Breaking News

ಕೊರೋನಾ ಟೆಸ್ಟ್​ಗಾಗಿ ರಾಜ್ಯದಲ್ಲಿ 16 ಲ್ಯಾಬ್​ಗಳಿಗೆ ಅನುಮತಿ ನೀಡಿದ ಐಸಿಎಂಆರ್​

ಸರ್ಕಾರಿ ಲ್ಯಾಬ್‌ಗಳ ಎಲ್ಲಾ ಪ್ರೋಟೋಕಾ‌ಲ್‌ಗಳನ್ನು ಖಾಸಗಿ ಲ್ಯಾಬ್‌ಗಳು ಕೂಡಾ ಪಾಲಿಸಬೇಕು. ಸರ್ಕಾರದಿಂದ ಯಾವುದೇ ಟೆಸ್ಟಿಂಗ್ ಕಿಟ್‌ಗಳನ್ನು ನೀಡುವುದಿಲ್ಲ ಎಂದು ಖಾಸಗಿ ಲ್ಯಾಬ್‌ಗಳಿಗೆ ನಿರ್ಬಂಧ ವಿಧಿಸಿ ಅನುಮತಿ ನೀಡಿದೆ.   ಬೆಂಗಳೂರು(ಏ.18): ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಒಂದೇ ದಿನ ಹೊಸದಾಗಿ 38 ಪ್ರಕರಣಗಳು ಪತ್ತೆಯಾಗಿದೆ. ಇದುವರೆಗೂ ದಾಖಲಾದ ಪ್ರಕರಣಗಳ ಪೈಕಿ ಇದೇ ಹೆಚ್ಚಿನ ಸಂಖ್ಯೆಯಾಗಿದೆ. ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ವೈದ್ಯಕೀಯ …

Read More »

ದೆಹಲಿ ಧಾರ್ಮಿಕ ಸಭೆಗೆ ತೆರಳಿದ್ದ ರಾಜ್ಯದ 47 ಜನರಿಗೆ ಕೊರೋನಾ; 485 ತಬ್ಲಿಘಿಗಳ ಸುಳಿವು ಇನ್ನೂ ನಿಗೂಢ!

ಬೆಂಗಳೂರು (ಏ. 18): ಮಾರ್ಚ್​ ತಿಂಗಳ ಮಧ್ಯಂತರದಲ್ಲಿ ದೆಹಲಿಯ ನಿಜಾಮುದ್ದೀನ್​ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್​ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಿಂದಾಗಿ ದೇಶದ ಕೊರೋನಾ ಸೋಂಕಿತರ ಪ್ರಮಾಣ ದ್ವಿಗುಣಗೊಂಡಿದೆ. ಕರ್ನಾಟಕದಿಂದಲೂ ಸಾಕಷ್ಟು ಮಂದಿ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಅವರಲ್ಲಿ ಇನ್ನೂ 485 ತಬ್ಲಿಘಿಗಳ ಮಾಹಿತಿ ನಿಗೂಢವಾಗಿದೆ. ಮಾರ್ಚ್​ ತಿಂಗಳಲ್ಲಿ ದೆಹಲಿಯಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ವಿದೇಶೀಯರು ಕೂಡ ಪಾಲ್ಗೊಂಡಿದ್ದರು. ಕರ್ನಾಟಕದಲ್ಲೂ ಬೆಳಗಾವಿ, ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ಜಿಲ್ಲೆಗಳಿಂದ ಆ ಸಭೆಗೆ …

Read More »

ಕಾರವಾರದಲ್ಲಿ ಮಾರಾಟವಾಗುತ್ತಿದೆ ಗೋವಾ ಎಣ್ಣೆ; ಕಾಡುಗಳ ಮೂಲಕ ನಡೆಯುತ್ತಿದೆ ಮದ್ಯ ದಂಧೆ

ಕಾರವಾರ(ಏ.18): ಒಂದನೇ ಹಂತದ ಲಾಕ್ ಡೌನ್ ಮುಗಿದು ಎರಡನೇ ಹಂತದ ಲಾಕ್ ಡೌನ್ ಘೋಷಣೆ ಆಗಿ ಈಗ ಮೂರು ದಿನ ಕಳೆದಿದೆ. ಇದರ  ನಡುವೆ ಮದ್ಯದ ಅಂಗಡಿ ಆರಂಭಿಸಬೇಕೆಂದು ಸಾವಿರಾರು ಜನರ ಮನವಿ ಒಂದೆಡೆ ಆದರೆ, ಗೋವಾ- ಕಾರವಾರ ಗಡಿ ಭಾಗದಲ್ಲಿ ಮಾತ್ರ ಅವ್ಯಾಹತವಾಗಿ ಮದ್ಯ ಸಾಗಾಟ ನಡೆಯುತ್ತಿದ್ದು, ಇಲ್ಲಿ ಕುಡುಕರ ದಾಹ ತಣಿವಾಗುತ್ತಿದೆ. ಒಂದೆಡೆ ಲಾಕ್ ಡೌನ್ ಇರುವುದರಿಂದ ಅಗತ್ಯ ವಸ್ತು ಹೊರತ ಪಡಿಸಿ ಬೇರಾವದು ವಸ್ತು ಮಾರಾಟ …

Read More »

ಲಾಕ್‍ಡೌನ್‍ನಿಂದಾಗಿ ಗಾರ್ಬೇಜ್ ಸಿಟಿ ಕಂಪ್ಲೀಟ್ ಆಗಿ ಗ್ರೀನ್ ಸಿಟಿಯಾಗಿದೆ…..

ಬೆಂಗಳೂರು: ಸಿಲಿಕಾನ್ ಸಿಟಿ ಅಂದಾಕ್ಷಣ ಇಲ್ಲಿನ ಟ್ರಾಫಿಕ್, ಹೊಗೆ ನೆನಪಾಗುತ್ತದೆ. ಅಲ್ಲದೇ ಲಾಕ್‍ಡೌನ್‍ನಿಂದಾಗಿ ಗಾರ್ಬೇಜ್ ಸಿಟಿ ಕಂಪ್ಲೀಟ್ ಆಗಿ ಗ್ರೀನ್ ಸಿಟಿಯಾಗಿದೆ. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಬೆಂಗಳೂರು ತನ್ನ ನೈಜ ಸೌಂದರ್ಯವನ್ನು ಮರಳಿ ಪಡೆಯುತ್ತಿದೆ. ಹೌದು..ಕೊರೊನಾ ಲಾಕ್‍ಡೌನ್‍ನಿಂದಾಗಿ ಬೆಂಗಳೂರು ತನ್ನ ನೈಜ ಸೌಂದರ್ಯವನ್ನು ಮರಳಿ ಪಡೆಯುತ್ತಿದೆ. ಈಗ ವಸಂತ ಕಾಲ ಆರಂಭವಾಗುತ್ತಿದ್ದು, ನಗರದಾದ್ಯಂತ ಹಚ್ಚ ಹಸಿರು, ಬಣ್ಣ ಬಣ್ಣದ ಹೂವುಗಳು ಅರಳಿನಿಂತಿವೆ. ನಗರದ ಎಂಜಿ ರೋಡ್, ಬ್ರಿಗೇಡ್ ರೋಡ್, ಮಹಲ್ …

Read More »

ಸತ್ತ ಅಪ್ಪನನ್ನೇ ಮತ್ತೆ ಸಾಯಿಸಿದ ಹುಬ್ಬಳ್ಳಿಯ ಕೈ ಮುಖಂಡ,……….

ಹುಬ್ಬಳ್ಳಿ: ಕೊರೊನಾದಿಂದ ಮದುವೆ, ಸಭೆ-ಸಮಾರಂಭ ಎಲ್ಲ ಕ್ಯಾನ್ಸಲ್ ಆಗಿದೆ. ಸಂಬಂಧಿಕರು ಸತ್ತರೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಹೀಗಾಗಿ ಕೆಲವೆಡೆ ಮಾನವೀಯ ದೃಷ್ಟಿಯಿಂದ ಪೊಲೀಸರು ಬಿಟ್ಟುಕಳಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡನೊಬ್ಬ ಐದು ವರ್ಷದ ಹಿಂದೆಯೇ ಸತ್ತ ತಂದೆಯನ್ನೇ ಮತ್ತೊಮ್ಮೆ ಸತ್ತಿರುವುದಾಗಿ ಸುಳ್ಳು ಹೇಳಿ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಜಿಲ್ಲಾಡಳಿತದಿಂದ ಪಾಸ್ ಪಡೆದು ದುರ್ಬಳಕೆ ಮಾಡಿಕೊಂಡಿರುವುದು ಬಯಲಿದೆ ಬಂದಿದೆ. ಹುಬ್ಬಳ್ಳಿಯ ಕೈ ಮುಖಂಡ, ಕರ್ನಾಟಕ ರಕ್ಷಣಾ ದಳದ ರಾಜಾದ್ಯಕ್ಷ ಸೋಮಲಿಂಗ್ ಯಲಿಗಾರ ಜಿಲ್ಲಾಡಳಿತದ ಪಾಸ್ …

Read More »

ಬೆಳಗಾವಿ:ತನ್ನ ಹೆಂಡತಿ, ಪುಟ್ಟ ಕಂದಮ್ಮನೊಂದಿಗೆ ತುತ್ತು ಅನ್ನಕ್ಕಾಗಿ ಡ್ರೈವರ್ ನಾಗರಾಜ್ ಪರದಾಡುತ್ತಿದ್ದಾರೆ.

ಬೆಳಗಾವಿ: ಕೊರೊನಾದ ಲಾಕ್‍ಡೌನ್‍ನಿಂದ ಅನೇಕ ಬಡ ಕುಟುಂಬಗಳು ತಿನ್ನಲು ಊಟವಿಲ್ಲದೇ ಪರದಾಡುತ್ತಿವೆ. ಅದರಂತೆಯೇ ಜಿಲ್ಲೆಯ ರಾಮನಗರದಲ್ಲಿ ಟ್ಯಾಕ್ಸಿ ಚಾಲಕನ ಕುಟುಂಬವೊಂದು ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಚಾಲಕ ನಾಗರಾಜ್ ಕುಟುಂಬ ತಿನ್ನಲು ಅನ್ನ ಇಲ್ಲದೇ ಪರದಾಟ ಮಾಡುತ್ತಿದೆ. ನಾಗರಾಜ್ ತನ್ನ ಮಗಳಿಗೆ ಚಿಕಿತ್ಸೆ ಕೊಡಿಸುವುದಕ್ಕೆ ಹೆಂಡತಿಯ ಒಡವೆ ಅಡವಿಟ್ಟಿದ್ದಾರೆ. ಅಷ್ಟೇ ಅಲ್ಲದೇ ರೇಷನ್ ಕಾರ್ಡ್ ಇಲ್ಲದವರಿಗೆ ಪಡಿತರವನ್ನು ವಿತರಿಸುತ್ತಿಲ್ಲ. ಹೀಗಾಗಿ ಬೆಳಗ್ಗೆ ಕೊಡುವ ಉಚಿತ ಹಾಲನ್ನೇ ತನ್ನ ಮಗಳಿಗೆ ಕೊಡುತ್ತಿದ್ದಾರೆ. ನಾಗರಾಜ್ ಟ್ಯಾಕ್ಸಿ …

Read More »

ಬೆಳಗಿನ ಜಾವ ಮನೆಯಿಂದ ಠಾಣೆಗೆ ಬರುತ್ತಿದ್ದ ಬೆಳಗಾವಿಯ ಪಿ ಎಸ್ ಐ ಸಾವು

ಬೆಳಗಿನ ಜಾವ ಮನೆಯಿಂದ ಠಾಣೆಗೆ ಬರುತ್ತಿದ್ದ ಬೆಳಗಾವಿಯ ಪಿ ಎಸ್ ಐ ಸಾವು …. ಬೆಳಗಾವಿ- ಬೆಳಗಿನ ಜಾವ ಮನೆಯಿಂದ ಕರ್ತವ್ಯ ನಿಭಾಯಿಸಲು ಠಾಣೆಗೆ ಬರುತ್ತಿದ್ದ ಬೆಳಗಾವಿಯ ಖಡೇಬಝಾರ್ ಠಾಣೆಯ ಪಿ ಎಸ್ ಐ ಗಣಾಚಾರಿ ಬೈಕ್ ಸ್ಕೀಡ್ ಆಗಿ ಬಿದ್ದು ಸ್ಥಳದಲ್ಲೇ ಸಾವನ್ನೊಪ್ಪಿದ್ದಾರೆ. ಬೆಳಗಾವಿ ಮಹಾನಗರದಲ್ಲಿ ಲಾಕ್ ಡೌನ್ ಬಿಗಿಗೊಳಿಸಲು ಬೆಳಗಿನ ಜಾವದಿಂದಲೇ ಬೆಳಗಾವಿ ಪೋಲೀಸರು ಲಾಕ್ ಡೌನ್ ಬಿಗಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು ಯಳ್ಳೂರ ರಸ್ತೆಯ ನಿವಾಸಿಯಾಗಿದ್ದ ಖಡೇಬಝಾರ್ …

Read More »

ಕರೋನಾ ಜಾಗೃತಿಗೆ ಜಿಲ್ಲೆಯಾದ್ಯಂತ ಪೊಲೀಸ್ ರೂಟ್ ಮಾರ್ಚ್- ಬೈಕ್ ರ್ಯಾಲಿ

ಕರೋನಾ ಜಾಗೃತಿಗೆ ಜಿಲ್ಲೆಯಾದ್ಯಂತ ಪೊಲೀಸ್ ರೂಟ್ ಮಾರ್ಚ್- ಬೈಕ್ ರ್ಯಾಲಿ ಸಾರ್ವಜನಿಕರಿಗೆ ಆತ್ಮವಿಶ್ವಾಸದ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಾಗೃತಿ -ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ್ ಹಾವೇರಿ: ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ಲಾಕ್‍ಡೌನ್ ಪಾಲನೆ, ಕರೋನಾ ಸೋಂಕು ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಅಗತ್ಯ ಸಂದರ್ಭದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಆತ್ಮವಿಶ್ವಾಸ ತುಂಬುವ ಸಂದೇಶವನ್ನು ಸಾರ್ವಜನಿಕರಿಗೆ ಸಾರಲು ಪೊಲೀಸ್ ಇಲಾಖೆ ಇಂದು ನಗರದಲ್ಲಿ ಪೊಲೀಸ್ ರೂಟ್ ಮಾರ್ಚ್ ಹಾಗೂ …

Read More »

ನೋಂದಣಿಗೊಂಡ ಫಲಾನುಭವಿಗಳ ಕುಟುಂಬದ ಸದಸ್ಯರುಗಳಿಗೆ ಅಪಘಾತ ಮರಣದ ಧನ ಸಹಾಯದ ಚೆಕ್ ತಲಾ ೫ ಲಕ್ಷ ಮತ್ತು ಅಂತ್ಯಕ್ರಿಯೆ & ಅನುಗ್ರಹರಾಶಿ ರೂ.೫೪,೦೦೦ ಗಳ ಚೆಕ್‌ಗಳನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶಂಕರಗೌಡ ಪಾಟೀಲ್ ಅವರು ಫಲಾನುಭವಿಗಳಿಗೆ ವಿತರಿಸಿದರು.

ಬೆಳಗಾವಿ -: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಗೊಂಡ ಫಲಾನುಭವಿಗಳ ಕುಟುಂಬದ ಸದಸ್ಯರುಗಳಿಗೆ ಅಪಘಾತ ಮರಣದ ಧನ ಸಹಾಯದ ಚೆಕ್ ತಲಾ ೫ ಲಕ್ಷ ಮತ್ತು ಅಂತ್ಯಕ್ರಿಯೆ & ಅನುಗ್ರಹರಾಶಿ ರೂ.೫೪,೦೦೦ ಗಳ ಚೆಕ್‌ಗಳನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶಂಕರಗೌಡ ಪಾಟೀಲ್ ಅವರು ಫಲಾನುಭವಿಗಳಿಗೆ ವಿತರಿಸಿದರು. ಉಪ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶುಕ್ರವಾರ (ಏ.೧೭) ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ಕಟ್ಟಡ ಮತ್ತು …

Read More »

ಒಗ್ಗೂಡಿ ಹೋರಾಡೋಣ , ಕೊರೋನಾ ಓಡಿಸೋಣ” ಸೌ. ಶಶಿಕಲಾ ಜೊಲ್ಲೆ

ನಿಪ್ಪಾಣಿಯ ಬುದಲಮುಖ ಗ್ರಾಮಕ್ಕೆ ಭೇಟಿ ನೀಡಿ, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮದ ಮುಖಂಡರೊಂದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಸಭೆ ನಡೆಸಿ, ಕೊರೋನಾ ವೈರಸ್ ಹರಡದಂತೆ ತಡೆಗಟ್ಟಲು ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಯಿತು ಹಾಗೂ ಕೊರೋನಾ ಮುನ್ನೆಚ್ಚರಿಕೆ ಕುರಿತಾದ ಮಾಹಿತಿ ಜನರಿಗೆ ತಲುಪಿಸುವಂತೆ …

Read More »