Breaking News

ಜಾನುವಾರು ಗಣತಿಗೆ ಸುಧಾರಿತ ತಂತ್ರಜ್ಞಾನ

ಬೆಳಗಾವಿ: ದೋಷರಹಿತ ಜಾನುವಾರು ಗಣತಿಗಾಗಿ ಕೇಂದ್ರ ಸರ್ಕಾರ ‘ಲೈವ್‌ಸ್ಟಾಕ್‌ ಸೆನ್ಸಸ್‌’ ಎಂಬ ‘ಆಯ‍ಪ್‌’ ಸಿದ್ಧಪಡಿಸಿದೆ. ಅದರ ನೆರವಿನಿಂದ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ರಾಜ್ಯದಲ್ಲಿ ಮೂರು ಹಂತದ ಜಾನುವಾರು ಗಣತಿ ನಡೆಯಲಿದೆ. ದೇಶದ ಜಿಡಿಪಿಯಲ್ಲಿ ಶೇ 4.1ರಷ್ಟು ಜಾನುವಾರುಗಳ ಕೊಡುಗೆ ಇದೆ. ಹಾಲು ಉತ್ಪಾದನೆಯಲ್ಲಿ ದೇಶ ಮೊದಲ ಸ್ಥಾನದಲ್ಲಿದೆ. ಇದರ ಮಹತ್ವ ಅರಿತ ಕೇಂದ್ರ ಸರ್ಕಾರ ನಿಖರ ಗಣತಿಗೆ ಸುಧಾರಿತ ತಂತ್ರಜ್ಞಾನ ಬಳಸುತ್ತಿದೆ. 1919ರಿಂದ ಪ್ರತಿ ಐದು ವರ್ಷಕ್ಕೊಮ್ಮೆ ಜಾನುವಾರು ಗಣತಿಯಂತೆ ಈವರೆಗೆ …

Read More »

ಗಣೇಶೋತ್ಸವದಲ್ಲಿ ‘ವಿಘ್ನ ನಿವಾರಕ’ನನ್ನು ಸ್ವಾಗತಿಸಲು ಜನರಷ್ಟೇ ಅಲ್ಲ; ಗುಂಡಿಗಳೂ ಸಜ್ಜಾಗಿವೆ.

ಬೆಳಗಾವಿ: ನಗರದಲ್ಲಿ ಈ ಬಾರಿ ಗಣೇಶೋತ್ಸವದಲ್ಲಿ ‘ವಿಘ್ನ ನಿವಾರಕ’ನನ್ನು ಸ್ವಾಗತಿಸಲು ಜನರಷ್ಟೇ ಅಲ್ಲ; ಗುಂಡಿಗಳೂ ಸಜ್ಜಾಗಿವೆ. ಮುಂಬೈ, ಪುಣೆ ಬಿಟ್ಟರೆ ಸಂಭ್ರಮದ ಚೌತಿ ವೀಕ್ಷಣೆಗೆ ಜನರು ಮುಖಮಾಡುವುದೇ ಬೆಳಗಾವಿಯತ್ತ. ಗಣೇಶೋತ್ಸವದಲ್ಲಿ ಇಲ್ಲಿ 11 ದಿನಗಳ ಕಾಲ ಸಡಗರವೇ ಮೈದಳೆಯುತ್ತದೆ. ನಗರ ಮತ್ತು ಉಪನಗರ ವ್ಯಾಪ್ತಿಯಲ್ಲಿ 370ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಮೊದಲ ದಿನದಂದು ಮೆರವಣಿಗೆಯಲ್ಲಿ ಗಣೇಶನ ಮೂರ್ತಿ ತಂದು ಪ್ರತಿಷ್ಠಾಪಿಸುತ್ತಾರೆ. ವಿಸರ್ಜನಾ ಮೆರವಣಿಗೆಯೂ …

Read More »

ಹುಕ್ಕೇರಿ: ಉದ್ಘಾಟನೆಗೆ ಸಜ್ಜಾದ ‘ಸುವರ್ಣ ಕರ್ನಾಟಕ ಭವನ’

ಹುಕ್ಕೇರಿ: ಇಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸರ್ಕಾರಿ ಕಾರ್ಯಕ್ರಮ ಆಯೋಜಿಸಲು ಸುಸಜ್ಜಿತ ಸಭಾಂಗಣ ಹುಡುಕುವುದೇ ಸಂಘಟಕರು ಹಾಗೂ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿತ್ತು. ಇನ್ಮುಂದೆ ಆ ಕೊರತೆ ನೀಗಲಿದೆ. ಅನಿವಾರ್ಯವಾಗಿ ಅವರು ಖಾಸಗಿ ಸಭಾಂಗಣಗಳತ್ತ ಮುಖಮಾಡುವುದು ತಪ್ಪಲಿದೆ.   ಪಟ್ಟಣದ ಹೊರವಲಯದ ಕ್ಯಾರಗುಡ್ಡದ ಕಾಲೇಜು ಕ್ಯಾಂಪಸ್ ಬಳಿ ತಲೆ ಎತ್ತಿರುವ ‘ಪ್ರಾದೇಶಿಕ ಸುವರ್ಣ ಕರ್ನಾಟಕ ಭವನ’ ಉದ್ಘಾಟನೆಗೆ ಸಜ್ಜಾಗಿದ್ದು, ಶೀಘ್ರವೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಹುಕ್ಕೇರಿಗೆ ಮಂಜೂರಾಗಿದ್ದ ಈ ಭವನದ ನಿರ್ಮಾಣಕ್ಕೆ …

Read More »

ದೇಶದ ಕಲ್ಲಿದ್ದಲು ಉತ್ಪಾದನೆ ಪ್ರಮಾಣ ಶೇ 6ರಷ್ಟು ಏರಿಕೆ

ನವದೆಹಲಿ: 2024-25ರ ಹಣಕಾಸು ವರ್ಷದ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ದೇಶದ ಕಲ್ಲಿದ್ದಲು ಉತ್ಪಾದನೆ ಪ್ರಮಾಣ ಶೇ 6ರಷ್ಟು ಏರಿಕೆಯಾಗಿದ್ದು, 38.40 ಕೋಟಿ ಟನ್‌ಗೆ ತಲುಪಿದೆ. 2023-24ರ ಹಣಕಾಸು ವರ್ಷದ ಇದೇ ಅವಧಿಯಲ್ಲಿ 36 ಕೋಟಿ ಟನ್‌ ಕಲ್ಲಿದ್ದಲು ಉತ್ಪಾದನೆ ಆಗಿತ್ತು ಎಂದು ಕಲ್ಲಿದ್ದಲು ಸಚಿವಾಲಯ ತಿಳಿಸಿದೆ.   ಸಿಐಎಲ್‌ ಉತ್ಪಾದನೆ ಇಳಿಕೆ: ಸರ್ಕಾರಿ ಸ್ವಾಮ್ಯದ ಭಾರತೀಯ ಕಲ್ಲಿದ್ದಲು ನಿಗಮ (ಸಿಐಎಲ್‌) ಆಗಸ್ಟ್‌ ತಿಂಗಳಲ್ಲಿ 4.61 ಕೋಟಿ ಟನ್‌ ಕಲ್ಲಿದ್ದಲು ಉತ್ಪಾದನೆ ಮಾಡಿದೆ. …

Read More »

ಅಕ್ರಮ ಸಾಬೀತು ಆಹಾರ ಶಿರಸ್ತುದಾರ ಸಸ್ಪೆಂಡ್​

ಬೆಂಗಳೂರು: ಅಕ್ರಮವಾಗಿ 46 ಬಿಪಿಎಲ್​ ಕಾರ್ಡ್​ ಮಂಜೂರು, ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಸಾವಿರ ರೂ. ನಿಂದ 5 ಸಾವಿರ ರೂ.ವರೆಗೆ ವಸೂಲಿ, ಪ್ರತಿ ಕಾರ್ಡ್​ಗೆ ಅಕ್ರಮವಾಗಿ 5 ರೂ.ಸಂಗ್ರಹಣೆ ಮಾಡುತ್ತಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆಹಾರ ಶಿರಸ್ತುದಾರ ಅಧಿಕಾರಿ ತಿಮ್ಮಯ್ಯ ಅವರನ್ನು ಅಮಾನತುಗೊಳಿಸಿ ಆಹಾರ ಇಲಾಖೆ ಆದೇಶಿಸಿದೆ.   ಇಲಾಖೆಯಲ್ಲಿ ಆಹಾರ ಶಿರಸ್ತುದಾರನಾಗಿ ಕಾರ್ಯನಿರ್ವಹಿಸುತ್ತಿರುವ ಜಿ.ತಿಮ್ಮಯ್ಯ, ಲಂಚ ಪಡೆದು ವಿಶೇಷ ‘ವೈದ್ಯಕಿಯ ಕೇಸ್​’ ವಿನಾಯಿತಿ ದುರ್ಬಳಕೆ ಮಾಡಿಕೊಂಡು ಬಿಪಿಎಲ್​ ಚೀಟಿ ಕೊಟ್ಟಿರುವುದು ವರದಿಯಲ್ಲಿ …

Read More »

ಶೀಘ್ರವೇ ‘ಗೃಹಲಕ್ಷ್ಮಿ ಯೋಜನೆ’ಯ ಜುಲೈ, ಆಗಸ್ಟ್ ತಿಂಗಳ ಹಣ ಖಾತೆಗೆ ಜಮಾ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಚಿತ್ರದುರ್ಗ : ಜುಲೈ ಹಾಗೂ ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಶೀಘ್ರವೇ ಮನೆ ಯಜಮಾನಿಯರ ಖಾತೆಗೆ ಸಂದಾಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಚಿತ್ರದುರ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇದುವರೆಗೆ 11 ತಿಂಗಳ ಮೊತ್ತ ಸಂದಾಯವಾಗಿದ್ದು, ಶೀಘ್ರವೇ ಜುಲೈ ಹಾಗೂ ಆಗಸ್ಟ್ ತಿಂಗಳ ಹಣವೂ ಸಂದಾಯವಾಗಲಿದೆ. ಕೆಲವೊಂದು ತಾಂತ್ರಿಕ ಕಾರಣಗಳಿಂದ ಏಕಕಾಲದಲ್ಲಿ ಒಟ್ಟಿಗೆ ಹಣ ಸಂದಾಯವಾಗುತ್ತಿಲ್ಲ. ಒಂದು ವರ್ಷದಲ್ಲಿ 25 …

Read More »

ಸಿದ್ದರಾಮಯ್ಯಗೆ ಹೈಕೋರ್ಟ್​ನಿಂದ ಮತ್ತೆ 7 ದಿನ ರಿಲೀಫ್​! ಸೆಪ್ಟೆಂಬರ್​ 9ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿನ (Muda Scam) ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದ ರಾಜ್ಯಪಾಲರ (Governor) ಆದೇಶವನ್ನು ವಜಾಗೊಳಿಸುವಂತೆ ಮನವಿ ಕೋರಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ (High Court) ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ಸೋಮವಾರ ನ್ಯಾಯಮೂರ್ತಿ ನಾಗಪ್ರಸನ್ನ ಏಕಸದಸ್ಯ ಪೀಠದಲ್ಲಿ ನಡೆದಿತ್ತು. ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲರ ವಾದ ಆಲಿಸಿದ ನ್ಯಾಯಾದೀಶರು ವಿಚಾರಣೆಯನ್ನ ಮುಂದಿನ ಸೋಮವಾರ ಅಂದರೆ …

Read More »

ಟಾಟಾ ಕರ್ವ್‌ ಪೆಟ್ರೋಲ್‌, ಡೀಸೆಲ್‌ SUV ಮಾರುಕಟ್ಟೆಗೆ-ಆರಂಭಿಕ ಬೆಲೆ 9.99 ಲಕ್ಷ

ಮುಂಬೈ: ಭಾರತದ ಜನಪ್ರಿಯ ವಾಹನ ತಯಾರಿಕಾ ಕಂಪನಿಯಾದ ಟಾಟಾ ಮೋಟಾರ್ಸ್‌ (Tata Motors) ಸೋಮವಾರ (ಸೆ.02) ಹೊಸ ಇಂಧನ ಚಾಲಿತ ಟಾಟಾ ಕರ್ವ್‌ (Tata Curvv) ಎಸ್‌ ಯುವಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಪೆಟ್ರೋಲ್‌ ಚಾಲಿತ ಟಾಟಾ ಕರ್ವ್‌ ವಾಹನದ ಆರಂಭಿಕ ಬೆಲೆ 9.99 ಲಕ್ಷ ರೂಪಾಯಿ ಮತ್ತು ಡೀಸೆಲ್‌ ಚಾಲಿತ ಟಾಟಾ ಕರ್ವ್‌ ಎಸ್‌ ಯುವಿಗೆ 11.49 ಲಕ್ಷ ರೂಪಾಯಿ. ಇದು ಆರಂಭಿಕ ಬೆಲೆಯಾಗಿದ್ದು, 2024ರ ನವೆಂಬರ್‌ ನಿಂದ ಬೆಲೆ ಏರಿಕೆಯಾಗಲಿದೆ …

Read More »

ಬಿಜೆಪಿ ಆಡಳಿತದ ಅವಧಿಯ ಹಗರಣಗಳಿಗೆ ತಾರ್ಕಿಕ ಅಂತ್ಯ ನೀಡುತ್ತೇವೆ : ಎಂ.ಬಿ.ಪಾಟೀಲ್‌

ಬೆಂಗಳೂರು,ಸೆ.2- ಬಿಜೆಪಿ ಸರ್ಕಾರದ ಅವಧಿಯಲ್ಲಿನ ಎಲ್ಲಾ ಹಗರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌ ಸಂದರ್ಭದಲ್ಲಿ ಸಾವಿನ ನಡುವೆಯೂ ಹಣ ಲೂಟಿ ಹೊಡೆದಿದ್ದಾರೆ. ಪಿಎಸ್‌‍ಐ, ಬಿಟ್‌ ಕಾಯಿನ್‌ ಹಗರಣ ಸೇರಿದಂತೆ ಎಲ್ಲವನ್ನೂ ತನಿಖೆಗೊಳಪಡಿಸಲಾಗಿದೆ. ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಕೋವಿಡ್‌ ಸಂದರ್ಭದಲ್ಲಿನ ಹಗರಣಗಳಿಗೆ ಆಗಿನ ಸಚಿವರೇ …

Read More »

ಬಿಜೆಪಿ ಸದಸ್ಯನ ಅ‍ಪಹರಣ: ಕಿತ್ತೂರು ಪ.ಪಂ ಚುನಾವಣೆಗೆ ಹೈಕೋರ್ಟ್‌ ತಡೆ

 ಕಿತ್ತೂರು (ಬೆಳಗಾವಿ ಜಿಲ್ಲೆ): ಪಟ್ಟಣ ಪಂಚಾಯಿತಿ ಸದಸ್ಯ ನಾಗರಾಜ ಅಸುಂಡಿ ಅವರನ್ನು ಅ‍ಪಹರಣ ಮಾಡಿದ ಹಿನ್ನೆಲೆಯಲ್ಲಿ, ಸೆ.3ರಂದು ನಡೆಯಬೇಕಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಗೆ ಹೈಕೋರ್ಟ್‌ನ ಧಾರವಾಡ ಪೀಠ ತಡೆ ನೀಡಿದೆ. ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಯ 9 ಸದಸ್ಯರಿದ್ದಾರೆ. ಐವರು ಕಾಂಗ್ರೆಸ್‌ ಹಾಗೂ ನಾಲ್ವರು ಪಕ್ಷೇತರರು ಸೇರಿ ಕಾಂಗ್ರೆಸ್‌ ಬಲವೂ 9ಕ್ಕೆ ಏರಿದೆ. ಬಿಜೆಪಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕಾಂಗ್ರೆಸ್‌ಗೆ ಶಾಸಕ ಬಾಬಾಸಾಹೇಬ ಪಾಟೀಲ ಅವರ ಮತಗಳೂ …

Read More »