ಬೆಂಗಳೂರು : ಲಾಕ್‍ಡೌನ್ ನಿಂದಾಗಿ ವಿದೇಶಗಳಲ್ಲಿರುವ ಸಿಲುಕಿರೋ ಕನ್ನಡಿಗರನ್ನು ಕರೆತರುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಹೊರದೇಶಗಳಲ್ಲಿರುವ ಭಾರತೀಯರನ್ನು ಕರೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ವಿದೇಶಗಳಲ್ಲಿ 10,823 ಜನ ಕರ್ನಾಟಕದವರು ಇದ್ದಾರೆ. ಮೊದಲ ಹಂತದಲ್ಲಿ 6,100 ಜನ ವಿದೇಶದಿಂದ ವಾಪಸ್ ಆಗಲಿದ್ದಾರೆ. ಸೌದಿ ಅರೇಬಿಯ, ಕೆನಡಾ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಕನ್ನಡಿಗರಿದ್ದಾರೆ. ಎಲ್ಲರನ್ನು ಕರೆ ತರಲು ಸರ್ಕಾರ ಮುಂದಾಗಿದ್ದು, ವಾಪಸ್ ಬಂದವರನ್ನು ಕ್ವಾರಂಟೈನ್ ನಲ್ಲಿರಿಸಿ …
Read More »ತಾಯಿ ಹಾಸಿಗೆ ಹಿಡಿದ್ರು ಕೊರೊನಾ ತಡೆಗಾಗಿ ಶ್ರಮಿಸುತ್ತಿರೋ ಜಿಲ್ಲಾಧಿಕಾರಿ………
ಚಾಮರಾಜನಗರ: ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದ್ರೂ ಅಮ್ಮನನ್ನು ನೋಡಲು ಹೋಗದೇ ಕೊರೊನಾ ವಿರುದ್ಧ ಹೋರಾಡುತ್ತಾ ಚಾಮರಾಜನಗರದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಜಿಲ್ಲಾಧಿಕಾರಿ ರವಿಯವರ ತಾಯಿ ಬಹುಅಂಗಾಂದ ವೈಫಲ್ಯದಿಂದ ಬಳಲುತ್ತಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಗೆ ಕೊರೊನಾ ಹರಡದಂತೆ ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಕಳೆದ ಐವತ್ತು ದಿನಗಳಿಂದ ತಮ್ಮ ಪ್ರೀತಿಯ ತಾಯಿಯನ್ನು ಭೇಟಿಯಾಗಲು ಹೋಗಿಲ್ಲ. ಒಬ್ಬ ಜಿಲ್ಲಾಧಿಕಾರಿ ಪಕ್ಕದ ಜಿಲ್ಲೆಯ ಚೆಕ್‍ಪೋಸ್ಟ್ ದಾಟಿ …
Read More »ಮ್ಯಾಂಡೋಲಿನ್ ಶ್ರೀನಿವಾಸ್ ಅವರಿಗೆ ಮಾಲೆ ಹಾಕಿದ ಸಂದರ್ಭ ನೆನೆದ ಅಪ್ಪು…………
ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅವರು ಮತ್ತೆ ತಂದೆಯನ್ನು ನೆನೆದಿದ್ದು, ಅಪರೂಪದ ನೆನಪನ್ನು ಹಂಚಿಕೊಂಡಿದ್ದಾರೆ. ಅಣ್ಣಾವ್ರ ಜನ್ಮದಿನ ಕಳೆದು ನಾಲ್ಕೈದು ದಿನಗಳಾದರೂ ಅಪ್ಪು ಮಾತ್ರ ಇನ್ನೂ ಅದೇ ಗುಂಗಿನಲ್ಲಿದ್ದು, ಅಣ್ಣ ಶಿವರಾಜ್‍ಕುಮಾರ್ ವಿವಾಹದ ಸಂದರ್ಭದಲ್ಲಾದ ಅಪರೂಪದ ಘಟನೆಯೊಂದನ್ನು ನೆನಪಸಿಕೊಂಡಿದ್ದಾರೆ. ತಮ್ಮ ತಂದೆಯ ಜನ್ಮ ದಿನದ ನಿಮಿತ್ತ ‘ಯಾರು ಏನು ಮಾಡುವರೂ’ ಎಂದು ಹಾಡುವ ಮೂಲಕ ಗೀತ ನಮನ ಸಲ್ಲಿಸಿದ್ದರು. ಇದೀಗ ಕೆಲವು ಫೋಟೋಗಳ ವಿಡಿಯೋ ಹಾಕಿ ಹಿಂದಿನ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. …
Read More »ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಸೆನಿಟೈಜ್ಹರ್ ಉಪಕರಣ ವಿತರಣೆ
ಮಂಗಳೂರು ನಗರ ದಕ್ಷಿಣದ ಶಾಸಕರೂ ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷರೂ ಆಗಿರುವ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನಗರದ ಆಸ್ಪತ್ರೆಗಳು, ಸರಕಾರಿ ಕಚೇರಿಗಳು, ಪೋಲಿಸ್ ಠಾಣೆಗಳಿಗೆ ಸೆನಿಟೈಜ್ಹರ್ ಉಪಕರಣ ನೀಡಲಾಗುತ್ತಿದೆ.ಪ್ರಾರಂಭಿಕ ಹಂತದಲ್ಲಿ ಜಿಲ್ಲಾಧಿಕಾರಿ ಕಚೇರಿ, ಅಪರ ಜಿಲ್ಲಾಧಿಕಾರಿ ಕಚೇರಿ, ವೆನ್ಲಾಕ್ ಆಸ್ಪತ್ರೆ, ಇ ಎಸ್ ಐ ಆಸ್ಪತ್ರೆ, ನಗರ ವ್ಯಾಪ್ತಿಗೆ ಬರುವ ಪೋಲಿಸ್ ಠಾಣೆಗಳು, ಬ್ಯಾಂಕ್ ಹಾಗೂ ಇತರ ಕೆಲ ಸಾರ್ವಜನಿಕ ಕ್ಷೇತ್ರದ ಕಂಪೆನಿ ಹಾಗೂ ಕಚೇರಿಗಳಿಗೆ ವಿತರಿಸಲಾಗುವುದು.ಸಾಮಾನ್ಯವಾಗಿ ಕಚೇರಿ …
Read More »ಬೇಸರವಾಗಿದೆ ಎಂದು ಮೀನು ಹಿಡಿಯಲು ಹೋದವರಿಗೆ ಆಶ್ಚರ್ಯ ಕಾದಿತ್ತು. ……
ಮಡಿಕೇರಿ: ಬೇಸರವಾಗಿದೆ ಎಂದು ಮೀನು ಹಿಡಿಯಲು ಹೋದವರಿಗೆ ಆಶ್ಚರ್ಯ ಕಾದಿತ್ತು. ಗಾಳಕ್ಕೆ ದೊಡ್ಡ ಮೀನು ಬಿದ್ದಿದ್ದು, ಮೀನು ನೋಡಿ ಅಲ್ಲಿನ ಜನ ನಿಬ್ಬರಗಾಗಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಹಾರಂಗಿ ಜಲಾಶಯದ ಹಿನ್ನೀರಿಗೆ ಸಮೀಪವಿರುವ ನಾಕೂರು ಶಿರಂಗಾಲ ಗ್ರಾಮದ ಯುವಕರು ಟೈಂ ಪಾಸ್‍ಗಾಗಿ ಮೀನು ಹಿಡಿಯಲು ಹೋಗಿದ್ದಾರೆ. ಈ ವೇಳೆ ಹಿನ್ನೀರಿನಲ್ಲಿ ಗಾಳ ಹಾಕಿ ಕುಳಿತಿದ್ದಾರೆ. ಗಾಳವನ್ನು ಯಾರೋ ಮನುಷ್ಯರು ಎಳೆಯುತ್ತಿರುವಂತೆ ಬಾಸವಾಗಿದೆ. ಬಳಿಕ ಮೂವರು ಯುವಕರು ಸೇರಿ ನಿಧಾನವಾಗಿ …
Read More »ಆಲಿಕಲ್ಲು ಸಹಿತ ಸುರಿದ ಮಳೆಯಿಂದ ಲಕ್ಷಾಂತರ ರೂ. ಬೆಳೆ ನಾಶ………..
ಕೋಲಾರ: ಜಿಲ್ಲೆಯಲ್ಲಿ ಎರಡು ದಿನದಿಂದ ಆಲಿಕಲ್ಲು ಸಹಿತ ಬಾರಿ ಮಳೆಯಾಗುತ್ತಿದೆ. ಕಳೆದ ದಿನ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದಾಗಿ ಟೊಮೆಟೊ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಸೊಣ್ಣೇಗೌಡ ಎಂಬವರ ಲಕ್ಷಾಂತರ ಮೌಲ್ಯದ ಟೊಮೆಟೊ ಬೆಳೆ ಹಾನಿಯಾಗಿದೆ. ಬಂಗಾರಪೇಟೆ ತಾಲೂಕಿನ ಐತಾಂಡಹಳ್ಳಿ ಮುನಿರಾಜು ಸೇರಿದಂತೆ ಬಂಗಾರಪೇಟೆ ತಾಲೂಕಿನ ವಿವಿಧೆಡೆ ಲಕ್ಷಾಂತರ ರೂಪಾಯಿಯ ನೂರಾರು ಎಕರೆ ಬೆಳೆ ನಾಶವಾಗಿದೆ. ಕೋಲಾರ …
Read More »ಸಿಲಿಕಾನ್ ಸಿಟಿ ಬೆಂಗಳೂರಿನ ಕೊರೊನಾ ಹಾರ್ಟ್‍ಸ್ಪಾಟ್ ಈಗ ಸುಧಾರಿಸುತ್ತಿದಿಯಾ?……
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೊರೊನಾ ಹಾರ್ಟ್‍ಸ್ಪಾಟ್ ಈಗ ಸುಧಾರಿಸುತ್ತಿದಿಯಾ ಎಂಬ ಪ್ರಶ್ನೆ ಕಾಡುತ್ತಿದೆ. ಪಾದರಾಯನಪುರ ಹಾಗೂ ಹೊಂಗಸಂದ್ರ ಫುಲ್ ಕ್ಲೀನ್ ಆಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸಂಖ್ಯೆ ಈಗ 131ಕ್ಕೆ ಏರಿದೆ. ಸೋಂಕಿತರಲ್ಲಿ ಹೊಂಗಸಂದ್ರ, ಪಾದರಾಯನಪುರದ ನಿವಾಸಿಗಳೇ ಹೆಚ್ಚಾಗಿದ್ದಾರೆ. ಹೊಂಗಸಂದ್ರ 29 ಮತ್ತು ಪಾದರಾಯನಪುರದಲ್ಲಿ ಸುಮಾರು 32 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಪಾದರಾಯನಪುರ ಮತ್ತು ಹೊಂಗಸಂದ್ರಗಳನ್ನು ರೆಡ್‍ಝೋನ್, ಹಾಟ್‍ಸ್ಪಾಟ್, ಕಂಟೈನ್‍ಮೆಂಟ್ ಎಂದು ಹೆಸರಿಸಲಾಗಿತ್ತು. ದಿನಕ್ಕೆ ಹತ್ತಾರು ಪಾಸಿಟಿವ್ ಪ್ರಕರಣಗಳು …
Read More »ತುಮಕೂರು ಜಿಲ್ಲಾಡಳಿತ ಮಹಾ ಎಡವಟ್ಟು- ವರದಿ ಬರುವ ಮುನ್ನವೇ ಶವ ಹಸ್ತಾಂತರ
ತುಮಕೂರು: ತುಮಕೂರಿನಲ್ಲಿ ಕೊರೊನಾಗೆ ಎರಡನೇ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮಹಾ ಎಡವಟ್ಟು ಮಾಡಿದ್ದು, ಸ್ಯಾಂಪಲ್ಸ್ ವರದಿ ಬರುವ ಮುನ್ನವೇ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಿದೆ. ಇದೀಗ ವರದಿ ಪಾಸಿಟಿವ್ ಬಂದಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಮನೆ ಮಾಡಿದೆ. ಏ.25 ರಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿ 26 ರಂದು ಮೃತಪಟ್ಟಿದ್ದ. ಏ.25, 26ರಂದು ಎರಡು ಬಾರಿ ಸ್ಯಾಂಪಲ್ಸ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ವರದಿ ಬರುವ ಮುನ್ನವೇ ಏ.26 ರಂದು …
Read More »2019-20 ಶೈಕ್ಷಣಿಕ ವರ್ಷದ ಬದಲಾದ ವೇಳಾಪಟ್ಟಿ……………
ನವದೆಹಲಿ: ಕೊರೊನಾ ಲಾಕ್‍ಡೌನ್ ನಿಂದಾಗಿ ಮಾರ್ಚ್ ಮಧ್ಯದಲ್ಲಿಯೇ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹೀಗಾಗಿ ಯುಜಿಸಿ ವಾರ್ಷಿಕ ಪರೀಕ್ಷೆ ಸಮಯ ಮತ್ತು 2020-21ರ ಶೈಕ್ಷಣಿಕ ವರ್ಷದ ಹೊಸ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಪದವಿ ಸೆಮಿಸ್ಟರ್ ಪರೀಕ್ಷೆಗಳು ಜುಲೈ ತಿಂಗಳಲ್ಲಿ ನಡೆಯಲಿವೆ. ಹಳೆಯ ವಿದ್ಯಾರ್ಥಿಗಳಿಗೆ ಆಗಸ್ಟ್ ನಲ್ಲಿ ಕಾಲೇಜು ಆರಂಭಗಗೊಂಡ್ರೆ, ಹೊಸ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ. ಕೊರೊನಾ ವೈರಸ್ ನಿಂದಾಗಿ ದೇಶದಾದ್ಯಂತ ಶಾಲೆ, ಕಾಲೇಜುಗಳ ಬಂದ್ ಆಗಿವೆ. 2019-2020 ಶೈಕ್ಷಣಿಕ ವರ್ಷದ ಬಾಕಿ …
Read More »ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್…..
ಬೆಂಗಳೂರು: ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆ ಸರ್ಕಾರಿ ನೌಕರರ ಸಂಬಳ ಕಡಿತ ಮಾಡುವುದು, ತಡೆ ಹಿಡಿಯುವ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಇದೆಲ್ಲದಕ್ಕೂ ಇದೀಗ ತೆರೆ ಬಿದ್ದಿದ್ದು, ಏಪ್ರಿಲ್ ತಿಂಗಳ ಸಂಬಳ ನೀಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ನೌಕರರ ಪರ ಯಡಿಯೂರಪ್ಪ ಸರ್ಕಾರ ನಿಂತಿದೆ. ಯಾವುದೇ ಕಡಿತ ಮಾಡದೇ ಏಪ್ರಿಲ್ ತಿಂಗಳ ಸಂಬಳ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದ್ದು, ಆರ್ಥಿಕ ಹೊರೆ ಆದರೂ ಪರವಾಗಿಲ್ಲ ಸರ್ಕಾರಿ ನೌಕರರಿಗೆ ಸಂಬಳ …
Read More »
Laxmi News 24×7