Breaking News

ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರ ಸಮಿತಿ ಆಶ್ರಯದಲ್ಲಿ ಕಲಬುರಗಿಯಲ್ಲಿ ಇದೇ ದಿ.29 ಹಾಗೂ 30 ರಂದು ಬೃಹತ್ ಸಮ್ಮೇಳನ

ಬೆಳಗಾವಿ: ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲೆ ಒತ್ತಡ ತರಲು ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರ ಸಮಿತಿ ಆಶ್ರಯದಲ್ಲಿ ಕಲಬುರಗಿಯಲ್ಲಿ ಇದೇ ದಿ.29 ಹಾಗೂ 30 ರಂದು ಬೃಹತ್ ಸಮ್ಮೇಳನವನ್ನು ಆಯೋಜನೆ ಮಾಡಿದೆ.   ಈ ಕುರಿತು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಎನ್.ಎಲ್.ಭರತರಾಜ್ ಹೇಳಿಕೆ ನೀಡಿದ್ದು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದು ಟನ್ ಕಬ್ಬಿಗೆ ಐದು ಸಾವಿರ …

Read More »

ಸಿದ್ದರಾಮಯ್ಯ ಬೆಂಬಲಿಸಿ ರಾಷ್ಟ್ರೀಯ ಅಹಿಂದ ಒಕ್ಕೂಟದಿಂದ ಅಕ್ಟೋಬರ್ 3 ರಂದು ಹುಬ್ಬಳ್ಳಿಯಿಂದ ಬೆಂಗಳೂರುವರೆಗೆ ಜಾಗೃತಿ ಜಾಥಾ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಸಿ ರಾಷ್ಟ್ರೀಯ ಅಹಿಂದ ಒಕ್ಕೂಟದಿಂದ ಅಕ್ಟೋಬರ್ 3 ರಂದು ಹುಬ್ಬಳ್ಳಿಯಿಂದ ಬೆಂಗಳೂರುವರೆಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ರಾಜ್ಯಾದ್ಯಕ್ಷ ಮುತ್ತಣ್ಣ ಶಿವಳ್ಳಿ ಹೇಳಿದರು. ಬುಧವಾರ(ಸೆ 25) ಇಲ್ಲಿನ‌ ಪ್ರವಾಸಿ ಮಂದಿರದಲ್ಲಿ ಅಹಿಂದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟವರು, ಅಂತಹ ನಾಯಕರ ಮೇಲೆ ಸಂಕಷ್ಟ ತರುವಂತಹ ಕಾರ್ಯವನ್ನು ಬಿಜೆಪಿ ಮಾಡಿದ್ದು, ಎಲ್ಲೆಲ್ಲಿ ಬಿಜೆಪಿ ಆಡಳಿತವಿಲ್ಲವೋ ಅಲ್ಲಿ …

Read More »

ದೂರು ನೀಡಿ ಎರಡುವರೆ ಗಂಟೆಯೊಳಗಡೆ ನಾಪತ್ತೆಯಾದ ಮಹಿಳೆಯನ್ನು ಪತ್ತೆ ಹಚ್ಚಿದ ಪೊಲೀಸರು

ದಾಂಡೇಲಿ: ನಾಪತ್ತೆಯಾಗಿದ್ದ ಮಹಿಳೆಯೋರ್ವರ ಬಗ್ಗೆ ದೂರು ನೀಡಿದ ಕೇವಲ ಎರಡುವರೆ ಗಂಟೆಯೊಳಗಡೆ ಪೊಲೀಸರು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಒಪ್ಪಿಸಿದ ಶ್ಲಾಘನಾರ್ಹ ಘಟನೆ ಅಂಬಿಕಾನಗರದ ಜಮಗಾದಲ್ಲಿ ನಡೆದಿದೆ. ಅಂಬಿಕಾನಗರದ ಜಮಗಾ ನಿವಾಸಿ 50 ವರ್ಷ ವಯಸ್ಸಿನ ಫಾತಿಮಾ ಮುಂಡಗೋಡ ಇವರು ಮಂಗಳವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಅಣಬೆ ತರಲೆಂದು ಕಾಡಿಗೆ ಹೋಗಿದ್ದವರು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಮನೆ ಮಂದಿಯೆಲ್ಲ ಸುತ್ತಮುತ್ತಲೂ ಹುಡುಕಿ, ಕೊನೆಗೆ ಸಂಜೆ 7.45 ನಿಮಿಷಕ್ಕೆ ಅಂಬಿಕಾನಗರ …

Read More »

ಕೊನೆಗೂ 71 ದಿನಗಳ ಬಳಿಕ ಅರ್ಜುನ್‌ ಲಾರಿ ಹಾಗೂ ಮೃತದೇಹ ಪತ್ತೆ

ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿ ಎರಡು ತಿಂಗಳು ಕಳೆದಿದ್ದು, ಕೊನೆಗೂ ನಾಪತ್ತೆಯಾಗಿದ್ದ ಕೇರಳದ ಲಾರಿ ಹಾಗೂ ಚಾಲಕ ಅರ್ಜುನ್‌ ಅವರ ಮೃತದೇಹ ಬುಧವಾರ(ಸೆ.25ರಂದು) ಪತ್ತೆ ಆಗಿದೆ ಎಂದು ವರದಿಯಾಗಿದೆ. ಕಳೆದ 6 ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಯ ಮೂಲಕ ಗಂಗಾವಳಿ ನದಿಯಲ್ಲಿ ಮುಳುಗಿದ್ದ ಅರ್ಜುನ್‌ ಅವರ ಬೆಂಜ್ ಲಾರಿ ಪತ್ತೆಯಾಗಿದ್ದು, ಲಾರಿಯೊಳಗೆ ಅರ್ಜುನ್‌ ಅವರ ಮೃತದೇಹ ಪತ್ತೆಯಾಗಿದೆ ಎಂದು ಕಾರ್ಯಾಚರಣೆಯ ತಂಡದ ಮೂಲಗಳು ತಿಳಿಸಿವೆ.   ಲಾರಿಯ ಮಾಲೀಕ ಮನಾಫ್‌ …

Read More »

ಸಾರಿಗೆ ಬಸ್ ಅಪಘಾತ; ನಿರ್ವಾಹಕ ಸೇರಿ 6 ಪ್ರಯಾಣಿಕರಿಗೆ ಗಾಯ

ಬೈಲಹೊಂಗಲ: ಸಾರಿಗೆ ಸಂಸ್ಥೆ ಬಸ್ ಮತ್ತು ಸೋಯಾಬೀನ್ ರಾಶಿ ಯಂತ್ರ ವಾಹನ ನಡುವೆ ಅಪಘಾತ ಸಂಭವಿಸಿದ್ದು ಸುಮಾರು 6 ಕ್ಕಿಂತ ಹೆಚ್ಚು ಜನ ಪ್ರಯಾಣಿಕರು ಗಾಯಗೊಂಡ ಘಟನೆ ಮಲಪ್ರಭಾ ನದಿ ಸಮೀಪ ಬುಧವಾರ (ಸೆ.25) ಮಧ್ಯಾಹ್ನ ಸಂಭವಿಸಿದೆ. ಸಾರಿಗೆ ಬಸ್ ಧಾರವಾಡದಿಂದ ಬೈಲಹೊಂಗಲ ಮಾರ್ಗ ಮಧ್ಯೆ ಬರುವಾಗ ಮಲಪ್ರಭಾ ನದಿ ಪಕ್ಕದಲ್ಲಿ ಸೋಯಾಬೀನ್ ರಾಶಿ ಯಂತ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭೀಕರ ಅಪಘಾತ ತಪ್ಪಿಸಲು …

Read More »

ಕೋರ್ಟ್‌ ಕಲಾಪ ವೀಡಿಯೋ ಬಳಕೆಗೆ ನಿಷೇಧ

ಬೆಂಗಳೂರು: ಕೋರ್ಟ್‌ ಕಲಾಪಗಳ ನೇರಪ್ರಸಾರದ (ಲೈವ್‌ ಸ್ಟ್ರೀಮಿಂಗ್‌) ದೃಶ್ಯಾವಳಿಗಳನ್ನು ಯಾವುದೇ ಖಾಸಗಿ ವೇದಿಕೆಗಳು ಬಳಸಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿರುವ ಹೈಕೋರ್ಟ್‌, ಖಾಸಗಿ ಡಿಜಿಟಲ್‌ ವೇದಿಕೆಗಳಾದ ಕಹಳೆ ನ್ಯೂಸ್‌, ಫ್ಯಾನ್ಸ್‌ ಟ್ರೋಲ್‌, ಪ್ರತಿಧ್ವನಿ, ಅವನಿಯಾನ ಮತ್ತು ರವೀಂದ್ರ ಜೋಶಿ ಕ್ರಿಯೇಷನ್ಸ್‌ನಲ್ಲಿ ಬಳಸಲಾಗಿರುವ ವೀಡಿಯೋಗಳನ್ನು ತತ್‌ಕ್ಷಣ ತೆಗೆದು ಹಾಕುವಂತೆ ಯೂಟ್ಯೂಬ್‌, ಫೇಸ್‌ಬುಕ್‌ ಹಾಗೂ ಎಕ್ಸ್‌ ಕಾರ್ಪ್‌ ಸಂಸ್ಥೆಗಳಿಗೆ ನಿರ್ದೇಶಿಸಿದೆ.   ಕೋರ್ಟ್‌ ಕಲಾಪದ ದೃಶ್ಯಾವಳಿಗಳ ದುರ್ಬಳಕೆ ತಡೆಗೆ ಕ್ರಮ ಜರಗಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ …

Read More »

ಆರೋಪದಿಂದ ಹೊರಬರುವವರೆಗೂ ಸಿ.ಎಂ. ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ವಿ.ಸೋಮಣ್ಣ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನಿಗೆ ತಲೆ ಬಾಗುತ್ತಾರೆ ಎನ್ನುವ ವಿಶ್ವಾಸವಿದೆ. ರಾಜೀನಾಮೆ ನೀಡುವುದಿಲ್ಲ ಎಂದು ಅವರು ಹೇಳಿಲ್ಲ. ಬೇರೆಯವರು ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.   ರೈಲ್ವೆ ಖಾತೆ ರಾಜ್ಯ ಸಚಿವರಾದ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಮ್ಮ ಜೀವನ ತೆರೆದ ಪುಸ್ತಕ ಎಂದು ಹೇಳಿಕೊಳ್ಳುತ್ತಾರೆ. ಆ ಪುಸ್ತಕದಲ್ಲಿ ಕೆಲವು ತಪ್ಪುಗಳಾಗಿವೆ …

Read More »

ಸಿಡಿಲು ಬಡಿದು ನಾಲ್ವರು ಮೃತಪಟ್ಟ ಪ್ರಕರಣ. ಸಚಿವ ಶರಣಬಸಪ್ಪ ದರ್ಶನಾಪುರ ಸಾಂತ್ವನ

ಯಾದಗಿರಿ: ಸೋಮವಾರ(ಸೆ. 23) ಸಿಡಿಲು ಬಡಿದು ನಾಲ್ವರು ಮೃತಪಟ್ಟದ್ದರು ಇಂದು ಯಾದಗಿರಿ ತಾಲ್ಲೂಕಿನ ಜಿನಕೇರಾ ತಾಂಡಕ್ಕೆ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ತಾಂಡಾಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.   ಇಂತಹ ಘಟನೆಗಳು ಆಗದಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಆ ಕುಟುಂಬದ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ಸರ್ಕಾರದಿಂದ ಏನೆಲ್ಲ ಪರಿಹಾರ ಇದೆಯೋ ಅದನ್ನು ಆ ಕುಟುಂಬಗಳಿಗೆ ಒದಗಿಸಲು ಅಧಿಕಾರಿಗಳಿಗೆ …

Read More »

ಸಾಲು ಮರದ ತಿಮ್ಮಕ್ಕ ಪಾರ್ಕ್‌ ಸಾಲು ಸಾಲು ಸಮಸ್ಯೆ!

ಪುತ್ತೂರು: ಪರಿಸರ ಪ್ರೀತಿ ಮೂಡಿಸಬೇಕಿದ್ದ, ಸದಾ ಕಾಲ ನಳನಳಿಸ ಬೇಕಿದ್ದ ವೃಕ್ಷೋದ್ಯಾನವೊಂದು ನಿರ್ವಹಣೆ ಕೊರತೆಯಿಂದ ತನ್ನ ಲವಲವಿಕೆಯನ್ನೇ ಕಳೆದುಕೊಂಡು ನಿರ್ಜಿವ ಸ್ಥಿತಿಯಲ್ಲಿದೆ. ಐದು ವರ್ಷದ ಹಿಂದೆ ನಗರದ ಬೀರಮಲೆಯಲ್ಲಿ ಸ್ಥಾಪಿಸಲಾಗಿರುವ ಸಾಲು ಮರ ತಿಮ್ಮಕ್ಕ ಟ್ರೀ ಪಾರ್ಕ್‌ನ ಸ್ಥಿತಿ ಹೇಗಿದೆ ಎಂದು ಉದಯವಾಣಿ ಸುದಿನ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಕಂಡು ಬಂದ ದೃಶ್ಯ ಇದು. ಬೆಟ್ಟದ ತುತ್ತತುದಿಯಲ್ಲಿ ಇರುವ, ಪುತ್ತೂರಿಗೆ ಮುಕುಟಪ್ರಾಯದಂತಿರಬೇಕಿದ್ದ ವೃಕ್ಷೋದ್ಯಾನದ ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಂತಾಗಿದೆ. ಶುಲ್ಕ ಸಂಗ್ರಹ …

Read More »

ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿಲ್ಲ. ಸಿಎಂ ಸಿದ್ದರಾಮಯ್ಯ ನಿರಪರಾಧಿಯಾಗಿ ಹೊರ ಬರಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ

ಶಿರಸಿ: ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿಲ್ಲ. ಸಿಎಂ ಸಿದ್ದರಾಮಯ್ಯ ನಿರಪರಾಧಿಯಾಗಿ ಹೊರ ಬರಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ ಪ್ರತಿಕ್ರಿಯೆ ನೀಡಿದರು‌. ಅವರು ಸೆ.24ರ ಮಂಗಳವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅಧಿವೇಶದಲ್ಲಿ ವಿಧಾನಸಭೆ ಒಳಗಡೆ ಹಾಗೂ ಹೊರಗಡೆಯೂ ಬಿಜೆಪಿ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಅವರ ಆರೋಪವನ್ನು ನಾವು ಒಪ್ಪುವುದಿಲ್ಲ. ಬಿಜೆಪಿಯು ರಾಜ್ಯಪಾಲರನ್ನು ಅಸ್ತ್ರ ಮಾಡಿಕೊಂಡು ಮುಖ್ಯಮಂತ್ರಿ ವಿರುದ್ಧ ರಣತಂತ್ರ ರೂಪಿಸಿದೆ. ನ್ಯಾಯಾಲಯ ನೀಡಿದ …

Read More »