Breaking News

ಲಾಕ್‍ಡೌನ್ ಎಫೆಕ್ಟ್: ಮಗುವಿಗೆ ಚಿಕಿತ್ಸೆ ಕೊಡಿಸಲಾಗದೆ ಪೋಷಕರ ಪರದಾಟ

ಚಾಮರಾಜನಗರ: ಲಾಕ್‍ಡೌನ್ ಪರಿಣಾಮ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗದೆ ಹೆತ್ತವರು ಸಂಕಟ ಪಡುತ್ತಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲದಲ್ಲಿ ನಡೆದಿದೆ. ಕೂಲಿಗಾಗಿ ಬಂದ ಧಾರವಾಡ ಮೂಲದ 14 ವಲಸೆ ಕಾರ್ಮಿಕರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಅವರ ಕಷ್ಟ ಹೇಳತೀರದಾಗಿದೆ. ಈ ಪೈಕಿ ಗುರುನಾಥ್ ಮತ್ತು ತುಳಸಮ್ಮನ ಅವರ ಚಿಕ್ಕ ಮಗುವಿನ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ಹೆತ್ತವರು ಒದ್ದಾಡುತ್ತಿದ್ದಾರೆ. ಗುರುನಾಥ್ ದಂಪತಿ ಧಾರವಾಡ ಜಿಲ್ಲೆ ಕುಂಬಾರಕೊಪ್ಪ ಗ್ರಾಮದವರಾಗಿದ್ದು, ಕೊಳ್ಳೇಗಾಲದ ಚೆಸ್ಕಾಂ ಕಟ್ಟಡ ನಿರ್ಮಾಣಕ್ಕೆ ಬಂದಿದ್ದಾರೆ. …

Read More »

ಲಾಕ್‍ಡೌನ್ ನಡುವೆ ಮದ್ಯ ಮಾರಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದ ಮೂವರು…….

ರಾಮನಗರ: ಹೆಮ್ಮಾರಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಆದರೆ ರಾಮನಗರ ಜಿಲ್ಲೆಯಾದ್ಯಂತ ಕಾಳಸಂತೆಯಲ್ಲಿ ಮಾರಾಟ ಹಾಗೂ ದಾಸ್ತಾನು ಮಾಡಿಕೊಂಡಿದ್ದ ಮೂರು ಕಡೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಮೂವರನ್ನು ವಶಕ್ಕೆ ಪಡೆದಿದ್ದಾರೆ. ಅದರಲ್ಲೂ ರಾಮನಗರ ತಾಲೂಕಿನ ಕುಂಬಾಪುರ ಗೇಟ್‍ನಲ್ಲಿನ ಬ್ಲೂ ಸ್ಟಾರ್ ಡಾಬಾ, ಲಕ್ಷ್ಮೀಪುರ, ಬಸವನ ಪುರ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಮಾಡಲಾಗಿತ್ತು. ಎಣ್ಣೆ ಖರೀದಿ ಬರುವ ಮದ್ಯ ಪ್ರಿಯರಿಗೆ, ಎರಡು …

Read More »

ಚೀನಾದ ಬ್ಯಾಂಕ್‍ವೊಂದು ಎಚ್‍ಡಿಎಫ್‍ಸಿ ಬ್ಯಾಂಕ್‍ನ ಶೇ.1.01 ಷೇರು ಖರೀದಿಸಿದೆ.

ಮುಂಬೈ: ಭಾರತೀಯ ಬ್ಯಾಕಿಂಗ್ ಕ್ಷೇತ್ರದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದ್ದು, ಚೀನಾದ ಬ್ಯಾಂಕ್‍ವೊಂದು ಎಚ್‍ಡಿಎಫ್‍ಸಿ ಬ್ಯಾಂಕ್‍ನ ಶೇ.1.01 ಷೇರು ಖರೀದಿಸಿದೆ. ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (ಪಿಬಿಒಸಿ)ಯು ಎಚ್‍ಡಿಎಫ್‍ಸಿ ಬ್ಯಾಂಕ್ ಶೇಕಡಾ 1.01 ಪಾಲನ್ನು ಪಡೆದುಕೊಂಡಿದೆ. ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಚೀನಾ ಎಚ್‍ಡಿಎಫ್‍ಸಿಯಲ್ಲಿ ಸುಮಾರು 1.75 ಕೋಟಿ ಷೇರುಗಳನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಕಂಪನಿ ಬಾಂಬೆ ಸ್ಟಾಕ್ ಎಕ್ಸ್‍ಚೇಂಜ್ (ಬಿಎಸ್‍ಇ) ತಿಳಿಸಿದೆ. ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಕಳೆದ ಒಂದು …

Read More »

ಆಟಗಾರರನ್ನು ಎಲ್ಲಿಂದ ತರುತ್ತೀರಿ? ಐಪಿಎಲ್ ಮರೆತುಬಿಡಿ – ದಾದಾ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಗಳಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಬಿಸಿಸಿಐ ಪದಾಧಿಕಾರಿಗಳೊಂದಿಗೆ ಮಾತನಾಡಿದ ನಂತರ ಐಪಿಎಲ್ ಅನ್ನು ಮತ್ತಷ್ಟು ಮುಂದೂಡಲಾಗುತ್ತದೆಯೇ ಎಂಬ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಾಗುತ್ತದೆ. ಆದರೆ ಪ್ರಾಯೋಗಿಕವಾಗಿ ಹೇಳುವುದಾದರೆ, ಕೊರೊನಾ ವೈರಸ್‍ನಿಂದಾಗಿ ಪ್ರಪಂಚದ ಎಲ್ಲೆಡೆ ಜೀವನವು ಸ್ಥಗಿತಗೊಂಡಿರುವಾಗ ಕ್ರೀಡೆಯಲ್ಲಿ ಭವಿಷ್ಯ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಕೊರೊನಾ ವೈರಸ್‍ನಿಂದ ಉಂಟಾಗಿರುವ …

Read More »

ಹೊಲಗಳಲ್ಲಿ ಬೆಳೆಗಳನ್ನು ನಾಶ ಮಾಡಬೇಡಿಸತೀಶ್ ಜಾರಕಿಹೊಳಿ,

ಬೆಳಗಾವಿ   ಹೊಲಗಳಲ್ಲಿ ಬೆಳೆಗಳನ್ನು ನಾಶ ಮಾಡಬೇಡಿ ಎಂದು ವಿನಂತಿಸಿರುವ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ, ಬೆಳೆಗಳನ್ನು ದಾನ ಇಲ್ಲವೇ ಖರೀದಿ ಮೂಲಕ ಪಡೆದು ಹಳ್ಳಿಗಳಲ್ಲಿ ಉಚಿತವಾಗಿ ಹಂಚುತ್ತಿದ್ದಾರೆ. ಯಮಕನಮರಡಿ ಕ್ಷೇತ್ರದಲ್ಲಿ ಅನೇಕ ರೈತರು ಬೆಳೆದ ಬೆಳೆಗಳನ್ನು ನಾಶಪಡಿಸುತ್ತಿದ್ದಾರಿ. ಇದನ್ನು ಗಮನಿಸಿದ ಜಾರಕಿಹೊಳಿ, ಬೆಳೆಗಳನ್ನು ಅನಗತ್ಯವಾಗಿ ವ್ಯರ್ಥ ಮಾಡಬೇಡಿ ಎಂದು ವಿನಂತಿಸಿದ್ದಾರೆ.   ಹೊಲಕ್ಕೆ ತಮ್ಮ ಕಾರ್ಯಕರ್ತರನ್ನು ಕಳುಹಿಸಿ, ಯಾರು ದಾನವಾಗಿ ನೀಡುತ್ತಾರೋ ಅದನ್ನು ಪಡೆದು, ಇಲ್ಲವಾದಲ್ಲಿ ಖರೀದಿಸಿ ತರುವಂತೆ ಸೂಚಿಸಿರುವ …

Read More »

ನಕಲಿ ಪಾಸ್ ಮಾರಾಟ ಮಾಡುತ್ತಿದ್ದ ಇಬ್ಬರು ಪೊಲೀಸರ ವಶಕ್ಕೆ

ಚಿಕ್ಕಮಗಳೂರು : ಕರ್ಫ್ಯೂ ನಕಲಿ ಪಾಸ್ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊರೊನಾ ಆತಂಕದಲ್ಲಿ ದೇಶವೇ ಲಾಕ್ ಡೌನ್ ಮಾಡಲಾಗಿದ್ದು, ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮಕೈಗೊಂಡಿದೆ ಇಂಥವರಿಗೆ ಪಾಸ್ ವಿತರಿಸಿದೆ. ಆದರೆ ಇದೇ ಪಾಸುಗಳನ್ನು ನಕಲಿ ಮಾಡಿ ಮಾರುತ್ತಿದ್ದ ಆರೋಪಿಗಳು. ಇಲ್ಲಿನ ದಂಟರಮಕ್ಕಿ ಬಡಾವಣೆ ನಿವಾಸಿಗಳು. ಆರೋಪಿಗಳಿಂದ ಸ್ಕ್ಯಾನರ್, ಪ್ರಿಂಟರ್, ಕಂಪ್ಯೂಟರ್, ಮೊಬೈಲ್ ಹಾಗೂ ನಕಲಿ ಕರ್ಫ್ಯೂ ಪಾಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ತಲಾ …

Read More »

ಅಕ್ಕಿ ಚೀಲಗಳ ಮಧ್ಯೆ ಅಡಗಿಸಿ ಕಾರ್ಮಿಕರ ಸಾಗಿಸುತ್ತಿದ್ದ ಪಿಕಪ್ ವಾಹನ ವಶಕ್ಕೆ

ಚಿಕ್ಕಮಗಳೂರು : ಅಕ್ಕಿ ಚೀಲವನ್ನು ಆಸರೆಯಾಗಿ ಬಳಸಿಕೊಂಡು ಟಾರ್ಪಲ್ ಮುಚ್ಚಿ ಪಿಕಪ್ ವಾಹನದಲ್ಲಿ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಗೆ ಹೊರಟಿದ್ದ ವಾಹನವನ್ನು ವಶಕ್ಕೆ ಪಡೆದು ಜಿಲ್ಲಾ ಪೊಲೀಸರು 30 ಜನರನ್ನು ಹಾಸ್ಟೆಲ್ ಒಂದರಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ. ಜಿಲ್ಲೆಯ ಗಡಿ ಪ್ರದೇಶವಾದ ಬೇಲೂರು ತಾಲೂಕಿನ ಪುರ ಎಸ್ಟೇಟ್ ನಿಂದ ಬಂದಿದ್ದ ಇವರು ತೋಟದಲ್ಲಿ ಕೆಲಸವಿಲ್ಲದೆ ಮಾಲೀಕರು ತಮ್ಮ ಮನೆಗಳಿಗೆ ತೆರಳಲು ತಿಳಿಸಿದ್ದು ಕೆಲಸವಿಲ್ಲದೆ ಹೊಟ್ಟೆ ಬಟ್ಟೆಗೂ ಕಷ್ಟವಾಗಿದೆ ವಾಹನದಲ್ಲಿ ಊರಿಗೆ ಬರುತ್ತಿದ್ದೇವೆ …

Read More »

ಜಿಲ್ಲಾಧಿಕಾರಿಗಳು ತಕ್ಷಣ ಕಬ್ಬಿನ ಹಣದ ಪಾವತಿ ಮತ್ತು ಬಾಕಿಯ ವಿವರ ನೀಡಬೇಕು:ಸಿದಗೌಡ ಮೋದಗಿ

ಬೆಳಗಾವಿ: ಪ್ರಸಕ್ತ ವರ್ಷ ಕಬ್ಬು ನುರಿಯುವ ಹಂಗಾಮು ಆರಂಭವಾದಾಗಿನಿಂದ ಮಾರ್ಚ 31 ರವರೆಗೆ ಯಾವ ಯಾವ ಸಕ್ಕರೆ ಕಾರ್ಖಾನೆಗಳು ಎಷ್ಟೆಷ್ಟು ಕಬ್ಬು ನುರಿಸಿವೆ ಮತ್ತು ಯಾವ ಯಾವ ಸಕ್ಕರೆ ಕಾರ್ಖಾನೆಗಳು ಈವರೆಗೆ ರೈತರಿಗೆ ಎಷ್ಟು ಹಣ ಸಂದಾಯ ಮಾಡಿವೆ ಮತ್ತು ಎಷ್ಟು ಪಾವತಿಸಿವೆ ಂಬುದರ ಬಗ್ಗೆ ಜಿಲ್ಲಾಧಿಕಾರಿಗಳು ತಕ್ಷಣ ಬಹಿರಂಗ ಪಡಿಸಬೇಕು ಎಂದು ಭಾರತೀಯ ಕೃಷಿಕ ಸಮಾಜ (ಸಂ) ದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಅವರು ಆಗ್ರಹಿಸಿದ್ದಾರೆ. ರೈತರ, ಕೃಷಿ …

Read More »

“ಕೊರೋನಾ‌ ಹರಡುವದಂತೆ ತಡೆಯಲು ಸಾಮಾಜಿಕ‌ ಅಂತರ ಒಂದೇ ಪರಿಹಾರ”

ಬೆಳಗಾವಿ:ಕೊರೋನಾ‌ ಹರಡುವದಂತೆ ತಡೆಯಲು ಸಾಮಾಜಿಕ‌ ಅಂತರ ಒಂದೇ ಪರಿಹಾರ ಆಗಿದ್ದು ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಒಳ್ಳೆಯ ಕೆಲಸ‌ ಮಾಡುತ್ತಿದೆ‌ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಇಂದು‌ ನಗರದ ಗೃಹ ಕಚೇರಿಯಲ್ಲಿ ಮಾತನಾಡಿ ಪಡಿತರ ‌ವಿತರಣೆಯಲ್ಲಿ‌ ಜನರಿಗೆ ತೊಂದರೆಯಾಗುತ್ತಿರುವುದು ನಿಜವಾಗಿದೆ.ಬೇರೆ ಜಿಲ್ಲೆಗಳಿಂದ ವಲಸೆ ಬಂದವರಿಗೆ ರೇಷನ ನೀಡಲು ನಿರಾಕರಿಸಲಾಗುತ್ತಿದೆ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ‌ತರುತ್ತೇನೆ ಎಂದರು. ದುಡಿಯುವ ಕೂಲಿ‌ ಕಾರ್ಮಿಕರಿಗೆ ಬಹಳಷ್ಟು ತೊಂದರೆಯಾಗಿದೆ. ಮತ್ತೆ ಹದಿನೈದು ದಿನ‌ …

Read More »

“ರೈತರ ಸಮಸ್ಯೆಗಳಿಗೆ ಸ್ಪಂದಿಸಿರುವ ಯಮಕನಮರಡಿ ಶಾಸಕ‌ ಸತೀಶ ಜಾರಕಿಹೊಳಿ”…….

ಬೆಳಗಾವಿ: ರೈತರ ಸಮಸ್ಯೆಗಳಿಗೆ ಸ್ಪಂದಿಸಿರುವ ಯಮಕನಮರಡಿ ಶಾಸಕ‌ ಸತೀಶ ಜಾರಕಿಹೊಳಿ ಅವರು ಯೋಗ್ಯ ದರದಲ್ಲಿ ತರಕಾರಿಗಳನ್ನು ಖರೀದಿಸಿ ಬಡ ಜನರಿಗೆ ವಿತರಿಸಲು ಮುಂದಾಗಿದ್ದಾರೆ. ಕೊರೋನಾ ಸಂಕಷ್ಟದ ಸ್ಥತಿಯಲ್ಲಿ‌ರೈತರು ಬೆಳೆದ ತರಕಾರಿಗಳನ್ನು ಖರೀದಿಸಲು ಯಾರೂ ಮುಂದಾಗದೆ ಇರುವ ಕಾರಣ ಮತ್ತು ಬೇರೆ ರಾಜ್ಯಗಳಿಗೆ ಕಳುಹಿಸಲು ಕೂಡ ಅವಕಾಶ ಇಲ್ಲದ ಕಾರಣ ಶಾಸಕರು ಖುದ್ದಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಯೋಗ್ಯ ಬೆಲೆಯಲ್ಲಿ ತರಕಾರಿ ಖರೀದಿಸಿ ಜನರಿಗೆ ವಿತರಿಸುವ ಕಾರ್ಯ ಮಾಡಿದ್ದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. …

Read More »