Breaking News

ಅಕ್ಷರ ದಾಸೋಹ ಅಧಿಕಾರಿ ಆತ್ಮಹತ್ಯೆಗೆ ಯತ್ನ

ಲಿಂಗಸೂಗೂರು: ತಾಲೂಕಿನ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮೌನೇಶ ಕಂಬಾರ್ ಆತ್ಮಹತ್ಯೆ ಯತ್ನಿಸಿದ ಘಟನೆ ನಡೆದಿದೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ನಿನ್ನೆ ರಜೆ ಮಾಡಿದ ಅವರು ನಿದ್ರೆ ಮಾತ್ರೆ ಸೇವಿಸಿದ್ದಾರೆ. ಪಟ್ಟಣದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕರೆದೊಯ್ಯಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Read More »

ಮಸೀದಿಗಳಾಗಿ ಮಾರ್ಪಾಡಾದ ದೇವಾಲಗಳನ್ನು ಮರಳಿ ಪಡೆಯಲು ಕಾನೂನಾತ್ಮಕ ಹೋರಾಟ: ಪೇಜಾವರ ಶ್ರೀ

ಬೆಳಗಾವಿ: ಕಾಶಿ ಮತ್ತು ಮಥುರಾದಲ್ಲಿ ಮಸೀದಿಗಳಾಗಿ ಮಾರ್ಪಾಡು ಮಾಡಲಾದ ಕಾಶಿ ದೇವಾಲಯಗಳನ್ನು ಮರಳಿ ಪಡೆಯಲು ಕಾನೂನಾತ್ಮಕ ಹೋರಾಟ ಮಾಡಲಾಗುತ್ತಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಬೀದಿಯಲ್ಲಿ ಹೋರಾಡುವುದಕ್ಕಿಂತ ಕಾನೂನು ಹೋರಾಟ ಉತ್ತಮ ಎಂದು ನ್ಯಾಯಾಲಯಗಳು ಅಭಿಪ್ರಾಯಪಟ್ಟಿರುವ ಕಾರಣ ಅದನ್ನು ಅನುಸರಿಸಿದ್ದೇವೆ ಎಂದರು. ದೇವಾಲಯಗಳನ್ನು ಹಿಂಪಡೆಯುವ ನಮ್ಮ ಹೋರಾಟ ಎಲ್ಲ ರೀತಿಯಿಂದ ಸಮರ್ಥನೀಯ ಎಂದು ಅವರು ಈ ಹಿಂದೆ ನಮಗೆ ಆದ …

Read More »

ಬೈಕ್ ಗೆ ಡಿಕ್ಕಿ ಹೊಡೆದು ಸಾರಿಗೆ ಬಸ್ ಪಲ್ಟಿ: ಬೈಕ್ ಸವಾರ ದುರ್ಮರಣ

ಬೆಳಗಾವಿ: ಬೆಳಗಾವಿ – ಗೋಕಾಕ ರಾಜ್ಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದ ಸಾರಿಗೆ ಬಸ್ ಪಲ್ಟಿಯಾಗಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಶುಕ್ರವಾರ ತಾಲೂಕಿನ ಖನಗಾಂವ ಕೆ.ಎಚ್. ಗ್ರಾಮದ ಬಳಿ ಸಂಭವಿಸಿದೆ. ತಾಲೂಕಿನ ಸುಳೇಭಾವಿ ಗ್ರಾಮದ ವಿಠ್ಠಲ ದತ್ತಾ ಲೋಕರೆ (29) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.   ಬೆಳಗಾವಿಯಿಂದ ಗೋಕಾಕ ಕಡೆಗೆ ಹೊರಟಿದ್ದ ಸಾರಿಗೆ ಬಸ್ ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ …

Read More »

ಜೂ.12 ರಂದು ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ

ಧಾರವಾಡ : ಕರ್ನಾಟಕ ಲೋಕಾಯುಕ್ತ, ಧಾರವಾಡ ಕಚೇರಿಯ ಪೊಲೀಸ್ ಅಧಿಕಾರಿಗಳು ಜೂನ್ 12, 2024 ರಂದು ಹುಬ್ಬಳ್ಳಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಧಾರವಾಡ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು ಜೂನ್ 12 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹುಬ್ಬಳ್ಳಿಯ ತಾಲೂಕು ಪಂಚಾಯತ ಸಭಾಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಾಗುವುದು. ಸಾರ್ವಜನಿಕರು ತಮ್ಮ ದೂರ, ಅಹವಾಲುಗಳನ್ನು ಸಲ್ಲಿಸಬೇಕೆಂದು ಅವರು …

Read More »

ಚಂದನ್ ಶೆಟ್ಟಿ- ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು!

ಬೆಂಗಳೂರು: ಕನ್ನಡದ ಪ್ರಸಿದ್ದ ರಾಪರ್, ನಟ ಚಂದನ್ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ಅವರ ನಾಲ್ಕು ವರ್ಷಗಳ ದಾಂಪತ್ಯ ಮುರಿದು ಬಿದ್ದಿದೆ ಎಂದು ವರದಿಯಾಗಿದೆ. ಬಿಗ್ ಬಾಸ್ ಸೀಸನ್ 5 ನಲ್ಲಿ ಪರಿಚಯವಾಗಿ ಬಳಿಕ ವಿವಾಹವಾಗಿದ್ದ ಈ ಜೋಡಿ ಇದೀಗ ದೂರವಾಗಿದೆ ಎನ್ನಲಾಗಿದೆ.   ಬೆಂಗಳೂರಿನ 2ನೇ ಹೆಚ್ಚುವರಿ ಕೌಟುಂಬಿಕ ಕೋರ್ಟ್ ಇಂದು (ಜೂನ್ 7) ಚಂದನ್ ಶೆಟ್ಟಿ ಮತ್ತು ನಿವೇದಿತಾಗೆ ವಿಚ್ಚೇದನ ಮಂಜೂರು ಮಾಡಿದೆ ಎಂದು ಮಾಧ್ಯಮ …

Read More »

ಮಕ್ಕಳ ಪೋಷಕ’ರೇ ಗಮನಿಸಿ: ‘RTE ಅಡಿ’ ಮೊದಲ ಸುತ್ತಿನ ಸೀಟು ಹಂಚಿಕೆ, ನಾಳೆಯಿಂದ ‘ದಾಖಲಾತಿ ಆರಂಭ’

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಿಂದ 2024-24ನೇ ಸಾಲಿನ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-2009ರ ಸೆಕ್ಷನ್ 12(1)(ಬಿ) ಹಾಗೂ 12(1)(ಸಿ) ಅಡಿಯಲ್ಲಿ ನಾಳೆಯಿಂದ ಮಕ್ಕಳದ ದಾಖಲಾತಿ ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿದೆ. ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಲಾಗಿದ್ದು, ಜೂನ್.19 ದಾಖಲಾತಿಗೆ ಕೊನೆಯ ದಿನವಾಗಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಆರ್.ಟಿಇ ಅಡಿಯಡಿ ಮಕ್ಕಳನ್ನು ಶಾಲೆಗಳಲ್ಲಿ ದಾಖಲಿಸಿಕೊಳ್ಳೋದಕ್ಕೆ ಜೂನ್.8ರ ನಾಳೆಯಿಂದ ಆರಂಭಗೊಳ್ಳಲಿದೆ. ಜೂನ್.19 …

Read More »

ಮದುವೆಯಾಗುವುದಾಗಿ ನಂಬಿಸಿ ಪ್ರೇಯಸಿ ಮೇಲೆ ಅತ್ಯಾಚಾರ:

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ದ್ವೀತಿಯ ಪಿಯುಸಿ ಓದುತ್ತಿದ್ದ ಯುವತಿಯನ್ನು ಪರಿಚಯಿಸಿಕೊಂಡು ಬಳಿಕ ಆಕೆಯನ್ನು ತನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಂಡಿದ್ದಾನೆ. ನಂತರ, ನಿನ್ನೇ ಮದುವೆ ಆಗುತ್ತೇನೆ ಅಂತ ಪ್ರೇಯಸಿಯ ಮತ್ತು ತನ್ನ ಪೋಷಕರ ಬಳಿ ಮಾತನಾಡಿ ವಿವಾಹಕ್ಕೆ ಒಪ್ಪಿಸಿದ್ದಾನೆ. ವಿವಾಹ ನಿಶ್ಚಯವಾದ ಮೇಲೆ ಒಂದು ದಿನ ಪ್ರೇಯಸಿ ಮನೆಗೆ ಬಂದ ಪ್ರಿಯಕರ ರವಿರಾಜ್​ ಎಸಗಿದ ನೀಚ ಕೃತ್ಯ. ಕೊಪ್ಪಳ, ಜೂನ್​ 07: ಮದುವೆಯಾಗುವುದಾಗಿ (Marriage) ನಂಬಿಸಿ ಪ್ರಿಯತಮೆ (Lover) ಮೇಲೆ ಅತ್ಯಾಚಾರವೆಸಗಿ …

Read More »

ರಾಜ್ಯದಲ್ಲಿ 45,000 ಅತಿಥಿ ಶಿಕ್ಷಕರ ನೇಮಕಕ್ಕೆ ಒಪ್ಪಿಗೆ ನೀಡಿದ ಕರ್ನಾಟಕ ಸರ್ಕಾರ

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಖಾಯಂ ಶಿಕ್ಷಕರ ನೇಮಕವಾಗುವವರೆಗೆ ಅಥವಾ ಶೈಕ್ಷಣಿಕ ವರ್ಷ ಮುಗಿಯುವವರೆಗೆ, ಯಾವುದು ಮೊದಲು ಬರುತ್ತದೋ ಆ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ರಾಜ್ಯಾದ್ಯಂತ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 35,000 ಮತ್ತು ಪ್ರೌಢಶಾಲೆಗಳಿಗೆ 10,000 ಅತಿಥಿ ಶಿಕ್ಷಕರು ಸೇರಿದಂತೆ 45,000 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ರಾಜ್ಯ ಸರ್ಕಾರ ತನ್ನ ಅನುಮೋದನೆ ನೀಡಿದೆ.ಈ ಕುರಿತು ಇತ್ತೀಚೆಗೆ ಆದೇಶ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ …

Read More »

ಶಾಸಕ ತಮ್ಮಣ್ಣವರ್ ವಿರುದ್ಧ ಗುಡುಗಿದ ಸತೀಶ್ ಜಾರಕಿಹೊಳಿ

ಎಸ್ಸಿ ನಾಯಕರನ್ನು ತುಳಿದಿದ್ದಾರೆ ಎಂಬ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣವರ್ ಆರೋಪಕ್ಕೆ ತಿರುಗೇಟು ನೀಡಿದ ಸತೀಶ್ ಜಾರಕಿಹೊಳಿ, ನಾನು ಯಾರನ್ನೂ ತುಳಿಯುವ ಪ್ರಶ್ನೆ ಇಲ್ಲ. ಚುನಾವಣೆಗೆ ಮೂರು ದಿನ ಇದ್ದಾಗಲೇ ಯಾರ ಕೈಗೂ ಶಾಸಕ ಸಿಕಿಲ್ಲ. ಸರಿಯಾಗಿ ಚುನಾವಣೆ ಮಾಡಲಿಲ್ಲ, ನಾನೇ ಇದ್ದು ಅವರನ್ನ ನೋಡಿದ್ದೇನೆ. ಅವರಿಗೆ ಟಿಕೇಟ್ ನಾವೇ ಕೊಡಿಸಿದ್ದೇವೆ. ಕಾಂಗ್ರೆಸ್ ಪಕ್ಷವನ್ನು ಬಿಟ್ಟು ತಮ್ಮ ಮಾವನ ಪರವಾಗಿ ಕೆಲಸವನ್ನು ಮಾಡಿದ್ದಾರೆ ಎಂದರು.   ಶಾಸಕ ಪಕ್ಷ ವಿರೋಧಿ …

Read More »

ಸವದಿ ವಿರುದ್ಧ ಸತೀಶ್ ಜಾರಕಿಹೊಳಿ‌ ಬಹಿರಂಗ ಅಸಮಾಧಾನ

ಲೋಕಸಭೆ ಚುನಾವಣೆ ಫಲಿತಾಂಶ ಬಂದ ನಂತರವೂ, ಚಿಕ್ಕೋಡಿಯಲ್ಲಿ ಗೆದ್ದ ನಂತರವೂ ಕಾಂಗ್ರೆಸ್ ಆಂತರಿಕ ಬೇಗುದಿ ತಣ್ಣಗಾಗಿಲ್ಲ. ಇದೀಗ ಬಿಜೆಪಿಯಿಂದ ಬಂದು ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿರುವ ಲಕ್ಷ್ಮಣ್ ಸವದಿ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಬೆಳಗಾವಿ, ಜೂನ್ 7: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಅಭ್ಯರ್ಥಿಗೆ ಗೆಲುವಾದರೂ ಪಕ್ಷದ ಒಳಬೇಗುದಿ ಹೆಚ್ಚಾಗಿದೆ. ಇದೀಗ ಶಾಸಕ ಲಕ್ಷ್ಮಣ್ (Laxman Savadi) ಸವದಿ ವಿರುದ್ಧ ಸಚಿವ …

Read More »