Breaking News

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೀದಿ ಕಾಮಣ್ಣರ ಕಿಟಲೇ ಜಾಸ್ತಿ

ಹುಬ್ಬಳ್ಳಿ, : ವಾಣಿಜ್ಯ ನಗರಿಹುಬ್ಬಳ್ಳಿಯಲ್ಲಿಕಳೆದ ಎರಡು ದಿನಗಳ ಹಿಂದೆ ರಾತ್ರಿ ತನ್ನ ಮನೆಗೆ KA25 EM0446 ನೊಂದಣಿ ಸಂಖ್ಯೆಯ ಬೈಕ್​ನಲ್ಲಿ ಮಕ್ತುಂ ತೆರಳುತ್ತಿದ್ದ, ಈ ವೇಳೆ ಕಾರಿ​ನಲ್ಲಿ ಕೃತಿಕಾ ಎಂಬ ಯುವತಿ ಪ್ರಯಾಣ ಮಾಡುತ್ತಿದ್ದಳು. ಕಾರಿನಲ್ಲಿದ್ದ ಕೃತಿಕಾಳನ್ನು ಕಂಡ ಮಕ್ತುಂ ಅಸಭ್ಯವಾಗಿ ಸನ್ನೆ ಮಾಡಿದ್ದಾನೆ. ಅಲ್ಲದೆ ಬೈರಿದೇವರಕೊಪ್ಪದಿಂದ ಸಹನಾ ಕಾಲೇಜಿನ ತನಕ ಕೃತಿಕಾ ಕಾರನ್ನು ಫಾಲೋ ಮಾಡಿದ್ದಾನೆ. ಕಾರ್ ಸ್ಲೋ ಮಾಡಿದ ಕೃತಿಕಾ ಏನು ಎಂದು ಕೇಳಿದ್ದಾಳೆ. ಆಗ ನೀನು …

Read More »

ಇಂದು ಸಂಭವಿಸಲಿದೆ ಮತ್ತೊಂದು ಖಗೋಳ ವಿಸ್ಮಯ : ಎಲ್ಲೆಲ್ಲೆ ಗೋಚರಿಸಲಿದೆ `ಸೂರ್ಯಗ್ರಹಣ’?

ನವದೆಹಲಿ : ಹಿಂದೂ ಧರ್ಮದಲ್ಲಿ ಜ್ಯೋತಿಷ್ಯದ ಪ್ರಕಾರ, ಸೂರ್ಯಗ್ರಹಣಕ್ಕೆ ವಿಶೇಷ ಮಹತ್ವವಿದೆ. ಸೂರ್ಯಗ್ರಹಣವು ಖಗೋಳ ವಿದ್ಯಮಾನವಾಗಿದೆ. ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ಸಮಯದಲ್ಲಿ ಭೂಮಿಯ ಮೇಲಿನ ಸೂರ್ಯನ ಬೆಳಕು ಕಡಿಮೆಯಾಗುತ್ತದೆ ಅಥವಾ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ. ಈ ವಿದ್ಯಮಾನವನ್ನು ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ಸೂರ್ಯಗ್ರಹಣವು ಅಮಾವಾಸ್ಯೆಯ ದಿನದಂದು ಸಂಭವಿಸುತ್ತದೆ. 2024 ರಲ್ಲಿ ಎರಡು ಸೂರ್ಯ ಗ್ರಹಣಗಳು ಮತ್ತು ಎರಡು ಚಂದ್ರ …

Read More »

ನಾಳೆಯಿಂದ ಅ.10 ರವರೆಗೆ ಹೈಕೋರ್ಟ್ ಗೆ ದಸರಾ ರಜೆ : ರಜಾಕಾಲದ ಪೀಠದಿಂದ ಕಾರ್ಯ ನಿರ್ವಹಣೆ

ನಾಳೆಯಿಂದ ಅ.10 ರವರೆಗೆ ಹೈಕೋರ್ಟ್ ಗೆ ದಸರಾ ರಜೆ : ರಜಾಕಾಲದ ಪೀಠದಿಂದ ಕಾರ್ಯ ನಿರ್ವಹಣೆ ಬೆಂಗಳೂರು : ರಾಜ್ಯ ಹೈಕೋರ್ಟ್ ಗೆ ಅ. 3 ರಿಂದ 7 ದಿನಗಳ ಕಾಲ ದಸರಾ ರಜೆ ಇರಲಿದ್ದು, ಹೈಕೋರ್ಟ್ ರಜಾಕಾಲದ ಪೀಠ ಕಾರ್ಯ ನಿರ್ವಹಿಸಲಿದೆ. ಅಕ್ಟೋಬರ್ 11ರಂದು ಆಯುಧಪೂಜೆ, ಅ. 12ರಂದು ವಿಜಯದಶಮಿ, ಎರಡನೇ ಶನಿವಾರ, ಅ. 13 ಭಾನುವಾರ ರಜೆ ಇರುವುದರಿಂದ ಅಕ್ಟೋಬರ್ 14 ರಿಂದ ಕೋರ್ಟ್ ಕಲಾಪಗಳು ಪುನರಾರಂಭ …

Read More »

ಜನಿಸಿದ್ದು ಹೆಣ್ಣು ಮಗು, ಕೊಟ್ಟಿದ್ದು ಗಂಡು ಮಗುವಿನ ಶವ.!

ಕೊಪ್ಪಳ: ಹೆಣ್ಣು ಮಗು ಜನಿಸಿದೆ ಎಂದು ಘೋಷಿಸಿದ್ದ ವೈದ್ಯರು ವಾರದ ನಂತರ ಅನಾರೋಗ್ಯದಿಂದ ಶಿಶು ಮೃತಪಟ್ಟಿದೆ ಎಂದು ಗಂಡು ಮಗುವಿನ ಶವ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯ ಗೌರಿ ಕನಕಗೊಲ್ಲರ ಅವರಿಗೆ ಸೆ. 26ರಂದು ಕೊಪ್ಪಳದ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ಹೆರಿಗೆ ಮಾಡಿಸಿದ ವೈದ್ಯರು ಮತ್ತು ಸಿಬ್ಬಂದಿ ಹೆಣ್ಣು ಮಗು ಜನಿಸಿದೆ ಎಂದು ತಿಳಿಸಿದ್ದಾರೆ. ಅವಧಿ ಪೂರ್ವವಾಗಿ ಶಿಶು ಜನಿಸಿದ ಕಾರಣ …

Read More »

ಜಮೀನು ವಿಚಾರಕ್ಕೆ ವ್ಯಕ್ತಿಯೊಬ್ಬರ ಬಳಿ ಲಂಚ ಪಡೆದ ಕೆಆರ್ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ ಅಮಾನತು

ಚಿತ್ರದುರ್ಗ, ಅಕ್ಟೋಬರ್‌, 2: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕೆಆರ್ ಹಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಾಸೇಗೌಡ ಅವರನ್ನು ಸೋಮವಾರ (ಅಕ್ಟೋಬರ್ 1) ಜಿಲ್ಲಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದಕ್ಕೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಲಂಚ ತಗೊಂಡಿದ್ದಾರೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪುಲ್ ವೈರಲ್ ಆಗಿದ್ದು, ಈ ಹಿನ್ನೆಲೆ ಗ್ರಾಮ ಲೆಕ್ಕಾಧಿಕಾರಿ ದಾಸೇಗೌಡ ಅವರನ್ನು ಜಿಲ್ಲಾಧಿಕಾರಿ ಅಮಾನತು ಮಾಡಿ …

Read More »

ಸಾಲು ಸಾಲು ರಜೆ; ನವರಾತ್ರಿಗೆ ಬಸ್‌ ಟಿಕೆಟ್‌ ದರ ಬಲು ದುಬಾರಿ !

ನವರಾತ್ರಿ ಹಬ್ಬ ಸನ್ನಿಹಿತವಾಗುತ್ತಿರುವಂತೆ ಖಾಸಗಿ ಬಸ್‌ಗಳ ಪ್ರಯಾಣ ದರ ದುಪ್ಪಟ್ಟಾಗಿದೆ. ಹಬ್ಬಕ್ಕಾಗಿ ದೂರದೂರಿನಿಂದ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ಅದರಲ್ಲೂ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸು ವವರಿಗೆ ಖಾಸಗಿ ಬಸ್‌ನಲ್ಲಿ ಅತೀ ಹೆಚ್ಚಿನ ದರ 3,500 ರೂ. ಇದೆ. ಪ್ರತಿ ಬಾರಿ ಹಬ್ಬದ ಸಮಯದಲ್ಲಿ ಟಿಕೆಟ್‌ ದರ ಏರಿಕೆ ಮಾಮೂಲಿಯಾಗಿದೆ. ಈ ಹಿಂದೆ ಗೌರಿ-ಗಣಪತಿ ಹಬ್ಬದ ಸಮಯದಲ್ಲೂ ಬಸ್‌ ಟಿಕೆಟ್‌ ದರ ಏರಿಕೆ ಮಾಡಲಾಗಿತ್ತು. ಇದೀಗ ನವರಾತ್ರಿ ಹಬ್ಬಕ್ಕೂ …

Read More »

ಹೆಸ್ಕಾಂ ನಿರ್ಲಕ್ಷ್ಯ: ವಿದ್ಯುತ್ ಪ್ರವಹಿಸಿ 11 ಕುರಿ, 1 ನಾಯಿ ಸಾವು. ತಪ್ಪಿದ ಅನಾಹುತ

ಗದಗ: ಹೆಸ್ಕಾಂ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಪ್ರವಹಿಸಿ 11 ಕುರಿ ಮತ್ತು 1 ನಾಯಿ ಸಾವಿಗೀಡಾದ ಘಟನೆ ಗಜೇಂದ್ರಗಡ ತಾಲೂಕಿನ ನರೇಗಲ್ ಹೋಬಳಿಯಲ್ಲಿ ಸೋಮವಾರ (ಸೆ.30) ಸಂಜೆ ನಡೆದಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ನವಲಪ್ಪ ಹೆಗಡೆ ಸಂಚಾರಿ ಕುರಿಗಾಯಿ ನರೇಗಲ್ ಭಾಗದ ಜಮೀನೊಂದರಲ್ಲಿ‌ ಕುರಿ ಮೇಯಿಸುವ ಸಂದರ್ಭದಲ್ಲಿ, ಹೊಲದಲ್ಲಿ ವಿದ್ಯುತ್ ಕಂಬ ನೆಲಕ್ಕೆ ಬಿದ್ದಿದೆ. ಆದರೆ, ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ಸಂಚಾರ ನಿಷ್ಕ್ರಿಯವಾಗದ ಕಾರಣ ವಿದ್ಯುತ್ ತಂತಿಯ …

Read More »

ಕಬ್ಬಿನ ಗದ್ದೆಯಲ್ಲಿ ಪತ್ತೆಯಾಯ್ತು ಆರು ಅಡಿ ಉದ್ದದ ಹೆಬ್ಬಾವು

ಧಾರವಾಡ: ಧಾರವಾಡ ತಾಲೂಕಿನ ನಿಗದಿ ಗ್ರಾಮದ ರೈತರ ಕಬ್ಬಿನ ಗದ್ದೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅದನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಮರಳಿ ಅರಣ್ಯಕ್ಕೆ ಬಿಡಲಾಗಿದೆ. ನಿಗದಿ ಗ್ರಾಮದ ರೈತ ಸಿದ್ಧಬಸಪ್ಪ ಹಳಿಯಾಳ ಎಂಬ ರೈತ ಅಂಬ್ಲಿಕೊಪ್ಪ ಗ್ರಾಮದ ಹದ್ದಿನಲ್ಲಿ ಕಬ್ಬಿನ ಜಮೀನು ಹೊಂದಿದ್ದು, ಕಬ್ಬಿನ ಸೋಗೆ ಸುಲಿಯುವ ಸಂದರ್ಭದಲ್ಲಿ ಈ ಹೆಬ್ಬಾವು ರೈತನ ಕಣ್ಣಿಗೆ ಬಿದ್ದಿದೆ. ಕೂಡಲೇ ಈ ಮಾಹಿತಿಯನ್ನು ಉರಗ ರಕ್ಷಕ ಯಲ್ಲಪ್ಪ ಜೋಡಳ್ಳಿ ಅವರ ಗಮನಕ್ಕೆ ತಂದಾಗ …

Read More »

ಮರ್ಡರ್ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಲು ಒತ್ತಾಯ…!!

ಮರ್ಡರ್ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಲು ಒತ್ತಾಯ…!! ಇವತ್ತು ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ಇವರನ್ನು ಭೇಟಿ ಮಾಡಿದ ನೀಲಜಿ, ಶಿಂದೋಳ್ಳಿ ಗ್ರಾಮದ ಹಿರಿಯರು, ಇಲ್ಲಿಯ ರಹವಾಸಿಯಾದ ಶ್ರೀಮತಿ ಭಾರತಿ ಕಾನಪ್ಪ ಪೂಜಾರಿ ಎಂಬ ಮಹಿಳೆ 4 ದಿನಗಳ ಹಿಂದೆ ಗ್ರಾಮದ ಶ್ರೀ ಮಸಣವ್ವ ದೇವಸ್ಥಾನದಲ್ಲಿ ಕಳ್ಳರು ಕಳತನದಲ್ಲಿ ತೊಡಗಿದ್ದಾಗ ಮಹಿಳೆ ನೋಡಿದ್ದಾಳೆ ಎಂಬ ಕಾರಣಕ್ಕೆ ಕಳ್ಳರು ಮಹಿಳೆಯನ್ನು ಬಾವಿಗೆ ನೂಕಿ ಕೊಲೆ ಮಾಡಿರುವ ಶಂಕೆ ಇದ್ದು.ಈ ಪ್ರಕರಣವನ್ನು ಕೊಲೆ …

Read More »

ಕಿಶೋರ್‌ ಕುಮಾರ್‌ ಬೊಟ್ಯಾಡಿಗೆ ಒಲಿದ ಬಿಜೆಪಿ ಟಿಕೆಟ್

ಮಂಗಳೂರು: ಕೋಟ ಶ್ರೀನಿವಾಸ ಪೂಜಾರಿ ಅವರು ಸಂಸದರಾಗಿ ಆಯ್ಕೆಯಾದ ಕಾರಣದಿಂದ ತೆರವಾಗಿದ್ದ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ತಿನ ಉಪಚುನಾವಣೆಗೆ ಭಾರತೀಯ ಜನತಾ ಪಕ್ಷವು ಮಂಗಳವಾರ (ಅ.1) ಅಭ್ಯರ್ಥಿ ಅಂತಿಮಗೊಳಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಬೊಟ್ಯಾಡಿ (Kishor Kumar Botyadi) ಅವರನ್ನು ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ತಿನ ಉಪಚುನಾವಣೆಯ ಅಭ್ಯರ್ಥಿಯಾಗಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಘೋಷಿಸಿದೆ.   …

Read More »