ಬೈಲಹೊಂಗಲ: ಕ್ಷುಲ್ಲಕ ಕಾರಣಕ್ಕೆ ಸಹೋದರಿಯರಿಬ್ಬರ ನಡುವೆ ಮಾತಿನ ಚಕಮಕಿಗೊಂಡು, ಕೊಲೆಯಲ್ಲಿ ಅಂತ್ಯಗೊಂಡ ಘಟನೆ ತಾಲೂಕಿನ ಅಮಟೂರ ಬೇವಿನಕೊಪ್ಪ ರಸ್ತೆ ಮಧ್ಯೆದಲ್ಲಿ ಸೋಮವಾರ (ಸೆ.30) ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಅಮಟೂರ ಗ್ರಾಮದ ಕೇದಾರಿ ಯಲ್ಲಪ್ಪ ಅಂಗಡಿ (42) ಎಂದು ಗುರುತಿಸಲಾಗಿದೆ. ತಮ್ಮ ಜಮೀನಿನಲ್ಲಿ ಬೇರೆಯವರಿಗೆ ದಾಟಲು ಅನುವು ಮಾಡಿಕೊಟ್ಟಿದ್ದಕ್ಕೆ ಚಾಕುವಿನಿಂದ ಇರಿದ ಪರಿಣಾಮವಾಗಿ ತೀವ್ರವಾಗಿ ರಕ್ತಸ್ರಾವಗೊಂಡಿದ್ದು, ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಆರೋಪಿಗಳಾದ ಬಾಳಪ್ಪ ಶಿವಾನಂದ ಅಂಗಡಿ …
Read More »ಆರೋಗ್ಯ ವೃದ್ಧಿಗೆ ಪೌಷ್ಟಿಕ ಆಹಾರ ಅಗತ್ಯ; ಸಚಿವ ಸತೀಶ್ ಜಾರಕಿಹೊಳಿ
ಆರೋಗ್ಯ ವೃದ್ಧಿಗೆ ಪೌಷ್ಟಿಕ ಆಹಾರ ಅಗತ್ಯ; ಸಚಿವ ಸತೀಶ್ ಜಾರಕಿಹೊಳಿ ಚಿಕ್ಕೋಡಿ: ಮಕ್ಕಳ ಆರೋಗ್ಯ ವೃದ್ಧಿಗೆ ಹಾಗೂ ಅಪೌಷ್ಟಿಕತೆ ತಡೆಗೆ ಸರಕಾರ ಹಲವು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಶಿಕ್ಷಕರು ಅವುಗಳ ಕುರಿತು ಅರಿವು ಮೂಡಿಸಬೇಕು. ಆದಷ್ಟೂ ಮಕ್ಕಳಿಗೆ ಬಿಸಿಯೂಟ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸೂಚಿಸಿದರು. ತಾಲೂಕಿನ ನಣದಿ ಗ್ರಾಮದ ಕೆಎಚ್ ಪಿಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಸೋಮವಾರ ಜಿಲ್ಲಾ ಪಂಚಾಯತ್, …
Read More »ಇದೇನಾ ‘ಸ್ವಚ್ಛ ಭಾರತ’?: ಫೋಟೋ ಮೂಲಕ ಪ್ರಧಾನಿಗೆ ಟಾಂಗ್ ನೀಡಿದ ಅಖಿಲೇಶ್
ಲಕ್ನೋ: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಪ್ರತಿನಿಧಿಸುತ್ತಿರುವ ವಾರಾಣಸಿಯ ರಸ್ತೆಯೊಂದರ ಚಿತ್ರವನ್ನು ಹಂಚಿಕೊಂಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್(Akhilesh Yadav) ಅವರು ನಗರದಲ್ಲಿ ಸ್ವಚ್ಛತೆಯ ಕೊರತೆಯ ಬಗ್ಗೆ ಬಿಜೆಪಿ(BJP) ಸರಕಾರದ ವಿರುದ್ಧ ಸೋಮವಾರ(ಸೆ30) ಟೀಕಾ ಪ್ರಹಾರ ನಡೆಸಿದ್ದಾರೆ. ಎಕ್ಸ್ ನಲ್ಲಿ ಕಸದ ರಾಶಿಯ ಫೋಟೋವೊಂದನ್ನು ಪೋಸ್ಟ್ ಮಾಡಿರುವ ಅಖಿಲೇಶ್ ”ಇದು ದೇಶದ ಪ್ರಮುಖ ಸಂಸದೀಯ ಕ್ಷೇತ್ರದ ಸ್ಥಿತಿ, ಕಸದ ರಾಶಿಯೇ ರಸ್ತೆ ಎಂದರೆ ತಪ್ಪಾಗದು. ಇದೇನಾ ‘ಸ್ವಚ್ಛ …
Read More »ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ. ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬಸವರಾಜ ಬೊಮ್ಮಾಯಿ
ಗದಗ: ಪ್ರೊ.ಕೆ. ಎಸ್ ಭಗವಾನ್ ತಾಯಿ ಚಾಮುಂಡೇಶ್ವರಿ ವಿಚಾರದಲ್ಲಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಮಾತಿಗೆ ಯಾರೂ ಮಹತ್ವ ಕೊಟ್ಟಿಲ್ಲ, ಕೊಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರೊ. ಭಗವಾನ್ ಅವರು ಹೆಸರಿಗೆ ತಕ್ಕಂಗೆ ಭಗವಂತನ ಮೇಲೆ ನಂಬಿಕೆ ಇಟ್ಟಿದ್ದಾರೆ ಇಲ್ಲಾ ನೋಡಿ, ಭಗವಂತನ ಮೇಲೆ ನಂಬಿಕೆ ಇಲ್ಲಾ ಅಂದರೆ, ಭಗವಾನ್ ಅಂತ ಹೆಸರು ಇಟ್ಟಿಕೊಂಡಿದ್ದೆ …
Read More »ಬಿಪಿಎಲ್ ಪಡಿತರ ಚೀಟಿ ಮಾನದಂಡ ಪರಿಶೀಲನೆಗೆ ಸಮಿತಿ: ಆರ್.ವಿ.ದೇಶಪಾಂಡೆ
ಬೆಂಗಳೂರು: ಬಡತನದ ರೇಖೆಗಿಂತ ಕೆಳಗೆ (ಬಿಪಿಎಲ್) ಇರುವ ಕುಟುಂಬಗಳಿಗೆ ಪಡಿತರ ಚೀಟಿ ವಿತರಣಾ ಮಾನದಂಡ ಪರಿಶೀಲನೆಗೆ ಅಪರ ಮುಖ್ಯ ಕಾರ್ಯದರ್ಶಿಯೂ ಆದ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಲಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾಹಿತಿ ನೀಡಿದರು. ವಿಕಾಸಸೌಧದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಬಿಪಿಎಲ್ ಪಡಿತರ ಚೀಟಿ ದುರ್ಬಳಕೆಗೆ ಕಡಿವಾಣ, ಸರ್ಕಾರದ ಬೊಕಸಕ್ಕೆ ಅನಗತ್ಯ ವೆಚ್ಚ ತಗ್ಗಿಸುವುದು, ಅರ್ಹರಿಗೆ ಈ ಸೌಲಭ್ಯ ಒದಗಿಸುವ ಉದ್ದೇಶದಿಂದ …
Read More »ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲೂ ಗೋವನ್ನು ‘ರಾಜ್ಯಮಾತೆ’ ಎಂದು ಘೋಷಣೆ ಮಾಡಿ: ವಿಜಯೇಂದ್ರ ಒತ್ತಾಯ
ಗೋಮಾತೆಯನ್ನು ‘ರಾಜ್ಯ ಮಾತೆ’ ಎಂದು ಘೋಷಿಸಿರುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಗೋವನ್ನು ರಾಜ್ಯ ಮಾತೆ ಅಥವಾ ಕ್ಷೀರ ಮಾತೆ ಎಂದು ಘೋಷಿಸುವಂತೆ ಅವರು ಒತ್ತಾಯಿಸಿದ್ದಾರೆ. ನಂದಿನಿ ಉತ್ಪನ್ನಗಳ ಮೂಲಕ ಕರ್ನಾಟಕ ವಿಶ್ವ ಮಾನ್ಯತೆ ಪಡೆಯುತ್ತಿದೆ. ನಂದಿನಿ ಉತ್ಪನ್ನಗಳ ಧಾತೆ ಗೋ ಮಾತೆ. ಆದ್ದರಿಂದ ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಗೋವನ್ನು ರಾಜ್ಯ ಮಾತೆ ಎಂದೇ ಘೋಷಿಸಲಿ …
Read More »ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡೋವರೆಗೂ ಹೋರಾಟ- ಆರ್.ಅಶೋಕ್
ಬೆಂಗಳೂರು : ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವವರೆಗೆ ಮಾತ್ರವಲ್ಲ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಯಲ್ಲಿ ಮಾತನಾಡಿ, ಸಿಎಂ ವಿರುದ್ಧದ ಮುಡಾ ಹಗರಣ ಸಂಬಂಧ ನಮ್ಮ ಹೋರಾಟವು ನಿರಂತರವಾಗಿ ನಡೆಯುತ್ತಿರುವುದಕ್ಕೆ ಪ್ರಕರಣ ಈ ಹಂತಕ್ಕೆ ಬಂದು ನಿಂತಿದೆ ಎಂದರು. ಹಗರಣ ಬೆಳಕಿಗೆ ಬಂದಾಗ ಬಿ.ನಾಗೇಂದ್ರ ತಾನು ರಾಜೀನಾಮೆ ಕೊಡಲ್ಲ ಎಂದಿದ್ದರು. ಆದರೆ ಕಾನೂನಿನ ಕುಣಿಕೆಯಲ್ಲಿ …
Read More »ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : ಉಚಿತ ಮೊಬೈಲ್ ರಿಪೇರಿ, ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ
ಗ್ರಾಮಾಂತರ ಕೈಗಾರಿಕಾ ವಿಭಾಗದಿಂದ ಹೊಲಿಗೆಯಂತ್ರ ವಿತರಣೆ, ಕುಶಲಕರ್ಮಿಗಳಿಗೆ ಬ್ಯಾಂಕ್ ಸಾಲದ ಮೇಲೆ ವಿಧಿಸುವ ಬಡ್ತಿ ಮೊತ್ತದ ಮೇಲೆ ಬಡ್ಡಿ ಸಹಾಯಧನ ಹಾಗೂ ಟೈಲರಿಂಗ್, ಹ್ಯಾಂಡ್ ಎಂಬ್ರಾಯಡರಿ, ಡೊಮೆಸ್ಟಿಕ್ ಎಲಕ್ಟ್ರಿಷಿಯನ್, ಮೋಟಾರ್ ರೀವೈಂಡಿಂಗ್, ಮೊಬೈಲ್ ರಿಪೇರಿ, ಬ್ಯೂಟಿ ಥೆರಪಿಸ್ಟ್, ಕಂಪ್ಯೂಟರ್, ಎಫ್.ಟಿ.ಸಿ.ಪಿ. ತರಬೇತಿ ನೀಡಿ ಉಚಿತವಾಗಿ 5,000 ರೂ. ಮೌಲ್ಯದ ಉಪಕರಣಗಳ ಕಿಟ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಗ್ರಾಮೀಣ ಅಭ್ಯರ್ಥಿಗಳು ಆಕ್ಟೋಬರ್ 24 ರೊಳಗೆ davanagere.nic.in ವೆಬ್‍ಸೈಟ್ ಮೂಲಕ ಅರ್ಜಿ …
Read More »70,000 ಮಂದಿಗೆ ಬಿಸಿಯೂಟ ಸಿದ್ಧಪಡಿಸುವ ಅಡುಗೆ ಮನೆಗೆ ಚಾಲನೆ, ಎಲ್ಲಿ?
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿದ್ಧಪಡಿಸಲು ಬೆಂಗಳೂರಿನ ಬ್ಯಾಟರಾಯನಪುರ ವ್ಯಾಪ್ತಿಯ ಚಿಕ್ಕಜಾಲದಲ್ಲಿ ಹೊಸ ಅಡುಗೆ ಮನೆ ಇಂದು ಉದ್ಘಾಟನೆಗೊಂಡಿದೆ. ಅಕ್ಷಯ ಪಾತ್ರ ಫೌಂಡೇಶನ್ ಹಾಗೂ ರಾಜ್ಯ ಸರ್ಕಾರ ಸಹಯೋಗದಲ್ಲಿ ನಿರ್ಮಿಸಿರುವ ಈ ವಿಶಾಲ ಹಾಗೂ ಸುಸಜ್ಜಿತ ಅಡುಗೆ ಮನೆಗೆ ಸಚಿವ ಕೃಷ್ಣಬೈರೇಗೌಡ ಅವರು ಚಾಲನೆ ನೀಡಿದರು. ಇದು ಅಕ್ಷಯ ಪಾತ್ರ ಫೌಂಡೇಷನ್ ಆರಂಭಿಸಿರುವ 75ನೇ ಅಡಿಗೆ ಮನೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವ ಕೃಷ್ಣಬೈರೇಗೌಡ, ಇದೀಗ ಬ್ಯಾಟರಾಯನಪುರ ಕ್ಷೇತ್ರದಲ್ಲಿ …
Read More »ಬಂಡತನ ಇದ್ದರೆ ಏನು ಮಾಡುವುದಕ್ಕಾಗುತ್ತದೆಸಿಎಂ ಕುರಿತು ಶೆಟ್ಟರ್ ಮಾತು
ಹುಬ್ಬಳ್ಳಿ: ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರೆ ಅವರ ವ್ಯಕ್ತಿತ್ವಕ್ಕೆ ಒಳ್ಳೆಯದು. ಬಂಡತನ ಇದ್ದರೆ ಏನು ಮಾಡುವುದಕ್ಕಾಗುತ್ತದೆ ಎಂದು ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು. ಸಿಎಂ ದಸರಾ ಉದ್ಘಾಟನೆ ವಿಚಾರವಾಗಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದೇನೆ ಎನ್ನುವ, ನೈತಿಕತೆ ಬಗ್ಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯನವರು ಇನ್ನು ಮೇಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಕುಟುಕಿದರು. ಯಡಿಯೂರಪ್ಪನವರ ಮೇಲೆ ಎಫ್‌ಐಆರ್ ಆದಾಗ ಏನು ಮಾತನಾಡಿದ್ದರು. ಪ್ರಕರಣದ …
Read More »
Laxmi News 24×7