ಜುಗೂಳ(ಬೆಳಗಾವಿ ಜಿಲ್ಲೆ): ‘ಪ್ರವಾಹದಾಗ ಕೃಷ್ಣಾ ನದಿ ಉಕ್ಕಿ ಹರಿತಿರ್ತೇತಿ. ನೀರಿನ ಸೆಳವಿಗೆ ಸಿಕ್ಕು, ಒಮ್ಮಿಂದೊಮ್ಮೆ ದೋಣಿ ಅಲುಗಾಡಿದಂಗ್ ಆಗ್ತೇತಿ. ಒಂದು ವೇಳೆ ದೋಣಿ ಪಲ್ಟಿ ಆದ್ರ, ಗಂಡ್ಮಕ್ಳು ಹೆಂಗೋ ಈಜ್ಕೊಂತ ದಡ ಸೇರ್ತಿವಿ. ಆದ್ರ ಹೆಣ್ಮಕ್ಳು ಮತ್ತು ವಯಸ್ಸಾದಾವ್ರ ಇದ್ರ, ಅವರ ಕತಿ ಏನ್ರೀ…’ ಕಾಗವಾಡ ತಾಲ್ಲೂಕಿನ ಜುಗೂಳ ಗ್ರಾಮಸ್ಥ ದಯಾನಂದ ಮಿಣಚೆ ಅವರು ಸಂಕಷ್ಟ ತೋಡಿಕೊಂಡಿದ್ದು ಹೀಗೆ. ಜುಗೂಳ ಮತ್ತು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಖಿದ್ರಾಪುರ ಅಕ್ಕಪಕ್ಕದಲ್ಲಿವೆ. ಒಂದು …
Read More »ಅಂಗನವಾಡಿಗೆ ಸ್ನಾತಕೋತ್ತರ ಪದವೀಧರರು: ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು15 ಮಂದಿ ನೇಮಕ
ಬೆಳಗಾವಿ: ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಈ ವರ್ಷ 197 ಕಾರ್ಯಕರ್ತೆಯರು ನೇಮಕಗೊಂಡಿದ್ದಾರೆ. ಅವರಲ್ಲಿ 15 ಮಂದಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಬೆಳಗಾವಿ ಜಿಲ್ಲೆಯಲ್ಲಿ 5,656 ಅಂಗನವಾಡಿ ಕೇಂದ್ರಗಳಿವೆ. 1,200ಕ್ಕೂ ಅಧಿಕ ಕೇಂದ್ರಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ. ಜಿಲ್ಲೆಯಲ್ಲಿ 283 ಅಂಗನವಾಡಿ ಕಾರ್ಯಕರ್ತೆಯರ ನೇಮಕಕ್ಕೆ 2023ರ ಜೂನ್‌ನಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. …
Read More »ಲಾರಿ ಡಿಕ್ಕಿ: ಆಟೊ ಚಾಲಕ ಸ್ಥಳದಲ್ಲೇ ಸಾವು
ಬೆಳಗಾವಿ: ಯಡಿಯೂರಪ್ಪ ಮಾರ್ಗಕ್ಕೆ ಹೊಂದಿಕೊಂಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ ಗೂಡ್ಸ್ ಆಟೊ ಹಾಗೂ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ, ಆಟೊ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮದ ಅಮಿನ್ ಯರಗಟ್ಟಿ (45) ಮೃತ ವ್ಯಕ್ತಿ. ಆಟೊದಲ್ಲಿ ತರಕಾರಿ ತುಂಬಿಕೊಂಡು ಬೆಳಗಾವಿ ನಗರಕ್ಕೆ ಬರುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕೆಳಗಡೆ ಬಿದ್ದ ಆಟೊ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದರು. ಲಾರಿ ಕೂಡ ರಸ್ತೆ ಪಕ್ಕಕ್ಕೆ …
Read More »ಸಂಚಾರಿ ಕುರಿಗಾಹಿಗಳಿಗೆ ಬೇಕು ಸೌಕರ್ಯ
ರಾಯಬಾಗ: ರಾಜ್ಯದಲ್ಲಿ ಕುರುಬ ಸಮಾಜದ ಸಂಖ್ಯೆ 60 ಲಕ್ಷಕ್ಕೂ ಅಧಿಕವಿದೆ. ಸುಮಾರು 18 ಲಕ್ಷಕ್ಕೂ ಅಧಿಕ ಸಂಚಾರಿ ಕುರಿಗಾಹಿಗಳಿದ್ದಾರೆ. ಒಟ್ಟಾರೆ ಜನಸಂಖ್ಯೆಯ ಶೇ 30ರಷ್ಟು ಮಂದಿ ಸಂಚಾರಿ ಕುರಿಗಾಹಿಗಳೇ ಇದ್ದಾರೆ. ಆದರೆ, ಈ ಸಮಾಜಕ್ಕೆ ಸಲ್ಲಬೇಕಾದ ಕನಿಷ್ಠ ಸೌಕರ್ಯಗಳು ಇನ್ನೂ ಸಿಕ್ಕಿಲ್ಲ. ಆದಿವಾಸಿ ಬುಡಕಟ್ಟು ಸಂಸ್ಕತಿಯನ್ನೇ ಜೀವಾಳವಾಗಿಸಿಕೊಂಡು ಕುರಿ ಸಾಕಾಣಿಕೆ, ಕಂಬಳಿ ನೇಕಾರಿಕೆ ಮೂಲಕ ಜೀವನ ಸಾಗಿಸುತ್ತಿರುವ ಹಾಲುಮತ ಕುರುಬರು ಇನ್ನೂ ಸಂಕಷ್ಟದಲ್ಲಿದ್ದಾರೆ. ಸಂಚಾರಿ ಕುರುಬರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಘೋಷಿಸಿದೆ. …
Read More »ಚಿಕ್ಕೋಡಿಯಲ್ಲಿ ಮತ್ತೇ ಪ್ರವಾಹ ಭೀತಿ!
ಚಿಕ್ಕೋಡಿ: ಮಹಾ ಮಳೆಯಿಂದ ಚಿಕ್ಕೋಡಿ ಉಪ ವಿಭಾಗದಲ್ಲಿ ಕೃಷ್ಣಾ ,ಉಪ ನದಿಗಳು ಭೋರ್ಗರೆಯುತ್ತಿವೆ. ಮಹಾರಾಷ್ಟ್ರದಲ್ಲಿ ಕೃಷ್ಣಾ ಹಾಗೂ ನದಿಗಳಿಗೆ ನಿರ್ಮಿಸಿದ ಅಣೆಕಟ್ಟೆಗಳು ಭಾಗಶಃ ಭರ್ತಿಯಾಗಿವೆ. ವಾಯುಭಾರ ಕುಸಿತದಿಂದ ಭಾರೀ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮತ್ತೆ ಮಳೆಯಾದಲ್ಲಿ ಉಪ ವಿಭಾಗದ ನದಿ ತೀರದ ಗ್ರಾಮಗಳ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಲಿದೆ. ಮಹಾರಾಷ್ಟ್ರದ ಕೊಂಕಣದಲ್ಲಿ ಕೃಷ್ಣಾ ಹಾಗೂ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಕಳೆದೊಂದು ತಿಂಗಳಿನಿಂದ ಮಳೆ ಬೀಳುತ್ತಿದೆ. ಚಿಕ್ಕೋಡಿ …
Read More »ಸಹಕಾರದ ಸೇವೆಯಿಂದ ಆತ್ಮತೃಪ್ತಿ: ನ್ಯಾ ಸುಮಲತಾ ಬೆಣ್ಣಿಕಲ್ಲ
ಸವದತ್ತಿ: ಇಲ್ಲಿನ ನ್ಯಾಯಾಲಯದಲ್ಲಿನ ನ್ಯಾಯಾಧೀಶರು ಹಾಗೂ ವಕೀಲರ ಸಹಕಾರದಿಂದ ಸಲ್ಲಿಸಿದ ಸೇವೆ ಆತ್ಮತೃಪ್ತಿ ತಂದಿದೆ ಎಂದು ಪ್ರಧಾನ ದಿವಾಣಿ ನ್ಯಾಯಾಧೀಶೆ ಸುಮಲತಾ ಬೆಣ್ಣಿಕಲ್ಲ ಹೇಳಿದರು. ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿರುವ ನ್ಯಾಯವಾದಿಗಳ ಸಂಘದ ಸಭಾಭವನದಲ್ಲಿ ಪದೋನ್ನತ್ತಿ ಹೊಂದಿ ವರ್ಗಾವಣೆ ಹೊಂದಿದ ಪ್ರಯುಕ್ತ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಾಗರಿಕ ಸೇವೆಯಲ್ಲಿ ಪದೋನ್ನತ್ತಿ, ವರ್ಗಾವಣೆ ಅನಿವಾರ್ಯ. ಆದರೆ ಇಲ್ಲಿನವರೊಂದಿಗಿನ ಭಾಂದವ್ಯ ಅವಿಸ್ಮರಣೀಯ. ಸೇವೆಗೆ ನೇಮಕಗೊಂಡ ಆರಂಭದಲ್ಲಿ ಇಲ್ಲಿನ ಸೌಕರ್ಯಗಳ …
Read More »ಕೋಥಳಿ-ಕುಪ್ಪಾಣವಾಡಿ ಆಶ್ರಮದ ಸಾಕಾನೆ ‘ಉಷಾರಾಣಿ’ ಸಾವು
ಚಿಕ್ಕೋಡಿ: ತಾಲ್ಲೂಕಿನ ಕೋಥಳಿ-ಕುಪ್ಪಾನವಾಡಿಯ ಆಚಾರ್ಯ ದೇಶಭೂಷಣ ಜೈನ ಆಶ್ರಮದ ಸಾಕು ಆನೆ ಉಷಾರಾಣಿ (50) ಅನಾರೋಗ್ಯದಿಂದ ಶನಿವಾರ ಸಾವನ್ನಪ್ಪಿದ್ದು, ಆಚಾರ್ಯ ದೇಶ ಭೂಷಣ ಆಶ್ರಮ ಟ್ರಸ್ಟ್ ಹಾಗೂ ಶಾಂತಿಗಿರಿ ಟ್ರಸ್ಟ್ ವತಿಯಿಂದ ಅಂತಿಮ ನಮನಗಳನ್ನು ಸಲ್ಲಿಸಲಾಯಿತು. ಆಶ್ರಮದ ಆವರಣದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಜೈನ ಮುನಿಗಳು ಹಾಗೂ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ತಿಳಿಸಲಾಗಿದೆ. 1977ರಲ್ಲಿ 3 ವರ್ಷದ ಮರಿ ಇದ್ದಾಗ ಶಿವಮೊಗ್ಗದ ಅರಣ್ಯ ಪ್ರದೇಶದಿಂದ ತರಲಾಗಿದ್ದ …
Read More »ಮಹಾತ್ಮರ ಚರಿತ್ರೆ ಕೇಳುವುದರಿಂದ ಪುಣ್ಯ ಪ್ರಾಪ್ತಿ: ಗುರುಸಿದ್ಧೇಶ್ವರ ಸ್ವಾಮೀಜಿ
ರಬಕವಿ ಬನಹಟ್ಟಿ: ‘ಧರ್ಮದ ಮಾರ್ಗಕ್ಕೆ ತೆಗೆದುಕೊಂಡು ಹೋಗುವ, ಮನಸ್ಸಿಗೆ ಶಾಂತಿ ನೀಡುವ, ಮನೋವಿಕಾಸ, ಆತ್ಮವಿಕಾಸದ ಮಾತುಗಳನ್ನು ಕೇಳುವುದು, ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರ ಕುರಿತು ಕೇಳುವುದೇ ಶ‍್ರಾವಣ ಮಾಸದ ಮಹತ್ವ’ ಎಂದು ರಬಕವಿಯ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಹೇಳಿದರು. ಅವರು ಇಲ್ಲಿನ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಶ್ರಾವಣ ಮಾಸದ ಅಂಗವಾಗಿ ನವಲಗುಂದದ ಅಜಾತ ನಾಗಲಿಂಗ ಶಿವಯೋಗಿಗಳ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಾತ್ಮರ ಚರಿತ್ರೆ ಕೇಳುವುದರಿಂದ …
Read More »ಬೆಳೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಿ; ಆ.12ಕ್ಕೆ ಮುಧೋಳ ಬಂದ್ ಎಚ್ಚರಿಕೆ
ಮುಧೋಳ (ಬಾಗಲಕೋಟೆ ಜಿಲ್ಲೆ) : ಘಟಪ್ರಭಾ ನದಿಯ ಪ್ರವಾಹಕ್ಕೆ ಮುಳುಗಡೆಯಾದ ಬೆಳೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂಬ ಕೂಗು ಹೆಚ್ಚಾಗ ತೊಡಗಿದ್ದು, ಸರ್ಕಾರ ಹೋರಾಟಗಾರರ ಕೂಗಿಗೆ ಸ್ಪಂದಿಸದಿದ್ದರೆ ಆಗಸ್ಟ್ 12ರಂದು ಮುಧೋಳ ಬಂದ್ ನಡೆಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರವಾಹಕ್ಕೊಳಗಾದ ಸಂತ್ರಸ್ತರು , ರೈತರು ಒಮ್ಮತದ ನಿರ್ಧಾರ ಪ್ರಕಟಿಸಿದರು. ನಗರದ ಜಿಎಲ್‌ಬಿಸಿ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸಂತ್ರಸ್ತರು ಹಾಗೂ ರೈತರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ ಪರಿಹಾರಕ್ಕಾಗಿ ಒತ್ತಾಯಿಸಿ ಆ.7ರಂದು …
Read More »ಬೆಳಗಾವಿ ಹಿಂಡಲಗಾ ಜೈಲಿನ ಮೇಲೆ ನಗರ ಪೊಲೀಸರ ದಿಢೀರ್ ದಾಳಿ
ಬೆಳಗಾವಿ ಹಿಂಡಲಗಾ ಜೈಲಿನ ಮೇಲೆ ನಗರ ಪೊಲೀಸರ ದಿಢೀರ್ ದಾಳಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ನೇತೃತ್ವದಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿನ ಮೇಲೆ ದಿಢೀರ್ ದಾಳಿ ನಡೆಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ್ ಸೇರಿದಂತೆ 260ಕ್ಕೂ ಅಧಿಕ ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ದಾಳಿಯ ವೇಳೆ ತಂಬಾಕು ಪಾಕೇಟ್, ಸಿಗರೇಟ್, ಮೂರು ಚಾಕುಗಳು, ಸ್ಮಾಲ್ ಹಿಟರ್ ವೈಯರ್ ಬಂಡಲ್, ಮತ್ತು ಎಲೆಕ್ಟ್ರಿಕಲ್ ಒಲೆಗಳನ್ನು ಜಪ್ತಿ …
Read More »
Laxmi News 24×7