Breaking News

ಹೊಸ ವಂಟಮುರಿ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ: ಇಬ್ಬರ ಜಾಮೀನು ರದ್ದು

ಬೆಳಗಾವಿ: ತಾಲ್ಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ವಿದ್ಯುತ್‌ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ 12 ಆರೋಪಿಗಳಲ್ಲಿ ಇಬ್ಬರ ಜಾಮೀನು ರದ್ದು ಮಾಡಿ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ. 2018ರಲ್ಲಿ ಹೊಸ ವಂಟಮುರಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಬಣ್ಣೆಪ್ಪ ಪಾಟೀಲ ಎಂಬುವರ ಕೊಲೆ ಯತ್ನ ನಡೆದಿತ್ತು. ಆ ಪ್ರಕರಣದಲ್ಲಿ ಆಗಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಪ್ಪ ರಾಯಪ್ಪ ವನ್ನೂರಿ ಹಾಗೂ ಬಸು ರುದ್ರಪ್ಪ ನಾಯಕ ಮುಖ್ಯ ಆರೋಪಿಗಳಾಗಿದ್ದರು. ಆಗಲೂ …

Read More »

ಬಿಜೆಪಿ ಹಗರಣಗಳನ್ನು ಕೆದಕಲಾರಂಭಿಸಿದ ಕಾಂಗ್ರೆಸ್‌

ಬೆಂಗಳೂರು, ಮೇ 31- ವಾಲ್ಮೀಕಿ ಅಭಿವೃದ್ಧಿ ನಿಗಮದ ಬೃಹತ್‌ ಹಗರಣದಲ್ಲಿ ಸಚಿವ ನಾಗೇಂದ್ರ ಅವರ ತಲೆದಂಡವನ್ನು ತಪ್ಪಿಸಲು ನಾನಾ ರೀತಿಯ ಸರ್ಕಸ್‌ಗಳು ನಡೆಯುತ್ತಿದ್ದು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ 162 ಕೋಟಿ ರೂ.ಗಳ ಹಗರಣವನ್ನು ಕೆಣಕಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.   ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 187 ಕೋಟಿ ರೂ.ಗಳು ನಿಗಮದ ಉಪಖಾತೆಗಳಿಗೆ ವರ್ಗಾವಣೆಯಾಗಿರುವಂತೆ ಅಲ್ಲಿಂದ ಬೇರೆ ಬೇರೆ ಖಾತೆಗಳಿಗೂ ಸಂದಾಯವಾಗಿದೆ ಎಂಬ ಆರೋಪಗಳಿದ್ದು, ಸಂಪುಟದಲ್ಲಿ ಬಹಳಷ್ಟು ಮಂದಿ …

Read More »

ನಾಡಿದ್ದು ಕಾಂಗ್ರೆಸ್‌ ಶಾಸಕಾಂಗ ಪಕ್ಷ ಸಭೆ

ಬೆಂಗಳೂರು: ಜೂನ್‌ 2ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಮೇಲ್ಮನೆ ಚುನಾವಣೆ ಸಹಿತ ಹಲವು ವಿಷಯಗಳು ಸಭೆಯಾಗಲಿವೆ. ವಿಧಾನಸಭೆ ಸಂಖ್ಯಾಬಲದ ಆಧಾರದಲ್ಲಿ ನಡೆಯಲಿರುವ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಜೂನ್‌ 3 ಕೊನೆಯ ದಿನ. ಅದರ ಹಿಂದಿನ ದಿನವೇ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಮುಖ್ಯವಾಗಿ ನಾಮಪತ್ರ ಸಲ್ಲಿಕೆಗೆ ಅಗತ್ಯವಿರುವ ಶಾಸಕರ ಸಹಿ ಮತ್ತಿತರ ಪ್ರಕ್ರಿಯೆಗಳಿಗೆ ಸಂಬಂಧಿಸಿ ಅಂದು ಸೂಚನೆ ನೀಡಲಾಗುವುದು. ಜತೆಗೆ ಜೂನ್‌ 3ರಂದು …

Read More »

ಜೂನ್‌ 2ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ ನಿರೀಕ್ಷೆ

ಬೆಂಗಳೂರು: ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿಗೆ ಜೂನ್‌ 2ರಂದು ಮುಂಗಾರು ಪ್ರವೇಶಿಸುವ ಸಾಧ್ಯತೆಗಳಿದ್ದು ಈ ವರ್ಷ ಉತ್ತಮ ಮುಂಗಾರು ಮಳೆ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ನೈಋತ್ಯ ಮಾನ್ಸೂನ್‌ ಮೇ 30ರಂದು ಕೇರಳ ಪ್ರವೇಶಿಸಿದೆ. ಸಾಮಾನ್ಯವಾಗಿ ನೈಋತ್ಯ ಮುಂಗಾರು ಕೇರಳವನ್ನು ಜೂನ್‌ 1ರಂದು ಪ್ರವೇಶ ಮಾಡುತ್ತಿತ್ತು. ಆದರೆ ಈ ವರ್ಷ 2 ದಿನ ಮೊದಲೇ ಕೇರಳ ಪ್ರವೇಶಿಸಿದೆ. ಈ ಹಿನ್ನೆಲೆಯಲ್ಲಿ ಜೂನ್‌ 2ರಂದು ರಾಜ್ಯದ ದಕ್ಷಿಣ ಒಳನಾಡು ಹಾಗೂ …

Read More »

ಆಶಾ ಕಾರ್ಯಕರ್ತೆರಿಗೆ 4 ತಿಂಗಳಿಂದ ಸಂಬಳ ಇಲ್ಲ

ಬೆಂಗಳೂರು: ಚುನಾವಣೆ, ಲಸಿಕೀಕರಣ, ಗರ್ಭಿಣಿಯರು, ಬಾಣಂತಿಯರ ಆರೋಗ್ಯ ವಿಚಾರಣೆ ಸಹಿತ ವಿವಿಧ ಕಾರ್ಯಗಳನ್ನು ನಡೆಸಿ ಮಾಹಿತಿ ಸಲ್ಲಿಸುವ ಆಶಾ ಕಾರ್ಯಕರ್ತೆಯರಿಗೆ 3-4 ತಿಂಗಳುಗಳಿಂದ ಗೌರವಧನ ಪಾವತಿಯಾಗಿಲ್ಲ. ರಾಜ್ಯಾದ್ಯಂತ ಒಟ್ಟು 62 ಸಾವಿರ ಆಶಾ ಕಾರ್ಯಕರ್ತೆಯರಿಗೆ ಕಳೆದ ಫೆಬ್ರವರಿಯಿಂದ ಗೌರವಧನ ಸಿಕ್ಕಿಲ್ಲ. ರಾಜ್ಯ ಸರಕಾರದಿಂದ ನೀಡುವ 5,000 ರೂ. ಗೌರವಧನ ಮತ್ತು ಕೇಂದ್ರ ಸರಕಾರದ ಅಂದಾಜು 5,000 ರೂ. ಪ್ರೋತ್ಸಾಹಧನ ಸಹಿತ 3 ತಿಂಗಳ ಒಟ್ಟು 30 ಸಾವಿರ ರೂ. ಇನ್ನೂ ಪಾವತಿಯಾಗಿಲ್ಲ. …

Read More »

8000 ರೂ. ಜಮೆ ವದಂತಿ: 10 ದಿನಗಳಲ್ಲಿ 10 ಸಾವಿರ ಅಂಚೆ ಐಪಿಪಿಬಿ ಖಾತೆ!

ಬೆಂಗಳೂರು: ಜನರಲ್‌ ಪೋಸ್ಟ್‌ ಆಫೀಸ್‌ ಬೆಂಗಳೂರಿನ ಕಚೇರಿಯಲ್ಲಿ ಗುರುವಾರ ಒಂದೇ ದಿನ 1,250 ಹೊಸ ಐಪಿಪಿಬಿ ಖಾತೆಯ ತೆರೆಯಲಾಗಿದೆ. ಅಂಚೆ ಇಲಾಖೆಯು ಪ್ರತಿ ಇಂಡಿಯನ್‌ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (ಐಪಿಪಿಬಿ) ಖಾತೆಗೆ 8,000 ರೂ. ಜಮೆಯಾಗಲಿದೆ ಎನ್ನುವುದು ಕೇವಲ ವದಂತಿ ಎನ್ನುವ ಕುರಿತು ಸ್ಪಷ್ಟನೆ ನೀಡಲಾಗಿದೆ. ಆದರೂ ಜನರು ಮಾತ್ರ ಐಪಿಪಿಬಿ ಖಾತೆ ತೆರೆಯಲು ಮುಗಿ ಬೀಳುವುದು ಕಡಿಮೆಯಾಗಿಲ್ಲ. ಕಳೆದ 10 ದಿನಗಳಿಂದ ಸುಮಾರು 10 ಸಾವಿರ ಐಪಿಪಿಬಿ ಖಾತೆ ತೆರೆಯಲಾಗಿದೆ. …

Read More »

ಪುಸ್ತಕ ಮಳಿಗೆಯೊಂದರಲ್ಲಿ ಕಳ್ಳತನ

ದಾಂಡೇಲಿ: ನಗರದ ಲೆನಿನ್ ರಸ್ತೆಯಲ್ಲಿರುವ ಬುಕ್ ಸ್ಟಾಲ್ ವೊಂದರಲ್ಲಿ ಮೇ.31ರ ಶುಕ್ರವಾರ ನಸುಕಿನ ವೇಳೆ ಕಳ್ಳತನ ನಡೆದಿರುವ ಘಟನೆ ನಡೆದಿದೆ. ಪುಸ್ತಕ ಮಳಿಗೆಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು 2 ಸಾವಿರ ರೂ. ನಗದು ಮತ್ತು ಅಗತ್ಯ ದಾಖಲೆ ಪತ್ರಗಳಿದ್ದ ತಿಜೋರಿ ಹಾಗೂ ಸಿಸಿ ಕ್ಯಾಮರಾದ ಡಿವಿಆರ್ ಅನ್ನು ಹೊತ್ತೊಯ್ದಿದ್ದಾರೆ. ಘಟನೆಯ ಕುರಿತಂತೆ ಪುಸ್ತಕ ಮಳಿಗೆಯ ಮಾಲಕ ಅಲ್ಲಂಪ್ರಭು ಪಾಟೀಲ್ ಅವರು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ …

Read More »

ಹೆಸರು ಬದಲಿಸಿಕೊಂಡ ಶಶಿಕುಮಾರ್‌ ಪುತ್ರ ಅಕ್ಷಿತ್‌

ನಾಯಕ-ನಾಯಕಿಯರು ತಮ್ಮ ಮೂಲ ಹೆಸರು ಬದಲಿಸಿಕೊಂಡು ಆಗಾಗ ಅದೃಷ್ಟ ಪರೀಕ್ಷೆಗಿಳಿಯುತ್ತಾರೆ. ಈಗ ನಟ ಶಶಿಕುಮಾರ್‌ ಪುತ್ರ ಕೂಡಾ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ಅಕ್ಷಿತ್‌ ಎಂಬ ಹೆಸರನ್ನು ಆದಿತ್ಯ ಎಂದು ಬದಲಿಸಿಕೊಂಡಿದ್ದಾರೆ. ಈ ಹೆಸರಿನೊಂದಿಗೆ ಈಗ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಅದು “ಕಾದಾಡಿ’ ಮೂಲಕ. ಇದು ಅದಿತ್ಯ ನಟನೆಯ ಹೊಸ ಸಿನಿಮಾ . ಕನ್ನಡ, ತೆಲುಗು,ಹಿಂದಿ ಮತ್ತು ತಮಿಳು ಭಾಷೆಯಲ್ಲಿ ತಯಾರಾಗಿರುವ ಈ ಸಿನಿಮಾವನ್ನು ಸತೀಶ್‌ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲಂಸ್‌ …

Read More »

ನಮಗೆ ಆದ ಅನ್ಯಾಯ ಬೇರೆ‌ ಯಾರಿಗೂ ಆಗಬಾರದು. ನಿರಂಜನ ಹಿರೇಮಠ

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಆಗಿದ್ದು ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಸಿಐಡಿ ಡಿಜಿಪಿ ಅವರಿಗೆ ಮಾಹಿತಿ ಕೊಟ್ಟಿದ್ದೇನೆ ಎಂದು ನೇಹಾ ತಂದೆ ಹಾಗೂ ಹು-ಧಾ. ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಹೇಳಿದರು. ಸಿಐಡಿ ಡಿಜಿಪಿ ಎಂ.ಎ. ಸಲೀಂ ಅವರು ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗಳ ಕೊಲೆಯಲ್ಲಿಯೇ ಇದು ಅಂತ್ಯ ಆಗಬೇಕು. ನಮಗೆ ಆದ ಅನ್ಯಾಯ ಬೇರೆ‌ ಯಾರಿಗೂ ಆಗಬಾರದು …

Read More »

ಠಾಣೆ ಧ್ವಂಸ, ಆದಿಲ್ ಸಾವಿನ ಪ್ರಕರಣಗಳ ಹೆಚ್ಚಿನ ತನಿಖೆ: ಡಾ| ಜಿ. ಪರಮೇಶ್ವರ್

ದಾವಣಗೆರೆ: ಚನ್ನಗಿರಿ ಪೊಲೀಸ್ ಠಾಣೆ ಧ್ವಂಸ ಹಾಗೂ ಆದಿಲ್ ಸಾವಿನ ಕುರಿತಾದ ಎರಡು ಪ್ರಕರಣಗಳನ್ನು ಹೆಚ್ಚಿನ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ತಿಳಿಸಿದರು. ಗುರುವಾರ ಸಂಜೆ ಚನ್ನಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿ, ಚನ್ನಗಿರಿಯಲ್ಲಿ ಕಳೆದ ಶುಕ್ರವಾರ ನಡೆದಂತಹ ಘಟನೆಯ ಬಗ್ಗೆ ಮಾಹಿತಿ ಪಡೆಯಲು ಬಂದಿರುವುದಾಗಿ ತಿಳಿಸಿದರು. ಪೊಲೀಸ್ ಠಾಣೆಗೆ ನುಗ್ಗಿ ಧ್ವಂಸ ಮಾಡಿರುವ ಒಂದು ಪ್ರಕರಣವಾದರೆ, ಮಟ್ಕಾ ಆಡುಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ …

Read More »