವ ಸವಣೂರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ. ನಸುಕಿನ ಜಾವ 4 ಗಂಟೆಯ ಸುಮಾರು ಗ್ರಾಮದ ಹರಕುಣಿ ಕುಟುಂಬಸ್ಥರ ಮನೆ ಮೇಲ್ಬಾವಣಿ ಕುಸಿದಿದೆ. ನಿದ್ರಿಸುತ್ತಿದ್ದ 18 ತಿಂಗಳ ಅವಳಿ ಮಕ್ಕಳಾದ ಅಮೂಲ್ಯ ಹಾಗೂ ಅನುಶ್ರೀ ಮತ್ತು ಮಕ್ಕಳ ಅತ್ತೆ …
Read More »
Laxmi News 24×7