Breaking News

ವಿಜಯಪುರದಲ್ಲಿ 686 ಜನರ ಮೇಲೆ ನಿಗಾ, 335ಕ್ಕೂ ಹೆಚ್ಚು ಜನ ಐಸೋಲೇಷನ್‍ಗೆ

ವಿಜಯಪುರ: ಜಿಲ್ಲೆಯಲ್ಲಿ ಇಲ್ಲಿಯವರೆಗೆ 686 ಜನರ ಮೇಲೆ ನಿಗಾ ವಹಿಸಲಾಗಿದ್ದು, 335ಕ್ಕೂ ಹೆಚ್ಚು ಜನರನ್ನು ಐಸೋಲೇಷನ್‍ ನಲ್ಲಿ ಇಡಲಾಗಿದೆ. ಒಟ್ಟು 362 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ 256 ಸ್ಯಾಂಪಲ್ ನೆಗೆಟಿವ್ ಬಂದಿವೆ, 10 ಪಾಸಿಟಿವ್ ಬಂದಿವೆ. ಅಲ್ಲದೆ ಇನ್ನೂ 96 ಪ್ರಕರಣಗಳ ಕುರಿತು ಫಲಿತಾಂಶ ಬರಬೇಕಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ. ಇಂದು ಮತ್ತೆ 60 ಸ್ಯಾಂಪಲ್ ಕಲೆಕ್ಟ್ ಮಾಡಿ ಪರೀಕ್ಷೆಗೆ ಕಳುಹಿಸಲಾಗುವದು. ಇಂದಿನ ಮೂರು …

Read More »

ಮಂಗಳೂರು:ಎರಡು ಸಾವಿರಕ್ಕಾಗಿ ಮುಗಿಬಿದ್ದ ಜನ……….

ಮಂಗಳೂರು: ಎರಡು ಸಾವಿರ ರೂಪಾಯಿ ಸಿಗುತ್ತದೆ ಎಂದು ಸಾಮಾಜಿಕ ಅಂತರವನ್ನೂ ಮರೆತು ಜನ ಮುಗಿಬಿದ್ದಿದ್ದು, ನೂಕುನುಗ್ಗಲು ಸಂಭವಿಸಿದೆ. ಮಂಗಳೂರು ನಗರದ ಕೂಳೂರಿನಲ್ಲಿ ಘಟನೆ ನಡೆದಿದ್ದು, ಶ್ರೀ ದೇವಿ ಪ್ರಸಾದ್ ಖಾಸಗಿ ಕಟ್ಟಡದಲ್ಲಿ ಕೂಲಿ ಕಾರ್ಮಿಕರ ಮಾಹಿತಿ ಪಡೆದು ಹಣ ಅಕೌಂಟ್‍ಗೆ ಹಾಕಲಾಗುತ್ತದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಇದನ್ನು ಕೇಳಿದ ಜನತೆ ಸಾಮಾಜಿಕ ಅಂತರವನ್ನು ಮರೆದು ಸುಮಾರು 600-750 ಜನರ ಗುಂಪು ಸಾಲಿನಲ್ಲಿ ಸೇರಿತ್ತು. ಯಾಕೆ ನಿಂತಿದ್ದೀರಿ ಎಂದು ಕೇಳಿದರೆ …

Read More »

ಧಾರವಾಡ:ಕೆನರಾ ಬ್ಯಾಂಕ್‍ನ ಎಲ್ಲ ಸಿಬ್ಬಂದಿ ಹೋಮ್ ಕ್ವಾರಂಟೈನ್

ಧಾರವಾಡ: ಧಾರವಾಡ ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಕೆನರಾ ಬ್ಯಾಂಕಿ(ಹಿಂದಿನ ಸಿಂಡಿಕೇಟ್ ಬ್ಯಾಂಕ್)ನ ಎಲ್ಲ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್‍ನಲ್ಲಿಡಲಾಗಿದೆ. ಕೊರೊನಾ ಪಾಸಿಟಿವ್ ಬಂದಿರುವ ಧಾರವಾಡ ಜಿಲ್ಲೆಯ ರೋಗಿ ನಂ.194 ಮಾ.19ರಂದು ಪ್ರಯಾಣಿಸಿದ ಮುಂಬೈ- ಹುಬ್ಬಳ್ಳಿ ವಿಆರ್‍ಎಲ್ ಬಸ್ ಮೂಲಕವೇ ಧಾರವಾಡ ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಕೆನರಾ ಬ್ಯಾಂಕ್ (ಹಿಂದಿನ ಸಿಂಡಿಕೇಟ್ ಬ್ಯಾಂಕ್)ನ ಸಿಬ್ಬಂದಿಯೊಬ್ಬರ ಪುತ್ರನೂ ಆಗಮಿಸಿದ್ದರು. ಇವರು ರೋಗಿ ನಂ.194 ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎಂದು ಪರಿಗಣಿಸಿ ಸರ್ಕಾರಿ ಕ್ವಾರಂಟೈನ್ …

Read More »

ಏ.20ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಬಿಎಂಪಿ ಬಜೆಟ್ ಮಂಡನೆ

ಬೆಂಗಳೂರು, ಏ.15- ಲಾಕ್‍ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಬಿಬಿಎಂಪಿ ಬಜೆಟ್ ಏ.20ರಂದು ಮಂಡನೆಯಾಗಲಿದೆ. ಹನ್ನೊಂದು ಸಾವಿರ ಕೋಟಿ ರೂ.ಗಳ ಅಂದಾಜು ಮೊತ್ತದ ಬಿಬಿಎಂಪಿ ಬಜೆಟನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಂಡನೆ ಮಾಡಲಿದ್ದಾರೆ. ಈ ಬಾರಿಯ ಬಜೆಟ್‍ನಲ್ಲಿ ಯಾವುದೇ ಹೊಸ ಕಾಮಗಾರಿಗಳಿಗೆ ಅನುಮೋದನೆ ನೀಡುವುದಿಲ್ಲ. ಬದಲಿಗೆ ಜನರಿಗೆ ಸಹಕಾರಿಯಾಗುವಂತಹ ಹಲವಾರು ಯೋಜನೆಗಳನ್ನು ಮಂಡಿಸುವ ಸಾಧ್ಯತೆಗಳಿವೆ.ರಾಜ್ಯ ಸರ್ಕಾರದ ಬಜೆಟ್ ಮಂಡನೆ ಮಾಡಿದ ಕೆಲವು …

Read More »

ಮಾ.1ರಿಂದ ನಿನ್ನೆಯವರೆಗೆ ಕೆಎಸ್ಆರ್‌ಟಿಸಿಗೆ 253 ಕೋಟಿ ನಷ್ಟ..!

ಬೆಂಗಳೂರು, ಏ. 15- ಕೋರೋನಾ ವೈರಾಣು ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರ ರದ್ದು ಮಾಡಿರುವುದರಿಂದ ಕೆಎಸ್‍ಆರ್‍ಟಿಸಿಗೆ 253 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ. ಮಾರ್ಚ್ 1ರಿಂದ ನಿನ್ನೆಯವರೆಗೆ ಕೆಎಸ್‍ಆರ್‍ಟಿಸಿ ಆದಾಯದಲ್ಲಿ 253,24,19,256 ರೂ. ನಷ್ಟವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಲಾಕ್‍ಡೌನ್ ಮಾಡಿರುವುದರಿಂದ ಕೆಎಸ್‍ಆರ್‍ಟಿಸಿ ಬಸ್ ಸಂಚಾರವನ್ನು ನಿಲ್ಲಿಸಲಾಗಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಕೆಲವು ಬಸ್‍ಗಳನ್ನು ಒದಗಿಸಲಾಗಿದೆ. ಈಗಾಗಲೇ ಮುಂಗಡ ಟಿಕೆಟ್ ಕಾಯ್ದಿರಿಸುವುದನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಟಿಕೆಟ್ …

Read More »

ಕೊರೊನಾ ಹಾಟ್‌ಸ್ಪಾಟ್‌ಗಳ ಪಟ್ಟಿ ಬಿಡುಗಡೆ, ……

ನವದೆಹಲಿ : ದೇಶವನ್ನೇ ಆಲ್ಲೋಲ ಕಲ್ಲೋಲ ಮಾಡಿರುವ ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನ ಕೈಗೊಂಡಿದ್ದು, ದೇಶದಲ್ಲಿ 170 ಜಿಲ್ಲೆಗಳು ಕೊರೊನಾ ವೈರಸ್ ಹಾಟ್‌ಸ್ಪಾಟ್‌ಗಳಾಗಿವೆ. ಇದರಲ್ಲಿ 207 ಜಿಲ್ಲೆಗಳು ಅಪಾಯದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಅತಿ ಹೆಚ್ಚು ಕರೊನಾ ಬಾಧಿತವಾಗಿರುವ ರಾಷ್ಟ್ರದ 170 ಜಿಲ್ಲೆಗಳ ಪೈಕಿ ಕರ್ನಾಟಕದ 8 ಜಿಲ್ಲೆಗಳು ಕೂಡ ಸೇರಿವೆ. ಯಾವ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿ ಇದೆಯೋ ಅಂಥಹ ಜಿಲ್ಲೆಗಳನ್ನು …

Read More »

ಲಾಕ್ ಡೌನ್ ಇದ್ರೂ ಬೆಳಗಾವಿಗೆ ಬಂದಿಳಿದ ವಿಶೇಷ ವಿಮಾನ, ಕಾರಣ ಗೊತ್ತಾ..?

ಬೆಳಗಾವಿ :ದೇಶಾದ್ಯಂತ ಲಾಕ್ಡೌನ್ ಜಾರಿ ಮಾಡಲಾಗಿದ್ದು ವಿಮಾನ, ರೈಲು, ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ. ಲಾಕ್ ಡೌನ್ ನಡುವೆಯೂ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಖಾಸಗಿ ವಿಮಾನ ಬಂದಿದೆ. ಈ ವಿಶೇಷ ವಿಮಾನದಲ್ಲಿ ನವಜಾತ ಶಿಶುವನ್ನು ಕರೆತರಲಾಗಿದೆ. ಗುಜರಾತ್ ನ ಸೂರತ್ ನಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನದಲ್ಲಿ ವೈದ್ಯರ ತಂಡ ನವಜಾತ ಶಿಶುವನ್ನು ಕರೆತಂದಿದ್ದು ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೃದಯ ಸಂಬಂಧಿ ಕಾಯಿಲೆ ಇರುವ ನವಜಾತ ಶಿಶುವನ್ನು …

Read More »

ಕೊರೋನಾ: ಭಾರತದ ಸಹಾಯ ಕೇಳಿದ ಪಾಕಿಸ್ತಾನ..!

ಪಾಕಿಸ್ತಾನದಲ್ಲೂ ಕೂಡ ಕೊರೋನಾ ವೈರಸ್ ಹಾವಳಿ ಮಿತಿ ಮೀರುತ್ತಿದೆ. ಹೀಗಾಗಿ ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ಭಾರತದ ಬಳಿ HCQ ಅಥವಾ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಕೊಟ್ಟು ಸಹಾಯ ಮಾಡಿ ಅಂತ ಕೇಳಿಕೊಂಡಿದೆ. ಪಾಕಿಸ್ತಾನ ಈ ಕಾಯಿಲೆ ವಿರುದ್ಧ ಹೋರಾಡಲು ಸಾಧ್ಯವಾಗದೇ ಒದ್ದಾಡುತ್ತಿದೆ. ಅಲ್ಲಿ ಸರಿಯಾಗಿ ಚಿಕಿತ್ಸೆಗೆ ಬೇಕಾದ ಔಷಧಿ ಇಲ್ಲ, ಅಗತ್ಯ ಸಾಮಗ್ರಿ ಕೂಡ ಇಲ್ಲ. ಈಗಾಗಲೇ 6 ಸಾವಿರಕ್ಕೂ ಅಧಿಕ ಜನ ಪಾಕಿಸ್ತಾನದಲ್ಲಿ ಈ ಕಾಯಿಲೆಗೆ ತುತ್ತಾಗಿದ್ದಾರೆ. ಇದು …

Read More »

10 ದಿನದಲ್ಲಿ ಕಟ್ಟಿದ್ದ ಆಸ್ಪತ್ರೆ ಬಂದ್ ಮಾಡಿದ ಚೀನಾ ಸರ್ಕಾರ! ಕಾರಣ ಏನು ಗೊತ್ತಾ?

ಬೀಜಿಂಗ್ : ಕಿಲ್ಲರ್ ಕೊರೊನಾ ವೈರಸ್ ಚಿಕಿತ್ಸೆಗಾಗಿ ಚೀನಾ ಸರ್ಕಾರವು ವುಹಾನ್ ಪ್ರಾಂತ್ಯದಲ್ಲಿ ಕೇವಲ 10 ದಿನಗಳಲ್ಲಿ ಕಟ್ಟಲಾಗಿದ್ದ ವಿಶ್ವದ ಅತ್ಯಂತ ದೊಡ್ಡ ಕೋವಿಡ್ 19 ಆಸ್ಪತ್ರೆಯನ್ನು ಚೀನಾ ಸರ್ಕಾರ ಇದೀಗ ಬಂದ್ ಮಾಡಿದೆ. ಹೌದು, ವುಹಾನ್ ಪ್ರಾಂತ್ಯದಿಂದ ಕೊರೊನಾ ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದು, ಯಾವುದೇ ಹೊಸ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಈ ಆಸ್ಪತ್ರೆಯನ್ನು ಮುಚ್ಚಲಾಗಿದೆ ಎಂದು ಸ್ಥಳೀಯ ಆಡಳಿತ ಸ್ಪಷ್ಟಪಡಿಸಿದೆ ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲೆಂದೇ …

Read More »

ಫೇಸ್ ಬುಕ್ ಪ್ರೀತಿ ನಂತರ ಮದುವೆ ಇದೀಗ ಆತ್ಮಹತ್ಯೆ

ಮಂಡ್ಯ : ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ದಂಪತಿಯ ಜಗಳ ಸಾವಿನಲ್ಲಿ ಅಂತ್ಯವಾಗಿದೆ.. ಅಂಜು (19) ಆದಿತ್ಯ (21) ಇಬ್ಬರು ಮನಯವರ ವಿರೋಒಧದ ನಡುವೆ ಪ್ರೀತಿಸಿ ಮದುವೆಯಾಗಿದ್ರು. ಇಬ್ಬರಿಗೂ ಇದೀಗ 14 ತಿಂಗಳ ಮುದ್ದಾದ ಮಗುವಿದೆ.. ಮದುವೆಯ ಹೊಸದರಲ್ಲಿ ಚೆನ್ನಾಗಿದ್ದ ದಾಂಪತ್ಯ ನಂತರ ಪತ್ನಿ ಬಳಿ ಹಣ ತರುವಂತೆ ಆದಿತ್ಯ ಪೀಡಿಸುತ್ತಿದ್ದನಂತೆ.. ನಿನ್ನೆ ಮಧ್ಯಾಹ್ನ ಅಂಜು ಆದಿತ್ಯನೊಂದಿಗೆ ಜಗಳವಾಡಿಕೊಂಡಿದ್ರು. ಜಗಳವಾಡಿದ ನಂತರ ಆದಿತ್ಯ ಮಗುವಿಗೆ ಹಾಲು ಹಾಗೂ ದಿನಸಿ …

Read More »