Breaking News

ಜೆಪಿ ಸದಸ್ಯತ್ವ ಅಭಿಯಾನದಲ್ಲಿ ಅರಭಾವಿ ಕ್ಷೇತ್ರವು ಮತ್ತೊಂದು ಬಾರಿ ಸಾಧನೆ:ಬಾಲಚಂದ್ರ ಜಾರಕಿಹೊಳಿ

ಗೋಕಾಕ- ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಅರಭಾವಿ ಕ್ಷೇತ್ರವು ಮತ್ತೊಂದು ಬಾರಿ ಸಾಧನೆ ಮಾಡಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಣಿ ಮಾಡಿಸಲು ಕಾರ್ಯಕರ್ತರು ಶ್ರಮಿಸುವಂತೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು. ಬುಧವಾರದಂದು ನಗರದ ಎನ್.ಎಸ್.ಎಫ್ ಕಛೇರಿಯಲ್ಲಿ ಅರಭಾವಿ ಬಿಜೆಪಿ ಮಂಡಲದಿಂದ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದ ಸಕ್ರೀಯ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು ಐವತ್ತು ಸಾವಿರಕ್ಕಿಂತ ಅಧಿಕ ಸದಸ್ಯರನ್ನು …

Read More »

ಹಾಡಹಗಲೇ ಮನೆಯಿಂದ ಕಳವು

ಕುಂದಾಪುರ: ಹಾಡಹಗಲೇ ಜನನಿಬಿಡ ಪ್ರದೇಶವಾದ ಹಂಗಳೂರಿನ ಬ್ರಹ್ಮಗುಡಿ ರಸ್ತೆಯಲ್ಲಿನ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಹಣ ಹಾಗೂ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ಗುರುವಾರ ನಡೆದಿದೆ. ಬ್ರಹ್ಮಗುಡಿಯ ಜಗದೀಶ್‌ ಚಂದ್ರ ನಾಯರ್‌ ಅವರ ಮನೆಗೆ ಗುರುವಾರ ಮಧ್ಯಾಹ್ನ 2ರಿಂದ 4 ಗಂಟೆಯ ಮಧ್ಯದ ಅವಧಿಯಲ್ಲಿ ನುಗ್ಗಿದ ಕಳ್ಳರು ಮನೆಯೊಳಗಿದ್ದ ಸುಮಾರು 25-30 ಸಾವಿರ ರೂ. ಹಾಗೂ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಕಳವಾಗಿರುವ ಸೊತ್ತುಗಳ ನಿಖರ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಜಗದೀಶ್‌ ಕುಂದಾಪುರದಲ್ಲಿ ಪ್ರಿಂಟಿಂಗ್‌ …

Read More »

ನೀತಿಸಂಹಿತೆ ಬಳಿಕ ಜಾತಿ ಗಣತಿ ತೀರ್ಮಾನ\:C.M.

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆಯ ನೀತಿ ಸಂಹಿತೆ ಮುಗಿದ ಬಳಿಕ “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ’ಯನ್ನು (ಜಾತಿ ಗಣತಿ ವರದಿ) ಸಚಿವ ಸಂಪುಟದಲ್ಲಿಟ್ಟು ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟದ ಪದಾಧಿಕಾರಿಗಳ ನಿಯೋಗಕ್ಕೆ ಭರವಸೆ ನೀಡಿದರು.   ಮಹಾಒಕ್ಕೂಟದ ಪ್ರಧಾನ ಸಂಚಾಲಕರಾದ ಕೆ.ಎಂ.ರಾಮಚಂದ್ರಪ್ಪ ನೇತೃತ್ವದ ನಿಯೋಗ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಈ …

Read More »

ಮೈತ್ರಿ ಅಭ್ಯರ್ಥಿಯಾಗಿ ಇಂದು ನಿಖಿಲ್‌ ನಾಮಪತ್ರ ಸಲ್ಲಿಕೆ

ರಾಮನಗರ: ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ. ಯೋಗೇಶ್ವರ್‌ ಕೊನೆ ಕ್ಷಣದಲ್ಲಿ ಕೈ ಹಿಡಿದ ಹಿನ್ನೆಲೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಮೈತ್ರಿ ಪಕ್ಷದ ನಾಯಕರು ಘೋಷಣೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆಯ ಹಿನ್ನೆಲೆಯಲ್ಲಿ ಶಕ್ತಿಪ್ರದರ್ಶನಕ್ಕೆ ಜೆಡಿಎಸ್‌ ಸಿದ್ಧತೆ ಮಾಡಿಕೊಂಡಿದೆ. ಕೊನೆ ಕ್ಷಣದವರೆಗೂ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಅಥವಾ ಜಯಮುತ್ತು ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಯುತಿತ್ತು. ಇಬ್ಬರೂ ಚುನಾವಣಾ ಧಿಕಾರಿ ಕಚೇರಿಯಿಂದ ನಾಮಪತ್ರ …

Read More »

ಕಿತ್ತೂರು ವಿಜಯೋತ್ಸವಕ್ಕೆ 200 ವರ್ಷ: ಸಂಸತ್‌ ಆವರಣದಲ್ಲಿ ಚನ್ನಮ್ಮ ಸ್ಮರಣೆ

ನವದೆಹಲಿ: ವೀರ ವನಿತೆ ಕಿತ್ತೂರು ಚನ್ನಮ್ಮ ಜನ್ಮದಿನಾಚರಣೆ ಹಾಗೂ ಕಿತ್ತೂರು ವಿಜಯೋತ್ಸವಕ್ಕೆ 200 ವರ್ಷಗಳು ಸಂದ ಸಂದರ್ಭದಲ್ಲಿ ಸಂಸತ್‌ ಆವರಣದಲ್ಲಿ ಚನ್ನಮ್ಮ ಅವರ ಸಾಧನೆಯನ್ನು ಸ್ಮರಿಸಲಾಯಿತು. ಚನ್ನಮ್ಮ ಪ್ರತಿಮೆಗೆ ಲೋಕಸಭಾಧ್ಯಕ್ಷ ಓಂಬಿರ್ಲಾ, ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಕೂಡಲ ಸಂಗಮ ಮಠದ ಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ಶಾಸಕರಾದ ಬಸನಗೌಡ …

Read More »

ಅಧಿಕಾರಿಗಳ ಗೈರು; ಗ್ರಾಮಸಭೆ ಮುಂದೂಡಿಕೆ

ಯಮಕನಮರಡಿ: ಗ್ರಾಮಸಭೆಗೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳಿಗೆ ಲಿಖಿತವಾಗಿ ಪತ್ರ ನೀಡಿದರೂ ಗ್ರಾಮಸಭೆಗೆ ಬರದೇ ಇರುವುದು ದುರಾದೃಷ್ಟದ ಸಂಗತಿ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವಂತಹ ಗ್ರಾಮಸಭೆಗೆ ನೋಡಲ್ ಅಧಿಕಾರಿಗಳು ಗೈರು ಇರುವುದರಿಂದ ಸಭೆ ಮುಂದೂಡಿ ಎಂದು ಯಮಕನಮರಡಿ ವಾರ್ಡ್‌ 1 ಗ್ರಾ. ಪಂ ಸದಸ್ಯ ರವಿ ಹಂಜಿ ಆಗ್ರಹಿಸಿದರು. ಯಮಕನಮರಡಿ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಮಾತನಾಡಿದ ಅವರು, ವಿವಿಧ ಇಲಾಖೆಯ ಅಧಿಕಾರಿಗಳು ಇಲ್ಲದೇ ಸಭೆ ಮಾಡುವುದು ತಪ್ಪು. ಸಮಸ್ಯೆಗಳಿಗೆ ಆಯಾ ಇಲಾಖೆಯ …

Read More »

ಕಿತ್ತೂರು ಉತ್ಸವ | ವಾಣಿಜ್ಯ ಮಳಿಗೆಗಳಲ್ಲಿ ಜನಜಂಗುಳಿ

ಕಿತ್ತೂರು: ಇಲ್ಲಿಯ ಕೋಟೆ ಆವರಣದಲ್ಲಿ ಆಯೋಜಿಸಿದ ‘ಚನ್ನಮ್ಮನ ಕಿತ್ತೂರು ಉತ್ಸವ’ದ ಮೊದಲ ದಿನವೇ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗೆ ಜನಸಾಗರವೇ ಹರಿದು ಬಂತು. ‘ಮೊದಲ ದಿನವಾಗಿದ್ದರಿಂದ ಕೊಳ್ಳುವವರಿಗಿಂತ ನೋಡುವವರೆ ಹೆಚ್ಚಾಗಿದ್ದಾರೆ. ಇನ್ನು ಮೇಲೆ ವ್ಯಾಪಾರ ಆಗಬೇಕಷ್ಟೆ’ ಎಂದು ವರ್ತಕರು ಹೇಳಿದರು.   ‘ಗ್ರಾಮೀಣ ಭಾಗದ ಉತ್ಪಾದಕರು ತಾವು ಸಿದ್ದಪಡಿಸಿದ್ದ ಆಹಾರ ಪದಾರ್ಥ, ಮತ್ತಿತರ ವಸ್ತುಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಮಳಿಗೆ ವ್ಯವಸ್ಥೆ ಮಾಡಿಕೊಡಲಾಗಿದೆ. ಇದನ್ನು ಜನರು ಉಪಯೋಗಿಸಿಕೊಳ್ಳಬೇಕು’ ಎಂಬುದು …

Read More »

ಕಿತ್ತೂರು ಹಿರಿಮೆ ಸಾರಿದ ಮೆರವಣಿಗೆ

ಕಿತ್ತೂರು : ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ಪ್ರಯುಕ್ತ ಬುಧವಾರ ನಡೆದ ಜಾನಪದ ಕಲಾವಾಹಿನಿ ಮೆರವಣಿಗೆ, ಕ್ರಾಂತಿ ನೆಲದ ಹಿರಿಮೆ ಸಾದರಪಡಿಸಿತು. ರಾಜಬೀದಿಯಲ್ಲಿ ಜನಸಾಗರವಿದ್ದರೆ, ಸಂಭ್ರಮವು ಎಲ್ಲೆಡೆ ಆವರಿಸಿತ್ತು. ಎಲ್ಲರೂ ಜೊತೆಗೂಡಿ ಚೆಂದದ ಲೋಕವನ್ನೇ ಸೃಷ್ಟಿಸಿದ್ದರು. ರಾಜ್ಯದಾದ್ಯಂತ ಸಂಚರಿಸಿ ಬಂದ ‘ವಿಜಯ ಜ್ಯೋತಿ’ಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ವಾಗತಿಸಿದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮೆರವಣಿಗೆಗೆ ಚಾಲನೆ ನೀಡಿದರು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ …

Read More »

ಜನಾಕರ್ಷಿಸಿದ ಚನ್ನಮ್ಮನ ಕಿತ್ತೂರು ದೋಣಿ ವಿಹಾರ

ಕಿತ್ತೂರು: ಕಿತ್ತೂರು ಉತ್ಸವದ ಅಂಗವಾಗಿ ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ಸಾಹಸ ಅಕಾಡೆಮಿ ಆಶ್ರಯದಲ್ಲಿ ತುಂಬುಗೆರೆಯಲ್ಲಿ ಬುಧವಾರ ನಡೆದ ದೋಣಿ ವಿಹಾರ ಜನಾಕರ್ಷಿಸಿತು. ಸುಡು ಬಿಸಿಲಿನ ನಡುವೆ ಕೆರೆಯತ್ತ ಬಂದ ಜನ ತುಂಬುಕೆರೆಯ ದೋಣಿ ವಿಹಾರದಲ್ಲಿ ಕೆಲಹೊತ್ತು ನಲಿದರು. ದಶಕಗಳಿಂದ ನೀರು ಕಾಣದ ಐತಿಹಾಸಿಕ ಕೆರೆ ಈ ವರ್ಷ ಸುರಿದ ಭಾರಿ ಮಳೆಯಿಂದ ಮೈ ತುಂಬಿ ಹರಿಯುತ್ತಿರುವುದನ್ನು ಕಂಡು ಸಂಭ್ರಮಿಸಿದರು. ಬ್ರಿಟಿಷರ ವಿರುದ್ಧ …

Read More »

ಕಿತ್ತೂರು ವಿಜಯೋತ್ಸವ: ಕಲಾವಿದರಿಗೆ ಮನಸೋತ ಜನಸಾಗರ

ಚನ್ನಮ್ಮನ ಕಿತ್ತೂರು: ಕಿತ್ತೂರ ನಾಡು ಹತ್ತೂರು ಕಲಾವಿದರನ್ನು ಬುಧವಾರ ಚುಂಬಕಶಕ್ತಿಯಂತೆ ಸೆಳೆಯಿತು. ಜನಪದರು, ಸಂಗೀತಗಾರರು, ನೃತ್ಯಪಟುಗಳು ಸೇರಿ ಕಲಾವಿದರ ದಂಡೇ ಕ್ರಾಂತಿಯ ನೆಲದತ್ತ ಹರಿದುಬಂದಿತ್ತು. ಬೆಳಿಗ್ಗೆ ಆರಂಭಗೊಂಡ ಜಾನಪದ ಕಲಾವಾಹಿನಿ ಮೆರವಣಿಗೆ ಮಧ್ಯಾಹ್ನದವರೆಗೂ ಸಾಗಿತು. ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದ ಈ ಮೆರವಣಿಗೆ ಮೇಲೂ ಕಾರ್ಮೋಡ ಕವಿದಿತ್ತು. ಆದರೆ, ವರುಣ ಬಿಡುವು ಕೊಟ್ಟಿದ್ದರಿಂದ ಮೆರವಣಿಗೆ ರಂಗೇರಿತು. ಉತ್ಸವದ ಹಿನ್ನೆಲೆಯಲ್ಲಿ ಬೈಲಹೊಂಗಲ ಮತ್ತು ಕಿತ್ತೂರು ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹಾಗಾಗಿ ಶಾಲಾ …

Read More »