ಮಂಗಳೂರು : ತಮ್ಮ ಪತಿಯ ಸಂಬಂಧಿ ಮಹಿಳೆಯೋರ್ವರಿಗೆ ಲಿವರ್‌ನ(ಯಕೃತ್ತು) ಭಾಗವನ್ನು ದಾನ ಮಾಡಿ ಅವರ ಜೀವ ಉಳಿಸಿದ್ದ ಮಂಗಳೂರಿನ ಉಪನ್ಯಾಸಕಿ ಅರ್ಚನಾ ಕಾಮತ್(33) ಅವರು ತಾನೇ ವಿಧಿಲೀಲೆಗೆ ಬಲಿಯಾಗಿದ್ದಾರೆ. ಅರ್ಚನಾ ಕಾಮತ್ ಪತಿ ಸಿಎ ಆಗಿರು ಚೇತನ್ ಕಾಮತ್ ಅವರ ಪತಿಯ ಸಂಬಂಧಿ ಮಹಿಳೆಯೋರ್ವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಲಿವರ್‌ನ ಅಗತ್ಯವಿತ್ತು. ಹಲವರನ್ನು ತಪಾಸಣೆ ಮಾಡಿದ್ದರೂ ರಕ್ತದ ಗುಂಪು ಹೊಂದಾಣಿಕೆಯಾಗಿರಲಿಲ್ಲ. ಆದರೆ ಅರ್ಚನಾ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು. ಆದ್ದರಿಂದ ಅರ್ಚನಾ …
Read More »ಪಿತೃ ಪಕ್ಷ 2024 ಯಾವಾಗ ಆರಂಭ? ಈ ಸಮಯದಲ್ಲಿ ಏನು ಮಾಡಬಾರದು? ದಿನಾಂಕ ಮರೆತು ಹೋದ್ರೆ ಏನು ಮಾಡಬೇಕು?
ಪಿತೃ ಪಕ್ಷ 2024 ಯಾವಾಗ ಆರಂಭ? ಈ ಸಮಯದಲ್ಲಿ ಏನು ಮಾಡಬಾರದು? ದಿನಾಂಕ ಮರೆತು ಹೋದ್ರೆ ಏನು ಮಾಡಬೇಕು? ಸನಾತನ ಧರ್ಮದಲ್ಲಿ ಪಿತೃ ಪಕ್ಷಕ್ಕೆ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ಜನರು ತಮ್ಮ ಪೂರ್ವಜರನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅವರಿಗೆ ತಿಥಿ ಕಾರ್ಯವನ್ನು ಮಾಡುತ್ತಾರೆ. ವಾಸ್ತವವಾಗಿ, ಶ್ರಾದ್ಧ ಪಕ್ಷದ 16 ದಿನಗಳ ಅವಧಿಯಲ್ಲಿ, ಸತ್ತವರು ಭೂಮಿಗೆ ಬರುತ್ತಾರೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಅವರಿಗೆ ಶ್ರಾದ್ಧವನ್ನು ಮಾಡಿದರೆ ಅದು ಅವರ ಆತ್ಮಕ್ಕೆ ಶಾಂತಿಯನ್ನು …
Read More »ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ. ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ
ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಖಾಸಗಿಯಾಗಿ ಪ್ರವಾಸಕ್ಕೆ ಹೋಗಿ ಬರಲಾಗಿದೆ. ಪ್ರಮುಖವಾಗಿ ಅಲ್ಲಿನ ಚುನಾವಣೆ ರೀತಿ, ನಿಯಮಗಳನ್ನು ಅರಿಯಲಾಗಿದೆ ಎಂದು ವಿವರಣೆ ನೀಡಿದರು. ನಾಗಮಂಗಲ ದಲ್ಲಿನ ಅಹಿತಕರ ಘಟನೆಗೆ ಸಂಬಂಧ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ. ಮುನಿರತ್ನ ಪ್ರಕರಣ ಕುರಿತಾಗು ಹೆಚ್ಚಿನ ಮಾಹಿತಿ ಪಡೆದು …
Read More »ಪೋಕ್ಸೊ ಪ್ರಕರಣ: ಶಿಕ್ಷಕ ಅಮಾನತು
ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಪೋಕ್ಸೊ ಪ್ರಕರಣದಡಿ ಬಂಧಿತನಾಗಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಮೊಹಮ್ಮದ್ ಸಾದಿಕ್ ಮೀಯಾಬೇಗ್ (39) ಎಂಬುವನನ್ನು ಅಮಾನತು ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಬಿ. ಎ. ಮೇಕನಮರಡಿ ತಿಳಿಸಿದ್ದಾರೆ. 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಶಿಕ್ಷಕನನ್ನು ಚಿಕ್ಕೋಡಿ ಠಾಣೆ ಪೊಲೀಸರು ಬಂಧಿಸಿದ್ದರು.
Read More »ರಾಜಿ ಸಂಧಾನ: 27,376 ಪ್ರಕರಣಗಳು ಇತ್ಯರ್ಥ
ಬಾಗಲಕೋಟೆ: ಜಿಲ್ಲಾ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ 27,376 ಪ್ರಕರಣಗಳನ್ನು ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು. ವಿವಿಧ ನ್ಯಾಯಾಲಯಗಳಲ್ಲಿನ 7,151 ಪೈಕಿ 4,819 ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 24,107 ಪೈಕಿ 22,557 ಪ್ರಕರಣಗಳು ಇತ್ಯರ್ಥ ಮಾಡಲಾಯಿತು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ.ವಿಜಯ ನೇತೃತ್ವದಲ್ಲಿ ಜಿಲ್ಲೆ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ₹25.11 ಕೋಟಿ ಮೊತ್ತದ ಪ್ರಕರಣಗಳಿಗೆ …
Read More »ಗೃಹಲಕ್ಷ್ಮಿ’ ಯೋಜನೆ ನಿತ್ಯ, ನಿರಂತರ : 2 ತಿಂಗಳ ಬಾಕಿ ಹಣ ಒಂದೇ ಬಾರಿ ಅಕೌಂಟ್‌ಗೆ ಜಮೆ : ಸಚಿವೆ ಹೆಬ್ಬಾಳ್ಕರ್ ಹೇಳಿಕೆ
ಬೆಂಗಳೂರು : ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಬಾಕಿ ಉಳಿದ ಎರಡು ತಿಂಗಳ ಹಣ ಒಟ್ಟಿಗೆ ಖಾತೆಗೆ ಜಮೆಯಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಇನ್ನು ಯೋಜನೆ ಸ್ಥಗಿತವಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಎಂದಿಗೂ ಬಂದ್ ಆಗುವುದಿಲ್ಲ. 2 ತಿಂಗಳ ಬಾಕಿ ಹಣವನ್ನು ಶೀಘ್ರ ಒಮ್ಮೆಗೆ ಖಾತೆ ಜಮೆ …
Read More »ಮಂಡ್ಯದಲ್ಲಿ ಮತ್ತೊಂದು ಗಲಾಟೆ
ಗಣೇಶೋತ್ಸವ ಮೆರವಣಿಗೆಯ ವೇಳೆ ಕಲ್ಲು ತೂರಾಟ ಹಾಗೂ ಪೆಟ್ರೋಲ್ ಬಾಂಬ್ ಎಸೆತ ಘಟನೆ ಮಾಸುವ ಬೆನ್ನಲ್ಲೇ ಮಂಡ್ಯದಲ್ಲಿ ತಡರಾತ್ರಿ ಮತ್ತೊಂದು ವಿವಾದ ನಡೆದಿದೆ. ಪಾಂಡವಪುರದಲ್ಲಿರುವ ಆರ್‌ಎಸ್‌ಎಸ್ ಕಚೇರಿಗೆ ಏಕಾಏಕಿ ನುಗ್ಗಿದ ಪೊಲೀಸರು ಅಲ್ಲಿದ್ದವರನ್ನು ವಶಕ್ಕೆ ಪಡೆಯಲು ವಿಫಲ ಯತ್ನ ನಡೆಸಿದ್ದಾರೆ. ರೊಚ್ಚಿಗೆದ್ದ ಕಾರ್ಯಕರ್ತರು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ರಸ್ತೆ ತಡೆದು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಶರಣ್ ಪಂಪ್‌ವೆಲ್ ಮಂಡ್ಯಕ್ಕೆ ಬಂದಿದ್ದಾರೆಂಬ ಮಾಹಿತಿಯ ಮೇಲೆ ಪೊಲೀಸರು ಆರ್‌ಎಸ್‌ಎಸ್ ಕಚೇರಿಗೆ ತೆರಳಿದ್ದರು. ಆದರೆ …
Read More »ಜೈಲಿನಲ್ಲಿ ಹೇಗಿರಬೇಕು? ವಕೀಲರಿಂದ ದರ್ಶನ್‌ಗೆ ಪತ್ರ
ಬಳ್ಳಾರಿ: ಇಲ್ಲಿನ ಕಾರಾಗೃಹದಲ್ಲಿ ಇರುವ ಕೊಲೆ ಆರೋಪಿ, ನಟ ದರ್ಶನ್‌ಗೆ ವಕೀಲರ ತಂಡವು ಪತ್ರ ಬರೆದು ‘ಜೈಲಿನಲ್ಲಿ ಹೇಗಿರಬೇಕು’ ಎಂಬ ಬಗ್ಗೆ ಸಲಹೆ, ಸೂಚನೆ ನೀಡಿದೆ. ಕೈದಿಗಳಿಗೆ ಕುಟುಂಬಸ್ಥರು, ವಕೀಲರು ಪತ್ರ ಬರೆಯಲು ಅವಕಾಶವಿದೆ. ಕಾರಾಗೃಹದ ಅಧಿಕಾರಿಗಳು ಪತ್ರವನ್ನು ಪರಿಶೀಲಿಸಿ, ದರ್ಶನ್‌ಗೆ ನೀಡಿದ್ದಾರೆ. ‘ವಕೀಲರಿಂದ ಬಂದಿರುವ ಪತ್ರದಲ್ಲಿ ಕೆಲವಷ್ಟು ವೈಯಕ್ತಿಕ ವಿಚಾರಗಳಿವೆ. ಪತ್ರದ ಜೊತೆ ಭಗವದ್ಗೀತೆ ಕಳುಹಿಸಿರುವ ಬಗ್ಗೆ ಉಲ್ಲೇಖವಿದೆ. ಆದರೆ, ಅದು ಪತ್ತೆಯಾಗಿಲ್ಲ’ ಎಂದು ಕಾರಾಗೃಹದ ಅಧಿಕಾರಿಯೊಬ್ಬರು ತಿಳಿಸಿದರು. …
Read More »ಮೂಡದ ಜಾಗೃತಿ; ಜೀವಜಲ ಕಲುಷಿತ
ಬೆಳಗಾವಿ: ನಗರದ ಜಲಮೂಲಗಳನ್ನು ರಕ್ಷಣೆ ಮಾಡುವಲ್ಲಿ ಈ ವರ್ಷವೂ ಮಹಾನಗರ ಪಾಲಿಕೆ ಹಿಂದೆ ಬಿದ್ದಿದೆ. ನಗರದಲ್ಲಿ ಎಲ್ಲೆಂದರಲ್ಲಿ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಈಗಾಗಲೇ ಐದು ದಿನಗಳ ಗಣಪತಿಗಳನ್ನು ವಿಸರ್ಜನೆಯೂ ಮಾಡಲಾಗಿದೆ. ಈ ಬಾರಿಯೂ ನದಿ, ಹಳ್ಳ, ಬಾವಿ, ಕೆರೆಗಳಲ್ಲಿಯೇ ವಿಸರ್ಜನೆ ಮಾಡಿದ್ದು ಬಹುಪಾಲು ಕಡೆ ಕಂಡುಬಂದಿದೆ. ‘ಪರಿಸರ ಸ್ನೇಹಿಯಾಗಿ ಗಣೇಶೋತ್ಸವ ಆಚರಿಸಿ. ಪರಿಸರ ಸ್ನೇಹಿ ಮೂರ್ತಿಗಳನ್ನು ನಿರ್ದಿಷ್ಟವಾದ ಹೊಂಡಗಳಲ್ಲೇ ವಿಸರ್ಜಿಸಿ. ಒಂದುವೇಳೆ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ)ನಿಂದ ತಯಾರಿಸಿದ್ದ ಮೂರ್ತಿಗಳಿದ್ದರೆ, …
Read More »ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಬೆಳಗಾವಿವರೆಗೆ ವಿಸ್ತರಿಸಲು ಕ್ರಮ: ಸೋಮಣ್ಣ
ಬೆಳಗಾವಿ: ‘ಪ್ರಯಾಣಿಕರ ಬೇಡಿಕೆಯಂತೆ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲಿನ ಸೇವೆಯನ್ನು ಬೆಳಗಾವಿವರೆಗೆ ವಿಸ್ತರಿಸಲು ಕ್ರಮ ವಹಿಸಲಾಗುವುದು’ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು. ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸಲು ರೈಲ್ವೆ ಅಧಿಕಾರಿಗಳು ಏನು ತಾಂತ್ರಿಕ ಕಾರಣ ಕೊಟ್ಟಿದ್ದಾರೆ ಗೊತ್ತಿಲ್ಲ. ಆಗ ನಾನು ಸಚಿವನಾಗಿರಲಿಲ್ಲ. ಹಳೆಯದ್ದನ್ನೇ ಕೆದಕಿ ಕೆಲಸ ಮಾಡಲಾಗುವುದಿಲ್ಲ. ಬೆಂಗಳೂರು-ಬೆಳಗಾವಿ ಮಧ್ಯೆ ವಂದೇ ಭಾರತ್ ರೈಲು ಆರಂಭಿಸುವ ಕುರಿತು …
Read More »