ಬೆಳಗಾವಿ: ‘ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಈ ಬಾರಿ ಶಾಂತಿ, ಸೌಹಾರ್ದದಿಂದ ಗಣೇಶೋತ್ಸವ ಆಚರಣೆಗೆ ಪ್ರತಿಯೊಬ್ಬರೂ ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕೋರಿದರು. ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಬುಧವಾರ ನಡೆದ ಗಣೇಶೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಗಣೇಶೋತ್ಸವ ಆಚರಣೆ ನೆಪದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಗಣೇಶನ ಪ್ರತಿಷ್ಠಾಪನೆಗೆ ಅನುಮತಿ ಕೊಡಲು ನಗರದ ಎಂಟು ಠಾಣೆಗಳಲ್ಲಿ ಏಕಗವಾಕ್ಷಿ ಪದ್ಧತಿ …
Read More »ವಿನೇಶಾ ಸಹಾಯಕ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಿ: WFI ಅಧ್ಯಕ್ಷ ಸಂಜಯ್ ಸಿಂಗ್
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ವಿನೇಶಾ ಫೋಗಟ್ ಜೊತೆಗಿದ್ದ ಸಹಾಯಕ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವಂತೆ ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಸಂಜಯ್ ಸಿಂಗ್ ಒತ್ತಾಯಿಸಿದ್ದಾರೆ. ಫೈನಲ್‌ಗೆ ಎಂಟ್ರಿ ಪಡೆಯುವುದಕ್ಕೂ ಮುನ್ನ ವಿನೇಶಾ ಅವರ ತೂಕವನ್ನು ಸೂಕ್ತವಾಗಿ ನಿರ್ವಹಿಸದೇ ಮಹಾಪರಾಧ ಎಸಗಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ. ಕ್ವಾರ್ಟರ್, ಸೆಮಿಫೈನಲ್‌ನಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಫೈನಲ್‌ಗೇರಿದ್ದ ಅವರು, ನಿಗದಿತ 50 ಕೆಜಿ ತೂಕಕ್ಕಿಂತ 100 …
Read More »ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಬದ್ಧ: ಶಾಸಕ ಕಾಶಪ್ಪನವರ
ಅಮೀನಗಡ: ಪಾರಂಪರಿಕ ತಾಣಗಳು ದೇಶದ ಸಮಗ್ರತೆಯನ್ನು ಬಿಂಬಿಸುವ ಪ್ರದೇಶಗಳಾಗಿದ್ದು, ಅವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಅವುಗಳ ಪುನಶ್ಚೇತನಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ಸಮೀಪದ ಸೂಳೇಭಾವಿ ಗ್ರಾಮದಲ್ಲಿ ಮೈಸೂರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಅಂದಾಜು ₹112 ಲಕ್ಷ ವೆಚ್ಚದಲ್ಲಿ ವೀರಭದ್ರೇಶ್ವರ ದೇವಾಲಯದ ಸಂರಕ್ಷಣಾ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಇಲ್ಲಿನ ಶೂಲೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನಗಳು ಐತಿಹಾಸಿಕ ಪಾರಂಪರಿಕ ದೇವಾಲಯಗಳ ಪುನಶ್ಚೇತನಕ್ಕೆ …
Read More »ಕುಡಿದು ವಾಹನ ಚಾಲನೆ: 3 ದಿನಗಳಲ್ಲಿ ₹9.60 ಲಕ್ಷ ದಂಡ ಸಂಗ್ರಹ!
ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಕುಡಿದು ವಾಹನ ಚಲಾಯಿಸಿದವರ ವಿರುದ್ಧ ಸಂಚಾರ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಕಳೆದ ವಾರಾಂತ್ಯದ ಮೂರು ದಿನಗಳಲ್ಲಿ 96 ಪ್ರಕರಣಗಳನ್ನು ದಾಖಲಿಸಿಕೊಂಡು ₹9.60 ಲಕ್ಷ ದಂಡ ಸಂಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮೂರು ಮತ್ತು ಧಾರವಾಡದಲ್ಲಿ ಒಂದು ಸಂಚಾರ ಪೊಲೀಸ್ ಠಾಣೆಯಿದ್ದು, ಕಳೆದ ಶುಕ್ರವಾರ, ಶನಿವಾರ ಮತ್ತು ಭಾನುವಾರ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕುಡಿದು ವಾಹನ ಚಲಾಯಿಸುವವರ ಪತ್ತೆಗೆ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದರು. ಉತ್ತರ ಸಂಚಾರ …
Read More »ಈದ್ಗಾ ಮೈದಾನ ಕಾಂಪೌಂಡ್ ತೆರವು ಪ್ರಕ್ರಿಯೆಗೆ ವಿರೋಧ
ಹುಬ್ಬಳ್ಳಿ: ‘ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಯೋಜನೆಯ ಮೂಲ ನೀಲನಕ್ಷೆಯಲ್ಲಿ ಈದ್ಗಾ ಕಾಂಪೌಂಡ್ ತೆರವು ಇರಲಿಲ್ಲ. ಈಗ ನಕ್ಷೆಯನ್ನೇ ಬದಲಿಸಿ, ಕಾಂಪೌಂಡ್ ತೆರವಿಗೆ ನಿರ್ಧರಿಸಿರಬಹುದು’ ಎಂದು ಮುಸ್ಲಿಂ ಸಮುದಾಯದ ಮುಖಂಡ ಅಲ್ತಾಫ್ ಹಳ್ಳೂರ ಹೇಳಿದ್ದಾರೆ. ‘ಮೇಲ್ಸೇತುವೆ ಕಾಮಗಾರಿಗಾಗಿ ರಾಣಿ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದ ಕಾಂಪೌಂಡ್ ಭಾಗಶಃ ತೆರವು ಆಗಲಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆದರೆ, ಮೂಲ ನೀಲನಕ್ಷೆಯಲ್ಲಿ ಇರದ ತೆರವು ಅಂಶ ಈಗ ಏಕಾಏಕಿ ಹೇಗೆ …
Read More »35 ಎಮ್ಮೆ ರಕ್ಷಣೆ; ಪ್ರಕರಣ ದಾಖಲು
ಹುಬ್ಬಳ್ಳಿ: ಬೆಂಗಳೂರಿನ ದೇವನಹಳ್ಳಿ ಪಾಸಿಂಗ್ ನಂಬರ್ ಇರುವ ಕಂಟೇನರ್ ಲಾರಿಯಲ್ಲಿ ಉಸಿರಾಡಲು ಸಾಧ್ಯವಾಗದಂತೆ ಎಮ್ಮಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಮೂವರ ವಿರುದ್ಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ, ಕ್ಲೀನರ್ ಮತ್ತು ಲಾರಿ ಮಾಲೀಕರ ವಿರುದ್ಧ ಗೋಕುಲ ರಸ್ತೆಯ ಆಶೀರ್ವಾದ ಹಂಜಗಿ ದೂರು ನೀಡಿದ್ದಾರೆ. ಗದಗ ಬೈಪಾಸ್ ರಸ್ತೆಯಲ್ಲಿ ಭಾನುವಾರ ಸಂಜೆ ಲಾರಿಯಲ್ಲಿ 35 ಎಮ್ಮೆಗಳನ್ನು ಅಮಾನುಷವಾಗಿ ಸಾಗಿಸುತ್ತಿದ್ದರು. …
Read More »: ಹಾಳಾದ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ರಸ್ತೆಯಲ್ಲಿಯೇ ಹರಿಯುವ ಗಟಾರದ ಕೊಳಚೆ ನೀರು,
ಹುಬ್ಬಳ್ಳಿ: ಹಾಳಾದ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ರಸ್ತೆಯಲ್ಲಿಯೇ ಹರಿಯುವ ಗಟಾರದ ಕೊಳಚೆ ನೀರು, ಜೆಜೆಎಂ ಯೋಜನೆಯಲ್ಲಿ 24X7 ನೀರಿನ ಪೈಪ್ ಅಳವಡಿಸಿದ್ದರೂ ಶುದ್ಧ ಕುಡಿಯುವ ನೀರು ಪೂರೈಕೆಯಾಗಿಲ್ಲ. – ಇಂತಹ ಸಮಸ್ಯೆಗಳ ನಡುವೆಯೇ ಪಾಲಿಕೆ ವ್ಯಾಪ್ತಿಯ ಉಣಕಲ್ ಗ್ರಾಮದ ಜನರು ಬದುಕು ಕಟ್ಟಿಕೊಳ್ಳುತ್ತಿದ್ಧಾರೆ. ಒಂದೆಡೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹುಬ್ಬಳ್ಳಿ ನಗರ, ಇದಕ್ಕೆ ಹೊಂದಿಕೊಂಡೇ ಕೇವಲ 100 ಮೀಟರ್ ದೂರದಲ್ಲಿ ಉಣಕಲ್ ಗ್ರಾಮವಿದೆ. ಉಣಕಲ್ ಗ್ರಾಮವು 20 ಸಾವಿರಕ್ಕೂ …
Read More »ಕಾರ್ಖಾನೆಗೆ ಬೆಂಕಿ: 14 ತಾಸು ಕಾರ್ಯಾಚರಣೆ; ಕಾರ್ಮಿಕನ ಶವ ಪತ್ತೆ
ಬೆಳಗಾವಿ: ಸಮೀಪದ ನಾವಗೆ ಗ್ರಾಮದಲ್ಲಿ ಸ್ನೇಹಂ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಿಕ್ಕಿಕೊಂಡಿದ್ದ ಕಾರ್ಮಿಕನ ದೇಹ ಸುಟ್ಟು ಭಸ್ಮವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಳಗಾವಿಯ ಮಾರ್ಕಂಡೇಯ ನಗರದ ನಿವಾಸಿ ಯಲ್ಲಪ್ಪ ಗುಂಡ್ಯಾಗೋಳ (20) ಮೃತ ಪಟ್ಟ ಕಾರ್ಮಿಕ. ಲಿಫ್ಟನಲ್ಲಿ ವಿದ್ಯುತ್ ಅವಘಡದಿಂದ ಈ ಅನಾಹುತ ಸಂಭವಿಸಿದೆ. ಮೆಡಿಕಲ್ ಟೇಪಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಬೆಂಕಿ ಹೊತ್ತಿಕೊಂಡಿತು. ಆಗ ಒಳಗಡೆ ಇದ್ದ ಹಲವು ಅಗ್ನಿ ಕಾರ್ಮಿಕರು ದಿಕ್ಕಾಪಾಲಾಗಿ ಓಡಿದರು. ಬೆಂಕಿಯಲ್ಲಿ ಬೆಂದ ಮೂವರನ್ನು …
Read More »ಯಮಕನಮರಡಿ: 20 ದಿನವಾದರೂ ಪೂರೈಕೆಯಾಗದ ನೀರು
ಯಮಕನಮರಡಿ: ಮತಕ್ಷೇತ್ರದ ವ್ಯಾಪ್ತಿಗೆ ಬರುವ, ಸಚಿವ ಸತೀಶ ಜಾರಕಿಹೊಳಿ ಅವರ ಕ್ಷೇತ್ರ ಹೆಬ್ಬಾಳದಲ್ಲಿ 20 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆ ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ, ಗ್ರಾಮ ಪಂಚಾಯಿತಿ ಎದುರು ಪ್ರತಿಭಟಿಸಿರು. ’40 ದಿನಗಳಿಂದ ವಿಪರೀತ ಮಳೆಯಾದರೂ ಗ್ರಾಮಕ್ಕೆ ಕುಡಿಯುವ ನೀರಿಲ್ಲ. ಹಿರಣ್ಯಕೇಶಿ ನದಿಯಿಂದ ಕೇವಲ 1 ಕಿ.ಮೀ ಅಂತರದಲ್ಲಿರುವ ಮತ್ತು ಹಿಡಕಲ್ ಜಲಾಶಯದಿಂದ 14ಕಿ.ಮೀ ದೂರದಲ್ಲಿರುವ ಗ್ರಾಮಕ್ಕೆ ನೀರಿನ ಸಮಸ್ಯೆ ಇದೆ. 15 ಸಾವಿರ ಜನಸಂಖ್ಯೆ ಹೊಂದಿದ ಗ್ರಾಮಕ್ಕೆ …
Read More »ನಕಲಿ ದಾಖಲೆ ಸೃಷ್ಠಿಸಿ ಅರ್ಜಿ ಸಲ್ಲಿಕೆ: ದೂರು ದಾಖಲು
ಚಿಕ್ಕೋಡಿ: ಪರಿಶಿಷ್ಟ ಜಾತಿ ಗುತ್ತಿಗೆದಾರನೆಂದು ನಕಲಿ ದಾಖಲೆ ಸೃಷ್ಟಿಸಿ ಈ-ಪ್ರೋಕ್ ವೆಬ್‍ಸೈಟ್ ಮೂಲಕ ಟೆಂಡರ್ ಹಾಕಿದ್ದ ಧಾರವಾಡ ಮೂಲದ ಬಾಲಕೃಷ್ಣ ಬಸವರಾಜ ಚೊಳಚಗುಡ್ಡ ಎಂಬುವರ ವಿರುದ್ಧ ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕೋಡಿ ಉಪವಿಭಾಗದ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪಾಂಡುರಂಗರಾವ್ ಆ. 4 ರಂದು ನೀಡಿದ ದೂರಿನ ಮೇರೆಗೆ ಚಿಕ್ಕೋಡಿ ಪಿಎಸ್‍ಐ ಬಸಗೌಡ ನೇರ್ಲಿ ಪ್ರಕರಣ ದಾಖಲಿಸಿದ್ದಾರೆ. ಚಿಕ್ಕೋಡಿ ವಿಭಾಗ ವ್ಯಾಪ್ತಿಯಲ್ಲಿ ಜಲಜೀವನ ಮಿಷನ್ …
Read More »