Breaking News

ವೈರಮುಡಿ ಮಹೋತ್ಸವಕ್ಕೂ ತಟ್ಟುತ್ತಾ ಕೊರೊನಾ ಬಿಸಿ – ಭಕ್ತರಲ್ಲಿ ಆತಂಕ

ಮಂಡ್ಯ: ಮೇಲುಕೋಟೆಯ ಪ್ರಸಿದ್ಧ ಚಲುವನಾರಾಯಣಸ್ವಾಮಿಯ ವೈರಮುಡಿ ಮಹೋತ್ಸವಕ್ಕೂ ಕೊರೊನಾ ವೈರಸ್ ಭೀತಿ ತಟ್ಟುತ್ತಾ ಎಂಬ ಆತಂಕ ಭಕ್ತರಲ್ಲಿ ಕಾಡುತ್ತಿದೆ. ಏಪ್ರಿಲ್ 2ರಂದು ಮೇಲುಕೋಟೆಯ ವಿಶ್ವ ಪ್ರಸಿದ್ಧ ಚಲುವನಾರಾಯಣಸ್ವಾಮಿಯ ವೈರಮುಡಿ ಮಹೋತ್ಸವ ನಡೆಸಲು ಈಗಾಗಲೇ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆದರೆ ಇತ್ತ ರಾಜ್ಯ ಸೇರಿದಂತೆ ದೇಶಾದ್ಯಂತ ಕೊರೊನಾ ವೈರಸ್‍ನ ಭೀತಿ ಎದುರಾಗಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ಸರ್ಕಾರ 1 ವಾರಗಳ ಕಾಲ ಸೀಮಿತ ವಲಯಗಳಿಗೆ ಬಂದ್‍ನ್ನು ಸಹ ಘೋಷಣೆ …

Read More »

ಕರೊನಾ ವೈರಸ್ ಭೀತಿ ಹಿನ್ನೆಲೆ ರಾಯರ ಸನ್ನಿಧಿ ಮಂತ್ರಾಲಯ ಮಠದಲ್ಲಿ ಪಂಚಾಮೃತ ವಿತರಣೆ ನಿಷೇಧಿಸಲಾಗಿದೆ.

ರಾಯಚೂರು: ಕರೊನಾ ವೈರಸ್ ಭೀತಿ ಹಿನ್ನೆಲೆ ರಾಯರ ಸನ್ನಿಧಿ ಮಂತ್ರಾಲಯ ಮಠದಲ್ಲಿ ಪಂಚಾಮೃತ ವಿತರಣೆ ನಿಷೇಧಿಸಲಾಗಿದೆ. ಸ್ವಚ್ಛತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಭಕ್ತರಿಗೆ ವಿತರಿಸುವ ಪಂಚಾಮೃತ ನಿಲ್ಲಿಸಲಾಗಿದೆ. ಎಲ್ಲ ವೃಂದಾವನಗಳಿಗೂ ಎಂದಿನಂತೆ ಪಂಚಾಮೃತಾಭೀಷೆಕ ನಡೆಯುತ್ತದೆ. ಆದರೆ ಶನಿವಾರದಿಂದ ಭಕ್ತರಿಗೆ ವಿತರಿಸುವುದನ್ನು ಮಾತ್ರ ನಿಲ್ಲಿಸಲಾಗಿದೆ. ಬೆಳಗ್ಗೆ ಹಾಗೂ ಸಂಜೆಯ ಪ್ರಸಾದ ಹಾಗೂ ದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ. ಜನತೆ ಮಠಕ್ಕೆ ಬರಬಾರದು ಎನ್ನುವ ವದಂತಿಗಳು ಹಬ್ಬುತ್ತಿವೆ. ಇದಾವುದಕ್ಕೂ ಕಿವಿಗೊಡದೆ, ಭಕ್ತರು ರಾಯರ ದರ್ಶನಕ್ಕೆ …

Read More »

ಮಹಾಮಾರಿ ಕರೋನಾಕ್ಕೆ ಹೆದರಿ ಕಲಬುರಗಿ ಕಡೆಗೆ ಸಚಿವರು ಬರುತ್ತಿಲ್ಲ. ಇವರ ಈ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಲಬುರಗಿ,ಮಾ.16- ಡೆಡ್ಲಿ ಕೊರೋನಾ ವೈರಸ್‍ನಿಂದ ಕಲಬುರಗಿಯ ಜನ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಜನತೆಯ ಆತಂಕ ದೂರ ಮಾಡಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತ್ರ ಜಿಲ್ಲೆಯ ಕಡೆ ತಲೆ ಹಾಕಿಲ್ಲ. ಮಹಾಮಾರಿ ಕರೋನಾಕ್ಕೆ ಹೆದರಿ ಕಲಬುರಗಿ ಕಡೆಗೆ ಸಚಿವರು ಬರುತ್ತಿಲ್ಲ. ಇವರ ಈ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದೇಶದಲ್ಲೇ ಕೊರೋನಾಕ್ಕೆ ಮೊದಲ ಬಲಿ ಕಲಬುರಗಿಯಲ್ಲಿ ಆಗಿದ್ದು, ಕಲಬುರಗಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕೊರೋನಾ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದೆ. …

Read More »

31ಸಾವಿರ ಮನೆಗಳಿಗೆ 183 ಕೋಟಿ ರೂ.ಗಳು ಬಿಡುಗಡೆ:ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು, ಮಾ.16- ರಾಜ್ಯದಲ್ಲಿ 31ಸಾವಿರ ಮನೆಗಳಿಗೆ 183 ಕೋಟಿ ರೂ.ಗಳು ಬಿಡುಗಡೆ ಮಾಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಡಿ.ಎಸ್.ಹೂಲಗೇರಿ ಅವರ ಪರವಾಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅರ್ಹ ಫಲಾನುಭವಿಗಳ ಖಾತೆಗೆ ಈ ಹಣವನ್ನು ಬಿಡುಗಡೆ ಮಾಡಲಾಗಿದೆ. ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಾಣದ ಪ್ರಗತಿಯ ಮಾಹಿತಿ ಪಡೆಯುವ ಸಂಬಂಧ ಶಾಸಕರಿಗೆ ಪತ್ರ ಬರೆದು ವಿಧಾನಸಭಾ …

Read More »

ಪೌರತ್ವ ತಿದ್ದುಪಡಿ ಕಾಯ್ದೆ ಭಾರತದ ನೈತಿಕ, ಸಾಂವಿಧಾನಿಕ ಬಾಧ್ಯತೆ: RSS ನಿರ್ಣಯ ಅಂಗೀಕಾರ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದ ಆರ್‌ಎಸ್ಎಸ್ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಮೂರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸಿಎಎ ಜಾರಿ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ, ರಾಮ ಮಂದಿರ ನಿರ್ಮಾಣ ಹಸಿರು ನಿಶಾನೆಗೆ ಆರ್‌ಎಸ್ಎಸ್ ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದೆ. ರಾಜಕೀಯ ಪಕ್ಷಗಳು ಸಿಎಎ ಬಗ್ಗೆ ಗೊಂದಲ ಸೃಷ್ಟಿಸುತ್ತಿವೆ. ಆದರೆ ಸಿಎಎ ಜಾರಿಗೆ ತಂದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಆರ್‌ಎಸ್ಎಸ್ ಕಾರ್ಯವಾಹಕ ಸುರೇಶ್ ಭೈಯಾಜೀ ಜೋಷಿ ಹೇಳಿದ್ದಾರೆ. ಅಂದಹಾಗೆ ಬೆಂಗಳೂರು …

Read More »

ಸರ್ಕಾರಿ ಶಾಲೆಯಲ್ಲಿ ಓದಿ ನನ್ನ ಮಗ ವಿಜ್ಞಾನಿಯಾಗಿದ್ದಾನೆ: ವಿಜ್ಞಾನಿ ಮಹದೇಶ್ ತಾಯಿ

ಮೈಸೂರು: ಕೊರೊನಾ ವೈರಸ್‍ಗೆ ಔಷಧ ಕಂಡು ಹಿಡಿಯಲು ಯುರೋಪಿಯನ್ ರಾಷ್ಟ್ರಗಳು ನೇಮಿಸಿದ ತಂಡದಲ್ಲಿ ಕನ್ನಡಿಗ ಡಾ. ಮಹದೇಶ್ ಪ್ರಸಾದ್ ಅವರಿಗೆ ಸ್ಥಾನ ಸಿಕ್ಕಿದ್ದು ತಾಯಿ ಸಂತಸಗೊಂಡಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಹದೇಶ್ ಪ್ರಸಾದ್ ಅವರ ತಾಯಿ ರತ್ನಮ್ಮ, ನನ್ನ ಮಗ ಕೊರೊನಾಗೆ ಔಷಧ ಕಂಡು ಹಿಡಿಯುವ ತಂಡದಲ್ಲಿ ಸ್ಥಾನ ಪಡೆದಿರುವುದು ನನಗೆ ಖುಷಿಯಿದೆ ಹಾಗೂ ತುಂಬಾ ಹೆಮ್ಮೆ ಇದೆ. ನಾವು ಮೂಲತಃ ಹಾಸನದ ಅರಕಲಗೂಡಿನವರಾಗಿದ್ದು, ನನ್ನ ಮಗ ಸರ್ಕಾರಿ …

Read More »

ಕೊರೊನಾ ಭೀತಿ – ಎರಡೇ ದಿನದಲ್ಲಿ 15 ಸಾವಿರ ವಿದ್ಯಾರ್ಥಿಗಳು ಮನೆಗೆ ವಾಪಸ್

ಧಾರವಾಡ: ಇಡೀ ವಿಶ್ವದ ಜನಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿರುವ ಮಹಾಮಾರಿ ಕೊರೊನಾ ಭಯಕ್ಕೆ ಧಾರವಾಡದ ಹಾಸ್ಟೆಲ್ ವಿದ್ಯಾರ್ಥಿಗಳು ಜಾಗ ಖಾಲಿ ಮಾಡಿದ್ದಾರೆ. ಧಾರವಾಡ ನಗರದ ಸಪ್ತಾಪೂರದಲ್ಲಿ ಬಹುತೇಕ ಕೋಚಿಂಗ್ ಕ್ಲಾಸ್‍ಗಳಿವೆ. ಆದರೆ ಆ ಕ್ಲಾಸ್‍ಗಳೆಲ್ಲವೂ ಈಗ ಬಂದ್ ಮಾಡಲಾಗಿದ್ದು, ಸದ್ಯ ಕೋಚಿಂಗ್‍ಗೆ ಬಂದ ವಿದ್ಯಾರ್ಥಿಗಳು ತಮ್ಮ ತಮ್ಮ ಊರಿಗೆ ವಾಪಸ್ ಹೋಗುತ್ತಿದ್ದಾರೆ. ಕೊರೊನಾ ಸೋಂಕು ಬರಬಹುದು ಎಂಬ ಭಯದಿಂದ ಎಲ್ಲಾ ಕೋಚಿಂಗ್ ಕ್ಲಾಸಿನ ಮಾಲಿಕರು ವಿದ್ಯಾರ್ಥಿಗಳಿಗೆ ತಮ್ಮ ಊರಿಗೆ ವಾಪಸ್ …

Read More »

ಉಚಿತವಾಗಿ ಕೋಳಿ ಹಂಚಿಕೆ – ಭೀತಿ ನಡುವೆಯೂ ಕೋಳಿ ಒಯ್ಯಲು ಮುಗಿಬಿದ್ದ ಜನ

ಚಿಕ್ಕೋಡಿ/ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಕೊರೊನಾ ವೈರಸ್ ಭೀತಿಯಿಂದ ಕೋಳಿ ವ್ಯಾಪಾರ ನೆಲಕಚ್ಚಿರುವ ಹಿನ್ನೆಲೆಯಲ್ಲಿ ಉಚಿತವಾಗಿ ಕೋಳಿಗಳ ಹಂಚಿಕೆ ಮಾಡಲಾಗಿದೆ. ಕೋಳಿಗಳ ಜೀವಂತ ಸಮಾಧಿ ಬಳಿಕ ಈಗ ಫಾರಂ ಮಾಲೀಕರು ಚಿಕನ್ ಪ್ರಿಯರಿಗೆ ಉಚಿತವಾಗಿ ಕೋಳಿಗಳನ್ನ ಹಂಚಿಕೆ ಮಾಡಿದ್ದಾರೆ. ಚಿಕ್ಕೋಡಿ ಪಟ್ಟಣದಲ್ಲಿ ವಿವಿಧ ಕಾಲೋನಿಗಳಲ್ಲಿ ಲಾರಿಗಳಲ್ಲಿ ಕೋಳಿ ತಂದು ಜನರಿಗೆ ಉಚಿತವಾಗಿ ನೀಡಲಾಗಿದೆ. ಕೊರೊನಾ ಭೀತಿ ನಡುವೆಯೂ ಉಚಿತ ಕೋಳಿ ತೆಗೆದುಕೊಂಡು ಹೋಗಲು ಜನ ಮುಗಿ ಬಿದ್ದಿದ್ದರು ಒಬ್ಬರು ಎರಡು …

Read More »

ಮಹಾಮಾರಿ ಕೊರೊನಾ ಭೀತಿ- ಮಣಿಪಾಲ ವಿವಿಗೆ 15 ದಿನ ರಜೆ

ಉಡುಪಿ: ಕರೊನಾ ವೈರಸ್ ಭೀತಿ ಹಿನ್ನೆಲೆ ರಾಜ್ಯ ಸರ್ಕಾರ ಒಂದು ವಾರ ಹೈ ಅಲರ್ಟ್ ಘೋಷಿಸಿದೆ. ಇದೀಗ ಜಿಲ್ಲೆಯ ಮಣಿಪಾಲ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಎರಡು ವಾರಗಳ ಕಾಲ ರಜೆ ಘೋಷಿಸಿದೆ. ವಿವಿಯ ಸಾವಿರಾರು ವಿದ್ಯಾರ್ಥಿಗಳು ವಿದೇಶದ ಸಂಪರ್ಕ ಹೊಂದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಆದೇಶವನ್ನು ಹೊರಡಿಸಿದೆ. ಹೊರ ರಾಜ್ಯದ ವಿದ್ಯಾರ್ಥಿಗಳು ಮಣಿಪಾಲದಿಂದ ತಮ್ಮ ರಾಜ್ಯಗಳಿಗೆ ತೆರಳಿದ್ದು, ವಿದೇಶದ ವಿದ್ಯಾರ್ಥಿಗಳು ಮಣಿಪಾಲದಲ್ಲೇ ಉಳಿದುಕೊಳ್ಳುವ ಸೂಚನೆಯನ್ನು ವಿವಿ ಕೊಟ್ಟಿದೆ. ಇಂಗ್ಲಿಷ್ ಮಾತನಾಡುವ ಐವತ್ನಾಲ್ಕು …

Read More »

ಶಿಕ್ಷಣ ಸಚಿವರ ಸಂದೇಶ ದ್ವಿತೀಯ ಪಿಯುಸಿ ವಿದ್ಯಾಥಿಗಳಿಗೆ

ಬೆಂಗಳೂರು, ಮಾ.16- ಮಾರ್ಚ್ 4ರಿಂದ ಪ್ರಾರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆ ಈವರೆಗೆ ಸುಲಲಿತವಾಗಿ ನಡೆದಿದ್ದು, ಇನ್ನೂ ಏಳು ದಿನಗಳ ಕಾಲ ನಡೆಯಲಿರುವ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಎದುರಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಹೇಳಿದ್ದಾರೆ. ಈಗಾಗಲೇ 39 ವಿಷಯಗಳ ಪರೀಕ್ಷೆ ಮುಗಿದಿದೆ. ಇನ್ನೂ 7 ಪರೀಕ್ಷೆಗಳು ನಡೆಯಬೇಕಿದೆ. ವಿದ್ಯಾರ್ಥಿಗಳು ನಿರ್ಭಯದಿಂದ ಪರೀಕ್ಷೆ ಬರೆಯಿರಿ. ವಿಜಯಪುರದಲ್ಲಿ ಯಾರೋ ಇಬ್ಬರು ಕಿಡಿಗೇಡಿಗಳು ಮಾಡಿದ ಕೃತ್ಯದಿಂದ ಸಾಮಾಜಿಕ ಜಾಲತಾಣದಲ್ಲಿ ಕೆಲವು ವದಂತಿ …

Read More »