Breaking News

ಕೊರೊನಾ ವಿರುದ್ಧದ ಹೋರಾಟದಲ್ಲಿ ಮೋದಿಗೆ ನನ್ನ ಬೆಂಬಲವಿದೆ: ಹೆಚ್‍ಡಿಡಿ

ಬೆಂಗಳೂರು: ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಬೆಂಬಲವಿದೆ ಎಂದು ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಟ್ವೀಟ್ ಮಾಡಿದ್ದಾರೆ. ಕೊರೊನಾ ವೈರಸ್ ನಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದಾರೆ. ಜೊತೆಗೆ ಇಂದು ದೇಶದ ಹಲವಾರು ನಾಯಕರಿಗೆ ಕರೆ ಮಾಡಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಬೆಂಬಲ ಸೂಚಿಸುವಂತೆ ಕೋರುತ್ತಿದ್ದಾರೆ. ಅಂತಯೇ ದೇವೇಗೌಡರಿಗೂ ಕರೆ ಮಾಡಿದ್ದು, ನಾನು ಬೆಂಬಲ …

Read More »

ರಾಜ್ಯದಲ್ಲಿ 7 ಮಂದಿಗೆ ಕೊರೊನಾ, ಐವರಿಗೆ ಜಮಾತ್ ನಂಟು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 151ಕ್ಕೆ ಏರಿದೆ. ಶನಿವಾರ ಏಕಾಏಕಿ 16 ಮಂದಿ ಸೋಂಕಿತರು ಪತ್ತೆಯಾಗಿದ್ದರೆ, ಇಂದು 7 ಜನರಿಗೆ ಕೊರೊನಾ ತಗುಲಿರುವುದು ದೃಢವಾಗಿದೆ. ಈ ಪೈಕಿ 5 ಕೇಸ್‍ಗಳು ದೆಹಲಿಯ ತಬ್ಲಿಘಿ ಧರ್ಮ ಸಭೆಗೆ ಹೋಗಿ ಬಂದವರೇ ಆಗಿದ್ದಾರೆ. ಬೆಳಗಾವಿಯ ನಾಲ್ವರು, ಬಳ್ಳಾರಿಯ ಒಬ್ಬರ ಜೊತೆ ದುಬೈನಿಂದ ಬೆಂಗಳೂರಿಗೆ ಆಗಮಿಸಿದ ವೃದ್ಧ ದಂಪತಿಗೆ ಸೋಂಕು ಬಂದಿದೆ. ರೋಗಿ 145 – ಬೆಂಗಳೂರಿನ 68 ವರ್ಷದ ವೃದ್ಧ. ದುಬೈಗೆ …

Read More »

ಗ್ರಾಮಸ್ಥರು, ಆಶಾ ಕಾರ್ಯಕರ್ತೆ ಜೊತೆ ನಾವಿದ್ದೇವೆ ಎಂದು ಕೂಗಿ ಹೂಮಳೆಯ ಸ್ವಾಗತ

ಯಾದಗಿರಿ: ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೆ ಯಾದಗಿರಿಯ ಜನ ಹೂಮಳೆಯ ಸ್ವಾಗತ ಮಾಡಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸಕ್ಕೆ ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ಆರೋಗ್ಯ ತಪಾಸಣೆಗೆ ತೆರಳಿದ್ದ ಆಶಾ ಕಾರ್ಯಕರ್ತರ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆಸಿ ಕೆಲವರು ವಿಕೃತಿ ಮೆರೆದಿದ್ದರು. ಆದರೆ ಯಾದಗಿರಿ ಜಿಲ್ಲೆಯ ಬೆಳೆಗೇರಾ ಗ್ರಾಮದಲ್ಲಿ ಕೊರೊನಾ ಜಾಗೃತಿಗೆ ತೆರಳಿದ್ದ ಆಶಾ ಕಾರ್ಯಕರ್ತೆರಿಗೆ ಗ್ರಾಮದ ಎಲ್ಲಾ ಓಣಿಗಳಲ್ಲಿ ಕೈಯಲ್ಲಿ ಹೂ ಹಿಡಿದು ನಿಂತು ಅವರ ಮೇಲೆ …

Read More »

ಸರ್ಕಾರಕ್ಕೆ ವೈದ್ಯರಿಗೆ ಸಹಕಾರ ನೀಡದವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು :ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ದೇಶದಲ್ಲಿ ಕೊರೊನಾ ಜಿಹಾದ್ ನಡೆಯುತ್ತಿದೆ. ಸರ್ಕಾರಕ್ಕೆ ವೈದ್ಯರಿಗೆ ಸಹಕಾರ ನೀಡದವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೊರೊನಾ ರೋಗಿ ವೈದ್ಯರನ್ನು ತಬ್ಬಿಕೊಳ್ಳುತ್ತಾರೆ. ನರ್ಸ್ ಗಳಿಗೆ ರೋಗ ಹಬ್ಬಿಸುವ ಧಮ್ಕಿ ಹಾಕಿದ್ದಾರೆ. ಇದು ಭಯೋತ್ಪಾದನೆಯ ಮುಂದುವರಿದ ಭಾಗ. ಕ್ವಾರಂಟೈನ್‍ನಲ್ಲಿ ಇರುವ ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಕಠಿಣವಾದ ಕಾನೂನು ದೇಶದಲ್ಲಿ ಜಾರಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ. ಕೊರೊನಾ ವಿಚಾರದಲ್ಲಿ …

Read More »

ಮಂಗಳಮುಖಿಯರು ಚಿತ್ರಾನ್ನ ತಯಾರಿಸಿಕೊಂಡು ಅನಾಥರು ಹಾಗೂ ನಿರ್ಗತಿಕರಿಗೆ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ ನಿಂದ ಇಡೀ ದೇಶವೇ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಗಣಿನಗರಿ ಬಳ್ಳಾರಿಯಲ್ಲಿ ಮಂಗಳಮುಖಿಯರು ಚಿತ್ರಾನ್ನ ತಯಾರಿಸಿಕೊಂಡು ಅನಾಥರು ಹಾಗೂ ನಿರ್ಗತಿಕರಿಗೆ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯ ನಾಲ್ಕನೇಯ ವಾರ್ಡಿನ ಮಾಜಿ ಸದಸ್ಯೆ ಪರ್ವೀನ್ ಬಾನು ನೇತೃತ್ವದಲ್ಲಿ ಮಂಗಳಮುಖಿಯರು ಸೇರಿ ಈ ಕೆಲಸ ಮಾಡುತ್ತಿದ್ದಾರೆ. ಪಾದಾಚಾರಿ ರಸ್ತೆ, ಬಸ್ ಹಾಗೂ ರೈಲ್ವೇ ನಿಲ್ದಾಣ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ರಾತ್ರಿ ವೇಳೆಯಲ್ಲಿ ಹಸಿವಿನಿಂದ ಮಲಗಿಕೊಂಡಿದ್ದ …

Read More »

ಜಿಲ್ಲೆಯಲ್ಲಿ 7ಪಾಸಿಟಿವ್ ಪ್ರಕರಣ ದೃಢಪಟ್ಟಿರುವುದರಿಂದ ಲಾಕ್ ಡೌನ್ ಇನ್ನಷ್ಟು ಕಟ್ಟುನಿಟ್ಟಾಗಿ ಪಾಲಿಸಬೇಕು.

ಬೆಳಗಾವಿ-: ಜಿಲ್ಲೆಯಲ್ಲಿ 7ಪಾಸಿಟಿವ್ ಪ್ರಕರಣ ದೃಢಪಟ್ಟಿರುವುದರಿಂದ ಲಾಕ್ ಡೌನ್ ಇನ್ನಷ್ಟು ಕಟ್ಟುನಿಟ್ಟಾಗಿ ಪಾಲಿಸಬೇಕು. ನಾಗರಿಕರಿಗೆ ಅಗತ್ಯ ಸಾಮಗ್ರಿಗಳ ಪೂರೈಕೆ ಮತ್ತು ತುರ್ತು ಸಂದರ್ಭ ಹೊರತುಪಡಿಸಿ ಉಳಿದಂತೆ ಜನಸಂಚಾರ ನಿಯಂತ್ರಣಕ್ಕೆ ಬಿಗಿ ಕ್ರಮಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೋವಿಡ್-೧೯ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಭಾನುವಾರ (ಏ.೫) ನಗರದ ಪ್ರವಾಸಿ ಮಂದಿರದಲ್ಲಿ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಒಮ್ಮೆ …

Read More »

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ರೋಗಿಗಳ ಸಂಖ್ಯೆ 7ಕ್ಕೇರಿದೆ.

ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ರೋಗಿಗಳ ಸಂಖ್ಯೆ 7ಕ್ಕೇರಿದೆ. ರಾಯಬಾಗದ ಮೂವರು ಮಹಿಳೆಯರು ಸೇರಿದಂತೆ ಒಟ್ಟೂ ನಾಲ್ವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 36 ವರ್ಷ, 67 ವರ್ಷ ಹಾಗೂ 41 ವರ್ಷದ ಮಹಿಳೆಯರಿಗೆ ಹಾಗೂ 40 ವರ್ಷದ ಪುರುಷನಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಮಾರ್ಚ 13ರಿಂದ 18ರ ವರೆಗೆ ನಿಜಾಮುದ್ದೀನ್ ನಲ್ಲಿ ನಡೆದ ಧರ್ಮ ಸಭೆಯಲ್ಲಿ ಪಾಲ್ಗೊಂಡಿದ್ದರು ಎನ್ನುವುದು ಬಹಿರಂಗವಾಗಿದೆ. ಈ ಎಲ್ಲರಿಗೂ ಬೆಳಗಾವಿಯ ಬಿಮ್ಸ್ …

Read More »

ಲಾಕಡೌನ ಪರಿಸ್ಥಿತಿಯಲ್ಲಿ ಖಾಸಗಿ ವೈದ್ಯರು ಜನರಿಗೆ ತುರ್ತು ಸೇವೆ ನೀಡದಿದ್ಧರೆ ಕಠಿಣ ಕ್ರಮ : ಪ್ರಕಾಶ ಹೋಳೆಪ್ಪಗೋಳ

ಗೋಕಾಕ:ಲಾಕಡೌನ ಪರಿಸ್ಥಿತಿಯಲ್ಲಿ ಖಾಸಗಿ ವೈದ್ಯರು ಜನರಿಗೆ ತುರ್ತು ಸೇವೆ ನೀಡದಿದ್ಧರೆ ಕಠಿಣ ಕ್ರಮ : ಪ್ರಕಾಶ ಹೋಳೆಪ್ಪಗೋಳ ಲಾಕಡೌನ ಪರಿಸ್ಥಿತಿಯಲ್ಲಿ ಖಾಸಗಿ ವೈದ್ಯರು ಜನರಿಗೆ ತುರ್ತು ಸೇವೆ ನೀಡದಿದ್ಧರೆ ಕಠಿಣ ಕ್ರಮ ಜರುಗಿಸಲಾಗುವದು ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಹೇಳಿದರು ತುರ್ತು ಸಂದರ್ಭದಲ್ಲಿ ಖಾಸಗಿ ವೈದ್ಯರು ತಮ್ಮ ಸೇವೆ ಸ್ಥಗಿತಗೋಳಿಸಿದ್ದಾರೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಶನಿವಾರದಂದು ನೀಡಿದ ಮನವಿಗೆ ಸ್ವಂದಿಸಿದ ಅಧಿಕಾರಿಗಳು ರವಿವಾರದಂದು ನಗರದ ತಹಶೀಲ್ದಾರ …

Read More »

ಬೆಂಗಳೂರು: ವಿದೇಶದಿಂದ ಭಾರತಕ್ಕೆ ಮರಳಿದ್ದ 47 ಮಂದಿ ಕೊರೋನಾ ಶಂಕಿತರನ್ನು ಡಿಸ್ಚಾರ್ಜ್​ ಮಾಡಲಾಗಿದೆ.

ಬೆಂಗಳೂರು: ವಿದೇಶದಿಂದ ಭಾರತಕ್ಕೆ ಮರಳಿದ್ದ 47 ಮಂದಿ ಕೊರೋನಾ ಶಂಕಿತರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ. ಕೊರೋನಾ ಶಂಕೆ ಹಿನ್ನಲೆಯಲ್ಲಿ ವಿದೇಶದಿಂದ ಬಾಂದವರನ್ನು 16 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಇದೀಗ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಮನೆ ಸೇರಿಕೊಂಡಿದ್ದಾರೆ. ಆಸ್ಟ್ರೇಲಿಯಾ, ಜಪಾನ್, ದುಬೈ, ಸಿಂಗಾಪುರ್ ಸೇರಿ‌ 6 ದೇಶಗಳಿಂದ 47 ಮಂದಿ ಭಾರತೀಯರು ಆಗಮಿಸಿದ್ದರು. ಕೊರೋನಾ ಶಂಕೆ ಹಿನ್ನೆಲೆ, ಸಪ್ತಗಿರಿ ಆಸ್ಪತ್ರೆಯಲ್ಲಿ ಕಳೆದ …

Read More »

ವಧು-ವರರಿಬ್ಬರು ಮಾಸ್ಕ್ ಧರಿಸಿಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಚಿಕ್ಕಮಗಳೂರು: ದೇಶಾದ್ಯಾಂತ ಕೊರೊನಾಆ ಭೀತಿ ಹೆಚ್ಚಿದ್ದು, ಲಾಕ್ ಡೌನ್ ಘೋಷಿಸಾಲಾಗಿದೆ. ಈ ಹಿನ್ನಲೆಯಲ್ಲಿ ನಿಶ್ಚಯವಾಗಿದ್ದ ಮದುವೆಗಳೆಲ್ಲ ಯಾವುದೇ ಆಡಂಬರ, ಅಬ್ಬರವಿಲ್ಲದೇ ಸರಳವಾಗಿ ನಡೆಯುತ್ತಿದೆ. ಈ ನಡುವೆ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಧು-ವರರಿಬ್ಬರು ಮಾಸ್ಕ್ ಧರಿಸಿಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಹಲಸುಗುಡ್ಡೆ ಗ್ರಾಮದಲ್ಲಿ ಲಾಅಕ್ ಡೌನ್ ನಡುವೆ ವಧು-ವರರಿಬ್ಬರೂ ಮುಖಕ್ಕೆ ಮಾಸ್ಕ್ ಧರಿಸಿ ಪುರೋಹಿತರು ಹಾಗೂ ತಂದೆ-ತಾಯಿ ಸಮ್ಮುಖದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. …

Read More »