ಬೆಂಗಳೂರು: ನಕಲಿ ದಾಖಲೆಗಳನ್ನು ನೀಡಿ ಪಡೆದುಕೊಂಡಿದ್ದ ಸುಮಾರು 12.47 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದ್ದು, ಈ ಮೂಲಕ ರಾಜ್ಯ ಸರ್ಕಾರವು ಅಕ್ರಮವಾಗಿ ಕಾರ್ಡ್‌ಹೊಂದಿರುವವರಿಗೆ ಬಿಸಿ ಮುಟ್ಟಿಸುವುದಕ್ಕೆ ಮುಂದಾಗಿದೆ. ಅಕ್ರಮವಾಗಿ ಕಾರ್ಡ್ ಪಡೆದುಕೊಂಡಿರುವವರ ವಿವರವನ್ನು ಪತ್ತೆ ಹೆಚ್ಚುವುದಕ್ಕೆ ರಾಜ್ಯ ಸರ್ಕಾರವು ವಿವಿಧ ಮೂಲಗಳ ಮೊರೆ ಹೋಗಿದ್ದು, ಈ ಪೈಕಿ ಆದಾಯ ತೆರಿಗೆ ಇಲಾಖೆ, ಆರ್‌ಟಿಓ, ಸಬ್ ರಿಜಿಸ್ಟ್ರಾರ್ ಕಚೇರಿ, ಕಂದಾಯ ಇಲಾಖೆ ಕೂಡ ಆಗಿದೆ. ಇದಲ್ಲದೇ ಕುಟುಂಬದ ವಾರ್ಷಿಕ …
Read More »ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಣೆ: ಆಷಾಢದಲ್ಲಿ ಇದೇ ಮೊದಲು!
ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ (ಕೆಆರ್‌ಎಸ್) ಅಣೆಕಟ್ಟೆ ಭರ್ತಿಯಾದ ಸಂದರ್ಭದಲ್ಲಿ ಬಾಗಿನ ಅರ್ಪಿಸುವ ಸಂಪ್ರದಾಯ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಕಾಲದಿಂದ ನಡೆದುಕೊಂಡು ಬಂದಿದೆ. ಆಷಾಢ ಮಾಸದಲ್ಲಿ ಜರುಗುತ್ತಿರುವುದು ಇದೇ ಮೊದಲು. ಶ್ರಾವಣ ಅಥವಾ ಭಾದ್ರಪದ ಮಾಸದಲ್ಲಿ ಜಲಾಶಯ ಭರ್ತಿಯಾಗುತ್ತಿತ್ತು. ಈ ಹಿಂದೆ ಸಾಮಾನ್ಯವಾಗಿ ವರಮಹಾಲಕ್ಷ್ಮಿ ಹಬ್ಬ ಸಮೀಪವಿದ್ದಾಗ ಬಾಗಿನ ಅರ್ಪಣೆ ನಡೆಯುತ್ತಿತ್ತು. ಈ ಬಾರಿ ಅಣೆಕಟ್ಟೆ ಮುಂಚಿತವಾಗಿ ಭರ್ತಿಯಾಗಿದೆ. 1989ರಿಂದ, ಅಂದರೆ 35 ವರ್ಷಗಳಿಂದ ಜ್ಯೋತಿಷಿ …
Read More »ರಾಜಸ್ಥಾನದಿಂದ ಬಂದಿದ್ದು ಮೇಕೆ ಮಾಂಸ, ನಾಯಿ ಮಾಂಸ ಅಲ್ಲ; ಪರಂ
ದಾವಣಗೆರೆ: ರಾಜಸ್ಥಾನದಿಂದ ಬೆಂಗಳೂರಿಗೆ ರೈಲಿನ ಮೂಲಕ ಬಂದಿದ್ದು ನಾಯಿ ಮಾಂಸ ಅಲ್ಲ. ಅದು ಮೇಕೆ ಮಾಂಸವಾಗಿದೆ ಎಂದು ಗೃಹ ಸಚಿವ ಡಾ|ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಾಯಿ ಮಾಂಸ ತಂದು ಮೇಕೆ ಮಾಂಸ ಎಂದು ಮಾರಾಟ ಮಾಡಲಾಗುತ್ತಿದೆ ಎಂದು ಇತ್ತೀಚೆಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅನುಮಾನ ವ್ಯಕ್ತಪಡಿಸಿ ರೈಲು ನಿಲ್ದಾಣದಲ್ಲಿ ಗಲಾಟೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಚಿವರು, ಈ ಸಂಬಂಧ ಪ್ರಯೋಗಾಲಯದ ವರದಿ ಬಂದಿದ್ದು, ವರದಿ ಅನ್ವಯ ಅದು ಮೇಕೆ …
Read More »‘ಗೃಹಲಕ್ಷ್ಮಿ’ ಯೋಜನೆಯ 2 ತಿಂಗಳಿನ ಹಣ ಒಟ್ಟಿಗೆ ಜಮಾ.!
ಬೆಂಗಳೂರು : ಯಜಮಾನಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಆಗಸ್ಟ್ ಮೊದಲ ವಾರದಲ್ಲಿ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ 2 ತಿಂಗಳಿನ ಹಣ ಒಟ್ಟಿಗೆ ಜಮಾ ಆಗಲಿದೆ. ಕೆಲವು ತಾಂತ್ರಿಕ ತೊಂದರೆಯಿಂದ ಸರ್ಕಾರ ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಮಾಡಿರಲಿಲ್ಲ. ಇದೀಗ ಸರ್ಕಾರ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುತ್ತಿದ್ದು, ಆಗಸ್ಟ್ ಮೊದಲ ವಾರದಲ್ಲಿ ಜೂನ್ ಹಾಗೂ ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಆಗಲಿದೆ ಎಂದು ಮೂಲಗಳು ತಿಳಿಸಿದೆ. ಇನ್ಮುಂದೆ …
Read More »ಶಾಲಾ ಆವಣರಕ್ಕೆ ನುಗ್ಗಿದ ನೀರು
ಮುಧೋಳ : ಘಟಪ್ರಭಾ ಪ್ರವಾಹ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಮುಧೋಳದ ರಾಜ್ ಘಾಟ್ ಮುಕ್ತಿಧಾಮ ಸೋಮವಾರ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಮುಧೋಳ ನಗರ ಸೇರಿ ತಾಲೂಕಿನ ಮಿರ್ಜಿ, ಮಳಲಿ, ಮಲ್ಲಾಪುರ ಭಾಗದಲ್ಲಿ ಹೆಚ್ಚಿನ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಯಾದವಾಡ-ಮುಧೋಳ ಸೇತುವೆ ಮೇಲೆ ನೀರಿನಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು ನದಿನೀರು ವೀಕ್ಷಣೆಗೆ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಪೊಲೀಸ್ ಇಲಾಖೆಯಿಂದ ನದಿದಡದಲ್ಲಿ ಬ್ಯಾರಿಕೇಡ್ ಹಾಕಿ ಜನರನ್ನು ನಿಯಂತ್ರಿಸಲಾಗುತ್ತಿದೆ. ಮುಧೋಳ …
Read More »ಕೇಂದ್ರ ಬಜೆಟ್ 2024 ಕುರಿತು ಇಂದು ಸಂಸತ್ತಿನಲ್ಲಿ ರಾಹುಲ್ ಗಾಂಧಿ ಭಾಷಣ
ನವದೆಹಲಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು ಮಧ್ಯಾಹ್ನ 2 ಗಂಟೆಗೆ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2024 ಅನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ವಿರೋಧ ಪಕ್ಷದ ನಾಯಕನ ಪಾತ್ರದಲ್ಲಿ ರಾಹುಲ್ ಮಾತನಾಡುವುದು ಅನಿವಾರ್ಯ ಎಂದು ಕಾಂಗ್ರೆಸ್ ಸಂಸದರು ಭಾವಿಸಿದ್ದಾರೆ ಎಂದು ಮೂಲಗಳು ಸೂಚಿಸುತ್ತವೆ. ಇದಕ್ಕೂ ಮೊದಲು, ಕಾಂಗ್ರೆಸ್ ಲೋಕಸಭಾ ಸಂಸದರೊಂದಿಗಿನ ಸಭೆಯಲ್ಲಿ, ರಾಹುಲ್ ಗಾಂಧಿ ಅವರು ಈಗಾಗಲೇ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಾತನಾಡಿರುವುದರಿಂದ, ಪ್ರತಿ ಬಾರಿ …
Read More »ಲೀಲಾ ಪ್ಯಾಲೇಸ್‌ನಲ್ಲಿ ‘ರಾಜಾಹುಲಿ’ ಗಾಂಭೀರ್ಯ ನಡಿಗೆ,
ಬೆಂಗಳೂರು, ಜುಲೈ 29: ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ (KGF film) ಸರಣಿ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ದೇಶಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರು ಸದ್ಯ ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಬ್ಯೂಸಿ ಇದ್ದಾರೆ. ಈ ಮಧ್ಯೆ ಯಶ್ ಅವರ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಚ್ಚಿಸಿದೆ. ಟಾಪ್ ಟ್ರೆಂಡಿಂಗ್‌ನಲ್ಲಿದೆ. ಕೆವಿಎನ್ ಪ್ರೊಡಕ್ಷನ್ ಕಡೆಯಿಂದ ಟಾಕ್ಸಿಕ್ ಸಿನಿಮಾ ಚಿತ್ರೀಕರಣ …
Read More »NABARD’ ನಲ್ಲಿ 102 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ದೇಶಾದ್ಯಂತದ ಶಾಖೆಗಳಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಮೂಲಕ 102 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಪದವಿ, ಡಿಪ್ಲೊಮಾ, ಪಿಜಿ ಮತ್ತು ಪಿಜಿ ಡಿಪ್ಲೊಮಾವನ್ನು ಸಂಬಂಧಪಟ್ಟ ವಿಭಾಗಗಳಲ್ಲಿ ಶೇಕಡಾ 60 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು 850 ರೂ.ಗಳ ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಆಗಸ್ಟ್ …
Read More »ವಿಶ್ವ ಮಟ್ಟದ ಚೆಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಮರ್ಥ ಜಗದೀಶ್ ರಾವ್
ಹೊನ್ನಾವರ: ಜುಲೈ 20 ರಿಂದ 27ರ ವರೆಗೆ ಗ್ಯೂಮ್ರಿ, ಅರ್ಮೇನಿಯ ದೇಶದಲ್ಲಿ ನಡೆದ 23ನೇ IPCA ವಿಶ್ವ ಮಟ್ಟದ ವೈಯುಕ್ತಿಕ ಚೆಸ್ ಚಾಂಪಿಯನ್ ಶಿಫ್ ನಲ್ಲಿ ಹೊನ್ನಾವರದ ಸಿ.ಎಮ್. ಸಮರ್ಥ ಜಗದೀಶ್ ರಾವ್, 9 ಸುತ್ತಿನಲ್ಲಿ 6 ಪಂದ್ಯ ಗೆದ್ದು ವೀಲ್ ಚೆಯರ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದು ನಮ್ಮ ದೇಶದ ಕೀರ್ತಿ ಪತಾಕೆಯನ್ನು ಅರ್ಮೇನಿಯದಲ್ಲಿ ಹಾರಿಸಿದ್ದಾನೆ. ಚೆಸ್ ಚಾಂಪಿಯನ್ ಶಿಫ್ ನಲ್ಲಿ 14 ದೇಶಗಳಿಂದ 52 ಆಟಗಾರರು ಭಾಗವಹಿಸಿದ್ದರು. ಈ …
Read More »ನಾನು ‘MA, PHD’ ಮಾಡಿದ್ದೇನೆ ಆದರೆ ನನ್ನ ‘ಜಾತಿ’ ನನ್ನ ಬಿಟ್ಟು ಹೋಗಲ್ಲ : ಗೃಹ ಸಚಿವ
ದಾವಣಗೆರೆ : ಜಾತಿ ಪದ್ಧತಿ ಹೋಗಲ್ಲ ಎಂಬುವುದು ನನ್ನ ಅಭಿಪ್ರಾಯ. ನಾವು ಬದಲಾಗದಿದ್ದರೆ ಮುಂದೆಯೂ ಗ್ರಾಮಗಳ ಹೊರಗೆ ಇರಬೇಕಾಗುತ್ತದೆ ಎಂದು ದಾವಣಗೆರೆಯಲ್ಲಿ ಗೃಹ ಇಲಾಖೆಯ ಸಚಿವ ಜಿ. ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ಛಲವಾದಿ ಮಹಾಸಭೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಭಾಷಣ ಮಾಡಿ, ನಾನು ಎಂಎ.ಪಿಎಚ್ ಡಿ ಮಾಡಿದ್ದೇನೆ. ಆದರೆ ನನ್ನ ಜಾತಿ ನನ್ನ ಬಿಟ್ಟು ಹೋಗುವುದಿಲ್ಲ. ಜಿ ಪರಮೇಶ್ವರ್ ಬುದ್ಧಿವಂತ ಆದರೆ ಪರಿಶಿಷ್ಟ ಜಾತಿಗೆ ಸೇರಿದ್ದಾನೆ ಇಲ್ಲದಿದ್ದರೆ …
Read More »
Laxmi News 24×7